ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?

ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?

RCB ಮತ್ತು ಲಕ್ನೋ ತಂಡಗಳ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಿದೆ. ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದರೆ, ನಂಬರ್ ಒನ್ ಸ್ಥಾನಕ್ಕೇರಲಿದೆ. ಇನ್ನು ಮುಂಬೈ ಇಂಡಿಯನ್ಸ್ ಪ್ಲೇಆಫ್ ಹಾದಿ ಕಷ್ಟವಾಗ್ತಿದೆ. ಇದರ ಬೆನ್ನಲ್ಲೇ ಎಂಐ ತಂಡಕ್ಕೆ ಮತ್ತೊಂದು ಶಾಕ್ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಮುಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. IPL ಬಗೆಗಿನ ಇಂಟ್ರೆಂಸ್ಟಿಂಗ್‌ ಸುದ್ದಿಗಳು ಇಲ್ಲಿವೆ.

ಇದನ್ನೂ ಓದಿ: ರಾಜಕೀಯಕ್ಕೆ ಗುಡ್ ಬೈ ಹೇಳಿದ ಹಳ್ಳಿಹಕ್ಕಿ! – ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಹೆಚ್‌ ವಿಶ್ವನಾಥ್‌!

RCB ಮತ್ತು ಲಕ್ನೋ ತಂಡಗಳ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಿದೆ. ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದರೆ, ನಂಬರ್ ಒನ್ ಸ್ಥಾನಕ್ಕೇರಲಿದೆ. ಈ ಹಿಂದೆ ಏಪ್ರಿಲ್ 15 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಮತ್ತು ಬೆಂಗಳೂರು ತಂಡಗಳಲ್ಲಿ ಬೆಂಗಳೂರೇ ಗೆದ್ದಿದ್ದು, ಇದು ಪ್ರತೀಕಾರದ ಪಂದ್ಯವಾಗಿದ್ದು, ಲಕ್ನೋಗೆ ಗೆಲ್ಲುವ ಚಾನ್ಸ್ ಕಡಿಮೆ ಎಂದೇ ಹೇಳಲಾಗ್ತಿದೆ.

ಲಕ್ನೋ ತಂಡಕ್ಕೆ ಈ ಬಾರಿಯ ಐಪಿಎಲ್ ಅನಲಕ್ಕಿ ಸೀಸನ್ ಅಂತಾನೇ ಹೇಳಬಹುದು.  ಎಲ್‌ಎಸ್‌ಜಿ ಈಗಾಗಲೇ ಏಳು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಪ್ಲೇಆಫ್‌ನಿಂದ ಆಲ್‌ರೆಡಿ ಹೊರಬಿದ್ದಿದೆ. ಎಲ್‌ಎಸ್‌ಜಿ ಉಳಿದ ಪಂದ್ಯಗಳನ್ನು ಕೇವಲ ಔಪಚಾರಿಕವಾಗಿ ಆಡಲಿದೆ. ಅದರಲ್ಲೂ ಆರ್‌ಸಿಬಿ ಇಲ್ಲಿಯವರೆಗೆ ಪಂತ್ ಪಡೆಯ ವಿರುದ್ಧ ಏಳು ಪಂದ್ಯಗಳನ್ನು ಆಡಿದೆ, ಅವುಗಳಲ್ಲಿ ಐದು ಪಂದ್ಯಗಳನ್ನು ಆರ್​ಸಿಬಿ ಗೆದ್ದರೆ, ಸೂಪರ್ ಜೈಂಟ್ಸ್ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ.

ಪ್ರತೀಕಾರದ ಪಂದ್ಯದಲ್ಲಿ ಪಂಜಾಬ್ ವಿರುದ್ದ ಸನ್‌ರೈಸರ್ಸ್ ಹೈದ್ರಾಬಾದ್ ಗೆದ್ದು ಬೀಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇತ್ತ ಪಂಜಾಬ್ ಪಡೆ ಹ್ಯಾಟ್ರಿಕ್ ಸೋಲಿನಿಂದ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿರುವ ಅಗ್ರಸ್ಥಾನದಿಂದ ಜಾರಿಬಿದ್ದಿದೆ. ಬಹಳ ದಿನಗಳಿಂದ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಈಗ 2ನೇ ಸ್ಥಾನಕ್ಕೆ ಕುಸಿದಿದೆ.

ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟರ್ ಎಂಬ ದಾಖಲೆ ಪಂಜಾಬ್ ಕಿಂಗ್ಸ್​ ತಂಡದ ಯುವ ದಾಂಡಿಗ ಕೂಪರ್ ಕೊನೊಲಿ ಪಾಲಾಗಿದೆ. ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂಜಾಬ್ ಬ್ಯಾಟರ್ ಕೂಪರ್ 57 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿತ್ತು. 2016 ರಲ್ಲಿ ಡಿಕಾಕ್ ಶತಕ ಸಿಡಿಸಿದಾಗ ಅವರಿಗೆ 23 ವರ್ಷ. ಇದೀಗ 10 ವರ್ಷಗಳ ಬಳಿಕ ಕೂಪರ್, ಡಿಕಾಕ್ ದಾಖಲೆ ಬ್ರೇಕ್ ಮಾಡಿದ್ದಾರೆ.

ಹ್ಯಾಟ್ರಿಕ್ ಸೋಲಿನ ಸುಳಿಯಿಂದ ಬೇಸತ್ತಿರುವ ಪಂಜಾಬ್ ಕ್ಯಾಪ್ಟನ್ ಶ್ರೇಯಸ್‌ ಅಯ್ಯರ್‌, ತಂಡದ ಸೋಲಿಗೆ ಕ್ಯಾಚ್ ಡ್ರಾಪ್ ಗಳೇ ಕಾರಣ ಎಂದಿದ್ದಾರೆ. ನಾವು ಆರಂಭದಲ್ಲಿ ಬಹಳಷ್ಟು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಗುರಿ ಸ್ವಲ್ಪ ಹೆಚ್ಚಾಯ್ತು. ನಾವು ಫೀಲ್ಡಿಂಗ್, ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಮಗ್ರವಾಗಿರಲಿಲ್ಲ. ಹೈದರಾಬಾದ್ ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡಿತು ಮತ್ತು ಪಂದ್ಯಗಳನ್ನು ಹೇಗೆ ಗೆಲ್ಲುವುದು ಎಂದು ನಮಗೆ ತೋರಿಸಿತು ಎಂದು ಶ್ರೇಯಸ್ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ತಮ್ಮ ಟೀಮ್‌ನ ಕಳಪೆ ಫೀಲ್ಡಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಪಂಜಾಬ್ ಬೌಲರ್ ಚಹಲ್ ತನ್ನ ಓವರ್‌ನಲ್ಲಿ ಕ್ಯಾಚ್ ಡ್ರಾಪ್ ಆಗಿರೋ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದು, ಚಹಾಲ್ ಓವರ್‌ನಲ್ಲಿ ಅನ್ನೋದೇ ಚಹಾಲ್ ನೋವಿಗೆ ಕಾರಣ.

ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್​​ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಭಾರತದ ನೆಲದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ 6ನೇ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್ ಆರಂಭಿಕ ಬ್ಯಾಟರ್ ಅಭಿಷೇಕ್, 300 T20 ಸಿಕ್ಸರ್​ಗಳ ಗಡಿ ದಾಟಿದ್ದಾರೆ. ಜಗತ್ತಿನಲ್ಲಿ ಒಂದು ದೇಶದಲ್ಲಿ 300ಕ್ಕೂ ಹೆಚ್ಚು T20 ಸಿಕ್ಸರ್ ಸಿಡಿಸಿದವರು ಕೇವಲ 8 ಮಂದಿ ಮಾತ್ರ ಇದ್ದಾರೆ. ಇವರಲ್ಲಿ ಹಿಟ್‌ಮ್ಯಾನ್ ಜೊತೆ ಅಭಿಷೇಕ್ ಶರ್ಮಾ ಹೆಸರು ಸೇರ್ಪಡೆಯಾಗಿದೆ.

ಮುಂಬೈ ಇಂಡಿಯನ್ಸ್ ಪ್ಲೇಆಫ್ ಹಾದಿ ಕಷ್ಟವಾಗ್ತಿದೆ. ಇದರ ಬೆನ್ನಲ್ಲೇ ಎಂಐ ತಂಡಕ್ಕೆ ಮತ್ತೊಂದು ಶಾಕ್ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಮುಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಸೂರ್ಯಕುಮಾರ್ ತಮ್ಮ ಕುಟುಂಬದೊಂದಿಗೆ ಈ ಸಂತೋಷದ ಸಮಯವನ್ನು ಕಳೆಯಲು ನಿರ್ಧರಿಸಿದ್ದು, ಬೆಂಗಳೂರು ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಆಟಕ್ಕೆ ತಗಾದೆ ಶುರುವಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ ಆಡುವುದು ಮತ್ತು ಅದರಿಂದ ಕೋಟಿಗಟ್ಟಲೆ ಹಣ ಗಳಿಸುವುದು ಬಾಲ ಕಾರ್ಮಿಕ ಪದ್ಧತಿಯ ಅಡಿಯಲ್ಲಿ ಅಪರಾಧವೇ ಎಂಬ ವಾದ ವಿವಾದ ಶುರುವಾಗಿದೆ. ಚಿಕ್ಕ ವಯಸ್ಸಿನಲ್ಲಿ ಐಪಿಎಲ್‌ನಂತಹ ಟೂರ್ನಿಯಲ್ಲಿ ಆಡುವುದು ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಬಾಲ ಕಾರ್ಮಿಕ ಪದ್ಧತಿಯ ಉಲ್ಲಂಘನೆ ಎಂಬ ಮಾತು ಕೇಳಿಬಂದಿದೆ.

ಮೇ 24ರಂದು ಐಪಿಎಲ್ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಮೇ 26ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್‌-1 ಪಂದ್ಯ ನಡೆಯಲಿದೆ. ಬಳಿಕ ನವ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ಮೇ 27ರಂದು ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಮೇ 29ಕ್ಕೆ ಕ್ವಾಲಿಫೈಯರ್‌-2 ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

Shwetha M