ನಟ ನಂದಮೂರಿ ತಾರಕ ರತ್ನ ಸ್ಥಿತಿ ಗಂಭೀರ – ರಕ್ತನಾಳಗಳು ಬ್ಲಾಕ್.. ವೈದ್ಯರು ಹೇಳಿದ್ದೇನು..?

ನಟ ನಂದಮೂರಿ ತಾರಕ ರತ್ನ ಸ್ಥಿತಿ ಗಂಭೀರ – ರಕ್ತನಾಳಗಳು ಬ್ಲಾಕ್.. ವೈದ್ಯರು ಹೇಳಿದ್ದೇನು..?

ಪಾದಯಾತ್ರೆ ವೇಳೆ ಕುಸಿದು ತೀವ್ರ ಅಸ್ವಸ್ಥರಾಗಿದ್ದ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನ ಅವರ ಆರೋಗ್ಯ ಗಂಭೀರವಾಗಿದೆ. ಈ ಬಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದೆ. ತೀವ್ರ ಹೃದಯಘಾತವಾಗಿರುವ ಹಿನ್ನೆಲೆಯಲ್ಲಿ ಹೃದಯದ ರಸ್ತನಾಳಗಳು ಬ್ಲಾಕ್​ ಆಗಿವೆ. ಇದರಿಂದ ತಾರಕರತ್ನ ಅವರ ಆರೋಗ್ಯ ಸ್ಥಿತಿ ಕೊಂಚ ಗಂಭೀರವಾಗಿದೆ.

ಇದನ್ನೂ ಓದಿ :

ಆಂಧ್ರ ಪ್ರದೇಶದ ಕುಪ್ಪಂನಲ್ಲಿ ನಡೆದ ಪಾದಯಾತ್ರೆ ವೇಳೆ ನಂದಮೂರಿ ತಾರಕರತ್ನ ದಿಢೀರ್ ಕುಸಿದುಬಿದ್ದಿದ್ರು.  ಹೃದಯಘಾತವಾಗಿರುವ ಹಿನ್ನೆಲೆಯಲ್ಲಿ ಹೃದಯದ ರಸ್ತನಾಳಗಳು ಬ್ಲಾಕ್​ ಆಗಿದ್ದು, ಬ್ಲಾಕ್ ಆಗಿರುವ ರಕ್ತನಾಳಗಳನ್ನು ಸರಿಪಡಿಸಲು ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ. ಇಂಟ್ರಾ ಅಯೋರ್ಟಿಕ್ ಪಂಪ್ (ಎಬಿಪಿ) ಹಾಗೂ ವ್ಯಾಸೋಆ್ಯಕ್ಟಿವ್ ನೆರವಿನಿಂದ ಚಿಕಿತ್ಸೆ ನೀಡಲಾಗಿದೆ. ಆ್ಯಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ. ಆದ್ರೆ, ಸ್ಟಂಟ್ ಅಳವಡಿಕೆ ನಡುವೆಯೂ ರಸ್ತಸ್ರಾವ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ ಎಂದು ನಾರಾಯಣ ಹೃದಯಾಲಯ ಆಸ್ಪತ್ರೆ ಹೆಲ್ತ್​ ಬುಲೆಟ್​ನಲ್ಲಿ ಹೇಳಿದೆ.

ಆಂಧ್ರ ಪ್ರದೇಶದ ಕುಪ್ಪಂನಲ್ಲಿ ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ನಂದಮೂರಿ ತಾರಕ ರತ್ನ ಅವರನ್ನು ಕರೆತರಲಾಗಿದ್ದು, ನಾರಾಯಣ ಹೃದಯಾಲಯ ಆಸ್ಪತ್ರೆಯ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆದ್ರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್​ ಅವರು ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾದಾಗ ತಾರಕ ರತ್ನ ಅವರು ಅಸ್ವಸ್ಥರಾದರು. ಅವರಿಗೆ ಹೃದಯಾಘಾತವಾಗಿದೆ ಎಂಬುದು ಬಳಿಕ ತಿಳಿದಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದರು. ಆರಂಭದಲ್ಲಿ ಕುಪ್ಪಂನ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

suddiyaana