ತೆಲಂಗಾಣದಲ್ಲಿ ಟ್ಯಾಂಕರ್,​​ ಆಟೋ ರಿಕ್ಷಾಗೆ ಡಿಕ್ಕಿ – ಬೀದರ್‌ನ 6 ಜನ ಬಲಿ, 6 ಜನಕ್ಕೆ ಗಾಯ

ತೆಲಂಗಾಣದಲ್ಲಿ ಟ್ಯಾಂಕರ್,​​ ಆಟೋ ರಿಕ್ಷಾಗೆ ಡಿಕ್ಕಿ – ಬೀದರ್‌ನ 6 ಜನ ಬಲಿ, 6 ಜನಕ್ಕೆ ಗಾಯ

ತೆಲಂಗಾಣದಲ್ಲಿ ಭೀಕರ ಅಪಘಾತ ನಡೆದಿದೆ.  ವೇಗವಾಗಿ ಬಂದ ಟ್ಯಾಂಕರ್​​ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಸತ್ವಾರ್ ಗ್ರಾಮದ ಸಮೀಪ ನಡೆದಿದೆ.

ಆಟೋ ರಿಕ್ಷಾ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ಆಟೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಮೃತರು ಹಾಗೂ ಗಾಯಾಳುಗಳು ಕರ್ನಾಟಕದ ಬೀದರ್ ಜಿಲ್ಲೆಯ ರಾಜಗೀರಾ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೌಟುಂಬಿ ಕಲಹ, ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿದ ತಂದೆ – ಅಪ್ಪನ ಜೊತೆ ಮಗಳು ಸಾ*ವು, 3 ಜನರ ಸ್ಥಿತಿ ಗಂಭೀರ

ಅಪಘಾತದಲ್ಲಿ ಮೃತಪಟ್ಟವರನ್ನು ದೇವಿದಾಸ (35), ನಿಕಿತಾ (42), ರೇಖಾ (45), ರೇಷ್ಮಾ (38), ಶ್ರೀದೇವಿ (40) ಮತ್ತು ಜಗದೇವಿ (43) ಎಂದು ಗುರುತಿಸಲಾಗಿದೆ.  ನಿರ್ಮಲಾ, ತುಳಜಮ್ಮ, ಶಿಲ್ಪಾ , ಶೋಭಾ, ಚಂದ್ರಕಲಾ ಮತ್ತು ರಾಧಿಕಾ ಎಂಬವರು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಚಿವ ಈಶ್ವರ್​​ ಖಂಡ್ರೆ ವಿಚಾರಿಸಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬ್ರಿಮ್ಸ್‌ನ ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕದಲ್ಲಿ ಮೂವರು ಹಾಗೂ ಬೇರೆ ವಾರ್ಡ್‌ನಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜಗೀರಾ ರಾಜಗೀರಾ ಗ್ರಾಮದ 6 ಜನ ಮೃತಪಟ್ಟಿರುವುದು ಅತ್ಯಂರ ದುಖಃಕರ ಸಂಗತಿ. ಸಿಎಂ ನಿಧಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತೆ. ಮೃತರ ಕುಟುಂಬದ ಜೊತೆ ಹಾಗೂ ಗಾಯಾಳುಗಳ ಜೊತೆ ನಮ್ಮ ಸರ್ಕಾರ ಇರುತ್ತೆ ಎಂಬ ಭರವಸೆ ನೀಡಿದ್ದಾರೆ.

Kishor KV

Leave a Reply

Your email address will not be published. Required fields are marked *