ಎರಡನೇ ದಿನದಾಟದಲ್ಲಿ ಆಂಗ್ಲರು ಶೇಪ್ಔಟ್ – ಅಭಿಮಾನಿಗಳ ಮನಗೆದ್ದ ಕನ್ನಡಿಗ ಪಡಿಕ್ಕಲ್
ರೋಹಿತ್ ಶರ್ಮಾ ಸೆಂಚೂರಿ, ಶುಬ್ಮನ್ ಗಿಲ್ ಸೆಂಚೂರಿ. ರೋಹಿತ್-ಶುಬ್ಮನ್ ಗಿಲ್ ಇಬ್ಬರ ಸೆಂಚುರಿ ಧಮಾಕ ಐದನೇ ಟೆಸ್ಟ್ನ 2ನೇ ದಿನದಾಟದ ಹೈಲೈಟ್ಸ್. ಎರಡನೇ ದಿನ ಕೂಡ ನಮ್ಮ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ಬೌಲರ್ಸ್ಗಳಿಗೆ ನೀರು ಕುಡಿಸಿದ್ದಾರೆ. ಕೇವಲ ಬ್ಯಾಟ್ಸ್ಮನ್ಗಳು ಮಾತ್ರ ಬೌಲಿಂಗ್ನಲ್ಲಿ ಇಂಗ್ಲೆಂಡ್ನ್ನ ಶೇಪ್ಔಟ್ ಮಾಡಿದ್ದ ಕುಲ್ದೀಪ್ ಯಾದವ್ ಬ್ಯಾಟಿಂಗ್ನಲ್ಲೂ ಬೆನ್ ಸ್ಟೋಕ್ಸ್ ಟೀಮ್ನ ಬೆವರಿಳಿಸಿದ್ದಾರೆ. ಹಾಗೆಯೇ ನಮ್ಮ ಕನ್ನಡಿಗ ಪಡಿಕ್ಕಲ್ ಪರ್ಫಾಮೆನ್ಸ್ ಕೂಡಾ ಕಡಿಮೆಯೇನಿಲ್ಲ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಪಾದಾರ್ಪಣೆ – 314ನೇ ಸಂಖ್ಯೆಯ ಜೆರ್ಸಿ ಪಡೆದ ಕನ್ನಡಿಗ
ಡೇ-2 ಆರಂಭದಲ್ಲೇ ರೋಹಿತ್-ಶುಬ್ಮನ್ ಗಿಲ್ ಪಾಟ್ನರ್ಶಿಪ್ನ್ನ ಬ್ರೇಕ್ ಮಾಡಬಹುದು ಅಂತಾ ಇಂಗ್ಲೆಂಡ್ ಬೌಲರ್ಸ್ ಅಂದುಕೊಂಡಿದ್ರು. ಆದ್ರೆ ಧರ್ಮಶಾಲಾದಲ್ಲೂ ಅವರ ಆಟ ನಡೀತಾ ಇಲ್ಲ. ಸ್ಟಾರ್ಟಿಂಗ್ನಿಂದಲೇ ರೋಹಿತ್-ಗಿಲ್ ಚಚ್ಚೋಕೆ ಶುರು ಮಾಡಿದ್ರು. ಇಬ್ಬರ ಬ್ಯಾಟಿಂಗ್ಗೆ ಇಂಗ್ಲೆಂಡ್ನ ಮೇನ್ ವೆಪನ್ ಜೇಮ್ಸ್ ಆ್ಯಂಡರ್ಸನ್ ಮತ್ತು ಮಾರ್ಕ್ ವುಡ್ ಅಡ್ರೆಸ್ಸೇ ಇಲ್ಲದಂತಾಗಿತ್ತು. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಇಬ್ಬರೂ 360 ಡಿಗ್ರಿಯಲ್ಲೂ ಸ್ಕೋರ್ ಮಾಡ್ತಾ ಸಾಗಿದ್ರು. ಸೆಂಚೂರಿ ಹತ್ರ ಬರ್ತಿದ್ದಂತೆ, 72 ರನ್ ಆಗಿದ್ದಾಗ ರೋಹಿತ್ ಶರ್ಮಾರ ಕ್ಯಾಚ್ ಕೂಡ ಡ್ರಾಪ್ ಆಯ್ತು. ರೋಹಿತ್ ಸೆಂಚೂರಿಗೆ ಲಕ್ ಕೂಡ ಸಾಥ್ ಕೊಡ್ತು. ಅಂತಿಮವಾಗಿ 162 ಬಾಲ್ಗಳಲ್ಲಿ ರೋಹಿತ್ 103 ರನ್ ಬಾರಿಸಿದ್ರು. ಹಿಟ್ಮ್ಯಾನ್ ಸ್ಪೆಷಾಲಿಟಿ ಏನಂದ್ರೆ ಹಾಫ್ ಸೆಂಚೂರಿ ಹೊಡೆದ್ರೂ, ಸೆಂಚೂರಿ ಹೊಡೆದ್ರೂ ಒಂದೇ ರೀತಿಯ ಪೋಸ್. ಹೆಲ್ಮೆಟ್ ತೆಗೆದು ಸೆಲೆಬ್ರೇಟ್ ಎಲ್ಲ ಮಾಡಿಯೇ ಇಲ್ಲ. ಸೆಂಚೂರಿ ನಂಗೆ ಇಂಪಾರ್ಟೆಂಟ್ ಅಲ್ಲ ಅನ್ನೋ ರೀತಿಯಲ್ಲೇ ಪೋಸ್ ಕೊಟ್ರು. ಸೆಂಚೂರಿ ಆದ ಬೆನ್ನಲ್ಲೇ ಒಂದು ಇಂಟ್ರೆಸ್ಟಿಂಗ್ ಡೆವಲಪ್ಮೆಂಟ್ ಆಯ್ತು. 103 ರನ್ ಮಾಡಿ ಸ್ಟ್ರೈಕ್ನಲ್ಲಿದ್ದ ರೋಹಿತ್ ಶರ್ಮಾಗೆ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡೋಕೆ ಮುಂದಾಗ್ತಾರೆ. ಕಳೆದ ಆ್ಯಶಸ್ ಸೀರಿಸ್ ಬಳಿಕ ಬೆನ್ ಸ್ಟೋಕ್ಸ್ ಯಾವುದೇ ಮ್ಯಾಚ್ಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. 2023ರಲ್ಲಿ ನಡೆದ ಆ್ಯಶಸ್ ಬಳಿಕ ಹಲವು ತಿಂಗಳಿನಿಂದ ಬೌಲಿಂಗ್ಗೆ ಇಳಿದಿರಲಿಲ್ಲ.
ಬೆನ್ಸ್ಟೋಕ್ಸ್ ಒಬ್ಬ ಟಾಪ್ ಕ್ಲಾಸ್ ಬೌಲರ್ ಕೂಡ. ಆದ್ರೆ ಇಂಜ್ಯೂರಿ ಸಮಸ್ಯೆಯಿಂದಾಗಿ ಅವರು ಬೌಲಿಂಗ್ ಮಾಡ್ತಾ ಇರಲಿಲ್ಲ. ಕಳೆದ ನಾಲ್ಕು ಟೆಸ್ಟ್ ಮ್ಯಾಚ್ಗಳಲ್ಲೂ ಬೆನ್ಸ್ಟೋಕ್ಸ್ ಬೌಲಿಂಗ್ ಮಾಡಿಲ್ಲ. ಆದ್ರೆ ರೋಹಿತ್ ಸೆಂಚೂರಿ ಹೊಡೆದ ಬಳಿಕ ಬೌಲಿಂಗ್ಗೆ ಇಳಿದ ಬೆನ್ ಸ್ಟೋಕ್ಸ್ ಫಸ್ಟ್ ಬಾಲ್ನಲ್ಲೇ ರೋಹಿತ್ ಶರ್ಮಾರನ್ನ ಬೌಲ್ಡ್ ಮಾಡ್ತಿದೆ. ಬೆನ್ ಸ್ಟೋಕ್ಸ್ ಎಸೆದ ಸ್ಲೈಟ್ಲಿ ಔಟ್ ಸ್ವಿಂಗ್ ಬಾಲ್ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಬೌಲ್ಡ್. ಈ ಮೂಲಕ ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ಕಮ್ಬ್ಯಾಕ್ ಮಾಡಿದ್ರು.
ಇನ್ನು ಶುಬ್ಮನ್ ಗಿಲ್ 150 ಬಾಲ್ಗಳಲ್ಲಿ 110 ರನ್ ಗಳಿಸಿದ್ರು. ಕ್ಲಾಸ್ ಬ್ಯಾಟಿಂಗ್. ಹಳೆಯ ಫಾರ್ಮ್ಗೆ ಮತ್ತೆ ಮರಳಿದ್ದಾರೆ. ಗಿಲ್ ಬಳಿಕ ಫಸ್ಟ್ ಟೆಸ್ಟ್ ಆಡ್ತಾ ಇರೋ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಫುಲ್ ಶೈನ್ ಆದ್ರು. ಫಸ್ಟ್ ಮ್ಯಾಚ್ನಲ್ಲೇ ಹಾಫ್ ಸೆಂಚೂರಿ. 103 ಬಾಲ್ಗಳಲ್ಲಿ 65 ರನ್. 10 ಬೌಂಡರಿ, ಒಂದು ಸಿಕ್ಸರ್ ದೇವದತ್ ಪಡಿಕ್ಕಲ್ ಬ್ಯಾಟ್ನಿಂದ ಬಂದಿತ್ತು. ಇವ್ರದ್ದೂ ಅಷ್ಟೇ ಲೆಫ್ಟ್ ಹ್ಯಾಂಡರ್ ಕ್ಲಾಸ್ ಬ್ಯಾಟಿಂಗ್. ಅದ್ರಲ್ಲೂ ಜೇಮ್ಸ್ ಆ್ಯಂಡರ್ಸನ್ ಬಾಲ್ಗಳಿಗೆ ಪಡಿಕ್ಕಲ್ ಹೊಡೆದ ಕವರ್ ಡ್ರೈವ್ ಅಂತೂ ಟಾಪ್ ಕ್ಲಾಸ್ ಆಗಿತ್ತು. ಡೆಬ್ಯೂ ಮ್ಯಾಚ್ನಲ್ಲೇ ಪ್ರಾಮಿಸಿಂಗ್ ಆಗಿ ಬ್ಯಾಟಿಂಗ್ ಮಾಡಿದ್ದಾರೆ. ದೇವದತ್ ಪಡಿಕ್ಕಲ್ ಮತ್ತೊಬ್ಬ ಯಂಗ್ ಕ್ರಿಕೆಟರ್ ಸರ್ಫರಾಜ್ ಖಾನ್ ಕೂಡ ಸಾಥ್ ಕೊಟ್ರು. ಪಡಿಕ್ಕಲ್ ತುಂಬಾ ಎಚ್ಚರಿಕೆಯಿಂದ ಟೆಸ್ಟ್ ಮ್ಯಾಚ್ ಶೈಲಿಯಲ್ಲೇ ಆಡ್ತಾ ಇದ್ರೆ, ಇತ್ತ ಸರ್ಫರಾಜ್ ಖಾನ್ ವಂಡೇ ಮೋಡ್ನಲ್ಲೇ ಬ್ಯಾಟ್ ಬೀಸಿದ್ರು. 60 ಬಾಲ್ಗಳಲ್ಲೇ 56 ರನ್ ಗಳಿಸಿದ್ರು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಯಾವ ರೀತಿ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಿದ್ರೋ ಅದೇ ರೀತಿ ಸರ್ಫರಾಜ್ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲೂ ಕನಸ್ಟಿಸ್ಟೆಂಟ್ ಆಗಿ ರನ್ ಮಾಡ್ತಾ ಇದ್ದಾರೆ. ಮಿಡ್ಲ್ ಆರ್ಡರ್ನಲ್ಲಿ ಒಬ್ಬ ನಂಬಿಕಸ್ಥ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಳ್ತಿದ್ದಾರೆ. ಇಲ್ಲಿ ಸರ್ಫರಾಜ್ ಮತ್ತು ಪಡಿಕ್ಕಲ್ ಔಟಾಗುತ್ತಲೇ ಟೀಂ ಇಂಡಿಯಾ ಕೊಲ್ಯಾಪ್ಸ್ ಆಗೋಕೆ ಶುರುವಾಯ್ತು. ರವೀಂದ್ರ ಜಡೇಜಾ, ಧ್ರುವ್ ಜ್ಯುರೆಲ್ ಬೇಗನೆ ಪೆವಿಲಿಯನ್ ಸೇರಿಕೊಳ್ತಾರೆ. ಅಶ್ವಿನ್ ಸೊನ್ನೆಗೆ ಔಟಾಗ್ತಾರೆ. ಆದ್ರೆ ಮತ್ತೊಮ್ಮೆ ಟೀಂ ಇಂಡಿಯಾಗೆ ನೆರವಾಗಿರೋದು ಕುಲ್ದೀಪ್ ಯಾದವ್. ಅವರಿಗೆ ಸಾಥ್ ಕೊಟ್ಟಿರೋದು ಜಸ್ಪ್ರಿತ್ ಬುಮ್ರಾ. ಕುಲ್ದೀಪ್ ಅಂತೂ ಲಾಸ್ಟ್ ಮ್ಯಾಚ್ನಲ್ಲೂ ಇಂಗ್ಲೆಂಡ್ ಪ್ಲೇಯರ್ಸ್ಗಳನ್ನ ಚೆನ್ನಾಗಿಯೇ ಆಟವಾಡಿಸಿದ್ರು. ಈ ಮ್ಯಾಚ್ನಲ್ಲೂ ಅಷ್ಟೇ ಫುಲ್ ಫ್ಲೆಡ್ಜ್ ಬ್ಯಾಟ್ಸ್ಮನ್ ರೀತಿಯಲ್ಲೇ ಡಿಫೆನ್ಸ್ ಮಾಡ್ತಾ ಹಿಮಾಚಲದ ಚಳಿಯಲ್ಲೂ ಇಂಗ್ಲೆಂಡ್ ಬೌಲರ್ಸ್ಗೆ ಬೆವರಿಳಿಸಿದ್ರು. ಕುಲ್ದೀಪ್ 55 ಬಾಲ್ಗಳಲ್ಲಿ 22 ರನ್ ನಾಟೌಟ್. ಜಸ್ಪ್ರಿತ್ ಬುಮ್ರಾ ಕೂಡ 55 ಬಾಲ್ಗಳಲ್ಲಿ 19 ರನ್ ಗಳಿಸಿ ಕ್ರೀಸ್ನಲ್ಲಿದ್ರು. ಬುಮ್ರಾ ಕೂಡ ಚೆನ್ನಾಗಿಯೇ ಬ್ಯಾಟಿಂಗ್ ಮಾಡ್ತಾರೆ.
ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 473/8 ರನ್ ಗಳಿಸಿದೆ. ಸದ್ಯ ಭಾರತ 255 ರನ್ಗಳ ಲೀಡ್ ಹೊಂದಿದೆ.