ವೈಭವ್ ಸೂರ್ಯವಂಶಿಗೆ ಟಾಟಾ ಸಿಯಾರಾ ಕಾರು –ಲಕ್ಷ, ಲಕ್ಷ ಬಾಚಿಕೊಂಡ ಬಾಸ್ ಬೇಬಿ

ವೈಭವ್ ಸೂರ್ಯವಂಶಿಗೆ ಟಾಟಾ ಸಿಯಾರಾ ಕಾರು –ಲಕ್ಷ, ಲಕ್ಷ ಬಾಚಿಕೊಂಡ ಬಾಸ್ ಬೇಬಿ

ಫೈನಲ್‌ನಲ್ಲಿ ಕಪ್ ಗೆದ್ದಿದ್ದು ಆರ್‌ಸಿಬಿ, ರನ್ನರ್ ಅಪ್ ಕಪ್ ಗೆದ್ದಿದ್ದು ಗುಜರಾತ್ ಟೈಟಾನ್ಸ್.. ಆದರೆ ಮಿಂಚಿದ್ದು ಮಾತ್ರ ವಂಡರ್ ಕಿಡ್..  10 ತಂಡಗಳಲ್ಲಿ ಎಂಥೆಂಥಾ ದಿಗ್ಗಜ ಕ್ರಿಕೆಟರ್ಸ್ ಇದ್ದರು. ಆದರೆ, ಇಡೀ ಟೂರ್ನಿಯಲ್ಲಿ ಸಿಗಬೇಕಾದ ಬೆಸ್ಟ್ ಪ್ರಶಸ್ತಿಗಳೆಲ್ಲಾ ವೈಭವ್ ಸೂರ್ಯವಂಶಿಯ ಪಾಲಾಗಿತ್ತು.

ಇದನ್ನೂ ಓದಿ:ಎರಡನೇ ಸಲ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ RCB –ಬೆಂಗಳೂರಲ್ಲಿ ಪಟಾಕಿ ಸಂಭ್ರಮ, ರಾತ್ರಿಯಿಡೀ ಸೆಲೆಬ್ರೇಷನ್

ಈ ಬಾರಿ ಐಪಿಎಲ್‌ನ ಫೈನಲ್ ಪಂದ್ಯದ ನಂತರ ಕ್ರಿಕೆಟ್ ದಿಗ್ಗಜರನ್ನೇ ತನ್ನತ್ತ ತಿರುಗುವಂತೆ ಮಾಡಿದ್ದಾನೆ ಹದಿಹರೆಯದ ಬಾಲಕ ವೈಭವ್ ಸೂರ್ಯವಂಶಿ. ಐಪಿಎಲ್​ನಲ್ಲಿ ಅನುಭವಿ ಆಟಗಾರರನ್ನೇ ಹಿಂದಿಕ್ಕಿ ಯುವ ಎಡಗೈ ದಾಂಡಿಗ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಈ ಪ್ರಶಸ್ತಿ ಪಡೆದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಈ ಮೂಲಕ ಟಾಟಾ ಸಿಯಾರಾ ಕಾರು ಗೆದ್ದಿದ್ದಾರೆ.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್​ ತಂಡದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಪಡೆದಿದ್ದಾರೆ. ಇನ್ನು ಅದ್ಭುತ ಸ್ಟ್ರೈಕ್ ರೇಟ್​ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.

ಏಂಜಲ್ ಒನ್ ಸೂಪರ್ ಸಿಕ್ಸರ್ ಆಫ್ ದ ಸೀಸನ್ ಕೂಡಾ ಸಿಕ್ಕಿದ್ದು ವೈಭವ್ ಸೂರ್ಯವಂಶಿಗೆ. 16 ಇನ್ನಿಂಗ್ಸ್‌ಗಳಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ ವೈಭವ್ ಸೂರ್ಯವಂಶಿ. ಈ ಪ್ರಶಸ್ತಿಯ ಮೊತ್ತ ಕೂಡಾ 10 ಲಕ್ಷ ರೂಪಾಯಿ.

ಇನ್ನು ಅತ್ಯುತ್ತಮ ಪ್ರದರ್ಶನ ನೀಡುವ ಆಟಗನಾರನಿಗೆ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಕೂಡಾ ಸೂರ್ಯವಂಶಿ ಮುಡಿಗೇರಿದೆ. ವೈಭವ್ ಈ ಪ್ರಶಸ್ತಿಯ ಜೊತೆಗೆ 15 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

ಎಮರ್ಜಿಂಗ್‌ ಪ್ಲೇಯರ್‌ ಆಪ್‌ ದಿ ಸೀಸನ್‌ ಪ್ರಶಸ್ತಿ ಕೂಡಾ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಪ್ರಶಸ್ತಿ ಜೊತೆಗೆ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ ಬಾಸ್ ಬೇಬಿ.

Sulekha

Leave a Reply

Your email address will not be published. Required fields are marked *