ಧ್ರುವಂತ್‌ ಮೋಸದ ಉಸ್ತುವಾರಿ! – ಫಿನಾಲೆ ಟಾಸ್ಕ್‌ನಿಂದ ಹೊರ ಬಿದ್ದ ಗಿಲ್ಲಿನಟ?

ಧ್ರುವಂತ್‌ ಮೋಸದ ಉಸ್ತುವಾರಿ! – ಫಿನಾಲೆ ಟಾಸ್ಕ್‌ನಿಂದ ಹೊರ ಬಿದ್ದ ಗಿಲ್ಲಿನಟ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಫಿನಾಲೆ ಹಂತಕ್ಕೆ ತಲುಪಿದೆ. ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ನಡಿತಾ ಇದೆ. ಈ ವಾರ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಈ ವಾರ ಕ್ಯಾಪ್ಟನ್‌ ಆಗಿ ಆಯ್ಕೆಯಾದವರು ಫಿನಾಲೆ ಟಾಸ್ಕ್‌ಗೆ ಆಯ್ಕೆಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ಆದ್ರೀಗ ಗಿಲ್ಲಿಗೆ ಹಿನ್ನಡೆಯಾಗಿದೆ. ಟಾಸ್ಕ್‌ ವೇಳೆ ಗಿಲ್ಲಿಗೆ ಮೋಸ ಆಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್! – ಇನ್ಮುಂದೆ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ಇಲ್ಲ!

ಹೌದು, ಬಿಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದಾರೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ. ಈ ಟಾಸ್ಕ್‌ನಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಭಾಗವಹಿಸಿದ್ರೆ, ಧ್ರುವಂತ್‌ ಕಾವ್ಯ ಉಸ್ತುವಾರಿ ಆಗಿದ್ದಾರೆ. ಆದ್ರೀಗ ಧ್ರುವಂತ್‌ ಉಸ್ತುವಾರಿಯಲ್ಲಿ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲ ಕಾವ್ಯಗೆ ಬಾಯ್ ಮುಚ್ಕೊಂಡ್ ಕೂತ್ಕೋ ಎಂದೂ ಹೇಳಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ ಸುರಂಗದಲ್ಲಿರುವ ಪೈಪ್‌ವನ್ನು ತೆಗೆದು, ದಾರಿಯಲ್ಲಿ ಸರಿ ಪಡಿಸಿಕೊಳ್ಳಬೇಕು. ಮೊದಲು ಘಂಟೆ ಬಾರಿಸುವ ಜೋಡಿ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ಅರ್ಹತೆ ಪಡೆಯುತ್ತದೆ. ಈ ವೇಳೆ ಹತ್ತು ಸೆಕೆಂಡ್‌ ಧ್ರುವಂತ್‌ ಅವರು ಗಿಲ್ಲಿ ಅವರ ಆಟವನ್ನು Pause ಮಾಡಿದ್ದಾರೆ. ಈ ಬಗ್ಗೆ ರಾಶಿಕಾ ಅವರಿಗೆ ಸಿಟ್ಟು ಬಂದಿದೆ. ರಕ್ಷಿತಾ ಕೂಡ ಅನ್‌ಫೇರ್‌ ಎಂದಿದ್ದಾರೆ. ಕಾವ್ಯ ಕೂಡ ಗಿಲ್ಲಿ ಪರ ನಿಂತಿದ್ದಾರೆ. ಈ ವೇಳೆ ಧ್ರುವಂತ್‌ ಅವರು ಗಿಲ್ಲಿಗೆ ಬಾಯ್ ಮುಚ್ಕೊಂಡ್ ಕೂತ್ಕೋ, ನಾನ್ ಮಾಡ್ತೀನಿ ಎಂದಿದ್ದಾರೆ.

ಮೊದಲಿಗೆ ಸ್ಪಂದನಾ ಮತ್ತು ರಾಶಿಕಾ ನಡುವೆ ಬಿಲ್ಲೆಯ ಟಾಸ್ಕ್ ಒಂದು ನಡೆಯಿತು. ರಾಶಿಕಾ ತೋಳ್ಬಲ ಬಳಸಿ ಸ್ಪಂದನಾ ಗೆಲ್ಲದಂತೆ ತಡೆದರು ಮಾತ್ರವಲ್ಲದೆ ಕಡಿಮೆ ಬಿಲ್ಲೆಗಳಿದ್ದರೂ ಸಹ ಗೆದ್ದು ಕ್ಯಾಪ್ಟನ್ಸಿ ರೇಸಿಗೆ ಆಯ್ಕೆ ಆದರು. ಬಳಿಕ ಪುರುಷ ಸ್ಪರ್ಧಿಗಳಿಗೆ ಟಾಸ್ಕ್ ಆಯೋಜನೆ ಆಯ್ತು. ಈ ಟಾಸ್ಕ್​​ನಲ್ಲಿ ಧನುಶ್ ಭರ್ಜರಿ ಮುನ್ನಡೆಯಿಂದ ಗೆದ್ದರು. ದ್ವಿತೀಯ ಸ್ಥಾನ ಪಡೆದಿದ್ದು ರಘು, ತೃತೀಯ ಸ್ಥಾನ ಧ್ರುವಂತ್ ಪಡೆದರು.

ಗಿಲ್ಲಿಗೆ ರಘು ಕ್ಯಾಪ್ಟನ್ಸಿ ರೇಸಿಗೆ ಆಯ್ಕೆ ಆಗಬೇಕಿತ್ತು ಆದರೆ ಅಶ್ವಿನಿ ಧ್ರುವಂತ್ ಪರವಾಗಿ ನಿಂತಿದ್ದರು. ಬಹಳ ಹೊತ್ತು ಚರ್ಚೆ, ಜಗಳ, ವಾಗ್ವಾದ ನಡೆಯಿತು. ಅಂತಿಮವಾಗಿ ರಘು ಅವರನ್ನು ಆಯ್ಕೆ ಮಾಡಲಾಯ್ತು.

Shwetha M