ಬಿಗ್‌ಬಾಸ್‌ ಮನೆಯಲ್ಲಿ ಲೆಕ್ಕಾಚಾರವೆಲ್ಲಾ ಉಲ್ಟಾ! – ತನಿಷಾ ಕಳಪೆ ಎಂದು ಜೈಲಿಗಟ್ಟಿದ ಮನೆಮಂದಿ!

ಬಿಗ್‌ಬಾಸ್‌ ಮನೆಯಲ್ಲಿ ಲೆಕ್ಕಾಚಾರವೆಲ್ಲಾ ಉಲ್ಟಾ! – ತನಿಷಾ ಕಳಪೆ ಎಂದು ಜೈಲಿಗಟ್ಟಿದ ಮನೆಮಂದಿ!

ಬಿಗ್‌ಬಾಸ್‌ ಕನ್ನಡ ಮನೆಯೊಳಗಿನ ಆಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಯಾವಾಗ ಏನು ಆಗುತ್ತೆ? ತುಂಬಾ ಕ್ಲೋಸ್‌ ಆಗಿದ್ದವರು ಯಾವಾಗ ತಿರುಗಿ ಬೀಳುತ್ತಾರೆ ಅಂತಾ ಹೇಳುವುದು ಕಷ್ಟ. ಇನ್ನು ಟಾಸ್ಕ್‌ ವಿಚಾರದಲ್ಲೂ ಕೂಡ ವಿಕ್ಷಕರ ಲೆಕ್ಕಾಚಾರ ತಲೆಕೆಳಗೆ ಆಗುತ್ತೆ.. ಒಂದು ವಾರ ಉತ್ತಮ ಪರ್ಫಾರ್ಮೆನ್ಸ್ ನೀಡಿದವರು, ಕ್ಯಾಪ್ಟನ್ ಆದವರು ಕಳಪೆ ಹಣೆಪಟ್ಟಿ ಪಡೆದು ಜೈಲು ಸೇರದ್ದೂ ಇದೆ.. ಅದೇ ರೀತಿ ಒಂದು ವಾರ ಕಳಪೆ ಪಡೆದವರು ಮುಂದಿನ ವಾರಕ್ಕೆ ತಮ್ಮ ಆಟವನ್ನು ತೋರಿಸಿ ಬೆಸ್ಟ್ ಎನಿಸಿಕೊಂಡಿದ್ದೂ ಇದೆ. ಇದೀಗ ಈ ವಾರ ಬಿಗ್ ಬಾಸ್​ ಮನೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ.

ಹೌದು, ದೊಡ್ಮನೆಯ ಆಟ 6 ವಾರಗಳನ್ನ ಪೂರೈಸಿದ್ದು, ದಿನದಿಂದ ದಿನಕ್ಕೆ ರೋಚಕ ಹಂತಗಳನ್ನ ತಲುಪುತ್ತಿದೆ. ಬಿಗ್ ಮನೆಯ ಡ್ರಾಮಾ ನೋಡೋಕೆ ಅಭಿಮಾನಿಗಳು ಪ್ರತಿ ದಿನ ಹಾಜರಿ ಹಾಕ್ತಿದ್ದಾರೆ.  ಇನ್ನೂ ಪ್ರತಿ ವಾರದಂತೆ ಈ ವಾರವೂ ಕೂಡ ಕಳಪೆ, ಉತ್ತಮ ಯಾರೆಂದು ಮನೆಮಂದಿ ತೀರ್ಮಾನಿಸಿದ್ದಾರೆ. ಈ ವಾರ ತುಕಾಲಿ ಸಂತೋಷ್ ಉತ್ತಮ ಎನಿಸಿಕೊಂಡರೆ, ಮನೆಯ ಬಹುಮತದೊಂದಿಗೆ ತನಿಷಾ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿಯಿಂದ ಗರ್ಭಿಣಿಯಾಗಿದ್ದಾಗಿ ಹೇಳಿಕೆ- ಈ ವಾರ ಎಲಿಮಿನೇಟ್ ಆಗೋದು ಇವರೇ..!

ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಅವರು ಕಳಪೆ ಪಟ್ಟ ಪಡೆದಿದ್ದಾರೆ. ಅವರು ಈ ವಾರದ ಒಂದು ಟಾಸ್ಕ್​ನಲ್ಲಿ ಉತ್ತಮವಾಗಿ ಆಟ ಆಡಿರಲಿಲ್ಲ. ಇದನ್ನೇ ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ಜೈಲಿನಲ್ಲಿ ಕುಳಿತು ಕಣ್ಣೀರು ಹಾಕಿದ ತನಿಷಾ!

ಇನ್ನು ಕಳಪೆ ಪಟ್ಟ ಪಡೆದು ಜೈಲು ಸೇರಿರುವ ತನಿಷಾ ಕಣ್ಣೀರು ಹಾಕಿದ್ದಾರೆ. ತಮ್ಮ ತಾಯಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಮ್ಮಾ.. ನನಗೆ ಕಳಪೆ ಕೊಟ್ರು.. ಜೈಲಿಗೆ ಹಾಕಿದ್ರು ಅಂತಾ ಬೇಜಾರು ಮಾಡ್ಕೋಬೇಡ.. ನನಗೆ ಗೊತ್ತು ನಿನಗೆ ಬೇಜಾರು ಆಗಿದೆ ಅಂತಾ ಜೋರಾಗಿ ಅತ್ತಿದ್ದಾರೆ.

ಈ ವಾರ ಭೇಷ್ ಎನಿಸಿಕೊಂಡ ತುಕಾಲಿ ಸಂತು!

ತುಕಾಲಿ ಸಂತೋಷ್ ಅವರು ಇಷ್ಟು ದಿನ ವಿನಯ್ ಅವರ ಜೊತೆ ಕಾಣಿಸಿಕೊಳ್ಳುತ್ತಾ ಬಂದಿದ್ದರು. ಈ ಕಾರಣಕ್ಕೆ ಅವರು ಟೀಕೆಗೆ ಒಳಗಾಗಿದ್ದರು. ಈ ಮೊದಲು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಎದುರಾಳಿಯಾಗಿ ವಿನಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. ವಿನಯ್ ವಿರುದ್ಧ ತೊಡೆ ತಟ್ಟಿದ್ದಾರೆ. ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ. ಇನ್ನು, ಟಾಸ್ಕ್​ನಲ್ಲಿ ಅವರು ನೀಡಿದ ಪರ್ಫಾರ್ಮೆನ್ಸ್ ಮೆಚ್ಚುಗೆ ಪಡೆದಿದೆ. ಹೀಗಾಗಿ, ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ನಾಮಿನೇಷನ್ನಿಂದ ಬಚಾವ್ ಆದ ಕಾರ್ತಿಕ್‌!

ಇನ್ನು ಪ್ರತಿ ವಾರವೂ ನಾಮಿನೇಟ್ ಆಗುತ್ತಾ ಬಂದಿರುವ ಕಾರ್ತಿಕ್ ಮಹೇಶ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗಲಿದ್ದಾರೆ. ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವೂ ಅವರಿಗೆ ಸಿಗಲಿದೆ.

Shwetha M