ಅಸಲಿ ಆಟ ಈಗ ಶುರು – ದುಬಾರಿ ದುಬೆ.. SKYಗೆ ತಲೆ ಇಲ್ವಾ?
ಬೇಕಾಬಿಟ್ಟಿ ಬೌಲಿಂಗ್ ಕೊಟ್ರೆ ಗೋವಿಂದ!

ಟೀಂ ಇಂಡಿಯಾದ ಅಸಲಿ ಆಟ ಈಗ ಶುರುವಾಗ್ತಿದೆ. ಗ್ರೂಪ್ ಸ್ಟೇಜ್ನಲ್ಲಿ ನಾಲ್ಕಕ್ಕೆ ನಾಲ್ಕೂ ಮ್ಯಾಚ್ ಗೆದ್ಕೊಂಡು ನೆಕ್ಸ್ಟ್ ಸೂಪರ್ 8 ಸುತ್ತಲ್ಲಿ ಫಸ್ಟ್ ಮ್ಯಾಚಲ್ಲೇ ಪಲ್ಟಿ ಹೊಡ್ದು ಜಿಂಬಾಬ್ವೆ ವಿರುದ್ಧ ಹಂಗೋ ಹಿಂಗೋ ಗೆದ್ದಿರೋ ಭಾರತ ಈಗ ಸೆಮೀಸ್ ಟಿಕೆಟ್ ಬೇಕಂದ್ರೆ ಡು ಆರ್ ಡೈ ಸ್ಟೇಜ್ನಲ್ಲಿದ್ದಾರೆ. ಸಂಡೇ ನಡೆಯೋ ಪಂದ್ಯ ಭಾರತದ ಭವಿಷ್ಯವನ್ನ ಡಿಸೈಡ್ ಮಾಡುತ್ತೆ. ಆದ್ರೆ ಈ ಪಂದ್ಯವನ್ನ ಭಾರತ ಗೆಲ್ಲುತ್ತಾ ಅಂದ್ರೆ ಅಲ್ಲೇ ಅನುಮಾನ ಶುರುವಾಗ್ತಿದೆ. ಸೌತ್ ಆಫ್ರಿಕಾ ವಿರುದ್ಧ ಹಾಗೇ ಜಿಂಬಾಬ್ವೆ ವಿರುದ್ಧ ಮಾಡಿರೋ ಮಿಸ್ಟೇಕ್ಸ್ನ ವಿಂಡೀಸ್ ಎದುರಲ್ಲೂ ಮಾಡಿದ್ರೆ ಈ ಸಲ ಕಪ್ ನಮ್ದಲ್ಲ. ಕ್ಯಾಪ್ಟನ್ ಸೂರ್ಯಕುಮಾರ್ ಮಾಡ್ತಿರೋ ಎಡವಟ್ಟೇ ಭಾರತಕ್ಕೆ ಮುಳುವಾಗ್ತಿದೆ.
ಇದನ್ನೂ ಓದಿ : 11 ಗಂಟೆ ಆಕಾಶದಲ್ಲೇ ಸುತ್ತಾಟ – ಲ್ಯಾಂಡ್ ಆಗದೆ ವಾಪಸ್ ಆದ ಬೆಂಗಳೂರಿನಿಂದ ನೇಪಾಳಕ್ಕೆ ಹೋದ ವಿಮಾನ
ಗುರುವಾರ ಚೆಪಾಕ್ನಲ್ಲಿ ನಡೆದ ಮ್ಯಾಚಲ್ಲಿ ಜಿಂಬಾಬ್ವೆಯನ್ನ ಸೋಲಿಸಿದ ಭಾರತ ಸೆಮೀಸ್ ರೇಸ್ನಲ್ಲೇ ಉಳ್ಕೊಂಡಿದೆ. ಭಾನುವಾರ ಅಂದ್ರೆ ಮಾರ್ಚ್ 1ರಂದು ಕೊಲ್ಕತ್ತಾದ ಸ್ಟೇಡಿಯಮ್ನಲ್ಲಿ ನಡೆಯೋ ಪಂದ್ಯವನ್ನ ಗೆದ್ರಷ್ಟೇ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತೆ. ಈಗ ಅಂಕಗಳು ಮ್ಯಾಟ್ರ್ ಆಗೋದ್ರಿಂದ ನೆಟ್ ರನ್ ರೇಟ್ ಸಮಸ್ಯೆ ಏನಿಲ್ಲ. ಭಾರತಕ್ಕೆ ಇದು ಪ್ಲಸ್ ಅನ್ಸಿದ್ರು ಇವ್ರು ಆಡೋ ರೀತಿ ನೋಡಿದ್ರೆ ಪಂದ್ಯವನ್ನಾದ್ರೂ ಗೆಲ್ತಾರಾ ಅನ್ನಿಸಿಬಿಟ್ಟಿದೆ.
ಸಂಜು ಓಪನರ್ ಆಗಿದ್ದು ಭಾರತಕ್ಕೆ ಪ್ಲಸ್!
ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ಗೆ ಚಾನ್ಸ್ ಕೊಟ್ಟಿದ್ದು ಭಾರತಕ್ಕೆ ಪ್ಲಸ್ ಆಗಿದೆ. ಇಲ್ಲಿ ಯಾಕಂದ್ರೆ ಅಭಿಷೇಕ್ ಜೊತೆ ಸಂಜು ಕೂಡ ಸ್ಫೋಟಕ ಬ್ಯಾಟಿಂಗ್ ಆಡಿದ್ರು. 3.4 ಓವರ್ ವೇಳೆಗೆಲ್ಲಾ 48 ರನ್ ಗಳಿಸಿದ್ರು. 15 ಬಾಲಲ್ಲೇ ಸಂಜು 24 ರನ್ ಹೊಡೆದು ಔಟಾದ್ರು. ಇಲ್ಲಿ ನಾಲ್ಕನೇ ಓವರ್ ಒಳಗೇ ಸಂಜು ಔಟ್ ಆದ್ರೂ ನೆಕ್ಸ್ಟ್ ಎಲ್ಲೂ ಕೂಡ ಬ್ಯಾಟಿಂಗ್ ಸ್ಟ್ರಗಲ್ ಕಾಣ್ಲಿಲ್ಲ. ಅದಕ್ಕೆ ಕಾರಣ ನಂಬರ್ 3ನಲ್ಲಿ ಇಶಾನ್ ಕಿಶನ್ ಇದ್ದದ್ದು. ಹಿಂದಿನ ಮ್ಯಾಚ್ಗಳಲ್ಲಿ ಓಪನರ್ ಔಟ್ ಆದಾಗ ತಿಲಕ್ ವರ್ಮಾ ಟುಕುಟುಕು ಅಂತಾ ಬಾಲ್ಗೊಂದು ರನ್ಸ್ ಹೊಡೀತಿದ್ರು. ಅತ್ತ ಸೂರ್ಯ ಕೂಡ ಆಮೆ ಥರ ಆಡ್ತಿದ್ರು. ಯಾವಾಗ ಸಂಜು, ಅಭಿ ಹಾಗೇ ಕಿಶನ್ ಅಬ್ಬರಿಸಿದ್ರೂ ಇವ್ರೂ ಪ್ರೆಶರ್ ಫ್ರೀಯಾಗಿ ಬ್ಯಾಟ್ ಬೀಸಿದ್ರು. ಹೀಗಾಗಿಯೇ ಟಾಪ್ 6 ಬ್ಯಾಟರ್ಸ್ ಕೂಡ 150ಪ್ಲಸ್ ಸ್ಟ್ರೈಕ್ನಲ್ಲೇ ಬ್ಯಾಟ್ ಬೀಸೋಕೆ ಸಾಧ್ಯ ಆಯ್ತು. ಭಾರತ 256 ರನ್ಗಳನ್ನ ಕಲೆ ಹಾಕಿತ್ತು. ಸೋ ಈಗ ಇದೇ ಕಾಂಬಿನೇಷನ್ನ ನೆಕ್ಸ್ಟ್ ಮ್ಯಾಚ್ಗೂ ಇಳಿಸೋಕೆ ಐಡಿಯಾ ಸಿಕ್ಕಿದೆ. ಈ ಮೂಲಕ ಟಾಪ್ 8 ವರೆಗೂ ಭಾರತಕ್ಕೆ ಬ್ಯಾಟಿಂಗ್ ಡೆಪ್ತ್ ಸಿಗುತ್ತೆ. ಸೋ ಈಗ ಬ್ಯಾಟಿಂಗ್ನಲ್ಲಿ ಯಾವ ಪ್ರಾಬ್ಲಮ್ಮೂ ಇಲ್ಲ. 300 ಹೊಡೆದ್ರೂ ಹೊಡೀತಾರೆ ಅನ್ನೋ ಥರನೇ ಡೆಪ್ತ್ ಇದೆ. ಬಟ್ ಇಲ್ಲಿ ಭಾರತಕ್ಕೆ ಇರೋ ಮೇನ್ ಇರೋ ಚಾಲೆಂಜ್ ಅಂದ್ರೆ ಬೌಲಿಂಗ್.
ಬೌಲಿಂಗ್ ನಲ್ಲಿ ಪದೇಪದೆ ಎಡವುತ್ತಿದೆ ಟೀಂ ಇಂಡಿಯಾ!
ಭಾರತಕ್ಕೆ ಕಾಡ್ತಿರೋ ಮೇನ್ ಚಾಲೆಂಜ್ ಅಂದ್ರೆ ಬೌಲಿಂಗ್. ಅದ್ರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ ಮಾಡ್ತಿರೋ ಮಿಸ್ಟೇಕ್ಸ್. ಓವರ್ ಕಾನ್ಫಿಡೆನ್ಸ್ನಲ್ಲಿ ಹೈಪರ್ ಌಕ್ಟಿವ್ಗಾಗಿ ಬೇಡದೇ ಇರೋ ಟೈಮಲ್ಲಿ ಬೇಡದೇ ಇರೋ ಬೌಲರ್ ಕೈಗೆ ಬಾಲ್ ಕೊಟ್ಟು ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸ್ತಿದ್ದಾರೆ. ಆವತ್ತು ಸೌತ್ ಆಫ್ರಿಕಾ ವಿರುದ್ಧ ಸೋಲೋಕೂ ಅದೇ ಕಾರಣ ಆಗಿದ್ದು. ಜಿಂಬಾಬ್ವೆ ವಿರುದ್ಧವೂ ಹಾಗೇ ಆಡಿದ್ರು. ಕ್ವಾಲಿಟಿ ಬೌಲರ್ಗಳನ್ನ 4 ಓವರ್ನ ಕಂಪ್ಲೀಟ್ ಮಾಡೋಕೇ ಬಿಡ್ಲಿಲ್ಲ. ಸೂರ್ಯನ ಈ ಚೆಲ್ಲಾಟ ಭಾರತಕ್ಕೆ ಪ್ರಾಣ ಸಂಕಟ ತಂದಿಟ್ಟಿದೆ.
ಬೇಕಾಬಿಟ್ಟಿ ಬೌಲಿಂಗ್!
ಪಾಕ್ ವಿರುದ್ಧ 97ಕ್ಕೆ 9 ವಿಕೆಟ್ ಬಿದ್ದಾಗ ರಿಂಕು ಕೈಗೆ ಬಾಲ್!
ಅಕ್ಷರ್ ಮಾತ್ರವೇ 4 ಓವರ್ ಕಂಪ್ಲೀಟ್, ಬೇರೆಯವ್ರು ಇದ್ರು
ಸೌತ್ ಆಫ್ರಿಕಾ 20ಕ್ಕೆ 3 ವಿಕೆಟ್ ಕಳ್ಕೊಂಡಾಗ ತಪ್ಪು ನಿರ್ಧಾರ
ಜಿಂಬಾಬ್ವೆ ವಿರುದ್ಧ ದುಬಾರಿ ದುಬೆಗೆ ಬಾಲ್ ಕೊಟ್ಟು ಎಡವಟ್ಟು
ಜಿಂಬಾಬ್ವೆ ವಿರುದ್ಧ 2 ಓವರ್ ಗಳಲ್ಲೇ 46 ರನ್ ಕೊಟ್ಟ ದುಬೆ
ಮೊದಲ ಓವರ್ನಲ್ಲಿ 26 ಮತ್ತು ಎರಡನೇ ಓವರ್ನಲ್ಲಿ 20 ರನ್
ಸೌತ್ ಆಫ್ರಿಕಾ ವಿರುದ್ಧ ದುಬೆ 2 ಓವರ್ 32 ರನ್, 1 ವಿಕೆಟ್
ಹಾರ್ದಿಕ್ ಪಾಂಡ್ಯ ಕೇಳಿದ್ರೂ ದುಬೆಗೆ ಬಾಲ್ ಕೊಟ್ಟ ನಾಯಕ
ಸೌತ್ ಆಫ್ರಿಕಾ ವಿರುದ್ಧ ದುಬೆ 2 ಓವರ್ 32 ರನ್, 1 ವಿಕೆಟ್
ಕಳೆದ ಮೂರು ಪಂದ್ಯಗಳಲ್ಲಿ ಏಳು ಓವರ್ಗಳಲ್ಲಿ 113 ರನ್
9.2 ಓವರ್, 13.28 ರ ಎಕಾನಮಿ, 124 ರನ್ ನೀಡಿರೋ ದುಬೆ
ಇಲ್ಲಿ ಇನ್ನೊಂದು ವಿಚಾರ ಹೇಳ್ಬೇಕು. ಭಾರತದ ಬೌಲಿಂಗ್ ಎಷ್ಟು ಕಳಪೆ ಅನ್ನೋದು ಇಲ್ಲೇ ಗೊತ್ತಾಗುತ್ತೆ. ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ 254 ರನ್ ಕಲೆ ಹಾಕಿದ್ರು. ಭಾರತ ಇನ್ನೂ ಎರಡು ರನ್ ಸೇರಿಸಿ 256 ಹೊಡೆದ್ರು. ಬಟ್ ವಿಂಡೀಸ್ ಪಡೆ 147 ರನ್ಗಳಿಗೆ ಜಿಂಬಾಬ್ವೆಯನ್ನ ಆಲೌಟ್ ಮಾಡಿದ್ರು. 107 ರನ್ಗಳಿಂದ ಗೆದ್ದಿದ್ರು. ಆದ್ರೆ ಭಾರತ 184 ರನ್ ಹೊಡುಸ್ಕೊಂಡ್ರು. ಜೊತೆಗೆ ಆಲೌಟ್ ಕೂಡ ಮಾಡ್ಲಿಲ್ಲ. ಭಾರತ ತಂಡಕ್ಕೆ ಇರೋ ಸಮಸ್ಯೆ ಅಂದ್ರೆ ಐದು ಪ್ರಮುಖ ಬೌಲರ್ಗಳಾದ ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಇದ್ದಾರೆ. ಭಾರತಕ್ಕೆ 6ನೇ ಬೌಲರ್ ಬೇಕು. ಬಟ್ 8ರವೆರೆಗೆ ಬ್ಯಾಟಿಂಗ್ ಡೆಪ್ತ್ ಇರೋದ್ರಿಂದ 6ನೇ ಬೌಲರ್ ಕೊರತೆ ಇದೆ. ತಿಲಕ್, ಅಭಿಷೇಕ್ ಬೌಲ್ ಮಾಡಿದ್ರೂ ಅಷ್ಟೊಂದು ಎಫೆಕ್ಟಿವ್ ಇಲ್ಲ. ಹೀಗಾಗಿ ದುಬೆ ಕೈಗೆ ಬಾಲ್ ಕೊಡ್ತಿದ್ದಾರೆ. ಆದ್ರೆ ದುಬೆ ಬೌಲಿಂಗ್ ನೋಡಿದ್ರೆ ಅವ್ರು ಎದುರಾಳಿ ಟೀಂ ಗೆಲ್ಲಿಸೋ ಥರ ಬೌಲ್ ಮಾಡ್ತಿದ್ದಾರೆ. ಬಹುಶಃ ಜಿಂಬಾಬ್ವೆ ವಿರುದ್ಧ ಇನ್ನು 2 ಓವರ್ ಬೌಲ್ ಮಾಡಿದ್ರೆ ಅವ್ರೇ ಗೆಲ್ತಾ ಇದ್ರೋ ಏನೋ. ಸೋ ಇದೇ ಈಗ ಭಾರತಕ್ಕೆ ಇರೋ ದೊಡ್ಡ ಚಾಲೆಂಜ್. 18 ತಿಂಗಳಿಂದ ಭಾರತವನ್ನ ಗೆಲ್ಲಿಸಿಕೊಂಡು ಬರ್ತಿರೋ ಲಕ್ಕಿ ಕ್ಯಾಪ್ಟನ್ ಸೂರ್ಯ ಇನ್ಮೇಲಾದ್ರೂ ಬೌಲಿಂಗ್ನಲ್ಲಿ ಅಲರ್ಟ್ ಆಗ್ಬೇಕಿದೆ. ಇಲ್ದಿದ್ರೆ 300 ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗಲ್ಲ. ಇದ್ರ ಜೊತೆಗೆ ಫೀಲ್ಡಿಂಗ್ ಕೂಡ ತೀರಾ ಕಳಪೆಯಾಗಿದೆ. ನಿನ್ನೆ ಮ್ಯಾಚಲ್ಲಿ ಸೇಫೆಸ್ಟ್ ಹ್ಯಾಂಡ್ ಅಂತಾ ಕರೆಸಿಕೊಳ್ಳೋ ರಿಂಕು ಕೂಡ ಕ್ಯಾಚ್ ಚೆಲ್ಲಿದ್ರು. ಈ ಸೀಸನ್ನಲ್ಲಿ ಹೈಯೆಸ್ಟ್ ಕ್ಯಾಚ್ ಬಿಟ್ಟಿರೋರ ಪೈಕಿ ಸೆಕೆಂಡ್ ಪ್ಲೇಸಲ್ಲಿದ್ದಾರೆ. ಕ್ಯಾಚ್ ಬಿಟ್ರೋ ಮ್ಯಾಚ್ ಬಿಟ್ರೋ ಅನ್ನೋ ಥರ ಆಗೋ ಮುಂಚೆ ಫೀಲ್ಡಿಂಗ್ನಲ್ಲೂ ಅಲರ್ಟ್ ಆಗ್ಬೇಕಿದೆ.

ನೋಡಿರಿ

