ತೌಬಾ ತೌಬಾ ಹವಾ – ಸೀರೆಯಲ್ಲಿ ನಾರಿಯ ಭರ್ಜರಿ ಡ್ಯಾನ್ಸ್
ಬಡ ಸೆಲೆಬ್ರಿಟಿಗೆ ವಿಕ್ಕಿ ಕೌಶಲ್ ಲೈಕ್

ತೌಬಾ ತೌಬಾ.. ತೌಬಾ ತೌಬಾ.. ಈಗ ಎಲ್ಲಿ ನೋಡಿದ್ರೂ ಈ ತೌಬಾ ತೌಬಾ ಹಾಡಿನದ್ದೇ ಹವಾ. ಸೋಷಿಯಲ್ ಮೀಡಿಯಾದಲ್ಲಂತೂ ಈ ಸಾಂಗ್ ಸಖತ್ ವೈರಲ್ ಆಗಿದೆ. ಚಿಕ್ಕ ಹುಡುಗರಿಂದ ಹಿಡಿದು ಪ್ರತಿಯೊಬ್ಬರು ಈ ತೌಬಾ ತೌಬಾ ಡ್ಯಾನ್ಸ್‌ಗೆ ಸ್ಟೆಪ್ ಹಾಕುತ್ತಿದ್ದಾರೆ. ಈ ತೌಬಾ ತೌಬಾ ಹಾಡಿಗೆ ಲೇಡಿಯೊಬ್ರು ಸೀರೆಯುಟ್ಟು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇವರ ಡ್ಯಾನ್ಸ್ ಅಬ್ಬರಕ್ಕೆ ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್ ಬೆರಗಾಗಿದ್ದಾರೆ. ವಿಕ್ಕಿ ಕೌಶಲ್‌ಗೂ ಆ ಲೇಡಿಗೂ ಏನ್ ಸಂಬಂಧ, ಆಕೆ ರೀಲ್ಸ್ ಮಾಡಿದ್ರೆ ವಿಕ್ಕಿ ಯಾಕೆ ಲೈಕ್ ಮಾಡ್ಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಾಕ್ ಗೆ ಬರುವಂತೆ ಭಾರತವನ್ನು ಒಪ್ಪಿಸಿ ಎಂದು ICC ಬೆನ್ನು ಬಿದ್ದ PCB
ತೌಬಾ ತೌಬಾಗೆ ಡ್ಯಾನ್ಸ್ ಸೂಪರ್ ಹಿಟ್ ಆಗಿದೆ. ಅಷ್ಟೇ ಹೈಪ್ ಕ್ರಿಯೇಟ್ ಮಾಡಿದ್ದಾರೆ ಈ ಲೇಡಿ. ತೌಬಾ ತೌಬಾ ಹಾಡಿಗೆ ಡ್ಯಾನ್ಸ್ ಮಾಡಿರೋ ಈ ಸೀರೆ ನಾರಿ ಈಗ ಸಖತ್ ವೈರಲ್ ಆಗಿದ್ದಾರೆ. ವಿಕ್ಕಿ ಕೌಶಲ್ ರೀತಿಯ ಡ್ಯಾನ್ಸ್‌ಗೆ ಸ್ಟೆಪ್ ಹಾಕಿರೋ ಈ ಮಹಿಳೆ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಮಕ್ಕಳೊಂದಿಗೆ ತೌಬಾ ತೌಬಾಗೆ ಡ್ಯಾನ್ಸ್ ಮಾಡಿರೋ ಈ ಮಹಿಳೆಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 55 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸ್ಯಾಡ್ ರೂಪಾ ಅನ್ನೋ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಮಹಿಳೆಯ ಡ್ಯಾನ್ಸ್ ಸದ್ಯ ವಿಕ್ಕಿ ಕೌಶಲ್ ಸಿನಿಮಾ ಸಾಂಗ್‌ನಷ್ಟೇ ಫೇಮಸ್ ಆಗಿರೋದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಇಷ್ಟೇ ಅಲ್ಲ, ಖುದ್ದು ನಟ ವಿಕ್ಕಿ ಕೌಶಲ್ ಕೂಡಾ ಈ ಮಹಿಳೆಯ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿರೋದಷ್ಟೇ ಅಲ್ಲ ಈ ವಿಡಿಯೋಗೆ ವಾವ್ ಎಂದು ಕೂಡ ಕಮೆಂಟ್ ಹಾಕಿದ್ದಾರೆ. ವಿಕ್ಕಿ ಕೌಶಲ್ ಅವರ ಈ ಕಮೆಂಟ್‌ನಿಂದಾಗಿ ಸೀರೆ ನಾರಿಯ ಈ ಡ್ಯಾನ್ಸ್ ವಿಡಿಯೋ ಮತ್ತಷ್ಟು ಫೇಮಸ್ ಆಗಿದೆ.
ವಿಕ್ಕಿ ಕೌಶಲ್ ನಟನೆಯ ಬ್ಯಾಡ್ ನ್ಯೂಸ್ ಸಿನೆಮಾ ಹೇಳಿಕೊಳ್ಳುವಷ್ಟೇನು ಬಾಲಿವುಡ್‌ನಲ್ಲಂತೂ ಸದ್ದು ಮಾಡಿಲ್ಲ. ನಿರೀಕ್ಷೆಯಷ್ಟು ಗಳಿಕೆ ಆಗದಿದ್ದರೂ ಸಿನೆಮಾ ಒಟ್ಟು 30 ಕೋಟಿ ರೂಪಾಯಿ ಗಳಿಕೆ ಕಂಡು ಸೈಲೆಂಟ್ ಆಗಿದೆ. ಆದ್ರೆ, ಸಿನೆಮಾಗಿಂತಲೂ ಹಿಟ್ ಆಗಿರೋದು ಈ ಸಿನೆಮಾದಲ್ಲಿದ್ದ ‘ತೌಬಾ..ತೌಬಾ..’ ಹಾಡು. ಸಾಂಗ್ ರಿಲೀಸ್ ಆದಗಿಂದಲೂ ಎಲ್ಲಾ ಕಡೆ ಈ ಸಾಂಗ್ ಸದ್ದು ಮಾಡ್ತಾ ಇದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಇದೇ ಸಾಂಗ್ ಟ್ರೆಂಡಿಂಗ್‌ನಲ್ಲಿದೆ.