ಚಿನ್ನದ ಗಣಿಯಲ್ಲಿ ಭಾರೀ ದುರಂತ – ಭೂಕುಸಿತದಿಂದಾಗಿ 22 ಕಾರ್ಮಿಕರು ಸ್ಥಳದಲ್ಲೇ ಜೀವಂತ ಸಮಾಧಿ..

ಉತ್ತರ ತಾಜಂನಿಯಾದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಸ್ಮಾಲ್-ಸ್ಕೇಲ್ ಗೋಲ್ಡ್ ಮೈನ್ ಕುಸಿದಿದ್ದು, ಸಾವಿನ ಸಂಖ್ಯೆ 22 ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಧ್ಯರಾತ್ರಿವರೆಗೂ ರೀಲ್ಸ್, ಫೇಸ್ ಬುಕ್ ನೋಡ್ತೀರಾ? -ತಡವಾಗಿ ಮಲಗುವುದರಿಂದ ಇಷ್ಟೆಲ್ಲಾ ಅಪಾಯನಾ?
ಕಳೆದ ಶನಿವಾರ ದುರಂತ ಈ ದುರಂತ ಸಂಭವಿಸಿದೆ. 24 ರಿಂದ 38 ವರ್ಷದೊಳಗಿನ ಕಾರ್ಮಿಕರು ಸಿಮಿಯು ಪ್ರದೇಶದಲ್ಲಿದ್ದ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ 19 ರಿಂದ 22 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಾಗಿತ್ತು. ದುರಾದೃಷ್ಟವಶಾತ್ 22 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಗಣಿಯ ಗುಹೆಯೊಳಗೆ ಕಾರ್ಮಿಕರು ಹೋಗಿದ್ದರು. ದುರ್ಘಟನೆ ಭಾರೀ ಮಳೆಯೇ ಕಾರಣ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಗಣಿ ಚಟುವಟಿಕೆಗೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಪ್ರಮಾಣದ ಗಣಿಗಳಲ್ಲಿ ಸುರಕ್ಷಿತವಾಗಿ ಮೈನಿಂಗ್ ಮಾಡಲು ಅಲ್ಲಿನ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಿದ್ದೂ ಅನಾಹುತಗಳು ಸಂಭವಿಸುತ್ತಲೇ ಇದೆ.