ಆಸ್ತಿ ತೆರಿಗೆ ಬಾಕಿ ಪ್ರಕರಣ –  ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ!

ಆಸ್ತಿ ತೆರಿಗೆ ಬಾಕಿ ಪ್ರಕರಣ –  ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ!

ಲಾಂಗ್‌ ವೀಕೆಂಡ್‌ ಇರುವಾಗಲೇ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಮಂತ್ರಿ ಮಾಲ್‌ಗೆ ಬೀಗ ಹಾಕಿದ್ದಾರೆ. ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.

ವಾರಾಂತ್ಯದಲ್ಲಿ ಬಹಳಷ್ಟು ಮಂದಿ ಸಾರ್ವಜನಿಕರು ಮಾಲ್ ಗೆ ಭೇಟಿ ನೀಡುತ್ತಾರೆ. ಇದೀಗ ಲಾಂಗ್ ವೀಕೆಂಡ್ ಕೂಡಾ ಇದೆ. ಆದ್ರೆ ಈಗ ಬಿಬಿಎಂಪಿ ಅಧಿಕಾರಿಗಳು ವಾರಾಂತ್ಯದಲ್ಲಿಯೇ  ಮಾಲ್ ಗೆ ಬೀಗ ಹಾಕಿರುವುದು ಬೆಂಗಳೂರಿಗರಿಗೂ ನಿರಾಸೆ ಉಂಟಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಹೊಸ ಪ್ಲಾನ್‌ – ಗ್ರಾಹಕರಿಗಾಗಿ ವಾಟ್ಸಾಪ್ ನಂಬರ್ ಬಿಡುಗಡೆ

ಸುಮಾರು 50 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಮಾಲ್ ವಿರುದ್ದ ಈ ಕ್ರಮಕ್ಕೆ ಮುಂದಾಗಿದೆ.  ಮಂತ್ರಿ ಮಾಲ್ ಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 7 ಬಾರಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇದೀಗ ಎಂಟನೇ ಬಾರಿಗೆ ಪಾಲಿಕೆ ಮಾಲ್ ಗೆ ಬೀಗ ಹಾಕಿದೆ. ಪ್ರತಿ ಬಾರಿ ಮಾಲ್ ಗೆ  ಬೀಗ ಜಡಿದಾಗಲೂ ಮಂತ್ರಿ ಮಾಲ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿದೆ.

ಇದೀಗ ಮತ್ತೆ ಇದೇ ಪ್ರಕರಣ ಮುಂದುವರೆದಿದ್ದು, 8ನೇ ಬಾರಿಗೆ ಮಾಲ್ ಗೆ ಬೀಗ ಹಾಕಲಾಗಿದೆ. ರಾಜ್ಯದಲ್ಲಿ 3 ದಿನಗಳ ಸತತ ರಜೆ ಇರುವ ಹಿನ್ನೆಲೆಯಲ್ಲಿ ಪಾಲಿಕೆ ಮಂತ್ರಿ ಮಾಲ್ ಗೆ ಶುಕ್ರವಾರ ಬೀಗ ಹಾಕಿದೆ. ಸದ್ಯಕ್ಕೆ ಮಾಲ್ ಎದುರು ಬಿಬಿಎಂಪಿ ಮತ್ತು ಮಾಲ್ ಪರವಾಗಿರುವ ವಕೀಲರ ತಂಡ ಬೀಡು ಬಿಟ್ಟಿದೆ.

Shwetha M