ನಾಲ್ಕನೇ ಟೆಸ್ಟ್‌ಗೆ ಸ್ಥಾನ ಪಡೆದ ಉಡುಪಿಯ ತನುಷ್ ಕೋಟ್ಯಾನ್‌ – ಚಹಾಲ್ & ಪಟೇಲ್ ಗೆ ಯಾಕಿಲ್ಲ ಚಾನ್ಸ್?

ನಾಲ್ಕನೇ ಟೆಸ್ಟ್‌ಗೆ ಸ್ಥಾನ ಪಡೆದ ಉಡುಪಿಯ ತನುಷ್ ಕೋಟ್ಯಾನ್‌ –  ಚಹಾಲ್ & ಪಟೇಲ್ ಗೆ ಯಾಕಿಲ್ಲ ಚಾನ್ಸ್?

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಭಾರತದ ಪಾಲಿಗೆ ಡು ಆರ್ ಡೈ ಫೈಟ್. ಒಂದು ಮ್ಯಾಚ್ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಂಡಿರೋ ಭಾರತಕ್ಕೆ ಬಾಕ್ಸಿಂಗ್ ಡೇ ಮ್ಯಾಚ್ ಗೆದ್ರಷ್ಟೇ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಕನಸು ನನಸಾಗುತ್ತೆ. ಹೀಗಾಗಿ ಪಂದ್ಯವನ್ನ ಸೀರಿಯಸ್ ಆಗಿ ತಗೊಂಡಿರೋ ಬಿಸಿಸಿಐ ತಂಡಕ್ಕೆ ಒಂದಷ್ಟು ಸರ್ಜರಿ ಮಾಡಿದೆ. ಆರ್.ಅಶ್ವಿನ್ ಜಾಗಕ್ಕೆ ಅಚ್ಚರಿಯ ಆಟಗಾರನನ್ನ ಸೆಲೆಕ್ಟ್ ಮಾಡಿದೆ. ಹಾಗಾದ್ರೆ ನಾಲ್ಕನೇ ಪಂದ್ಯಕ್ಕೆ ಹೇಗಿದೆ ಸ್ಟ್ರಾಟಜಿ? ಯಾರು ಈ ತನುಷ್ ಕೋಟ್ಯನ್? ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ನಾಯಕತ್ವದಲ್ಲಿ ಕಳಪೆ ಪ್ರದರ್ಶನ – ರೊಚ್ಚಿಗೆದ್ದ ಫ್ಯಾನ್ಸ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ಗುರುವಾರದಿಂದ ಸ್ಟಾರ್ಟ್ ಆಗಲಿದೆ. ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಮಂಗಳವಾರ ಅನೌನ್ಸ್ ಮಾಡ್ಲಾಗಿದೆ. ಭಾರತದ ಆಟಗಾರ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಉಡುಪಿ ಮೂಲದ ಕನ್ನಡಿಗ ಯುವ ಆಟಗಾರ ತನುಷ್ ಕೋಟ್ಯಾನ್ ಅವರನ್ನು ಸೇರಿಸಲಾಗಿದೆ. ತುಂಬಾ ಜನ  ಅಶ್ವಿನ್ ಪ್ಲೇಸ್​ಗೆ ಚಾಹಲ್ ಅಥವಾ ಅಕ್ಷರ್ ಪಟೇಲ್​ರನ್ನ ರಿಪ್ಲೇಸ್ ಮಾಡ್ಬೋದು ಅನ್ನೋ ನಿರೀಕ್ಷೆ ಇತ್ತು. ಬಟ್ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ತನುಷ್ ಕೋಟ್ಯಾನ್ ಸ್ಥಾನ ಪಡೆದಿದ್ದಾರೆ.

ಸದ್ಯ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಈ ತನುಷ್‌ ಯಾರು ಅನ್ನೋದೇ ಹಾಟ್ ಟಾಪಿಕ್ ಆಗಿದೆ. ತನುಷ್ ಅವ್ರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಪಾಂಗಾಳ ಮೂಲದವರು. ಇವ್ರ ತಂದೆ ಕರುಣಾಕರ ಕೋಟ್ಯಾನ್ ಹಾಗೂ ತಾಯಿ ಮಲ್ಲಿಕಾ. ತಂದೆ-ತಾಯಿ ತುಳುನಾಡು ಭಾಗದವರಾದ್ರೂ, ತನುಷ್ ಹುಟ್ಟಿ ಬೆಳೆದಿದ್ದು ವಾಣಿಜ್ಯ ನಗರಿ ಮುಂಬೈನಲ್ಲೇ. 26 ವರ್ಷದ ತನುಷ್ ಕೋಟ್ಯಾನ್, ಲಾಸ್ಟ್ ಸೀಸನ್​ನಲ್ಲಿ ಮುಂಬೈ ರಣಜಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ರು. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡದ ಭಾಗವಾಗಿದ್ರು. ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತನುಷ್ ಒಂದು ವಿಕೆಟ್ ಜೊತೆಗೆ 44 ರನ್ ಸಹ ಕಲೆ ಹಾಕಿದ್ರು.

ದೇಶೀ ಕ್ರೀಡೆಗಳಲ್ಲಿ ತನುಷ್ ಸಿಡಿಲಬ್ಬರ!

ತನುಷ್ ಕೋಟ್ಯಾನ್ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಇದೇ ವೇಳೆ 25.70ರ ಸರಾಸರಿಯಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ಕೋಟ್ಯಾನ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಎರಡು ಶತಕಗಳು ಮತ್ತು 13 ಅರ್ಧಶತಕಗಳನ್ನ ಸಿಡಿಸಿದ್ದಾರೆ. 2023-24ರಲ್ಲಿ ಮುಂಬೈನ ರಣಜಿ ಟ್ರೋಫಿ ಗೆದ್ದಾಗ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ರು. ಅಲ್ದೇ ಈ ಸೀಈಸನ್​ನ ಇರಾನಿ ಕಪ್‌ನಲ್ಲಿ ಅಬ್ಬರಿಸಿದ್ದ ಕೋಟ್ಯಾನ್, ಮುಂಬೈ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಬಳಿಕ ದುಲೀಪ್ ಟ್ರೋಫಿಯಲ್ಲೂ ಕೂಡ ಸ್ಥಾನ ಪಡೆದಿದ್ರು. ಇದೇ ಕಾರಣಕ್ಕೆ ಅಕ್ಷರ್ ಪಟೇಲ್ ಇದ್ದರೂ ಬಿಸಿಸಿಐ ಇವರನ್ನು ತಂಡಕ್ಕೆ ಸೇರಿಸಲು ಇದೇ ಕಾರಣ. ಈಗಾಗಲೇ ಭಾರತ ತಂಡದಲ್ಲಿ ಅಶ್ವಿನ್ ಸ್ಥಾನವನ್ನು ವಾಷಿಂಗ್ಟನ್ ಸುಂದರ್ ಪಡೆದಿದ್ದಾರೆ. ಜಡೇಜಾ ಕೂಡ ತಂಡದಲ್ಲಿದ್ದಾರೆ. ಈ ಇಬ್ಬರು ಗಾಯ ಅಥವಾ ಇತರೆ ಕಾರಣಗಳಿಂದ ಆಡಲು ಸಾಧ್ಯವಾಗದಿದ್ದರೆ ತನುಷ್ ಕೋಟ್ಯಾನ್‌ಗೆ ಪ್ಲೇಯಿಂಗ್ XIನಲ್ಲಿ ಸ್ಥಾನ ಸಿಗೋ ಸಾಧ್ಯತೆ ಇದೆ.

4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯೋದಾಗಿ ರೋಹಿತ್ ಸ್ಪಷ್ಟನೆ!

ಸದ್ಯ ಕಳಪೆ ಫಾರ್ಮ್​ನಿಂದ ಬಳಲ್ತಿರೋ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ರು. ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದರು. ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ ಎಸೆದ ಚೆಂಡು ರೋಹಿತ್ ಶರ್ಮಾ ಅವರ ಎಡ ಮೊಣಕಾಲಿಗೆ ಬಡಿದಿತ್ತು. ಹೀಗಾಗಿ ರೋಹಿತ್ ಶರ್ಮಾ 4ನೇ ಮ್ಯಾಚ್ ಗೆ ಕಣಕ್ಕಿಳಿಯೋದು ಡೌಟ್ ಎನ್ನಲಾಗಿತ್ತು. ತಮ್ಮ ಗಾಯದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ನಾಲ್ಕನೇ ಟೆಸ್ಟ್ ಪಂದ್ಯವಾಡಲು ನಾನು ಫಿಟ್ ಆಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

suddiyaana