ಪಾಕ್ ಬಂಡವಾಳ ಬಿಚ್ಚಿಟ್ಟ ಅಪ್ಘಾನ್!- ಟ್ರಂಪ್‌ಗೆ ತಾಲಿಬಾನ್ ಕ್ಲ್ಯೂ ಕೊಡ್ತಾ?
ಉ*ಗ್ರರ ವಿರುದ್ಧ ಅಮೆರಿಕ ಆಯುಧ!
ಪಾಕಿಸ್ತಾನ ಅಂದ್ರೆ ಫಟ್ ಅಂದ ನೆನೆಪಿಗೆ ಬರೋದು ಅದು ದೇಶಕ್ಕಿಂತ ಹೆಚ್ಚಾಗಿ ಭಯೋತ್ಪಾದಕರ ಕೊಂಪೆ ಅನ್ನೋದು.. ಯಾಕಂದ್ರೆ ಪಾಕಿಸ್ತಾನ ಭಯೋತ್ಪಾದಕರನ್ನ ತಯಾರಿಸೋ ಫ್ಯಾಕ್ಟರಿಯಾಗಿದೆ.. ಈ ವಿಷ್ಯ ಹೊಸದೇನು ಅನ್ನೋ.. ಈ ಆರೋಪವನ್ನ ಈಗ ತಾಲಿಬಾನ್ ಮಾಡಿರೋವುದು ವಿಶ್ವವನ್ನ ಬೆರಗು ಮಾಡಿದೆ. ತಾಲಿಬಾನ್ ಕೂಡ ಭಯೋತ್ಪಾದಕ ಸಂಘಟನೆ ಅಂತ ಗುರುತ್ತಿಸಿಕೊಂಡಿದೇ, ಅದೇ ಹೇಗೆ ಪಾಕ್ ಮೇಲೆ ಆರೋಪ ಮಾಡ್ತು ಅನ್ನೋದನ್ನ ನೀವು ನನಗೆ ಕೇಳಬಹುದು.. ಆದ್ರೆ ಒಂದು ಕಾಲದಲ್ಲಿ ಹೀಗೆ ಇತ್ತು. ಆದ್ರೆ ಈ ಅಫ್ಘಾನ್ ಅಧಿಕಾರವನ್ನ ಹಿಡಿದಿರೋದೇ ತಾಲಿಬಾನ್.. ಹೀಗಾಗಿ ತಾಲಿಬಾನ್ ಕೂಡ ಪಾಕ್‌ನಲ್ಲಿರೋ ಭಯೋತ್ಪಾದಕರ ವಿರುದ್ಧ ಸೆಟೆದು ನಿಂತಿದ್ದು, ಪಾಕ್ ಬಣ್ಣ ಬಯಲು ಮಾಡಿದೆ.
ಇದನ್ನೂ ಓದಿ: ಕಣ್ಣೀರು ಹಾಕಿದ್ರೆ ಕಪ್ ಗೆಲ್ತಾರಾ? – ಭವ್ಯಾ ನಾಟಕ ವೀಕ್ಷಕರಿಂದಲೇ ಬಯಲು?
ಅಂದಹಾಗೇ ಅಮೆರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಿದ್ದಾರೆ. ಬಂದ ಕೂಡಲೇ ಸಾಕಷ್ಟು ಬೆಳವಣಿಗಳು ಕೂಡ ಆಗಿವೆ. ಈ ನಡುವೆ ಟ್ರಂಪ್ ತಾಲಿಬಾನ್‌ಗೆ ಏನ್ ಹೇಳಿದ್ದಾರೆ ಅಂದ್ರೆ. 2021ರಲ್ಲಿ ನಾವು ಅಘ್ಘಾನ್‌ನಿಂದ ವಾಪಸ್ ಬರುವಾಗ ಬಿಟ್ಟು ಬಂದಿರೋ ಅಮೆರಿಕದ 7 ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಟ್ರಂಪ್ ಹೇಳಿದ್ದಾರೆ. ನೀವು ಒಂದು ವೇಳೆ ವಾಪಸ್ ನೀಡಿಲ್ಲ ಅಂದ್ರೆ, ನಾವು ಎಲ್ಲಾ ಹಣಕಾಸಿನ ನೆರವನ್ನ ನಿಲ್ಲಿಸುತ್ತೇವೆ ಅಂತ ಟ್ರಂಪ್ ಹೇಳಿದ್ದಾರೆ.. ಆದ್ರೆ ಇದಕ್ಕೆ ಉತ್ತರ ಕೊಟ್ಟ ತಾಲಿಬಾನ್.. ಇಲ್ಲ ಇಲ್ಲ ಅದು ಸಾಧ್ಯನೇ ಇಲ್ಲ.. ನಾವು ನಿಮ್ಮ ಯಾವುದೇ ಶಸ್ತ್ರಾಸ್ತ್ರಗಳನ್ನ ವಾಪಸ್ ಕೊಡುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ನಾವು ಕೂಡ ಉಗ್ರರ ವಿರುದ್ದ ಹೋರಾಡುತ್ತಿದ್ದೇವೆ.. ಪಾಕಿಸ್ತಾನದಲ್ಲಿರೋ ಭಯೋತ್ಪದಕರ ವಿರುದ್ಧ ಹೋರಾಡುವುದಕ್ಕೆ ನಮಗೆ ಇನ್ನೂ ಕೂಡ ಹೆಚ್ಚಿನ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಅಪ್ಡೆಟ್ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ತಾಲಿಬಾನ್ ಹೇಳಿದೆ. ನೀವು ಮತ್ತಷ್ಟು ಮಿಲಿಟರಿ ಸಾಮಾಗ್ರಿಗಳನ್ನ ನೀಡಬೇಕು ಎಂದಿದೆ. ಅಷ್ಟೇ ಅಲ್ಲ ಪಾಕಿಸ್ತಾನ ಭಯೋತ್ಪದಕರಿಗೆ ಟ್ರೈನಿಂಗ್ ಕೊಡುತ್ತಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ.. ಹೀಗಾಗಿ ನಿಮ್ಮ ವೆಪನ್‌ಗಳನ್ನ ವಾಪಸ್ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ತಾಲಿಬಾನ್ ಹೇಳಿದೆ.. ಇದನ್ನ ನೋಡಿದ್ರೆ ತಾಲಿಬಾನ್ ಕೂಡ ಪಾಕ್ ವಿರುದ್ಧ ಸಮರ ಸಾರಿದ್ದು, ಭಯೋತ್ಪದಕರ ಹುಟ್ಟು ಅಡಗಿಸೋಕೆ ಸೆಟೆದು ನಿಲ್ಲುತ್ತಿದೆ.. ಆದ್ರೆ ಕಮಂಗಿ ಪಾಕ್ ಮಾತ್ರ ತನ್ನ ನೆಲದಲ್ಲಿ ಭಯೋತ್ಪದರಿಗೆ ಟ್ರೈನಿಂಗ್ ಕೊಡುತ್ತಾ, ತನ್ನ ಶತ್ರು ದೇಶಗಳ ವಿರುದ್ಧ ಚೂ ಬಿಡುತ್ತಿದೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ, ಪಾಕ್ ಬಗ್ಗೆ ತಾಲಿಬಾನ್ ಟ್ರಂಪ್‌ಗೆ ಕ್ಲ್ಯೂ ಕೊಟ್ಟಿದೆ ಅನ್ನೋದು.. ಹಾಗಿದ್ರೆ ಅಘ್ಘಾನ್‌ನಲ್ಲಿ ಅಮೆರಿಕದ ಏನೆಲ್ಲಾ ಮಿಲಿಟರಿ ವಸ್ತುಗಳಿವೆ ಅನ್ನೋದನ್ನ ನೋಡೋದಾದ್ರೆ..
ಉತ್ತರ ಅಫ್ಘಾನಿಸ್ತಾನದ ಮಝಾರ್-ಎ-ಷರೀಫ್ ಪಟ್ಟಣ ಸೇರಿದಂತೆ ಸಾಕಷ್ಟು ಪ್ರದೇಶಗಳು ತಾಲಿಬಾನಿಗಳ ವಶವಾಗುವ ಕೆಲವೇ ಗಂಟೆಗಳಿಗೆ ಮೊದಲು ಅಲ್ಲಿದ್ದ ಅಫ್ಘಾನ್ ಸೇನೆಯ ಯೋಧರು ನೆರೆಯ ಉಜ್ಬೆಕಿಸ್ತಾನಕ್ಕೆ ಓಡಿಹೋಗಿದ್ದರು. ಯಾವುದೇ ಸೇನೆ ಸೋತು ಹಿಮ್ಮೆಟ್ಟುವಾಗ ತನ್ನ ವಶದಲ್ಲಿದ್ದ ಯುದ್ಧೋಪಕರಣಗಳು ಶತ್ರುಗಳ ಕೈವಶವಾಗಬಾರದೆಂದು ಅವನ್ನು ನಾಶಪಡಿಸುವುದು ವಾಡಿಕೆ. ಆದರೆ ಅಫ್ಘಾನಿಸ್ತಾನದಲ್ಲಿ ಹಾಗಾಗಲಿಲ್ಲ.. ಅಫ್ಘಾನ್ ಸೇನೆಯು ನಿರ್ವಹಿಸುತ್ತಿದ್ದ ಅಮೆರಿಕ ನಿರ್ಮಿತ ಅತ್ಯಾಧುನಿಕ ಸಶಸ್ತ್ರ ವಾಹನಗಳು, ಫಿರಂಗಿ ಸೇರಿ ಸಾಕಷ್ಟು ಯುದ್ಧೋಪಕರಣಗಳು ಇದೀಗ ತಾಲಿಬಾನಿಗಳ ವಶವಾದ್ವು. ಕಾಬೂಲ್ ಹೊರವಲಯದ ಸೇನಾ ನೆಲೆಗಳಲ್ಲಿದ್ದ ಬ್ಲಾಕ್ಹಾಕ್ ಹೆಲಿಕಾಪ್ಟರ್ ಸೇರಿದಂತೆ ಹತ್ತಾರು ಬಗೆಯ ಅತ್ಯಾಧುನಿಕ ಯುದ್ಧೋಪಕರಣಗಳು ತಾಲಿಬಾನ್ ಕೈವಶವಾದವು. ತಾಲಿಬಾನ್ ಕೈಗೆ ಸಿಕ್ಕಿರುವ ಇಂಥ ಆಯುಧಗಳ ಮೌಲ್ಯ 7 ಶತಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಆ ಟೈಂನಲ್ಲಿ ತನಗೆ ಇಂಥ ಆಯುಧ ಅಥವಾ ಯುದ್ಧೋಪಕರಣ ಸಿಕ್ಕಿದೆ ಎಂಬುದನ್ನು ಸಾರಿ ಹೇಳಲೂ ತಾಲಿಬಾನ್ ಮುಂದೆ ಮುಂದೆ ನೋಡಿರಲಿಲ್ಲ. ರೈಫಲ್, ಹೆಲಿಕಾಪ್ಟರ್, ಟ್ರಕ್, ಹಮ್ವೀ, ಆರ್ಟಿಲರಿ ಗನ್, ನೈಟ್ ವಿಷನ್ ಗಾಗಲ್ಸ್ಗಳೊಂದಿಗೆ ತಾಲಿಬಾನಿಗಳು ಫೋಟೊ ತೆಗೆಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರು. ಹಾಗೇ ಅಫ್ಘಾನಿಸ್ತಾನದ ನೆಲದಿಂದ ವಾಪಸ್ ಹೋಗುವುದು ಖಚಿತವಾಗುತ್ತಿದ್ದಂತೆಯೇ ಅಮೆರಿಕ ಸೇನೆಯು ವಿಮಾನ, ಭಾರಿ ಆಯುಧಗಳು ಮತ್ತು ಹಲವು ಅತ್ಯಾಧುನಿಕ ಉಪಕರಣಗಳನ್ನು ಮರಳಿ ತನ್ನ ದೇಶಕ್ಕೆ ಸಾಗಿಸುವ ಕಾರ್ಯಕ್ಕೆ ಚಾಲನೆ ನೀಡಿತು. ಕೆಲ ಯುದ್ಧೋಪಕರಣಗಳ ಬಿಡಿಭಾಗಗಳನ್ನು ಕಳಚಲಾಯಿತು. ಆದರೆ 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ತಂದು, ಅಳವಡಿಸಿರುವ ಆಯುಧಗಳನ್ನು ಏಕಾಏಕಿ ವಾಪಸ್ ತೆಗೆದುಕೊಂಡು ಹೋಗುವುದು ಹೇಗೆ ಸಾಧ್ಯ? ಹೀಗಾಗಿಯೇ ಬಹುಪಾಲು ಯುದ್ಧೋಪಕರಣಗಳನ್ನು ತಾನೇ ತರಬೇತಿ ನೀಡಿದ್ದ ಅಫ್ಘಾನ್ ಸೇನೆಯ ವಶಕ್ಕೆ ಕೊಟ್ಟಿತ್ತು. ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಆಯುಧಗಳು ತಾಲಿಬಾನ್ ಕೈವಶವಾಗಿತ್ತು.. ಇದ್ರಲ್ಲಿ 150ಕ್ಕೂ ಹೆಚ್ಚು ವಿಮಾನಗಳಿದ್ದವು. ಈ ಪೈಕಿ ನಾಲ್ಕು ಸಿ-130 ಸರಕು ಸಾಗಣೆ ವಿಮಾನಗಳು, 23 ಬ್ರೆಜಿಲ್ ನಿರ್ಮಿತ ಎ-29 ಸೂಪರ್ ಟಕಾನೊ ದಾಳಿ ವಿಮಾನಗಳು, 45 ಯುಎಚ್-60 ಬ್ಲಾಕ್ ಹಾಕ್ ಹೆಲಿಕಾಪ್ಟರ್ಗಳು ಮತ್ತು ಸುಮಾರು 50 ಸಣ್ಣ ಪ್ರಮಾಣದ ದಾಳಿಗಳಿಗೆ ಬಳಸುವ ಎಂಡಿ-530 ಹೆಲಿಕಾಪ್ಟರ್ಗಳು ಸೇರಿದ್ದವು. ಇದರ ಜೊತೆಗೆ ಅಫ್ಘಾನಿಸ್ತಾನನದ ಭದ್ರತಾ ಪಡೆಗಳಿಗೆ 30 ಸಿಂಗಲ್ ಎಂಜಿನ್ ಸೆಸ್ನಾ ವಿಮಾನಗಳನ್ನೂ ಅಮೆರಿಕ ನೀಡಿತ್ತು. ಈ ಪೈಕಿ ಎಷ್ಟು ವಿಮಾನಗಳು ಇಂದಿಗೂ ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಂಡಿವೆ. ಇವುಗಳನ್ನ ವಾಪಸ್ ನೀಡುವಂತೆ ಟ್ರಂಪ್ ಈಗ ಹೇಳ್ತಾ ಇದ್ದಾರೆ.. ಆದ್ರೆ ನಮಗೆ ಇವುಗಳನ್ನ ಪಾಕ್ನಲ್ಲಿರೋ ಬಯೋತ್ಪದಕರ ವಿರುದ್ಧ ಬಳಸೋಕೆ ಬೇಕು ಎಂದು ತಾಲಿಬಾನ್ ಹೇಳಿದೆ.. ಒಟ್ನಲ್ಲಿ ಪಾಕ್ ಭಯೋತ್ಪಾದರನ್ನ ಹೇಗೆ ಸಾಕುತ್ತಿದೆ ಅನ್ನೋದನ್ನ ತಾಲಿಬಾನಿಗಳೇ ಹೇಳಿದ್ದು, ಮುಂದೆ ಟ್ರಂಪ್ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..