ನಾನೇ ಗೆದ್ದೆ ಎಂದು ಬಿಲ್ಡಪ್ ಕೊಟ್ಟ ಪಾಕ್ ಮಾನ ಅಫ್ಘಾನ್ ಬೀದಿ ಬೀದಿಗಳಲ್ಲಿ ಹರಾಜು

ನಾನೇ ಗೆದ್ದೆ ಎಂದು ಬಿಲ್ಡಪ್ ಕೊಟ್ಟ ಪಾಕ್ ಮಾನ ಅಫ್ಘಾನ್ ಬೀದಿ ಬೀದಿಗಳಲ್ಲಿ ಹರಾಜು

ಪ್ರತಿ ಯುದ್ಧದಲ್ಲೂ ಹೀನಾಯವಾಗಿ ಸೋತ್ರು  ನಾನೇ ಗೆದಿದ್ದು ಅಂತ ಹೇಳುವ ಪಾಕ್‌ಗೆ ಅಫ್ಘಾನ್ ಜನ ಸರಿಯಾಗಿ ಬುದ್ಧಿ ಕಲಿಸಿದೆ. ಪಾಕ್ ಮಾನವನ್ನ ಬೀದಿ ಬೀದಿಗಳಲ್ಲಿ ಹರಾಜು ಹಾಕಲಾಗ್ತಿದೆ.  ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಪಾಕಿಸ್ತಾನವನ್ನು ಮಂಡಿಯೂರಿಸಿದಾಗಲೂ, ಪಾಕಿಸ್ತಾನವು ಭಾರತೀಯ ಸೇನೆಗೆ ಗಮನಾರ್ಹ ನಷ್ಟವನ್ನುಂಟುಮಾಡಿದೆ ಎಂದು ಹೇಳಿಕೊಂಡಿತು. ಅಫ್ಘಾನಿಸ್ತಾನದಲ್ಲಿ ಮತ್ತೊಂದು ಅವಮಾನಕರ ಸೋಲಿನ ನಂತರವೂ, ಪಾಕಿಸ್ತಾನವು ತಾನೇ ಗೆದ್ದಿದ್ದಾಗಿ ಹೇಳಿಕೊಂಡಿತ್ತು. ಆದರೆ ಅಫ್ಘಾನಿಸ್ತಾನದಿಂದ ಬರುವ ವೀಡಿಯೊಗಳು ಮತ್ತು ಫೋಟೋಗಳು ನಿಜಸತ್ಯವನ್ನು ಬಹಿರಂಗಪಡಿಸುತ್ತಿವೆ.

ಇದನ್ನೂ ಓದಿ: ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ

ನಿನ್ನೆ ಎರಡೂ ಕಡೆಯವರು ತಾತ್ಕಾಲಿಕ 48 ಗಂಟೆಗಳ ಕದನ ವಿರಾಮ ಘೋಷಿಸಿದರು. ಇದು ಅಫ್ಘಾನಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಅಫ್ಘಾನ್ ಸರ್ಕಾರವು ಅದನ್ನು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಈ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಇದು ನಾಚಿಕೆಗೇಡಿನ ತಿರುವು. ಏಕೆಂದರೆ ಅಫ್ಘಾನಿಸ್ತಾನದ ಸಾಮಾಜಿಕ ಮಾಧ್ಯಮಗಳು ಪಾಕಿಸ್ತಾನಿ ಸೈನಿಕರ ವಾಹನಗಳು, ಶಸ್ತ್ರಾಸ್ತ್ರಗಳು ಮತ್ತು ಸೈನಿಕರ ಪ್ಯಾಂಟ್‌ಗಳನ್ನು ಸಹ ಲೂಟಿ ಮಾಡುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ಬಹಿರಂಗಪಡಿಸುತ್ತಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳು ಮತ್ತು ಫೋಟೋಗಳನ್ನು ಅಫ್ಘಾನಿಸ್ತಾನ ಬಿಡುಗಡೆ ಮಾಡಿದೆ. ಕೆಲವು ಸ್ಥಳಗಳಲ್ಲಿ ಜನರು ಒಗ್ಗೂಡುತ್ತಿದ್ದಾರೆ. ಅಲ್ಲಿ ಅಫ್ಘಾನ್ ಸೈನಿಕರನ್ನು ಜೊತೆ ರ್ಯಾಲಿಗಳನ್ನು ನಡೆಸುತ್ತಿದ್ದು ಅಫ್ಘಾನ್ ಸೈನಿಕರ ಶೌರ್ಯಕ್ಕಾಗಿ ಅವರನ್ನು ಗೌರವಿಸುತ್ತಿದ್ದಾರೆ. ಮತ್ತಷ್ಟು ಫೋಟೋಗಳಲ್ಲಿ ಪಾಕಿಸ್ತಾನಿ ಸೈನ್ಯಕ್ಕೆ ಮಣ್ಣು ಮುಕ್ಕಿಸಿದ್ದು, ಅಲ್ಲದೆ ಪಾಕಿಸ್ತಾನದ ಟ್ಯಾಂಕ್‌ಗಳ ಮೇಲೆ ಸವಾರಿ ಮಾಡಿ ಅವರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ತಾಲಿಬಾನ್ ಪಾಕಿಸ್ತಾನಿ ಸೈನಿಕರ ಪ್ಯಾಂಟ್‌ಗಳನ್ನು ರಸ್ತೆ ಮಧ್ಯೆ ನೇತುಹಾಕುತ್ತಿರುವುದನ್ನು ತೋರಿಸುವ ಮತ್ತೊಂದು ಫೋಟೋ ಕೂಡ ಹೊರಬಂದಿದೆ. ಅವರು ಹೋರಾಟದ ಸಮಯದಲ್ಲಿ ತಮ್ಮ ನೆಲೆಗಳಿಂದ ಓಡಿಹೋಗಿದ್ದು ಅವರ ಬಟ್ಟೆಗಳನ್ನು ಆಫ್ಘನ್ನರು ವಶಪಡಿಸಿಕೊಂಡಿದ್ದರು.

Kishor KV