ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಮ್ ಪ್ರಕಟ – ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯ

ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಮ್ ಪ್ರಕಟ – ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಉಳಿದ ಮೂರು ಟೆಸ್ಟ್​ ಮ್ಯಾಚ್​​ಗಳಿಗೆ ಇನ್ನೂ ಕೂಡ ಟೀಂ ಇಂಡಿಯಾದ ಸ್ಕ್ವಾಡ್ ಅನೌನ್ಸ್ ಆಗಿಲ್ಲ. ಫೆಬ್ರವರಿ 15ಕ್ಕೆ ಮೂರನೇ ಮ್ಯಾಚ್​ ಆರಂಭವಾಗುತ್ತೆ. ಮೊದಲ ಎರಡು ಟೆಸ್ಟ್​ ಮ್ಯಾಚ್​​ಗಳಿಗಷ್ಟೇ ಸ್ಕ್ವಾಡ್​ ಅನೌನ್ಸ್ ಮಾಡಿದ್ದ ಬಿಸಿಸಿಐ ಉಳಿದ ಮೂರು ಟೆಸ್ಟ್​ ಮ್ಯಾಚ್​ಗಳಿಗೆ ತಂಡವನ್ನ ಅನೌನ್ಸ್ ಮಾಡಿರಲಿಲ್ಲ. ಆದ್ರೆ ಈಗ ಬಿಸಿಸಿಐ ಒಂದಷ್ಟು ಕನ್​​ಫ್ಯೂಷನ್​ನಲ್ಲಿ ಸಿಲುಕಿದ್ದು ಸ್ಕ್ವಾಡ್​ ಅನೌನ್ಸ್​​ನೆಂಟ್  ಡಿಲೇ ಆಗ್ತಿದೆ. ಹಾಗಿದ್ರೆ ಇಲ್ಲಿ ನಿಜಕ್ಕೂ ಬಿಸಿಸಿಐ ಸೆಲೆಕ್ಷನ್ ಕಮಿಟಿ ಗೊಂದಲದಲ್ಲಿ ಸಿಲುಕಿರೋದ್ಯಾಕೆ ಎಂಬ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಇಶಾನ್ ಕಿಶನ್‌ಗೆ ಹೊಟ್ಟೆಕಿಚ್ಚು ಯಾಕೆ? – ಕೋಚ್ ರಾಹುಲ್ ದ್ರಾವಿಡ್ ವಾರ್ನಿಂಗ್ ಮಾಡಿದ್ಯಾಕೆ?

ಇಂಗ್ಲೆಂಡ್​ ವಿರುದ್ಧದ ಉಳಿದ ಮೂರು ಟೆಸ್ಟ್​ ಮ್ಯಾಚ್​​ಗಳಿಗಾಗಿ ಸ್ಕ್ವಾಡ್​​ ಸೆಲೆಕ್ಷನ್​​ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್​ಕರ್​ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಕೋಚ್ ರಾಹುಲ್​ ದ್ರಾವಿಡ್ ಇಬ್ಬರೂ ಮೀಟಿಂಗ್​​ನಲ್ಲಿ ಇದ್ದರು. ಸಭೆ ನಂತರ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. 17 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ವೈಯುಕ್ತಿಕ ಕಾರಣಗಳಿಂದ ಕೊಹ್ಲಿ ಸಂಪೂರ್ಣ ಸರಣಿಯಿಂದ ಹೊರಗುಳಿಯಲು ಬಯಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇನ್ನು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಕಾರಣ ಅಯ್ಯರ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಬೌಲಿಂಗ್ ಡಿಪಾರ್ಟ್​​ಮೆಂಟ್​ನ ಪ್ರಮುಖ ಅಸ್ತ್ರ ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡೋ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್​ ಚಿಂತನೆ ನಡೆಸ್ತಾ ಇದೆ. ಆದ್ರೆ ಸೆಲೆಕ್ಷನ್ ಕಮಿಟಿ ಮಾತ್ರ ಮೂರನೇ ಟೆಸ್ಟ್​ನಲ್ಲಿ ಬುಮ್ರಾ ಆಡಲಿ ಅಂತಾ ಬಯಸಿದ್ಯಂತೆ. ಮೂರನೇ ಮ್ಯಾಚ್​ ನಡೆಯೋ ರಾಜ್​ಕೋಟ್ ಪಿಚ್ ಬ್ಯಾಟ್ಸ್​ಮನ್​​ಗಳಿಗೆ ಫೇವರ್ ಆಗಿದ್ದು, ಹೀಗಾಗಿ ಬುಮ್ರಾರನ್ನ ಆಡಿಸದೇ ಇದ್ರ ತಂಡಕ್ಕೆ ಹೊಡೆತ ಬೀಳಬಹುದು. ಇಂಥಾ ಪಿಚ್​​ನಲ್ಲಿ ಬುಮ್ರಾರಂಥಾ ಸ್ಕಿಲ್​​ಫುಲ್ ಬೌಲರ್​​ ತುಂಬಾನೆ ಮುಖ್ಯ. ಸೆಕೆಂಡ್​​ ಟೆಸ್ಟ್​​​ನಲ್ಲಿ ರೆಸ್ಟ್​ ಬುಮ್ರಾ 3ನೇ ಟೆಸ್ಟ್​ಗೆ ಕಮ್​ಬ್ಯಾಕ್ ಮಾಡಿದ್ರೂ ಜಸ್ಪ್ರಿತ್​ ಬುಮ್ರಾ ಸ್ಥಾನವನ್ನ ರಿಪ್ಲೇಸ್​ ಮಾಡೋಕೆ ಕಷ್ಟ ಅನ್ನೋದು ಸೆಲೆಕ್ಷನ್​ ಕಮಿಟಿಯ ನಿಲುವು. ಮೊದಲ ಎರಡು ಟೆಸ್ಟ್​ ಮ್ಯಾಚ್​​ಗಳಲ್ಲಿ ಬುಮ್ರಾ ಒಟ್ಟು 58 ಓವರ್​​ ಬೌಲ್ ಮಾಡಿದ್ರು. 15 ವಿಕೆಟ್​​ಗಳನ್ನ ಪಡೆದಿದ್ರು. ಅದ್ರಲ್ಲೂ ಸೆಕೆಂಡ್​ ಟೆಸ್ಟ್​ ಗೆಲುವಿನಲ್ಲಿ ಮೇನ್ ರೋಲ್ ನಿಭಾಯಿಸಿರೋದೆ ಜಸ್ಪ್ರಿತ್ ಬುಮ್ರಾ. ಹೀಗಾಗಿ ಬುಮ್ರಾ ಪ್ರಸೆನ್ಸ್​ ಟೀಮ್​ ಮೇಲೆ ತುಂಬಾ ಪಾಸಿಟಿವ್ ಪರಿಣಾಮ ಬೀರುತ್ತೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಹಾಗಂತಾ ಬುಮ್ರಾ ಮೇಲೆಯೇ ಹೆಚ್ಚು ಪ್ರೆಷರ್ ಹಾಕೋಕೂ ಆಗೋದಿಲ್ಲ. ಯಾಕಂದ್ರೆ ಮೇಲಿಂದ ಮೇಲೆ ಹಲವು ಬಾರಿ ಇಂಜ್ಯೂರಿಗೊಳಗಾಗಿರೋ ಕಾರಣ ಬುಮ್ರಾ ಬಗ್ಗೆ ಹೆಚ್ಚಿನ ನಿಗಾ ವಹಿಸಲೇಬೇಕಿದೆ. ಹೀಗಾಗಿ ಬಿಸಿಸಿಐ ಮೆಡಿಕಲ್​ ಟೀಮ್ ಫಿಟ್ನೆಸ್ ವಿಚಾರವಾಗಿ ಬುಮ್ರಾರನ್ನ ಚೆಕ್​ಅಪ್​ಗೆ ಒಳಪಡಿಸ್ತಿದೆ. ಮೋಸ್ಟ್ಲಿ ಈಗಾಗ್ಲೇ ಚೆಕ್​ಅಪ್ ಮಾಡಿರಲೂಬಹುದು. ನಂತರ ಬುಮ್ರಾ ಫಿಟ್ನೆಸ್ ಮತ್ತು ವರ್ಕ್​​ಲೋಡ್ ಬಗ್ಗೆ ಡಿಟೇಲ್​ ಮೆಡಿಕಲ್ ರಿಪೋರ್ಟ್​​ನ್ನ ಕೂಡ ಬಿಸಿಸಿಐಗೆ ಸಲ್ಲಿಸಲಾಗುತ್ತೆ. ಈ ಎಲ್ಲಾ ಪ್ರೊಸೀಜರ್​ ಈಗಾಗ್ಲೇ ಕಂಪ್ಲೀಟ್ ಆಗಿರಲೂಬಹುದು. ಫೈನಲೀ ಈ ಮೆಡಿಕಲ್ ರಿಪೋರ್ಟ್​ನ್ನ ಆಧರಿಸಿ ರೋಹಿತ್​ ಶರ್ಮಾ ಮತ್ತು ದ್ರಾವಿಡ್ ಜೊತೆಗೆ ಚರ್ಚಿಸಿ ಬುಮ್ರಾರನ್ನ ಮೂರನೇ ಟೆಸ್ಟ್​​ನಲ್ಲಿ ಆಡಿಸ್ಬೇಕೋ? ಇಲ್ಲಾ ರೆಸ್ಟ್​ ನೀಡಬೇಕೊ ಅನ್ನೋ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ​ ಕೈಗೊಳ್ಳಲಿದೆ.

ರಾಹುಲ್ – ಜಡೇಜಾ ಕಮ್​​ ಬ್ಯಾಕ್ ಮಾಡ್ತಾರಾ?

ಇನ್ನು ಇಂಜ್ಯೂರಿಗೊಳಗಾಗಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಫಿಟ್ನೆಸ್​​ ರಿಪೋರ್ಟ್​​ಗಾಗಿಯೂ ಬಿಸಿಸಿಐ ವೇಯ್ಟ್ ಮಾಡ್ತಿದೆ. ಇವರಿಬ್ಬರೂ ಸೆಕೆಂಡ್ ಟೆಸ್ಟ್​ನಲ್ಲಿ ಆಡಿರಲಿಲ್ಲ. ರಾಹುಲ್ ಮತ್ತು ಜಡೇಜ ಬೆಂಗಳೂರಿನ ಎನ್​​ಸಿಎನಲ್ಲಿ ಟೈಮ್ ಸ್ಪೆಂಡ್ ಮಾಡಿದ್ದು, ಹೀಗಾಗಿ 3ನೇ ಟೆಸ್ಟ್​ಗೆ ಕಮ್​ಬ್ಯಾಕ್ ಮಾಡಿದ್ರೂ ಮಾಡಬಹುದು. ಈ ಪೈಕಿ ಕೆಎಲ್​​ ರಾಹುಲ್ ಸೆಲೆಕ್ಟ್ ಆಗೋ ಚಾನ್ಸ್ ಹೆಚ್ಚಿದೆ. ಬಟ್ ರವೀಂದ್ರ ಜಡೇಜರದ್ದು ಇನ್ನೂ ಗ್ಯಾರಂಟಿ ಇಲ್ಲ. ವಿರಾಟ್ ಕೊಹ್ಲಿ ಬೇರೆ ಆಡ್ತಾ ಇಲ್ಲದೇ ಇರೋದ್ರಿಂದ ಆ್ಯಕ್ಚುವಲಿ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಮೇಲೆ ಹೆಚ್ಚು ರೆಸ್ಪಾನ್ಸಿಬಿಲಿಟಿ ಇದೆ. ಆದ್ರೆ ಫುಲ್​ ಫಿಟ್ ಆದ್ರಷ್ಟೇ ಮೂರನೇ ಮ್ಯಾಚ್​ಗೆ ಇವರನ್ನ ಪಿಕ್ ಮಾಡಬಹುದು.

ಶ್ರೇಯಸ್ ಅಯ್ಯರ್ 3ನೇ ಟೆಸ್ಟ್​ ನಿಂದ ಔಟ್?

ಫಸ್ಟ್ ಎರಡೂ ಟೆಸ್ಟ್​ ಮ್ಯಾಚ್​​ಗಳಲ್ಲಿ ಆಡಿದ್ದ ಮಿಡ್ಲ್​ ಆರ್ಡರ್ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್ ಇನ್ನುಳಿದ ಮೂರು ಟೆಸ್ಟ್​ಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಶ್ರೇಯಸ್ ಅಯ್ಯರ್​ಗೆ ಮತ್ತೆ ಬ್ಯಾಕ್​​ಪೇನ್ ಕಾಣಿಸಿಕೊಂಡಿದೆ. ಈ ಹಿಂದಿನಿಂದಲೂ ಶ್ರೇಯಸ್​ಗೆ ಬೇಕ್​ಪೇನ್ ಸಮಸ್ಯೆ ಇತ್ತು. ಆದ್ರೀಗ ಮತ್ತೆ ನೋವು ಅನುಭವಿಸ್ತಾ ಇದ್ದಾರೆ. ಫಾರ್ವರ್ಡ್ ಡಿಫೆನ್ಸ್ ಶಾಟ್ ಆಡೋವಾಗಲೆಲ್ಲಾ ಶ್ರೇಯಸ್ ಅಯ್ಯರ್​ಗೆ ಬ್ಯಾಕ್ ಪೇನ್ ಆಗ್ತಿದ್ಯಂತೆ. ಹೀಗಾಗಿ ಶ್ರೇಯಸ್​ರನ್ನ ಕೂಡ ಬೆಂಗಳೂರಿನಲ್ಲಿರೋ ಎನ್​ಸಿಎಗೆ ಕಳುಹಿಸಲಾಗ್ತಿದೆ. ಇಂಗ್ಲೆಂಡ್​ ವಿರುದ್ಧದ ಮುಂದಿನ ಮೂರೂ ಟೆಸ್ಟ್​​ಗಳಲ್ಲೂ ಅವರು ಆಡೋದು ಟೌಟ್ ಆಗಿದ್ದು, NEXT ಡೈರೆಕ್ಟ್ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಬಹುದು ಅಂತಾ ಹೇಳಲಾಗ್ತಿದೆ.

Sulekha