ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?

ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?

ಇಂಡಿಯಾ VS ಇಂಗ್ಲೆಂಡ್.. 3ನೇ ಟೆಸ್ಟ್.. ಡೇ-2 ಹೈಲೈಟ್ಸ್.. 326/5 ರನ್​​ ಗಳಿಸಿದ್ದ ಟೀಮ್ ಇಂಡಿಯಾ 500+ ಸ್ಕೋರ್​ ಮಾಡುತ್ತಾ ಅನ್ನೋ ನಿರೀಕ್ಷೆ ಇತ್ತು. ಆದ್ರೆ, 445ಕ್ಕೆ ಆಲೌಟ್ ಆಗಿದೆ. 130.5 ಓವರ್​ಗಳಲ್ಲಿ ಟೀಮ್ ಇಂಡಿಯಾ 445 ರನ್​​ ಗಳಿಸೋಕಷ್ಟೇ ಸಾಧ್ಯವಾಗಿತ್ತು. ಇಲ್ಲೊಂದು ಇಂಟ್ರೆಸ್ಟಿಂಗ್ ಡೆವಲಪ್​ಮೆಂಟ್ ಆಗಿದೆ. ಇಂಗ್ಲೆಂಡ್ ಫಸ್ಟ್​ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​​​ಗೆ ಇಳಿಯೋವಾಗಲೇ ಬೋನಸ್ ರನ್​ನೊಂದಿಗೆ ಆಟ ಶುರುಮಾಡಿತ್ತು. ಬ್ಯಾಟಿಂಗ್ ಆರಂಭಿಸೋವಾಗ ಟೀಮ್ ಸ್ಕೋರ್ ಯಾವಾಗಲೂ ಸೊನ್ನೆ ಇರುತ್ತೆ. ಬಟ್ ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳು ಮ್ಯಾಚ್​​ನ ಫಸ್ಟ್ ಬಾಲ್​ ಫೇಸ್ ಮಾಡೋ ಮುನ್ನವೇ ಇಂಗ್ಲೆಂಡ್ ಸ್ಕೋರ್ ಬೋರ್ಡ್​ನಲ್ಲಿ ಐದು ರನ್​ಗಳು ಆ್ಯಡ್ ಆಗಿತ್ತು. ಹಾಗಿದ್ರೆ ಇನ್ನಿಂಗ್ಸ್ ಶುರುವಾಗೋ ಮುನ್ನ ಇಂಗ್ಲೆಂಡ್​​ ಸ್ಕೋರ್ ಐದು ರನ್​ಗಳಾಗಿದ್ದು ಹೇಗೆ? ಅದಕ್ಕೆ ಕಾರಣ ಏನು? ಟೀಂ ಇಂಡಿಯಾ ಸೈಡ್​ನಿಂದ ಎಡವಟ್ಟಾಯ್ತಾ? ಈ ಬಗ್ಗೆ ಅತ್ಯಂತ ಇಂಟ್ರೆಸ್ಟಿಂಗ್ ಮಾಹಿತಿ ನೀಡ್ತೀನಿ. ಇದ್ರ ಜೊತೆಗೆ ಆರ್.ಅಶ್ವಿನ್ 500 ವಿಕೆಟ್​ ಪಡೆದು ಹಿಸ್ಟರಿಯ ಪಾರ್ಟ್ ಆಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 73 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ – ಡೆಬ್ಯೂ ಪ್ಲೇಯರ್ ಸರ್ಫರಾಜ್ ಖಾನ್ ಅರ್ಧಶತಕ

ಟೀಮ್ ಇಂಡಿಯಾ ಬೌಲರ್ಸ್​ ಒಂದೇ ಒಂದು ಬಾಲ್​​ನ್ನ ಕೂಡ ಎಸೆದಿರಲಿಲ್ಲ. ಇಂಗ್ಲೆಂಡ್ ಓಪನರ್ಸ್​ಗಳು ಒಂದು ಬಾಲ್​​ನ್ನ ಕೂಡ ಫೇಸ್ ಮಾಡಿರಲಿಲ್ಲ. ಎಲ್ಲಾ ಬಿಡಿ, ಇಂಗ್ಲೆಂಡ್​​ನ ಫಸ್ಟ್ ಇನ್ನಿಂಗ್ಸ್​ ಬ್ಯಾಟಿಂಗ್​​ಗಾಗಿ ಎರಡೂ ಟೀಮ್​​ನ ಪ್ಲೇಯರ್ಸ್​ಗಳು ಇನ್ನೂ ಗ್ರೌಂಡ್​​ಗೇ ಎಂಟ್ರಿ ಕೊಟ್ಟಿರಲಿಲ್ಲ. ಅಷ್ಟರಲ್ಲಾಗಲೇ, ಇಂಗ್ಲೆಂಡ್ ಸ್ಕೋರ್​ ಬೋರ್ಡ್​ನಲ್ಲಿ ಐದು ರನ್​ ಗಳಿಸಿತ್ತು. ಇದಕ್ಕೆ ಕಾರಣ ನಮ್ಮ ರವೀಂದ್ರ ಜಡೇಜ ಮತ್ತು ಆರ್.ಅಶ್ವಿನ್. ಸ್ನೇಹಿತರೇ, ಆಗಿರೋದಿಷ್ಟೇ, ಡೇ-2 ಆರಂಭದಲ್ಲಿ ಕುಲ್​ದೀಪ್​ ಯಾದವ್ ಔಟಾಗುತ್ತಲೇ ಆರ್​.ಅಶ್ವಿನ್ ಕ್ರೀಸ್​ಗಿಳೀತಾರೆ. ಈ ವೇಳೆ ರವೀಂದ್ರ ಜಡೇಜ ಮತ್ತು ಆರ್​.ಅಶ್ವಿನ್​ ರನ್ನಿಂಗ್​ ಬಿಟ್ವೀನ್​ ದಿ ವಿಕೆಟ್ ವೇಳೆ ಪಿಚ್​​ನ ಮಧ್ಯ ಭಾಗದಲ್ಲೇ ಓಡಾಡ್ತಾರೆ. ನಿಮಗೆ ಗೊತ್ತಿರೋ ರೂಲ್ಸ್ ಪ್ರಕಾರ ಪಿಚ್​ ಮಧ್ಯದಲ್ಲಿ ಓಡಾಡುವಂತಿಲ್ಲ. ಒಂದೂ ಪಿಚ್​​ನ ಕಾರ್ನರ್​ನಲ್ಲಿ ಓಡಾಡ್ಬೇಕು. ಇಲ್ಲಾ. ಪಿಚ್ ಹೊರ ಭಾಗದಲ್ಲಿರೋ ಗ್ರಾಸ್ ಮೇಲೆ ರನ್ನಿಂಗ್ ಮಾಡಬಹುದು. ಬಟ್ ಅಂಪೈರ್​ ವಾರ್ನಿಂಗ್​ ಕೊಟ್ಟ ಮೇಲೂ ಅದ್ರಲ್ಲೂ ಅಶ್ವಿನ್ ಅಂತೂ ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ವೇಳೆ ಪಿಚ್ ಮಿಡ್ಲ್​​ನಲ್ಲೇ ಓಡ್ತಿದ್ರು. ಒಂದ್ಸಾರಿಯಂತೂ ಪಿಚ್ ಮಧ್ಯೆ ಓಡೋಕೆ ಶುರು ಮಾಡುತ್ತಲೇ ನಾನ್​​ ಸ್ಟ್ರೈಕ್​ನಲ್ಲಿದ್ದ ಧ್ರುವ್​ ಜ್ಯುರೆಲ್​ ಆರ್​.ಅಶ್ವಿನ್​ರನ್ನ ಹಿಂದಕ್ಕೆ ಕಳಿಸಿದ್ರು. ಜಡೇಜ ಬಳಿಕ ಅಶ್ವಿನ್ ಕೂಡಾ ಅದೇ ತಪ್ಪನ್ನು ಮಾಡಿದರು. ಹೀಗಾಗಿ ಟೀಂ ಇಂಡಿಯಾಗೆ 5 ರನ್​ಗಳ ಪೆನಾಲ್ಟಿ ನೀಡಲಾಯ್ತು. ಇಂಗ್ಲೆಂಡ್​ಗೆ 5 ರನ್​ಗಳ ಬೋನಸ್ ಸಿಗ್ತು.

ಎಂಸಿಸಿ ರೂಲ್ ನಂಬರ್ 41.14.1 ಪ್ರಕಾರ ಪ್ಲೇಯರ್ಸ್​ಗಳು ಪಿಚ್​​ ಮಧ್ಯೆ ಓಡಾಡುವಂತೆಯೇ ಇಲ್ಲ. ಅಂದ್ರೆ ಪಿಚ್​​ನ್ನ ಡ್ಯಾಮೇಜ್​​ ಮಾಡಿದ ಆರೋಪಕ್ಕೆ ಒಳಗಾಗಬೇಕಾಗುತ್ತೆ. ಬ್ಯಾಟ್ಸ್​ಮನ್​​ಗಳು ರನ್ನಿಂಗ್ ಬಿಟ್ವೀನ್​ ದ ವಿಕೆಟ್ ವೇಳೆ ಪಿಚ್ ಮಧ್ಯೆ ಓಡಾಡಬಾರದು ಅಂತಾ ​ಕೇವಲ ಬ್ಯಾಟ್ಸ್​ಮನ್​ಗಳಿಗಷ್ಟೇ ಈ ರೂಲ್ಸ್ ಅನ್ವಯವಾಗೋದಲ್ಲ. ಬೌಲರ್ಸ್​ಗಳಿಗೂ ಇದು ಅಪ್ಲೈ ಆಗುತ್ತೆ. ಬೌಲಿಂಗ್ ಮಾಡಿದ ಮೇಲೆ ಪಿಚ್ ಮಧ್ಯ ಭಾಗದಲ್ಲಿ ಓಡಾಡುವಂತಿಲ್ಲ. ಫೀಲ್ಡರ್ಸ್​ಗಳು ಕೂಡ ಅಷ್ಟೇ, ಪಿಚ್ ನಡುವೆ ಹಾದು ಹೋಗುವಂತೆ ಇಲ್ಲ. ಸೆಂಟರ್ ಆಫ್ ದಿ ಪಿಚ್​​ನ್ನ ಕಂಪ್ಲೀಟ್ಲಿ ಪ್ರೊಟೆಕ್ಟೆಡ್ ಏರಿಯಾ ಅಂತಾ ಪರಿಗಣಿಸಲಾಗಿದೆ. ಇಲ್ಲಿ ಅಂಪೈರ್​ಗಳು ಒಂದು ಬಾರಿ ವಾರ್ನಿಂಗ್ ಕೊಡ್ತಾರೆ. ಇಷ್ಟಾದ್ಮೇಲೂ ಪಿಚ್ ಮೇಲೆ ಓಡಾಟ ಕಂಟಿನ್ಯೂ ಮಾಡಿದ್ರೆ ಐದು ರನ್​​ಗಳ ಪೆನಾಲ್ಟಿ ನೀಡಲಾಗುತ್ತೆ. ಜಡೇಜಾ ಮತ್ತು ಅಶ್ವಿನ್ ಮಾಡಿದ ಮಿಸ್ಟೇಕ್ಸ್​ನಿಂದಾಗಿಯೇ ಬ್ಯಾಟಿಂಗ್ ಆರಂಭಿಸೋ ಮುನ್ನವೇ ಇಂಗ್ಲೆಂಡ್ ​ಸ್ಕೋರ್​ 5 ರನ್​​ಗಳಾಗಿತ್ತು.

ಇಲ್ಲಿ ನಿಜಕ್ಕೂ ಆಶ್ಚರ್ಯ ಆಗೋದು ಏನಂದ್ರೆ, ಆರ್​.ಅಶ್ವಿನ್ ರೂಲ್ಸ್ ಬ್ರೇಕ್ ಮಾಡಿರೋದು. ಆ್ಯಕ್ಚುವಲಿ ಅಶ್ವಿನ್ ವನ್​ ಆಫ್ ದಿ ಮೋಸ್ಟ್ ಇಂಟೆಲಿಜೆಂಟ್ ಕ್ರಿಕೆಟರ್. ಕ್ರಿಕೆಟ್​ ರೂಲ್​​ ಬುಕ್​​ನ್ನೇ ಅರೆದು ಕುಡದಿರೋ ವ್ಯಕ್ತಿ. ಬಿಟ್ರೆ ಅಂಪೈರ್ಸ್​, ರೆಫ್ರಿಗಳಿಗೇ ರೂಲ್ಸ್​ ಬಗ್ಗೆ ಪಾಠ ಮಾಡ್ತಾರೆ. ಅಶ್ವಿನ್​ ಅಂಪೈರ್​ ಜೊತೆ ಡಿಸ್ಕಸ್ ಮಾಡ್ತಾ ಇದ್ದಾರೆ ಅಂದ್ರೆ ಏನೋ ರೂಲ್ಸ್​ ಬಗ್ಗೆ ಟೀಚಿಂಗ್ ಮಾಡ್ತಿರಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾರೆ. ಅಂಥಾ ಅಶ್ವಿನ್​ರಿಂದಲೇ ಇಂಥಾ ಸಿಲ್ಲಿ ಮಿಸ್ಟೇಕ್ ಆಗಿದೆ. ಬಟ್..ಅಶ್ವಿನ್​​ ಕಡೆಯಿಂದಾದ ಈ ರಿಪೀಟೆಡ್ ಅಫೆನ್ಸಿವ್​ನ್ನ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಅಲಿಸ್ಟರ್​ ಕುಕ್ ಬೇರೆಯದೇ ಆ್ಯಂಗಲ್​​ನಲ್ಲಿ ಡಿಫೈನ್ ಮಾಡಿದ್ದಾರೆ. ಅಶ್ವಿನ್​ ಬೇಕು ಬೇಕು ಅಂತಾನೆ ಈ ರೀತಿ ಪಿಚ್ ಮಧ್ಯೆ ಓಡಾಡಿದ್ದಾರೆ. ಇದು ಅಶ್ವಿನ್​​ರ ಟ್ಯಾಕ್ಟಿಕಲ್ ಸ್ಟ್ರ್ಯಾಟಜಿಯಂತೆ. ತಾವು ಬೌಲಿಂಗ್ ಮಾಡೋ ವೇಳೆ ಪಿಚ್ ಡಿಫರೆಂಟ್ ಆಗಿ ಬಿಹೇವ್ ಮಾಡಲಿ. ತಮ್ಮ ಬೌಲಿಂಗ್​ಗೆ ಹೆಲ್ಪ್ ಆಗಲಿ. ತಾವು ಪಿಚ್​ ಮಧ್ಯೆ ಓಡಾಡಿದ ಜಾಗಕ್ಕೆ ಬಾಲ್​​​ ಎಸೆಯೋದು ಅಶ್ವಿನ್ ಸ್ಟ್ರ್ಯಾಟಜಿಯಾಗಿರಬಹುದು ಅಂತಾ ಅಲಿಸ್ಟರ್​ ಕುಕ್ ಹೇಳಿದ್ದಾರೆ. ಇಲ್ಲಿ ಅಲಿಸ್ಟರ್​ ಕುಕ್ ಹೇಳಿರೋದು ನಿಜವಾಗಿರಲೂಬಹುದು. ಇಲ್ಲಾಂದ್ರೆ ಅಶ್ವಿನ್​ರಂಥಾ ಎಕ್ಸ್​ಪೀರಿಯನ್ಸ್​ ಪ್ಲೇಯರ್ ಪಿಚ್ ಮಧ್ಯೆ ರಿಪೀಟೆಡ್ಲಿ ಓಡಾಡಿದ್ದಾರೆ ಅಂದ್ರೆ ಏನರ್ಥ. ಡೌಟ್ ಬಂದೇ ಬರುತ್ತೆ.

ಇರ್ಲಿ ಬಿಡಿ, ಈಗ ಇಂಗ್ಲೆಂಡ್ ಬ್ಯಾಟಿಂಗ್ ವಿಚಾರಕ್ಕೆ ಬರೋಣ. ಅಕ್ಷರಶ: ನಮ್ಮ ಬೌಲರ್ಸ್​ಗಳ ಪಿಕ್ಚರ್ ಬಿಡಿಸ್ತಾ ಇದ್ದಾರೆ. ಬ್ಯಾಸ್​ಬಾಲ್​ ಆಟ ಶುರುಮಾಡಿದಂತೆ ಕಾಣಿಸ್ತಾ ಇದೆ. ತಮ್ಮ ಫಸ್ಟ್​ ಇನ್ನಿಂಗ್ಸ್​ನ ಫಸ್ಟ್​ ಸೆಷನ್​​ನಲ್ಲೇ ಇಂಗ್ಲೆಂಡ್ 200+ ಕ್ರಾಸ್ ಮಾಡಿದೆ. ಅಫ್​ಕೋಸ್ ಇದು ಬ್ಯಾಟಿಂಗ್ ಪಿಚ್. ಅದ್ರಲ್ಲಿ ಡೌಟೇ ಇಲ್ಲ. ಆದ್ರೆ ಇಂಗ್ಲೆಂಡ್ ಫಸ್ಟ್​ ಇನ್ನಿಂಗ್ಸ್​ನಲ್ಲಿ ಆಡ್ತಾ ಇರೋದನ್ನ ನೋಡಿದ್ರೆ, ಟೀಂ ಇಂಡಿಯಾದ 445 ಸ್ಕೋರ್ ಕಡಿಮೆಯಾಯ್ತು ಅಂತಾನೆ ಅನ್ಸುತ್ತೆ. ಸೆಕೆಂಡ್​ ಡೇ ಫಸ್ಟ್ ಸೆಷನ್​ನಲ್ಲಿ ಇಂಗ್ಲೆಂಡ್​​ ಓವರ್​​ಗೆ ಆರರ ರನ್​​ರೇಟ್​ನಲ್ಲಿ ಸ್ಕೋರ್ ಮಾಡಿದೆ. ಅದ್ರಲ್ಲೂ ಓಪನರ್ ಬೆನ್ ಡಕೆಟ್ ಅಂತೂ ನಮ್ಮ ಬೌಲರ್ಸ್​ಗಳ ಬೆಂಡೆತ್ತಿದ್ದಾರೆ. ನೋ ಡೌಟ್ ಬ್ಯಾಸ್​​ಬಾಲ್ ಸ್ಟೈಲ್​​ನಲ್ಲೇ ಆಡಿದ್ದಾರೆ. ಕೇವಲ 88 ಬಾಲ್​ಗಳಲ್ಲೇ ಸೆಂಚೂರಿ ಹೊಡೆದ್ರು. 21 ಬೌಂಡರಿ..2 ಸಿಕ್ಸರ್.. 118 ಬಾಲ್​ಗಳಲ್ಲಿ 133 ರನ್​​ ಗಳಿಸಿ ನಾಟ್​​ಔಟ್ ಆಗಿದ್ದಾರೆ. ಬೆನ್​ ಡಕೆಟ್ ಬ್ಯಾಟಿಂಗ್ ಹೈಲೈಟ್ಸ್ ನೋಡಿದ ಹಾಗಿತ್ತು. ಪ್ರತಿ ಇನ್ನಿಂಗ್ಸ್​ನಲ್ಲೂ ಇಂಗ್ಲೆಂಡ್ ಯಾರಾದ್ರೂ ಒಬ್ಬ ಬ್ಯಾಟ್ಸ್​ಮನ್​ ಬ್ಯಾಸ್​​ಬಾಲ್ ಮೋಡ್​ನಲ್ಲೇ ಬ್ಯಾಟ್ ಬೀಸ್ತಾರೆ. ಈ ಹಿಂದಿನ ಮ್ಯಾಚ್​ಗಳಲ್ಲಿ ಓಲಿ ಪಾಪ್, ಜ್ಯಾಕ್ ಕ್ರೌವ್ಲಿ ಮತ್ತು ಬೆನ್​ಸ್ಟೋಕ್ಸ್​ ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಮಾಡಿದ್ರು.

ತಮ್ಮ ಟೀಮ್​ನ ಪ್ರಮುಖ ಅಸ್ತ್ರ ಬೇಸ್​​ಬಾಲ್​ನ್ನ ಟೀಂ ಇಂಡಿಯಾದ ಮೇಲೆ ಪ್ರಯೋಗಿಸೋಕೆ ಇಂಗ್ಲೆಂಡ್ ಇನ್ನಿಲ್ಲದ ಪ್ರಯತ್ನ ಮಾಡ್ತಾನೆ ಇದೆ. ಹಾಗೆಯೇ ಮ್ಯಾಚ್​ನಿಂದ ಮ್ಯಾಚ್​​ಗೆ ಸಕ್ಸಸ್​ಫುಲ್​ ಎಕ್ಸಿಕ್ಯೂಟ್ ಕೂಡ ಮಾಡ್ತಿದೆ. ಭಾರತದಲ್ಲೂ ಬೇಸ್​ಬಾಲ್ ಆಟ ನಡೆಯುತ್ತೆ ಅನ್ನೋದನ್ನ ಇಂಗ್ಲೆಂಡ್ ಪ್ರೂವ್ ಮಾಡೋಕೆ ಹೊರಟಂತೆ ಕಾಣ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 207/2 ರನ್​ ಗಳಿಸಿದೆ. ಮೂರನೇ ದಿನವೂ ಇದೇ ರೀತಿ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರೆ ಇಂಗ್ಲೆಂಡ್ 500+ ಸ್ಕೋರ್ ಮಾಡಿದ್ರೂ ಆಶ್ಚರ್ಯ ಇಲ್ಲ. ಬಟ್ ಮೂರನೇ ದಿನ ಮ್ಯಾಚ್​​ನ ಮೊದಲ ಒಂದು ಗಂಟೆ ತುಂಬಾ ಕ್ರೂಶಿಯಲ್ ಆಗಿರುತ್ತೆ. ಈ ವೇಳೆ ವಿಕೆಟ್ ಬಿತ್ತು ಅಂದ್ರೆ ಬಚಾವ್. ಇಲ್ಲಾ ಜೋ ರೂಟ್ ಕೂಡ ಕ್ರೀಸ್​​ನಲ್ಲಿ ನಿಂತ್ರೂ ಅಂದ್ರೆ ಬೆನ್​ ಡಕೆಟ್ ಜೊತೆ ಸೇರಿ ಬೆಂಡೆತ್ತೋದು ಗ್ಯಾರಂಟಿ. ಬೆನ್ ಡಕೆಟ್ ರಿವರ್ಸ್ ಸ್ಕೂಪ್, ಸ್ವೀಪ್​ ಸೇರಿ 360 ಡಿಗ್ರಿನಲ್ಲಿ ಸ್ಕೋರ್ ಮಾಡ್ತಾ ಇದ್ದಾರೆ. ಜೋ ರೂಟ್ ಅಂತೂ ಕೇಳೋದೆ ಬೇಡ ಸ್ವೀಪಿಂಗ್​ ಎಕ್ಸ್​ಪರ್ಟ್. ಇವರಿಬ್ಬರನ್ನೂ ಬೇಗನೆ ಪೆವಿಲಿಯನ್​​ಗೆ ಕಳಿಸಿಲ್ಲಾಂದ್ರೆ ಇಡೀ ಮ್ಯಾಚ್​ನ್ನೇ ಟರ್ನ್ ಮಾಡಿಬಿಡ್ತಾರೆ. ಸರ್ಫರಾಜ್ ಖಾನ್ ರನ್ನೌಟ್ ಆದ್ರಲ್ಲಾ. ಅದ್ರಿಂದ ಟೀಮ್ ಇಂಡಿಯಾಗೆ ನಿಜಕ್ಕೂ ಹೊಡೆತ ಬಿದ್ದಿದೆ. ಇಲ್ಲಾಂದ್ರೆ ಸರ್ಫರಾಜ್ ನಿಂತು ಆಡ್ತಿದ್ರು. ಟೋಟಲ್ 500+ ಆಗ್ತಿತ್ತು. ಬೌಲರ್ಸ್​ಗಳ ಪೈಕಿ ಮೊಹಮ್ಮದ್ ಸಿರಾಜ್ ವರ್ಕೌಟ್ ಆಗ್ತಿಲ್ಲ. ಫಸ್ಟ್ ಮ್ಯಾಚ್​​ನಲ್ಲೂ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡುವಲ್ಲಿ ಸಿರಾಜ್ ಫೇಲ್ ಆಗಿದ್ರು. ಈಗ 10 ಓವರ್​ಗಳಲ್ಲಿ 54 ರನ್ ಕೊಟ್ಟಿದ್ದಾರೆ. ಜಡೇಜಾ 4 ಓವರ್​ಗಳಲ್ಲಿ 33 ರನ್​​ ದಾನ ಮಾಡಿದ್ದಾರೆ.

ಅಶ್ವಿನ್ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಅನಿಲ್​ ಕುಂಬ್ಳೆ 132 ಟೆಸ್ಟ್ ಮ್ಯಾಚ್​ಗಳಲ್ಲಿ 619 ವಿಕೆಟ್ ಪಡೆದಿದ್ರು. ಅಶ್ವಿನ್ 98 ಮ್ಯಾಚ್​​ಗಳಲ್ಲಿ 500 ವಿಕೆಟ್ ಪಡೆದಿದ್ದಾರೆ. ವರ್ಲ್ಡ್ ಕ್ರಿಕೆಟ್​​ನಲ್ಲಿ 500+ ವಿಕೆಟ್ ಪಡೆದ 9ನೇ ಬೌಲರ್ ಅಶ್ವಿನ್.

 

Sulekha