AI ಯಿಂದ ಐಟಿ ಉದ್ಯೋಗ ಭವಿಷ್ಯಕ್ಕೆ ಕುತ್ತು – 12 ಸಾವಿರ ಉದ್ಯೋಗಿಗಳನ್ನ ತೆಗೆದು ಹಾಕಿದ TCS

AI ಯಿಂದ ಐಟಿ ಉದ್ಯೋಗ ಭವಿಷ್ಯಕ್ಕೆ ಕುತ್ತು – 12 ಸಾವಿರ ಉದ್ಯೋಗಿಗಳನ್ನ ತೆಗೆದು ಹಾಕಿದ  TCS

ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ( TCS) ತನ್ನ ಉದ್ಯೋಗಿಗಳಿಗೆ ಶಾಕ್  ಕೊಟ್ಟಿದೆ. 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡಾ 2 ರಷ್ಟು ಕಡಿಮೆ ಮಾಡೋಕೆ ಮುಂದಾಗಿದೆ.   AI ಅಳಡಿಕೆಯಿಂದಾಗಿ ಸುಮಾರು 12,200 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ಎಂದು ಟಾಟಾ ತಿಳಿಸಿದೆ. ಗ್ರಾಹಕರಿಗೆ ಸೇವಾ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಈ ಪರಿವರ್ತನೆಯನ್ನು ಸರಿಯಾದ ಕಾಳಜಿಯೊಂದಿಗೆ ಯೋಜಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಏಕಾಏಕಿ 12,200 ಉದ್ಯೋಗಗಳನ್ನು ಕಡಿತಗೊಳಿಸುತ್ಗತಿರುವುದು ಉದ್ಯೋಗಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಸೂಕ್ತ ಸೌಲಭ್ಯ, ಸ್ಥಳಾಂತರ, ಬೆಂಬಲವನ್ನು ನೀಡುವುದಾಗಿ TCS ಹೇಳಿದೆ. ತಮ್ಮ ಸಹೋದ್ಯೋಗಿಗಳಿಗೆ ಇದು ಸವಾಲಿನ ಸಮಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅವರ ಸೇವೆಗಾಗಿ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಅವರು ಹೊಸ ಅವಕಾಶಗಳಿಗೆ ತೆರೆದುಕೊಳ್ಳುವಾಗ ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ತಿಳಿಸಲಾಗಿದೆ.

AI ಅಳಡಿಕೆಯಿಂದಾಗಿ ಸಾಕಷ್ಟು ಕಂಪನಿಗಳು ಉದ್ಯೋಗಿಗಳನ್ನ ವಜಾ ಮಾಡುತ್ತಿವೆ.   ಮೈಕ್ರೋಸಾಫ್ಟ್, 2025 ರಲ್ಲಿ 15,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಇಂಟೆಲ್‌ ಕಂಪನಿಯು 25,000, ಪ್ಯಾನಸಾನಿಕ್‌ 10,000, ಮೈಕ್ರೋಸಾಫ್ಟ್‌ 6500, ಮೆಟಾ 3600, ಅಮೆಜಾನ್‌ 14000, ಐಬಿಎಂ 8000, ಗೂಗಲ್‌ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್‌ 20000, ಸ್ಟಾರ್‌ಬಕ್ಸ್‌ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ. ಇದರ ಜತೆಗೆ ವಾಲ್‌ಮಾರ್ಟ್‌, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ಯೋಚಿಸಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ 2014ರಲ್ಲಿ ಒಮ್ಮೆ ಮೈಕ್ರೋಸಾಫ್ಟ್‌ ಬರೋಬ್ಬರಿ ಸುಮಾರು 18,000 ಉದ್ಯೋಗಗಳನ್ನು ಕೆಲಸದಿಂದ ವಜಾ ಮಾಡಿತ್ತು. ಅದೇ ರೀತಿ, 2023ರಲ್ಲಿಯೂ ಕಂಪನಿಯು 10,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ 9,000 ಸಿಬ್ಬಂದಿಗಳನ್ನು ಕಡಿತಗೊಳಿಸಲು ಉದ್ದೇಶಿಸಿದ್ದು, 50 ವರ್ಷ ಇತಿಹಾಸ ಇರುವ ದೈತ್ಯ ಟೆಕ್ ಕಂಪನಿಯು ತನ್ನ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.

 

Kishor KV