ತಾಂಡವ್ OUT, ಏನಿದು ಬಿಗ್ಬಾಸ್? ಲಿಖಿತ್, ಮಂಜುಗಿಂತಲೂ ಡಮ್ಮಿನಾ?

ಬಿಗ್ಬಾಸ್ ಶೋ ನೋಡಿದ್ರಾ, ಇದ್ರಲ್ಲಿ ನಿಮಗೆ ಯಾರ ಗೇಮ್ ಇಷ್ಟವಾಯ್ತು, ಇಷ್ಟವಾದವ್ರೇ ಔಟಾದ್ರು ಎಂದು ಬೇಸರವಾಯ್ತಾ, ನಿನ್ನೆಯಿಂದ ಇವತ್ತಿನವರೆಗೂ ಇದೇ ಸುದ್ದಿ. ಯಾರು ದೊಡ್ಮನೆಯಿಂದ ಹೊರಹೋಗ್ತಾರೆ ಅಂತಾ ಲೆಕ್ಕಾಚಾರ ಹಾಕಲಾಗಿತ್ತೋ ಅವ್ರು ಮನೆಯಲ್ಲೇ ಇದ್ದಾರೆ. ಯಾರು ಚೆನ್ನಾಗಿ ಆಟವಾಡಿದ್ರೋ ಅವ್ರನ್ನೇ ಮನೆಯಿಂದ ಆಚೆಹಾಕಲಾಗಿದೆ. ಹಾಗಾದ್ರೆ ಬಿಗ್ಬಾಸ್ ಶೋನಲ್ಲಿ ಜನರ ವೋಟ್ಗೆ ಬೆಲೆಯಿಲ್ವಾ, ವೀಕ್ಷಕರ ಸಪೋರ್ಟ್ ಬಿಗ್ಬಾಸ್ ಗೆ ಬೇಕಿಲ್ವಾ?, ತಾಂಡವ್ ವೋಟ್ ಮನೆಯವ್ರು ಪಡೆದರೆ, ವೀಕ್ಷಕರ ಕೈಯಲ್ಲಿ ಯಾಕೆ ವೋಟ್ ಹಾಕಿಸಬೇಕಿತ್ತು? ಅಷ್ಟಕ್ಕೂ ತಾಂಡವ್ ಮನೆಯಿಂದ ಹೊರಗೆ ಹೋಗುವಷ್ಟು ವೀಕ್ ಸ್ಪರ್ಧಿನಾ, ಇದೆಲ್ಲದರ ಬಗ್ಗೆ ನೋಡ್ತಾ ಹೋಗೋಣ ಬನ್ನಿ.
ಬಿಗ್ಬಾಸ್ ಮನೆಯಲ್ಲಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಫ್ರೆಂಡ್ಶಿಪ್ ನೋಡೋದೇ ಚೆಂದ. ಹೆಚ್ಚಿಗೆ ಮಾತಾಡದೇ, ಯಾರಿಗೂ ಹರ್ಟ್ ಮಾಡದೇ, ಟಾಸ್ಕ್ ಅಂತ ಬಂದಾಗ ಯಾರಿಗೂ ಬಗ್ಗದೇ, ತಮಾಷೆ ಅಂತಾ ಬಂದಾಗ ಯಾರಿಗೂ ನೋವು ಮಾಡದೇ, ಸಹಾಯಕ್ಕೆ ಮುಂದೆ ಬರುವ ತಾಂಡವ್ ವೀಕ್ಷಕರ ಮೆಚ್ಚುಗೆ ಪಡೆದ ಸ್ಪರ್ಧಿ. ನೀವು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ತಾಂಡವ್ ಗೆ ಸಪೋರ್ಟ್ ಮಾಡಿ ಎಂದು ಅದೆಷ್ಟೋ ವೀಕ್ಷಕರು ಪೋಸ್ಟ್ ಮಾಡ್ತಾನೇ ಇದ್ರು. ಆದ್ರೆ, ವೀಕ್ಷಕರ ಲೆಕ್ಕಾಚಾರ, ದೊಡ್ಮನೆಯಲ್ಲಿರುವ ಸ್ಪರ್ಧಿಗಳ ಲೆಕ್ಕಾಚಾರ ದಿಢೀರ್ ತಲೆಕೆಳಗಾಗಿದೆ. ಮಿಡ್ವೀಕ್ ಎಲಿಮಿನೇಟ್ ಆಗಿದ್ದು ತಾಂಡವ್ ರಾಮ್. ಲಿಖಿತ್ ಹೋಗ್ಬಹುದು, ಮಂಜು ಹೋಗ್ಬಹುದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ವೈಷ್ಣವಿ ಹೋಗಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ವೀಕ್ಷಕರು ಶಾಕ್ ಆಗಿದ್ದಾರೆ. ಅಷ್ಟೇ ಯಾಕೆ ಇದು ಸರಿಯಲ್ಲ ಬಿಗ್ಬಾಸ್ ಎಂಬ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಮಂದಿ ಹಾಕುತ್ತಿದ್ದಾರೆ..
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಶನ್ ಶಾಕ್ – ಬಿಕ್ಕಿಬಿಕ್ಕಿ ಅತ್ತ ಗಗನ್, ತಾಂಡವ್
ಬಿಗ್ ಬಾಸ್ ಮನೆಯಲ್ಲಿ ಎಂದಿಗೂ ಎಲಿಮಿನೇಷನ್ ನಡೆಯೋದು ಜನರ ವೋಟ್ ಆಧರಿಸಿಯೇ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಯಾರನ್ನೋ ಹೊರ ಕಳುಹಿಸುವ ಅಧಿಕಾರವನ್ನು ಬಿಗ್ ಬಾಸ್ ಈವರೆಗೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ ಎಂಬುದು ಎಲ್ಲರ ನಂಬಿಕೆ ಆಗಿತ್ತು. ಆದರೆ, ಈ ವಾರ ಮಾತ್ರ ವೀಕ್ಷಕರ ವೋಟ್ಗೆ ಬೆಲೆಯೇ ಸಿಕ್ಕಿರಲಿಲ್ಲ. ನಾಲ್ಕು ಸ್ಪರ್ಧಿಗಳ ಶೇ.50ರಷ್ಟು ವೋಟ್ ಕಿತ್ತುಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ಕಾವ್ಯಾ, ಆಸಿಯಾ, ಧನುಶ್ ಮತ್ತು ಶಾಸ್ತ್ರಿ ಅವರಿಗೆ ನೀಡಿದರು. ಧನುಶ್, ತಾಂಡವ್ ಒಳ್ಳೆಯ ಸ್ಪರ್ಧಿ, ಒಳ್ಳೆಯ ವ್ಯಕ್ತಿ, ಹೊರಗೆ ಸಹ ಒಳ್ಳೆಯ ಫಾಲೋವರ್ ಇರುವ ನಟ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಮತ ಸಿಕ್ಕಿರುತ್ತದೆ ಎಂದು ಲೆಕ್ಕಾಚಾರ ಹಾಕಿ ತಾಂಡವ್ ಹೆಸರನ್ನು ತೆಗೆದುಕೊಂಡರು. ಆದರೆ, ತಾಂಡವ್ ಕೊನೆಗೂ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಗೆ ಬಂದರು. ತಾಂಡವ್ ಹಾಗೂ ಸೌಂದರ್ಯಾ ಕೊನೆಯ ಸ್ಪರ್ಧಿಗಳಾಗಿ ಉಳಿದುಕೊಂಡಾಗ, ಗಗನ್ ಕಣ್ಣೀರು ಹಾಕಿದರು. ತಾಂಡವ್ ಅವರನ್ನು ಉಳಿಸಿ ಎಂದು ಅಳುತ್ತಾ ಬಿಗ್ಬಾಸ್ ಬಳಿ ಬಿಕ್ಕಿ ಬಿಕ್ಕಿ ಕಣ್ೞೀರು ಬಾಕಿದರು. ಬಿಗ್ಬಾಸ್ ಇದು ಸರಿಯಲ್ಲ ಎಂದು ಮನವಿ ಮಾಡಿಕೊಂಡಿದ್ದರು.
ಇಲ್ಲಿ ಒಂದು ಗಮನಿಸಬೇಕಾದ ವಿಚಾರ ಎಂದರೆ ಎಲಿಮಿನೇಶನ್ ಆದಾಗಲೂ ತಾಂಡವ್ ಸಮಾಧಾನದಿಂದ ನಿಂತ ರೀತಿ. ತಲೈವಾ ಡೈಲಾಗ್ ಹೊಡೆದ ತಾಂಡವ್ ಮಾತಾನಾಡಿದ್ದು ಕೂಡಾ ಎಲ್ಲರ ಮನಗೆದ್ದಿತ್ತು. ನಂತರ ನಗುತ್ತಾ ಎಲ್ಲರಿಗೂ ಸಮಾಧಾನ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲೂ ಗಗನ್ ಮತ್ತು ತಾಂಡವ್ ಸ್ನೇಹ ವೀಕ್ಷಕರಿಗೂ ಇಷ್ಟವಾಯ್ತು. ಆದರೆ, ಇಲ್ಲಿ ವೀಕ್ಷಕರು ಗರಂ ಆಗಿದ್ರಲ್ಲೂ ಅರ್ಥವಿದೆ. ಈಗ ಇರೋ ಸ್ಪರ್ಧಿಗಳಲ್ಲಿ ಲಿಖಿತ್ ಚೆನ್ನಾಗಿ ಆಡ್ತಿಲ್ಲ. ಹುಡುಗಿಯರಿಗೆ ಕಮೆಂಟ್ ಹೊಡೆಯೋದು ಬಿಟ್ರೆ ದುರಂಹಕಾರ ಮೆರೆಯುತ್ತಿದ್ದಾನೆ. ಇನ್ನು ಮಹಾಕವಿ ಮಂಜ. ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅಷ್ಟೆಲ್ಲಾ ಬುದ್ದಿ ಹೇಳಿದ್ರೂ ಮಂಜ ಬದಲಾಗಿಲ್ಲ. ಇನ್ನು ವೈಷ್ಣವಿ. ಇವ್ರು ಮನೆಯೊಳಗೆ ಇರೋದೇ ಗೊತ್ತಾಗಲ್ಲ. ಅವಿನಾಶ್ ಕೂಡಾ ಅಷ್ಟಕ್ಕಷ್ಟೇ. ಎಲಿಮಿನೇಟ್ ಮಾಡಲು ಇಷ್ಟೆಲ್ಲಾ ಆಪ್ಶನ್ ಇದ್ದಾಗಲೂ ತಾಂಡವ್ ಯಾಕೆ? ಇದು ವೀಕ್ಷಕರು ಬಿಗ್ಬಾಸ್ ಬಳಿ ಕೇಳ್ತಿರೋ ಪ್ರಶ್ನೆ. ಇದಕ್ಕೆ ನೀವು ಏನ್ ಹೇಳ್ತೀರಾ ಫ್ರೆಂಡ್ಸ್. ತಾಂಡವ್ ಎಲಿಮಿನೇಟ್ ಆಗಿರೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಕಾಮೆಂಟ್ ಮಾಡಿ.
ನಮಸ್ಕಾರ.

ನೋಡಿರಿ

