ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಕಾನೂನು ಬದ್ಧ – ಬಾಂಗ್ಲಾದ ಹೊಸ ಕಾನೂನಿಗೆ ಬೆಚ್ಚಿದ ಮಹಿಳೆಯರು

ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಕಾನೂನು ಬದ್ಧ – ಬಾಂಗ್ಲಾದ ಹೊಸ ಕಾನೂನಿಗೆ ಬೆಚ್ಚಿದ ಮಹಿಳೆಯರು

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದು, ಈ  ಸರ್ಕಾರದಲ್ಲಿ ತಾಲಿಬಾನಿಗಳು ಇದೀಗ ಹೊಸದೊಂದು ಕಾನೂನು ಜಾರಿಗೆ ತಂದಿದ್ದಾರೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಪರಿಚಯಿಸಿದ ಹೊಸ ದಂಡ ಸಂಹಿತೆಯು, ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ.

ಮೂಳೆಗಳು ಮುರಿಯದ ರೀತಿಯಲ್ಲಿ ಗಂಡ ತನ್ನ ಹೆಂಡತಿ ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಲು ಈ ಕಾನೂನು ಅನುವು ಮಾಡಿಕೊಡುತ್ತದೆ. ಇದರಿಂದ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚನೀಯಗೊಳ್ಳಲಿದೆ. ತಾಲಿಬಾನಿಗಳ ಹೊಸ ಕಾನೂನಿನ ಅನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.

ಇದನ್ನೂ ಓದಿ: ಉತ್ತರಾಖಂಡ ವಿರುದ್ಧ ದಾಖಲೆಯ ರನ್ ಗಳಿಸಿಯೂ ಪಂದ್ಯ ಡ್ರಾ – ರಣಜಿ ಫೈನಲ್ ಗೆ ಕರ್ನಾಟಕ!

ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಥಳಿಸಲು ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಒಂದು ವೇಳೆ ಗಂಡ ಮೂಳೆ ಮುರಿಯುವಂತೆ ಹೆಂಡತಿಗೆ ಬಾರಿಸಿದರೆ ಗರಿಷ್ಠ 15 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಮತ್ತೊಂದೆಡೆ, ವಿವಾಹಿತ ಮಹಿಳೆ ತನ್ನ ಗಂಡನ ಅನುಮತಿಯಿಲ್ಲದೆ ತನ್ನ ಸಂಬಂಧಿಕರನ್ನು ಭೇಟಿ ಮಾಡಿದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ಅಲ್ಲದೇ ತನ್ನ ವಿರುದ್ಧದ ಕೌಟುಂಬಿಕ ಹಿಂಸೆಯನ್ನು ಸಾಬೀತುಪಡಿಸಲು, ಕಡ್ಡಾಯವಾಗಿ ತನ್ನ ಗಂಡನ ಜೊತೆಗೆ ಆಕೆ ನ್ಯಾಯಾಲಯಕ್ಕೆ ಬರಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ.

ಹೊಸ ದಂಡ ಸಂಹಿತೆಯ 9ನೇ ವಿಧಿಯು ಅಫ್ಘಾನ್‌ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸುತ್ತದೆ: ಧಾರ್ಮಿಕ ವಿದ್ವಾಂಸರು (ಉಲಮಾ), ಗಣ್ಯರು (ಅಶ್ರಫ್), ಮಧ್ಯಮ ವರ್ಗ ಮತ್ತು ಕೆಳವರ್ಗ. ಈ ವ್ಯವಸ್ಥೆಯಡಿಯಲ್ಲಿ ಒಂದೇ ಅಪರಾಧಕ್ಕೆ ಶಿಕ್ಷೆಯನ್ನು ಇನ್ನು ಮುಂದೆ ಪ್ರಾಥಮಿಕವಾಗಿ ಅಪರಾಧದ ಸ್ವರೂಪದಿಂದ ನಿರ್ಧರಿಸಲಾಗುವುದಿಲ್ಲ, ಬದಲಿಗೆ ಆರೋಪಿಯ ಸಾಮಾಜಿಕ ಸ್ಥಾನಮಾನದಿಂದ ನಿರ್ಧರಿಸಲಾಗುತ್ತದೆ.

Kishor KV

Leave a Reply

Your email address will not be published. Required fields are marked *