ಉಪ್ಪಿನಕಾಯಿ ತಿನ್ನೋದ್ರಿಂದ ನಾಲಿಗೆಗೆ ಟೇಸ್ಟ್.. ಆರೋಗ್ಯಕ್ಕೆ ತೊಂದರೆ!
ಹೆಚ್ಚಿನ ಜನರು ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಾರೆ. ಉಪ್ಪಿನಕಾಯಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತೆ. ಹಾಗಾಗಿ ಆಹಾರದೊಂದಿಗೆ ಉಪ್ಪಿನಕಾಯಿ ತಿಂದ್ರೆ, ರುಚಿಯಿಲ್ಲದ ಆಹಾರವೂ ಅದ್ಭುತವಾಗಿ ರುಚಿಸುತ್ತೆ. ಹಾಗಿದ್ರೆ, ಉಪ್ಪಿನಕಾಯಿಯ ಅತಿಯಾದ ಸೇವನೆ ಹಾನಿಕಾರಕವೆಂದೂ ನಿಮಗೆ ತಿಳಿದಿರಬೇಕು. ವಿಶೇಷವಾಗಿ ಪುರುಷರು ಉಪ್ಪಿನಕಾಯಿಯ ಅತಿಯಾದ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಬಹುದು.
ಉಪ್ಪಿನಕಾಯಿಎಣ್ಣೆಯನ್ನು ದೀರ್ಘಕಾಲ ಬಳಸಲು ಹೆಚ್ಚಿನ ಪ್ರಮಾಣದ ಎಣ್ಣೆ ಬಳಸುತ್ತಾರೆ. ಅಲ್ಲದೇ ಅದರಲ್ಲಿ ಬಳಸುವ ಮಸಾಲೆಗಳನ್ನು ಸಹ ಹೆಚ್ಚಾಗಿ ಬೇಯಿಸುವುದಿಲ್ಲ, ಇದು ಕೊಲೆಸ್ಟ್ರಾಲ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಕರ್ನಾಟಕದಲ್ಲಿ ಗೆದ್ದ ಕಾಟೇರ – ವೀಕೆಂಡ್ನಲ್ಲಿ ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್
ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದು ನಿಮಗೆ ಅಪಾಯಕಾರಿ, ಆದ್ದರಿಂದ ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಉಪ್ಪಿನಕಾಯಿ ತಯಾರಿಸಿದಾಗಲೆಲ್ಲಾ, ಅದನ್ನು ರುಚಿಕರವಾಗಿಸಲು ಹೆಚ್ಚು ಎಣ್ಣೆ ಮತ್ತು ಹೆಚ್ಚಿನ ಮಸಾಲೆಗಳನ್ನು ಬಳಸಲಾಗುತ್ತದೆ, ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಲ್ಲಿರುವ ಹೆಚ್ಚಿನ ಎಣ್ಣೆಯ ಪ್ರಮಾಣ ಮತ್ತು ಬೇಯಿಸದ ಮಸಾಲೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ.
ಇನ್ನು ಹೆಚ್ಚು ಉಪ್ಪಿನಕಾಯಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯಕ್ಕೆ ಒಳಗಾಗಬಹುದು. ಉಪ್ಪಿನಕಾಯಿ ನಮ್ಮ ದೇಹದಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಇದರೊಂದಿಗೆ, ಹೆಚ್ಚಿನ ಪ್ರಮಾಣದ ಉಪ್ಪಿನ ಕಾರಣದಿಂದಾಗಿ, ರಕ್ತದೊತ್ತಡ ರೋಗಿಗಳಿಗೆ ಹಾನಿಕಾರಕ.
ಮಾವಿನ ಉಪ್ಪಿನಕಾಯಿಯಲ್ಲಿ ಕಂಡುಬರುವ ಅಂಶವೆಂದರೆ ಅಸ್ಟಾಮಿಪ್ರೈಡ್, ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಸ್ಟಾಮಿಪ್ರಿಡ್ ಒಂದು ಸಾವಯವ ಸಂಯುಕ್ತವಾಗಿದೆ, ಈ ಅಂಶವನ್ನು ಮಾವಿನಹಣ್ಣುಗಳನ್ನು ಸುರಕ್ಷಿತವಾಗಿಡಲು ಬಳಸಲಾಗುತ್ತದೆ. ಇದರಿಂದ ಮಾವಿನ ಉಪ್ಪಿನಕಾಯಿ ಬೇಗನೆ ಹಾಳಾಗುವುದಿಲ್ಲ.