ಸಹಾಯ ಮಾಡಿದ ಪಾಕ್‌ ವಿರುದ್ಧವೇ ತಿರುಗಿ ಬಿದ್ದ ತಾಲಿಬಾನ್​! – ಪಾಕಿಸ್ತಾನವನ್ನ ಮತ್ತೆ ವಿಭಜನೆ ಮಾಡಬೇಕಾಗುತ್ತೆ ಎಂದು ವಾರ್ನಿಂಗ್!‌

ಸಹಾಯ ಮಾಡಿದ ಪಾಕ್‌ ವಿರುದ್ಧವೇ ತಿರುಗಿ ಬಿದ್ದ ತಾಲಿಬಾನ್​! – ಪಾಕಿಸ್ತಾನವನ್ನ ಮತ್ತೆ ವಿಭಜನೆ ಮಾಡಬೇಕಾಗುತ್ತೆ ಎಂದು ವಾರ್ನಿಂಗ್!‌

ಅಫ್ಘಾನ್​​ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇದ್ದಾಗ ತಾಲಿಬಾನಿಗರನ್ನು ತನ್ನ ರಾಜಧಾನಿಯಲ್ಲಿ ಇಟ್ಟುಕೊಂಡು ಪಾಕ್​ ವಿಷ ಬೀಜ ಬಿತ್ತಿ ಪ್ರಜಾಪ್ರಭುತ್ವ ಸರ್ಕಾರವನ್ನ ಹೊಡೆದೊಡಿಸಲು ಸಹಾಯ ಮಾಡಿತ್ತು. ಇದೀಗ ತನಗೆ ಸಹಾಯ ಮಾಡಿದ ಪಾಕ್‌ಗೆ ತಾಲಿಬಾನ್‌ ಗುಮ್ಮಿದೆ.

ಹೌದು, ಕಳೆದ ಕೆಲವು ದಿನಗಳಿಂದ ಅಫ್ಘಾನ್​ನ ನಿರಾಶ್ರಿತರನ್ನು ಪಾಕಿಸ್ತಾನ ಗಡಿಪಾರು ಮಾಡುತ್ತಿದೆ.  ಪಾಕಿಸ್ತಾನದ ಈ  ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಾಲಿಬಾನಿಗರು ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನ ಸುಮ್ಮನೇ ಕಾಲು ಕೆರೆದುಕೊಂಡು ಬರುತ್ತಿದ್ದು ಅಫ್ಘಾನ್​ ಮೂಲದ ಪಶ್ತೂನ್ ಬುಡಕಟ್ಟು ಜನಾಂಗದವರನ್ನ ಕ್ರೂರವಾಗಿ ಗಡಿಪಾರು ಮಾಡುತ್ತಿದೆ.

ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರು ಸಜ್ಜು! – ಬುಲ್ಡೋಜರ್‌ಗಳ ಸಮೇತ ಶಂಭು ಗಡಿಯತ್ತ ಹೊರಟ ರೈತರು! 

ಇದಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿರುವ ಅಫ್ಘಾನ್​ ಉಪ ವಿದೇಶಾಂಗ ಸಚಿವ ಶೇರ್​ ಮಹಮ್ಮದ್ ಅಬ್ಬಾಸ್ ಅವರು, ಡ್ಯೂರಾಂಡ್​​ ಗಡಿರೇಖೆಯನ್ನು ನಾವು ಯಾವಗ್ಲೂ ಗಣನೆಗೆ ತೆಗೆದುಕೊಂಡಿಲ್ಲ. ಅದು ಇಂಗ್ಲಿಷರು ಹಾಕಿದ ಗೆರೆ ಆಗಿದೆ. ಪಶ್ತೂನ್ ಬುಡಕಟ್ಟು ಜನ ಎರಡು ದೇಶದ ಗಡಿಯಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಜನರನ್ನು ಒತ್ತಾಯ ಮಾಡಿ ಗಡಿಪಾರು ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ದಾರೆ  ಎಂದು ವರದಿಯಾಗಿದೆ.

ಅಫ್ಘಾನ್​​ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇದ್ದಾಗ ತಾಲಿಬಾನಿಗರನ್ನು ತನ್ನ ರಾಜಧಾನಿಯೊಳಗೆ ಸೇರಿಸಿಕೊಂಡು ಸಹಾಯ ಮಾಡಿತ್ತು. ಅಲ್ಲದೇ ಅಫ್ಘಾನ್​​ನಲ್ಲಿ ತಾಲಿಬಾನ್ ಸರ್ಕಾರ ರಚನೆಗಾಗಿ ಬಾಂಬ್​, ಸೇನಾ ಟ್ರಕ್​ಗಳನ್ನ, ಗನ್, ಮದ್ದು-ಗುಂಡುಗಳು ಸೇರಿದಂತೆ ಎಲ್ಲ ಖರ್ಚುವೆಚ್ಚಗಳನ್ನ ಆಗ ನೋಡಿಕೊಂಡಿತ್ತು. ಆದರೆ ಸಹಾಯ ಮಾಡಿದ ಪಾಕ್​ಗೆ ಇದೀಗ ತಾಲಿಬಾನ್ ಗುಮ್ಮಿದೆ. ಪರಿಣಾಮ ನೆಟ್ಟಗಿರಲ್ಲ, ಹೀಗೆ ಮಾಡುತ್ತಾ ಹೋದರೆ 1971ರಲ್ಲಿ ಪಾಕ್​ನಿಂದ ಬಾಂಗ್ಲಾದೇಶ ವಿಭಜನೆಯಾದಂತೆ, ಮತ್ತೆ ಪಾಕಿಸ್ತಾನವನ್ನು ಮರು ವಿಭಜಿಸುವುದಾಗಿ ವಾರ್ನಿಂಗ್‌  ಮಾಡಿದೆ ಎಂದು ವರದಿಯಾಗಿದೆ.

Shwetha M