ಗಂಡ-ಹೆಂಡತಿ ಇನ್ಮುಂದೆ ಒಟ್ಟಿಗೆ ರೆಸ್ಟೋರೆಂಟ್, ಉದ್ಯಾನವನಕ್ಕೆ  ಹೋಗುವಂತಿಲ್ಲ! – ಏನಿದು  ಹೊಸ ರೂಲ್ಸ್?

ಗಂಡ-ಹೆಂಡತಿ ಇನ್ಮುಂದೆ ಒಟ್ಟಿಗೆ ರೆಸ್ಟೋರೆಂಟ್, ಉದ್ಯಾನವನಕ್ಕೆ  ಹೋಗುವಂತಿಲ್ಲ! – ಏನಿದು  ಹೊಸ ರೂಲ್ಸ್?

ತಾಲಿಬಾನ್ ಪಡೆಯು ಅಫ್ಘಾನಿಸ್ತಾನದಲ್ಲಿ ಆಡಳಿತ ಗದ್ದುಗೆ ಏರಿದಾಗಿಂದ ಅಲ್ಲಿನ ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಫ್ಘಾನಿಸ್ತಾನ ಯುವತಿಯರು ಶಿಕ್ಷಣಕ್ಕಾಗಿ ದೇಶಬಿಟ್ಟು ಬೇರೆ ಯಾವುದೇ ದೇಶಗಳಿಗೆ ಹೋಗುವಂತಿಲ್ಲ, ಕಡ್ಡಾಯವಾಗಿ ಹಿಜಾಬ್ ಧರಿಸಬೇಕು. ಹೀಗೆ ಹತ್ತು ಹಲವು ನಿಯಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿದ್ದು, ಇದು ರೆಸ್ಟೋರೆಂಟ್​ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಪುರುಷರು ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಕುಳಿತು ತಿನ್ನಬಾರದು. ಇಷ್ಟೇ ಅಲ್ಲದೇ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೆ ಹೋಗಬಾರದು ಅಂತಾ ಕಟ್ಟಾಜ್ಞೆ ಮಾಡಿದೆ.

ಉದ್ಯಾನವನಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಭೇಟಿಯಾಗುತ್ತಾರೆ ಎಂಬ ಧಾರ್ಮಿಕ ಸಂಘಟನೆಗಳ ಸದಸ್ಯರು ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ತಾಲಿಬಾನ್ ಸರ್ಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರಿತ್ತು. 6 ನೇ ತರಗತಿಗಿಂತ ಹೆಚ್ಚಿನ ಹುಡುಗಿಯರು ಶಾಲೆಗೆ ಹೋಗುವುದನ್ನು ಮತ್ತು ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಅಷ್ಟೇ ಅಲ್ಲದೇ ಮಹಿಳೆಯರು ಕೆಲಸ ಕೆಲಸಕ್ಕೆ, ಪಾರ್ಕ್ ಗೆ ಮತ್ತು ಜಿಮ್‌ಗೆ ಹೋಗುವುದಕ್ಕೂ ನಿಷೇಧವಿದೆ.

ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಇತ್ತೀಚೆಗೆ ತನ್ನ ಪತಿಯೊಂದಿಗೆ ಹೆರಾತ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿ ಮ್ಯಾನೇಜರ್ ಪತಿಯಿಂದ ಪ್ರತ್ಯೇಕವಾಗಿ ಕುಳಿತು ಆಹಾರ ಸೇವಿಸುವಂತೆ ಹೇಳಿದ್ದರು. ಹೆರಾತ್‌ನ ಉದ್ಯಾನವನಗಳಿಗೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿ ರಿಯಾಜುಲ್ಲಾ ಸೀರತ್ ತಿಳಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರು ಉದ್ಯಾನವನಕ್ಕೆ ತೆರಳಲು ಪ್ರತ್ಯೇಕ ದಿನಗಳನ್ನು ನಿಗದಿ ಪಡಿಸಲಾಗಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಮಹಿಳೆಯರಿಗೆ, ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಪುರುಷರಿಗೆ ಅವಕಾಶ ಕಲ್ಪಿಸಲಾಗಿದೆ.

suddiyaana