ENGLAND ಚೆಂಡಾಡಿದ INDIA  – 10 ವರ್ಷಗಳ ಬಳಿಕ ಫಿನಾಲೆಗೆ ಲಗ್ಗೆ
ಚಾಂಪಿಯನ್ ಪಟ್ಟಕ್ಕೇರುತ್ತಾ ಭಾರತ?

ENGLAND ಚೆಂಡಾಡಿದ INDIA  – 10 ವರ್ಷಗಳ ಬಳಿಕ ಫಿನಾಲೆಗೆ ಲಗ್ಗೆಚಾಂಪಿಯನ್ ಪಟ್ಟಕ್ಕೇರುತ್ತಾ ಭಾರತ?

ಜಸ್ಟ್ ಇನ್ನೊಂದು ಹೆಜ್ಜೆ. ಟಿ-20 ಮಹಾಯುದ್ಧದಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಟೀಂ ಇಂಡಿಯಾಗೆ ಇರೋದು ಇನ್ನೊಂದೇ ಹೆಜ್ಜೆ. ಕೆರೆಬಿಯನ್ ನಾಡಿನಲ್ಲಿ ಆಂಗ್ಲರನ್ನ ಬಗ್ಗು ಬಡಿದಿರೋ ರೋಹಿತ್ ಶರ್ಮಾ ಸೇನೆ ಫೈನಲ್ ಸಮರಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಕಳೆದ ವರ್ಷದ ಸೇಡಿನ ಪ್ರತೀಕಾರದೊಂದಿಗೆ ತನ್ನ ದಿಗ್ವಿಜಯ ಯಾತ್ರೆಯನ್ನ ಮುಂದುವರಿಸಿದೆ. ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಸುದೀರ್ಘವಾಗಿ ನಡೆದ ರಣರೋಚಕ ಕದನದಲ್ಲಿ ಕೊನೆಗೂ ಭಾರತ ವಿಜಯ ಸಾಧಿಸಿದೆ. ಸೆಮಿಫೈನಲ್ ವಿಕ್ಟರಿ ಮೂಲಕ ಭಾರತ ಬರೆದ ದಾಖಲೆಗಳೆಷ್ಟು? ರೋಹಿತ್ ಶರ್ಮಾ ಕಣ್ಣೀರಾಕಿದ್ದೇಕೆ? ಈ ವರ್ಷ ಭಾರತವೇ ಚಾಂಪಿಯನ್ ಆಗೋದಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರೇಯಸಿಗಾಗಿ ನೋಟಿನಲ್ಲೇ ಮೆಟ್ಟಿಲು – ಗರ್ಲ್‌ ಫ್ರೆಂಡ್‌ ಗಾಗಿ ದುಡ್ಡಿನ ಕಾರ್ಪೆಟ್

2022ರ ಚುಟುಕು ಸಮರದ ಸೋಲಿಗೆ ರಿವೇಂಜ್ ತೀರಿಸಿಕೊಳ್ಳಬೇಕಿತ್ತು. ಈ ಸಲವೂ ನಾವೇ ಗೆಲ್ಲೋದು ಎಂದು ಬೀಗುತ್ತಿದ್ದ ಆಂಗ್ಲರ ಹೆಡೆ ಮುರಿ ಕಟ್ಟಬೇಕಿತ್ತು. ನಾಯಕನಾಗಿ ತಾನೇನು ಅನ್ನೋದನ್ನ ಇಡೀ ಜಗತ್ತಿಗೆ ತೋರಿಸಬೇಕಿತ್ತು. ಈ ಎಲ್ಲಾ ಪ್ರಶ್ನೆಗಳಿಗೂ ಹಿಟ್​ಮ್ಯಾನ್ ರೋಹಿತ್ ಶರ್ಮಾ ಒಂದೇ ಒಂದು ಪಂದ್ಯದಲ್ಲೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ. ಚುಟುಕು ವಿಶ್ವಕಪ್​ ಸೆಮಿಸ್​​ ಸಮರದಲ್ಲಿ ಟೀಮ್​ ಇಂಡಿಯಾ ಮತ್ತೊಮ್ಮೆ ಗೆಲುವಿನ ಪತಾಕೆ ಹಾರಿಸಿದೆ. ಆಂಗ್ಲರ ಅಟ್ಟಹಾಸಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರೋಹಿತ್​ ಬಣ ಸೋಲಿಲ್ಲದ ಸರದಾರನಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಗಯಾನದಲ್ಲಿ ಮಳೆಯ ಕಾಟದ ನಡುವೆ, ಇಂಡಿಯನ್​​ ಟೈಗರ್ಸ್​​ ಆರ್ಭಟಿಸಿದ ರೀತಿಗೆ ಇಡೀ ಕ್ರಿಕೆಟ್ ಲೋಕವೇ ದಂಗಾಗಿದೆ. ಕ್ರಿಕೆಟ್​ ಲೋಕದ ಎರಡು ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೆಜ್​ ಕದನ ನೋಡಲು ಕೋಟಿ ಕೋಟಿ ಭಾರತೀಯರು ಕಾದು ಕುಳಿತಿದ್ರು. ಆದ್ರೆ ಪಂದ್ಯದ ಆರಂಭದಲ್ಲಿ ಸಿಕ್ಕಿದ್ದು ನಿರಾಸೆ. ಯಾವಾಗ ಮಳೆ ನಿಂತು ಮತ್ತೊಮ್ಮೆ ಮ್ಯಾಚ್ ಶುರುವಾಯ್ತೋ ಆಗ ಶುರುವಾಯ್ತು ನೋಡಿ ಇಂಡಿಯನ್​ ಟೈಗರ್​ಗಳ ಅಸಲಿ ಬೇಟೆ. ಮೊದಲು ಬ್ಯಾಟಿಂಗ್​.. ಆಮೇಲೆ ಬೌಲಿಂಗ್​​.. ಟೋಟಲಿ ಇಂಗ್ಲೆಂಡಿಗರ ಮೇಲೆ​ ಡಾಮಿನೇಶನ್​ ಮಾಡಿದ ಟೀಮ್​ ಇಂಡಿಯನ್ಸ್​ ಗಯಾನದಲ್ಲಿ ವಿಜಯ ಪತಾಕೆ ಹಾರಿಸಿದರು.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್​​ಗಳಿಂದ ಗೆದ್ದು ಫೈನಲ್​ ಪ್ರವೇಶಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಟೀಂ ಇಂಡಿಯಾ ಫೈನಲ್​ಗೇರಿದ ಸಾಧನೆ ಮಾಡಿದೆ. ಇದರ ಜೊತೆಗೆ ಅಜೇಯ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿರುವ ಟೀಂ ಇಂಡಿಯಾ, ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ 10 ವಿಕೆಟ್​ಗಳ ಹೀನಾಯ ಸೋಲಿಗೆ ಸರಿಯಾಗಿ ಸೇಡು ತೀರಿಸಿಕೊಂಡಿದೆ. ಆಂಗ್ಲರ ವಿರುದ್ಧದ ಪಂದ್ಯ ಭಾರತ & ಕ್ಯಾಫ್ಟನ್ ರೋಹಿತ್ ಶರ್ಮಾಗೆ ಎಷ್ಟು ಇಂಪಾರ್ಟೆಂಟ್ ಆಗಿತ್ತು ಅನ್ನೋದಕ್ಕೆ ಪಂದ್ಯದ ಬಳಿಕ ನಡೆದ ಕೆಲ ಘಟನೆಗಳೇ ಸಾಕ್ಷಿ. ರೋಹಿತ್ ಕಣ್ಣೀರಿಟ್ಟ ಆ ಕ್ಷಣ ಇಡೀ ಹಿಂದೂಸ್ಥಾನವನ್ನೇ ಭಾವುಕರನ್ನಾಗಿಸಿತ್ತು.

ಟಾಸ್ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಒನ್ಸ್ ಅಗೇನ್ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದೆ. ತಾನು ಆಡಿದ 9 ಬಾಲ್​ನಲ್ಲಿ 1 ಸಿಕ್ಸರ್​ ಸಮೇತ 9 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದ್ರು. ಟೋಪ್ಲಿ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ 2024ರ ಟಿ20 ವಿಶ್ವಕಪ್​ನಲ್ಲಿ ಮತ್ತೊಮ್ಮೆ ಒಂದಂಕಿ ದಾಟಲೇ ಇಲ್ಲ. ಬಳಿಕ ಬಂದ ರಿಷಬ್ ಪಂತ್ ಕೂಡ ಹೆಚ್ಚು ಹೊತ್ತು ಬ್ಯಾಟ್ ಬೀಸಲೇ ಇಲ್ಲ. 6 ಬಾಲ್ ಫೇಸ್ ಮಾಡಿ ಜಸ್ಟ್ 4 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಬಟ್ ಆಮೇಲೆ ಬಂದ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಆಟವಾಡಿದ್ರು. ಮತ್ತೊಂದೆಡೆ ಗೆಲ್ಲಲೇಬೇಕು ಎಂಬ ಛಲದೊಂದಿಗೆ ಕ್ರೀಸ್​ ಕಚ್ಚಿ ನಿಂತ ನಾಯಕ ಹಿತ್​​ ಶರ್ಮಾ ಕೂಡ ಅಗ್ರೆಸ್ಸಿವ್​ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ 39 ಬಾಲ್​ನಲ್ಲಿ 2 ಸಿಕ್ಸರ್​​, 6 ಫೋರ್​ ಸಮೇತ ಭರ್ಜರಿ 57 ರನ್​ ಚಚ್ಚಿದ್ರು. ಸೂರ್ಯಕುಮಾರ್​ ಯಾದವ್​ ಕೂಡ 2 ಸಿಕ್ಸರ್​​, 4 ಫೋರ್​ ಸಮೇತ 47 ರನ್​ ಬಾರಿಸಿದ್ರು. ಹಾರ್ದಿಕ್​ ಪಾಂಡ್ಯ 23, ಜಡೇಜಾ 17, ಅಕ್ಷರ್​ ಪಟೇಲ್​​ 10 ರನ್​ಗಳ ಸಹಾಯದಿಂದ ಟೀಮ್​ ಇಂಡಿಯಾ ಬೃಹತ್​ ಮೊತ್ತ ಪೇರಿಸಿತು. ಆದ್ರೆ ಶಿವಂ ದುಬೆ ಮಾತ್ರ ಈ ಮ್ಯಾಚ್​ನಲ್ಲೂ ಮತ್ತೆ ಫೇಲ್ಯೂರ್ ಅನುಭವಿಸಿದ್ರು. ಒಂದೂ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ರು. ಫೈನಲಿ ಟೀಂ ಇಂಡಿಯಾ ಕಠಿಣ ಪಿಚ್​​ನಲ್ಲೂ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​​ ಗಳಿಸಿತು. ಇಂಗ್ಲೆಂಡ್​ ತಂಡಕ್ಕೆ 172 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತ್ತು.

ಟಾರ್ಗೆಟ್ ನೋಡಿದಾಗ ಆರಂಭದಲ್ಲಿ ಇಂಗ್ಲೆಂಡ್ ಈ ಸ್ಕೋರ್​ನ ಚೇಸ್ ಮಾಡುತ್ತೆ ಅಂತಾನೇ ತುಂಬಾ ಜನ ಅನ್ಕೊಂಡಿದ್ರು. ಬಟ್ ಇದಕ್ಕೆ ನಮ್ಮ ಬೌಲಿಂಗ್ ಟೈಗರ್ಸ್ ಚಾನ್ಸೇ ಕೊಡ್ಲಿಲ್ಲ. 23 ರನ್‌ಗಳಿಸಿ ಭಾರತಕ್ಕೆ ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಬಟ್ಲರ್‌ ಅವರನ್ನು ಅಕ್ಷರ್ ಪಟೇಲ್‌ ತಮ್ಮ ಮೊದಲ ಓವರ್‌ನ ಮೊದಲ ಬಾಲ್‌‌ನಲ್ಲಿ ಪೆವಿಲಿಯನ್​ಗೆ ಕಳಿಸಿದ್ರು. ಬಟ್ಲರ್‌ ಪಂತ್‌ಗೆ ಕ್ಯಾಚ್ ನೀಡಿ ಔಟಾದ್ರು. ಇದರ ಹಿಂದೆಯೇ ಸಾಲ್ಟ್‌ ಅವರನ್ನು ಬುಮ್‌ ಬುಮ್‌ ಬುಮ್ರಾ ಕ್ಲೀನ್‌ ಬೋಲ್ಡ್‌ ಮಾಡಿದ್ರು. 5 ರನ್‌‌ಗಳಿಸಿ ಸಾಲ್ಟ್‌ ಔಟಾದ್ರು. ಇನ್ನೂ ಅಕ್ಷರ್ ಪಟೇಲ್‌ ತಮ್ಮ ಎರಡನೇ ಓವರ್‌‌ನ ಮೊದಲ ಎಸೆತದಲ್ಲೇ ಮತ್ತೆ ಬೇರ್​ಸ್ಟೋ ಅವರು ಕ್ಲೀನ್‌ ಬೋಲ್ಡ್‌ ಆದ್ರು. ಇನ್ನು ಅಕ್ಷರ್ ಪಟೇಲ್‌ ತಮ್ಮ ಮೂರನೇ ಓವರ್‌ನಲ್ಲಿ ಮೊಯಿನ್‌ ಅಲಿ ಅವರ ವಿಕೆಟ್ ಕಿತ್ತರು. ಅಕ್ಷರ್ ಎಸೆದ ಬೌಲ್‌ ಜಡ್ಜ್‌ ಮಾಡಲಾಗದೇ ಅಲಿ ಸ್ಟಂಪ್‌ ಔಟಾದ್ರು. ಇದಾದ ಬಳಿಕ ಕುಲದೀಪ್‌ ಓವರ್‌ನಲ್ಲಿ ಸ್ಯಾಮ್‌ ಕರನ್‌ ಎಲ್‌ಬಿಡಬ್ಲೂ ಬಲೆಗೆ ಬಿದ್ರು. ಅಲ್ಲಿಗೆ ಇಂಗ್ಲೆಂಡ್‌ 49 ರನ್‌ಗಳಿಗೆ 5 ವಿಕೆಟ್‌‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕುಲದೀಪ್ ಮತ್ತೆ ತಮ್ಮ ಮೂರನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್‌ ಅವರನ್ನು ಕ್ಲೀನ್‌ ಬೋಲ್ಡ್‌ ಮಾಡಿದ್ರು. ಇನ್ನೂ ಕಡೆ ಓವರ್ ಮಾಡಲು ಬಂದ ಕುಲದೀಪ್‌ ಜೋರ್ಡಾನ್‌ ಅವರನ್ನು ಎಲ್‌ಬಿಡಬ್ಲೂ ಮಾಡಿದ್ರು. ಈ ಮೂಲಕ ಇಂಗ್ಲೆಂಡ್ ತಂಡ 16.4 ಓವರ್​ನಲ್ಲಿ ಕೇವಲ 103 ರನ್​ಗಳಿಗೆ ಆಲೌಟ್​ ಆಯ್ತು. ಭಾರತ ತಂಡಕ್ಕೆ ಬರೋಬ್ಬರಿ 68 ರನ್​ಗಳ ಜಯ ಸಿಕ್ಕಿದೆ. ಟೀಂ ಇಂಡಿಯಾ ಗೆಲುವಿನಲ್ಲಿ ಕುಲ್ದೀಪ್​​ ಯಾದವ್ ಮತ್ತು ಅಕ್ಷರ್​ ಪಟೇಲ್ ಬೌಲಿಂಗ್ ಜಾದೂನೇ ಕಾರಣ ಅಂದ್ರೂ ತಪ್ಪಾಗಲ್ಲ. ಇದನ್ನ ಸ್ವತಃ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್, ನಾವು ತಂಡವಾಗಿ ಹೋರಾಡಿದ್ದು, ಈ ಗೆಲುವು ತಮಗೆ ಅತೀವ ತೃಪ್ತಿ ನೀಡಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದೇ ಅವರ ಯಶಸ್ಸಿನ ಗುಟ್ಟು. ಬ್ಯಾಟರ್ಸ್ ತಮ್ಮ ಮೊದಲ ಕೆಲಸ ಪೂರ್ಣ ಮಾಡಿದರೆ ಉಳಿದ ಅರ್ಧ ಕೆಲಸವನ್ನು ಬೌಲರ್ ಗಳು ಪೂರ್ಣಗೊಳಿಸಿದ್ದರು. ಅಕ್ಷರ್, ಕುಲ್ದೀಪ್ ನಮ್ಮ ಕೀ ಪ್ಲೇಯರ್ಸ್. ಇಲ್ಲಿನ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟ ಆದರೆ ಎದುರಾಳಿ ಮೇಲೆ ಒತ್ತಡ ತರಲು ಯಶಸ್ವಿಯಾಗಿದ್ದಾರೆ. ತಾಳ್ಮೆಯಿಂದ ಆಡಿ ಇಬ್ಬರು ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ನಮ್ಮ ಬ್ಯಾಟಿಂಗ್ ಆದ ಬಳಿಕ ಹೇಗೆ ಬೌಲ್ ಮಾಡಬೇಕು ಎಂದು ಚರ್ಚೆ ಮಾಡಿದ್ದೆವು. ಸ್ಟಂಪ್ಸ್ ಮೇಲೆಯೇ ಬೌಲ್ ಮಾಡಬೇಕು ಎಂಬುವುದು ನಮ್ಮ ತಂತ್ರವಾಗಿತ್ತು ಎಂದು ರೋಹಿತ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.

ಚುಟುಕು ಸಮರದ ಫೈನಲ್ ಎಂಟ್ರಿಯೊಂದಿಗೆ ಭಾರತ ತಂಡವು ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಅದು ಕೂಡ ಆಸ್ಟ್ರೇಲಿಯಾದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಅಂದರೆ ಐಸಿಸಿ ಟೂರ್ನಿಗಳಲ್ಲಿ ಅತೀ ಹೆಚ್ಚು ಬಾರಿ ಫೈನಲ್​ ಆಡಿದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್ ಪಡೆಯು ಐಸಿಸಿ ಟೂರ್ನಿಗಳಲ್ಲಿ ಒಟ್ಟು 13 ಬಾರಿ ಫೈನಲ್ ಆಡಿದೆ. ಇದೀಗ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಸ್ ಮತ್ತು ಟಿ20 ವಿಶ್ವಕಪ್​ಗಳಲ್ಲಿ ಒಟ್ಟು 12 ಬಾರಿ ಫೈನಲ್ ಆಡಿರುವ ಟೀಮ್ ಇಂಡಿಯಾ ಇದೀಗ 13ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಈ ಮೂಲಕ 13 ಬಾರಿ ಐಸಿಸಿ ಫೈನಲ್ ಆಡಿರುವ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ. ಈ ಹಿಂದಿನ 12 ಐಸಿಸಿ ಫೈನಲ್​ನಲ್ಲಿ ಭಾರತ ತಂಡವು 5 ಬಾರಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿದೆ. 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡರೆ, 2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಇನ್ನು 2002 ಮತ್ತು 2013 ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದಿಗ 13ನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ.

ಟೀಂ ಇಂಡಿಯಾ ಫೈನಲ್‌ ಎಂಟ್ರಿಯಾಗೋದ್ರಲ್ಲಿ ನಾಯಕ ರೋಹಿತ್ ಶರ್ಮಾ ಪಾಲು ಹೆಚ್ಚಿದೆ ಅಂದ್ರೂ ತಪ್ಪಾಗಲ್ಲ. ರೋಹಿತ್ ಶರ್ಮಾರಂಥ ಮತ್ತೊಬ್ಬ ನಾಯಕ ಟೀಂ ಇಂಡಿಯಾ ಸಿಕ್ಕಿಲ್ಲ, ಬಹುಶಃ ಮುಂದೆ ಸಿಗೋದು ಇಲ್ಲ ಅನ್ಸುತ್ತೆ. 2023ರಲ್ಲಿ ವರ್ಲ್ಡ್‌‌ ಟೆಸ್ಟ್ ಚಾಂಪಿಯನ್‌ನಲ್ಲಿ ಟೀಂ ಇಂಡಿಯಾ ಫೈನಲ್‌ ಎಂಟ್ರಿಯಾಗಿತ್ತು. ಅಷ್ಟೇ ಯಾಕೆ ಏಕದಿನ ವಿಶ್ವಕಪ್‌ನಲ್ಲೂ ಟೀಂ ಇಂಡಿಯಾ ಫೈನಲ್ ಎಂಟ್ರಿಯಾಗಿದೆ. ಇದೀಗ ಟಿ20 ವಿಶ್ವಕಪ್‌ನಲ್ಲೂ ಭಾರತ ಫೈನಲ್‌ ಪ್ರವೇಶಿಸಿದೆ.  ಇದರ ಹಿಂದಿನ ಪ್ರಮುಖ ಕಾರಣ ರೋಹಿತ್ ಶರ್ಮಾ. ತಂಡವನ್ನು ಹೇಗೆ ಮುನ್ನಡೆಸಬೇಕು ಅಂತ ಹಿಟ್‌ಮ್ಯಾನ್‌ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಟಫ್‌ ಸಮಯದಲ್ಲೂ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ ರೋಹಿತ್‌ ಶರ್ಮಾ. ಹೀಗಾಗೇ ಟಿ20 ಫೈನಲ್​ಗೆ ಎಂಟ್ರಿ ಕೊಟ್ಟಿರುವ ಟೀಮ್​ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಿಸಿಸಿಐ ಅಧ್ಯಕ್ಷ ಜೈಶಾ ಅವರು ರೋಹಿತ್ ಪಡೆ ಆಟಕ್ಕೆ ಸಂತಸ ವ್ಯಕ್ತಪಡಿಸಿದ್ದು, ಈ ಸಲ ಕಪ್‌ ಗೆಲ್ಲೋದು ನಾವೇ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಇನ್ನೊಂದು ಅಚ್ಚರಿ ಅಂದ್ರೆ ಫೈನಲ್ ಪ್ರವೇಶ ಪಡೆದಿರೋ ಸೌತ್ ಆಫ್ರಿಕಾ ಮತ್ತು ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್​ನಲ್ಲಿ ಒಂದೇ ಒಂದು ಸೋಲು ಕಂಡಿಲ್ಲ. ಎರಡೂ ತಂಡಗಳು ಗೆಲುವಿನ ನಾಗಾಲೋಟದೊಂದಿಗೆ ಫೈನಲ್​ಗೆ ಎಂಟ್ರಿ ಕೊಟ್ಟಿವೆ. ಸೌತ್ ಆಫ್ರಿಕಾ ತಂಡವು ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ದ್ವಿತೀಯ ಸುತ್ತಿನಲ್ಲಿ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಸೆಮಿಫೈನಲ್​ನಲ್ಲಿ ಗೆಲ್ಲುವ ಮೂಲಕ ಒಟ್ಟು 8 ಮ್ಯಾಚ್​ಗಳಲ್ಲಿ ವಿಜಯ ಸಾಧಿಸಿದೆ. ಇನ್ನು ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ 3 ಜಯ ಸಾಧಿಸಿದೆ ಆದ್ರೆ ಕೆನಡಾ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಸೂಪರ್ 8 ಸುತ್ತಿನಲ್ಲಿ 3 ಗೆಲುವು ದಾಖಲಿಸಿದೆ. ಇದೀಗ ಸೆಮಿಫೈನಲ್​ನಲ್ಲೂ ಗೆದ್ದು ಬೀಗುವ ಮೂಲಕ ಫೈನಲ್​ಗೆ ಪ್ರವೇಶಿಸಿದೆ. ಈ ಮೂಲಕ ಸತತ 7 ಗೆಲುವುಗಳೊಂದಿಗೆ ಟೀಮ್ ಇಂಡಿಯಾ 8 ಜಯ ಸಾಧಿಸಿರುವ ಸೌತ್ ಆಫ್ರಿಕಾ ವಿರುದ್ಧ ಸೆಣಸಲು ಎಂಟ್ರಿ ಕೊಟ್ಟಿದೆ. ಇಲ್ಲಿ ಉಭಯ ತಂಡಗಳು ಸೋಲಿಲ್ಲದ ಸರದಾರರಾಗಿ ಫೈನಲ್​ಗೆ ಪ್ರವೇಶಿಸಿರುವ ಕಾರಣ, ಎರಡೂ ತಂಡಗಳು ಗೆಲುವಿನ ಲಯದಲ್ಲಿರುವುದು ಸ್ಪಷ್ಟ. ಅದರಲ್ಲೂ ಗೆಲುವಿನ ನಾಗಾಲೋಟದ ಮೂಲಕ ತಮ್ಮ ಬಲಿಷ್ಠತೆಯನ್ನು ತೆರೆದಿಟ್ಟಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಇರೋದಂತೂ ಪಕ್ಕ. ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡ 11 ಬಾರಿ ಗೆಲುವು ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ. ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

2014 ಟಿ20 ವಿಶ್ವಕಪ್​ ಕೊನೆ.. ಆ ಬಳಿಕ ಟೀಮ್​ ಇಂಡಿಯಾ ಚುಟುಕು ವಿಶ್ವಕಪ್​ನಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದೇ ಇಲ್ಲ. ಇದೀಗ 10 ವರ್ಷಗಳ ಬಳಿಕ ರೋಹಿತ್​ ಪಡೆ ಫೈನಲ್​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ. ಬಾರ್ಬಡೋಸ್​ನಲ್ಲಿ ನಡೆಯೋ ಫೈನಲ್​ ಫೈಟ್​ನಲ್ಲಿ ಸೌತ್​ ಆಫ್ರಿಕಾವನ್ನ ಎದುರಿಸಲಿದೆ. ಭಾರತ ತಂಡದ ಸದ್ಯದ ಅಬ್ಬರ ನೋಡಿದ್ರೆ, ಫೈನಲ್​​ ಗೆಲ್ಲೋದು ಕಷ್ಟದ ವಿಚಾರವೇನೂ ಅಲ್ಲ. ಸೋ ಟಿ-20 ವಿಶ್ವಕಪ್​ನಲ್ಲಿ ಗೆದ್ದು ಬಾ ಇಂಡಿಯಾ ಅಂತಾ ನಾವು ಕೂಡ ವಿಶ್ ಮಾಡೋಣ.

Shwetha M

Leave a Reply

Your email address will not be published. Required fields are marked *