ತಮಿಳು ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ – ಖಿನ್ನತೆಯಿಂದ ಬಳಲುತ್ತಿದ್ದ ಮಗಳು ನೇಣಿಗೆ ಶರಣು..!

ತಮಿಳು ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ – ಖಿನ್ನತೆಯಿಂದ ಬಳಲುತ್ತಿದ್ದ ಮಗಳು ನೇಣಿಗೆ ಶರಣು..!

ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆಗೆ  ಶರಣಾಗಿದ್ದಾರೆ. ವಿಜಯ್ ಆಂಟೋನಿ ಅವರ ಮಗಳು ಮೀರಾ ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ, ಮೀರಾ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಮೊದಲ ಪ್ರೀತಿಗೆ ಮನೆಯವರಿಂದ ಸಿಕ್ಕಿದ್ದು ಬೈಗುಳ –ಲವ್ ಸ್ಟೋರಿ ಬಗ್ಗೆ ಬಾಯ್ಬಿಟ್ಟ ನಟಿ ಸಾಯಿಪಲ್ಲವಿ

ಹನ್ನೆರಡನೇ ತರಗತಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ವಿಜಯ್ ಆಂಟೋನಿ ಪುತ್ರಿ ಮೀರಾಗೆ  16ರ ವಯಸ್ಸು. ಮೀರಾ ಬೆಳಗ್ಗಿನ ಜಾವ 3 ಗಂಟೆಗೆ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಕೋಣೆಯ ಬಾಗಿಲು ತುಂಬಾ ಹೊತ್ತಾದರೂ ತೆರೆಯದೇ ಇರುವ ಕಾರಣಕ್ಕಾಗಿ, ಬಾಗಿಲು ತೆರೆದು ನೋಡಿದಾಗ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೀರಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಮೀರಾ ಪ್ರಾಣಬಿಟ್ಟಿದ್ದರು.

ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ವಿಜಯ್ ಆಂಟೋನಿ ಮತ್ತು ಫಾತಿಮಾ ದಂಪತಿಯ ಮೊದಲ ಮಗು ಮೀರಾ. ಈ ದಂಪತಿಗೆ ಮತ್ತೊಬ್ಬ ಮಗಳಿದ್ದಾಳೆ. ಆಕೆಯ ಹೆಸರು ಲಾರಾ.

ವಿಜಯ್ ಆಂಟೋನಿ ಜನಪ್ರಿಯ ಸಂಗೀತ ಸಂಯೋಜಕರಾಗಿದ್ದು, ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಸಂಗೀತ ಸಂಯೋಜಕರಾಗಿದ್ದ ಅವರು ನಿರ್ಮಾಪಕ, ನಟ, ಗೀತರಚನೆಕಾರ, ಸಂಪಾದಕ, ಆಡಿಯೊ ಎಂಜಿನಿಯರ್ ಮತ್ತು ನಿರ್ದೇಶಕರೂ ಆಗಿದ್ದರು. ವಿಜಯ್ ಅವರು ಫಾತಿಮಾ ಎಂಬುವವರನ್ನು ಮದುವೆಯಾಗಿದ್ದರು. ಫಾತಿಮಾ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ

Sulekha