ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ-ಟಗರು ಪುಟ್ಟಿ ಶ್ರೇಯಾಂಕ ಲೆಕ್ಕಕ್ಕಿಲ್ವಾ?

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ-ಟಗರು ಪುಟ್ಟಿ ಶ್ರೇಯಾಂಕ ಲೆಕ್ಕಕ್ಕಿಲ್ವಾ?

ಆಸ್ಟ್ರೇಲಿಯಾ ವಿರುದ್ಧ ವೈಟ್ ವಾಶ್ ಮುಖಭಂಗ ಎದುರಿಸಿದ ಭಾರತ ವನಿತೆಯರ ತಂಡ ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗಿದೆ. ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಸರಣಿಯು ಡಿಸೆಂಬರ್ 15 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 6 ಪಂದ್ಯಗಳಿರುತ್ತವೆ. ಮೊದಲಿಗೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಪಂದ್ಯಗಳಿಗೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಜರುಗಲಿದೆ.

ಇದನ್ನೂ ಓದಿ: RCBಗೆ ಕೆಎಲ್ ತಪ್ಪಿಸಿದ್ದೇ DK? – ಇಶಾನ್ ಕಿಶನ್ ಗೆ ಪವರ್ ಇಲ್ವಾ?

ವೆಸ್ಟ್ ಇಂಡೀಸ್ ವಿರುದ್ಧದ 6 ಪಂದ್ಯಗಳ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲೂ ನಾಯಕಿಯಾಗಿ ಹರ್ಮನ್​ಪ್ರೀತ್ ಕೌರ್ ಮುಂದುವರೆಯಲಿದ್ದಾರೆ.  ಉಪನಾಯಕಿಯಾಗಿ ಸ್ಮೃತಿ ಮಂಧಾನ ಹರ್ಮನ್‌ಗೆ ಸಾಥ್ ನೀಡಲಿದ್ದಾರೆ. ಇನ್ನು ಟಿ20 ತಂಡದಲ್ಲಿ ಹೊಸಮುಖವಾಗಿ ನಂದಿನಿ ಕಶ್ಯಪ್ ಕಾಣಿಸಿಕೊಂಡಿದ್ದಾರೆ. ಏಕದಿನ ತಂಡದಲ್ಲಿ ಇದೇ ಮೊದಲ ಬಾರಿಗೆ ರಾಘ್ವಿ ಬಿಸ್ತ್ ಮತ್ತು ಪ್ರತೀಕಾ ರಾವಲ್ ಸ್ಥಾನ ಪಡೆದಿದ್ದಾರೆ. ಇನ್ನೂ ಟಿ20 ಮತ್ತು ಏಕದಿನ ತಂಡಗಳಲ್ಲಿ ಶಫಾಲಿ ವರ್ಮಾ ಹಾಗೂ ಶ್ರೇಯಾಂಕಾ ಪಾಟೀಲ್​ಗೆ ಸ್ಥಾನ ಸಿಕ್ಕಿಲ್ಲ.

ಭಾರತ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ನಂದಿನಿ ಕಶ್ಯಪ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸಜನಾ ಸಜೀವನ್, ರಾಘ್ವಿ ಬಿಸ್ತ್, ರೇಣುಕಾ ಸಿಂಗ್ ಠಾಕೂರ್, ಪ್ರಿಯಾ ಮಿಶ್ರಾ, ಟಿಟಾಸ್ ಸಾಧು, ಸಾಯಿ ಠಾಕೋರ್, ಮಿನ್ನು ಮಣಿ, ರಾಧಾ ಯಾದವ್

 

suddiyaana

Leave a Reply

Your email address will not be published. Required fields are marked *