ಹೃದಯಾಘಾತದಿಂದ ಕನ್ನಡ, ತಮಿಳು ನಟ ಡ್ಯಾನಿಯಲ್​​ ಬಾಲಾಜಿ ನಿಧನ

ಹೃದಯಾಘಾತದಿಂದ ಕನ್ನಡ, ತಮಿಳು ನಟ ಡ್ಯಾನಿಯಲ್​​ ಬಾಲಾಜಿ ನಿಧನ

ತಮಿಳಿನ ಖ್ಯಾತ ಖಳ ನಟ, ಕನ್ನಡದ ಕಿರಾತಕ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯಿಸಿದ್ದ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.

ಶುಕ್ರವಾರ ಡೇನಿಯಲ್‌ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥರಾಗಿದ್ದ ನಟನನ್ನು ಚೈನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಟ ಡೇನಿಯಲ್‌ ಅವರು ಮೃತಪಟ್ಟಿದ್ದಾರೆ. ಶನಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಚಿನ್ನಸ್ವಾಮಿಯಲ್ಲಿ ಗೆದ್ದು ಬೀಗಿದ ಕೆಕೆಆರ್​ ಟೀಮ್​​

ಡೇನಿಯಲ್‌ ಅವರು ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ಕಾಖ ಕಾಖ’ ಸಿನಿಮಾದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡು ಅವರು ಗಮನ ಸೆಳೆದಿದ್ದರು. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರ ಅಗಲುವಿಕೆಯಿಂದ ಎಲ್ಲರೂ ಶಾಕ್​ಗೆ ಒಳಗಾಗುವಂತೆ ಆಗಿದೆ.

ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಂಡರು. ಅವರು ಕಮಲ್ ಹಾಸನ್ ಅವರ ಹಿಸ್ಟಾರಿಕ್ ಡ್ರಾಮಾ ‘ಮರುಢನಯಗಂ’ ಸಿನಿಮಾದಲ್ಲಿ  ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಈ ಸಿನಿಮಾ ಅರ್ಧಕ್ಕೆ ನಿಂತಿತು. ಡ್ಯಾನಿಯಲ್ ಬಾಲಾಜಿ ಅವರು ‘ಚಿತ್ತಿ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು.

ನಂತರದ ದಿನಗಳಲ್ಲಿ ಬಾಲಾಜಿ ಅವರಿಗೆ ಕಮಲ್ ಹಾಸನ್ ಜೊತೆ ನಟಿಸೋ ಅವಕಾಶ ಸಿಕ್ಕಿತು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದು ಬಂದರು. ಮಮ್ಮೂಟಿ ನಟನೆಯ ‘ಬ್ಲ್ಯಾಕ್’ ಸಿನಿಮಾದಲ್ಲಿ ಬಾಲಾಜಿ ಬಣ್ಣ ಹಚ್ಚಿದ್ದರು. ಮೋಹನ್​ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು.

Shwetha M