ತಮಿಳು ನಟ ಮದುವೆ ಆಗದೇ ಇರಲು ಸಲ್ಮಾನ್ ಖಾನ್, ಪ್ರಭಾಸ್ ಕಾರಣ! – ದಕ್ಷಿಣದ ಸ್ಟಾರ್ ಹೀಗ್ಯಾಕೆ ಹೇಳಿದ್ದು?  

ತಮಿಳು ನಟ ಮದುವೆ ಆಗದೇ ಇರಲು ಸಲ್ಮಾನ್ ಖಾನ್, ಪ್ರಭಾಸ್ ಕಾರಣ! – ದಕ್ಷಿಣದ ಸ್ಟಾರ್ ಹೀಗ್ಯಾಕೆ ಹೇಳಿದ್ದು?  

ನಟ ಸಲ್ಮಾನ್ ಖಾನ್ ಹಾಗೂ ಪ್ರಭಾಸ್ ಇನ್ನೂ ಮದುವೆ ಆಗಿಲ್ಲ.. ಮದುವೆ ವಯಸ್ಸು ಮೀರಿ ಹೋಗಿದೆ. ಆದ್ರೂ ಕೂಡ ಮದುವೆ ಬಗ್ಗೆ ಯೋಚನೆ ಮಾಡಿಲ್ಲ.. ಮಾದುವೆ ಯಾಕೆ ಆಗಿಲ್ಲ ಅಂತಾ ಕೂಡ ಇವರಿಬ್ಬರು ಕಾರಣ ಹೇಳಿಲ್ಲ.. ಆದ್ರೆ ಫ್ಯಾನ್ಸ್‌ ಮಾತ್ರ ಇವರಿಬ್ಬರು ಮದುವೆ ಯಾವಾಗ ಆಗ್ತಾರೆ ಅಂತಾ ಕಾಯ್ತಾ ಇದ್ದಾರೆ. ಇದೀಗ ಈ ಸ್ಟಾರ್‌ ನಟರು ಮದುವೆ ಆದ್ರೆ ಮಾತ್ರ ತಾನು ಮದುವೆ ಆಗೋದು ಅಂತಾ ಹೇಳಿದ್ದಾರೆ.

ಇದನ್ನೂ ಓದಿ: 20,000 ರೂಪಾಯಿ ಬೆಲೆಯ ಟಿಕೆಟ್ 8 ಲಕ್ಷಕ್ಕೆ ಸೇಲ್ – ಭಾರತ, ಪಾಕಿಸ್ತಾನ ನಡುವೆ ಪಂದ್ಯದ ಟಿಕೆಟ್ ಗಳು ಭರ್ಜರಿ ಡಿಮ್ಯಾಂಡ್

ಸಲ್ಮಾನ್ ಖಾನ್, ಪ್ರಭಾಸ್ ಹಾಗೂ ಸಿಂಬು ಮದುವೆ ಆಗದೇ ತಾನು ಮದುವೆ ಆಗೋದಿಲ್ಲ ಅಂತಾ ಹೇಳಿದ್ದು ಬೇರಾರೂ ಅಲ್ಲ ತಮಿಳು ನಟ ವಿಶಾಲ್.. ಹೌದು, ನಟ ವಿಶಾಲ್ ಅವರಿಗೆ 46 ವರ್ಷ. ಅವರಿನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅವರ ಮದುವೆ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಅವರು ಯಾವಾಗ ಮದುವೆ ಆಗುತ್ತಾರೆ? ಅವರು ಮದುವೆ ಆಗೋ ಹುಡುಗಿ ಹೇಗಿರುತ್ತಾಳೆ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಆದರೆ, ಪ್ರತಿ ಬಾರಿ ಅವರು ಒಂದಲ್ಲ ಒಂದು ಕಾರಣ ನೀಡಿ ಈ ವಿಚಾರದಿಂದ ತಪ್ಪಿಸಿಕೊಳ್ಳುತ್ತಾರೆ. ಈಗ ವಿಶಾಲ್ ಅವರಿಗೆ ಮದುವೆ ಬಗ್ಗೆ ಕೇಳಲಾಗಿದೆ. ‘ಸಲ್ಮಾನ್ ಖಾನ್, ಸಿಂಬು ಹಾಗೂ ಪ್ರಭಾಸ್ ಮದುವೆ ಆದ ಬಳಿಕವೇ ನಾನು ಮದುವೆ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ವಿಶಾಲ್‌ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ‘ವಿಶಾಲ್ ಅವರ ಜೀವನದಲ್ಲಿ ಮದುವೆ ಚಾಪ್ಟರ ಇರುವುದೇ ಇಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ವಿಶಾಲ್​ ತಮಗೆ ಹೊಂದಿಕೆ ಆಗೋ ಹುಡುಗಿಯ ಹುಡುಕಾಟದಲ್ಲಿ ಇದ್ದಾರಂತೆ.

Shwetha M