ದರ್ಶನ್ ಅವರನ್ನು ಟಾರ್ಗೆಟ್  ಮಾಡಲಾಗ್ತಿದ್ಯಾ? – ರಾಜಕೀಯ ಲಾಭ ಪಡೆಯೋಕೆ ಮುಂದಾಗಿದ್ಯಾರು..?

ದರ್ಶನ್ ಅವರನ್ನು ಟಾರ್ಗೆಟ್  ಮಾಡಲಾಗ್ತಿದ್ಯಾ? – ರಾಜಕೀಯ ಲಾಭ ಪಡೆಯೋಕೆ ಮುಂದಾಗಿದ್ಯಾರು..?

ನಟ ದರ್ಶನ್​ಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ದರ್ಶನ್ ಅಭಿನಯದ ಕಾಟೇರ ಸಿನಿಮಾ ಈಗ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕರ್ನಾಟಕದಲ್ಲಷ್ಟೇ ತೆರೆ ಕಂಡಿದ್ದ ಸಿನಿಮಾ ಎರಡೇ ವಾರದಲ್ಲಿ 160 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಆದ್ರೀಗ ಕಾಟೇರದ ಸಕ್ಸಸ್ ನಡುವೆ ವಿವಾದವೊಂದು ಭುಗಿಲೆದ್ದಿದೆ. ನಟ ದರ್ಶನ್ ಅವ್ರನ್ನ ಟಾರ್ಗೆಟ್ ಮಾಡಲಾಗ್ತಿದೆ ಎನ್ನಲಾಗಿದೆ. ಇದರ ನಡುವೆ ಪ್ರಕರಣ ರಾಜಕೀಯ ತಿರುವು ಪಡೆದಿದ್ದು ಚುನಾವಣೆ ಲೆಕ್ಕಾಚಾರವೂ ನಡೀತಿದೆ. ಏನಿದು ಪ್ರಕರಣ..? ರಾಜಕೀಯ ಲಾಭ ಪಡೆಯೋಕೆ ಮುಂದಾಗಿದ್ಯಾರು..? ಎಲ್ಲವನ್ನೂ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಟಲ್​ ಸೇತುವೆಯ ಸ್ಪೆಷಾಲಿಟಿ ಏನು? -ಸೇತುವೆ ನಿರ್ಮಾಣದ ವೇಳೆ ಎದುರಾಗಿದ್ದ ಸವಾಲುಗಳೇನು?

ಬೆಂಗಳೂರಿನ ಜೆಟ್​ಲಾಗ್ ಹೋಟೆಲ್​ನಲ್ಲಿ ಅವಧಿ ಮೀರಿ ಕಾಟೇರ ಸಿನಿಮಾ ತಂಡ ಸಕ್ಸಸ್ ಪಾರ್ಟಿ ನಡೆಸಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಸುಬ್ರಹ್ಮಣ್ಯನಗರ ಠಾಣಾ ಪೊಲೀಸರು 8 ಜನರಿಗೆ ವಿಚಾರಣಾ ನೋಟಿಸ್‌ ಜಾರಿಗೊಳಿಸಿದ್ದರು. ಅದ್ರಂತೆ ಚಿತ್ರತಂಡ ಜನವರಿ 12ರಂದು ವಿಚಾರಣೆಗೆ ಹಾಜರಾಗಿತ್ತು. ವಿಚಾರಣೆ ವೇಳೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಎರಡು ಬಾರಿ ಪಾರ್ಟಿ ಮಾಡಲು ಹೋಗಿದ್ದಾರೆ ಎಂದು ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ. ಆದ್ರೆ ರಾಕ್​ಲೈನ್ ಊಟಕ್ಕಷ್ಟೇ ಹೋಗಿದ್ವಿ. ಕಾಟೇರ ಸಿನಿಮಾ ಸಕ್ಸಸ್ ಸಹಿಸಲಾಗದೆ ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದಿದ್ದಾರೆ. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್ ಸೃಷ್ಟಿಸಿದೆ.

ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ‌ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ವಿಚಾರಣೆ ಎದುರಿಸಿದ್ದಾರೆ. ಆದ್ರೆ ರಾಕ್​ಲೈನ್ ನೀಡಿದ ಹೇಳಿಕೆ ಬರೀ ಪೊಲೀಸ್ ಇಲಾಖೆ, ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗದೆ ಇದೀಗ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಇವ್ರೆಲ್ಲಾ ಊಟಕ್ಕಷ್ಟೇ ಹೋಗಿದ್ದು, ಊಟಕ್ಕೆ ಹೋದ ಗ್ರಾಹಕರಿಗೆ ನೊಟೀಸ್ ಕೊಡೋ ಹಾಗಿಲ್ಲ ಎನ್ನುವ ವಾದ ಶುರುವಾಗಿದೆ. ಇದ್ರ ನಡುವೆ ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ನಟರನ್ನ ಸ್ಟೇಷನ್ ಗೆ ಕರೆಸಿದ ಪೊಲೀಸರೇ ತಪ್ಪಿತಸ್ಥರು ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ.

ಕನ್ನಡ ನೆಲದ ನಟರಿಗೆ ನೋಟಿಸ್ ಕೊಟ್ಟಿದ್ಯಾಕೆ. ಎಸಿಪಿ‌, ಡಿಸಿಪಿ, ಇನ್ಸ್​ಪೆಕ್ಟರ್ ಇದಕ್ಕೆ ಉತ್ತರ ಕೊಡ್ಬೇಕು.  ಪೊಲೀಸರು ರೋಲ್ ಕಾಲ್ ಮಾಡಿ ಓಪನ್ ಮಾಡಲು ಬಿಟ್ಟಿದ್ದಾರಾ..? ನೀವು ಅಲ್ಲಿಗೆ ಹೋಗಿದ್ದರೆ ವಿಡಿಯೋ ರಿಲೀಸ್ ಮಾಡಿ. ಅವ್ರ ತಪ್ಪನ್ನ ಮುಚ್ಚಿಸೋಕೆ ಇವ್ರ ಮೇಲೆ ಹಾಕಿದ್ದಾರೆ. ನಿಮಗೂ ಆ ಪಬ್‌ ಅವ್ರಿಗೂ ಏನ್ ಅಡ್ಜೆಸ್ಟ್​ಮೆಂಟ್ ಇದೆ. ಚಲನ ಚಿತ್ರ ನಟರು ಈ ನೆಲದ ಆಸ್ತಿ. ಇಲ್ಲಿ ಪೊಲೀಸರದ್ದೆ ತಪ್ಪು. ದರ್ಶನ್, ಡಾಲಿ ಧನಂಜಯ್ ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆಸಿದ್ದು ತಪ್ಪು. 24 ಗಂಟೆಯೊಳಗೆ ಸಂಬಂಧಪಟ್ಟ ಪೊಲೀಸರು ಸಸ್ಪೆಂಡ್ ಆಗಬೇಕು. ಇಲ್ಲದ್ದಿದ್ರೆ ನಾನೇ ಗೃಹ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ರವಿ ಗಣಿಗ ಕೆಂಡ ಕಾರಿದ್ದಾರೆ.

ಅಷ್ಟಕ್ಕೂ ಇಲ್ಲಿ ಶಾಸಕ ರವಿ ಗಣಿಗ ಪೊಲೀಸರ ಮೇಲೆ ಕೆಂಡ ಕಾರೋದ್ರ ಹಿಂದಿನ ತಂತ್ರವೇ ಬೇರೆ ಇದೆ. ಹೇಳಿ ಕೇಳಿ ಅವ್ರು ಮಂಡ್ಯದ ಶಾಸಕ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬಂತು. ನಟ ದರ್ಶನ್, ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್​ಗೆ ಮಂಡ್ಯದಲ್ಲಿ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಕಳೆದ ಬಾರಿ ಸುಮಲತಾ ಗೆಲ್ಲೋಕೆ ದರ್ಶನ್ ಮತ್ತು ಯಶ್ ಪ್ರಚಾರವೇ ಅರ್ಧ ಬಲ ತುಂಬಿತ್ತು. ಈ ಸಲವೂ ನಟರನ್ನ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದಾರೆ ಎನ್ನಲಾಗಿದೆ.

Shwetha M