ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ! – ಭಕ್ತಾಧಿಗಳಿಗೆ ಉಚಿತ ಬಸ್‌ ವ್ಯವಸ್ಥೆ?

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ! – ಭಕ್ತಾಧಿಗಳಿಗೆ ಉಚಿತ ಬಸ್‌ ವ್ಯವಸ್ಥೆ?

ಮಡಿಕೇರಿ: ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿದರ್ಶನ ನೀಡುತ್ತಾಳೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ.  ‘ಬ್ರಹ್ಮಕುಂಡಿಕೆ’ಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಇನ್ನು 10 ದಿನಗಳಷ್ಟೇ ಬಾಕಿ ಇದ್ದು, ದೇವಾಲಯದ ಆಡಳಿತ ಮಂಡಳಿಯಿಂದ ಜಾತ್ರೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾಗಮಂಡಲ ಮತ್ತು ತಲಕಾವೇರಿ ಸುಣ್ಣ ಬಣ್ಣದಿಂದ ಸಿಂಗಾರಗೊಳ್ಳುತ್ತಿದ್ದು, ಪವಿತ್ರ ಜಾತ್ರೆಗೆ ಕಾವೇರಿ ತವರು ಸಜ್ಜಾಗುತ್ತಿದೆ.

ಈ ಬಾರಿ ಅ.17 ರಿಂದ ನ.17 ರವರೆಗೆ ( ಒಂದು ತಿಂಗಳು) ನಡೆಯವ ಜಾತ್ರೆಯಲ್ಲಿ ಒಟ್ಟು ಎರಡೂವರೆ ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಮಾಡಲಾ ಗಿದೆ. ಈ ಬಾರಿ ತುಲಾ ಸಂಕ್ರ ಮಣ ಮಧ್ಯರಾತ್ರಿ ಜರುಗುವುದ ರಿಂದ ಅ.17ಕ್ಕಿಂತಲೂ 18ರ ಬೆಳಗಿನ ವೇಳೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಅ.17ರಂದು ರಾತ್ರಿ ಸುಮಾರು 10ರಿಂದ 15 ಸಾವಿರ ಮಂದಿ ಹಾಗೂ ಮರು ದಿನ ಬೆಳಗ್ಗೆ 20 ಸಾವಿರಕ್ಕೂ ಹೆಚ್ಚು ಮಂದಿ ತಲ ಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆ ಬಳಿ ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ! – ಅಂಚೆ ಇಲಾಖೆಯಿಂದ ಹೊಸ ಯೋಜನೆ

ತಲಕಾವೇರಿ ತೀರ್ಥೋದ್ಭವದ ದಿನ ಮತ್ತು ಮರು ದಿನ ವಿವಿಧ ಭಾಗಗಳಿಂದ ಭಾಗ ಮಂಡಲಕ್ಕೆ ಹೆಚ್ಚುವರಿ ಬಸ್‌ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ತಲಕಾವೇರಿಯಲ್ಲಿ ವಾಹನ ದಟ್ಟಣೆ ತಪ್ಪಿಸಲು ಭಾಗಮಂಡಲ -ತಲಕಾವೇರಿ ಮಧ್ಯೆ ಉಚಿತ ಬಸ್‌ ಸೇವೆ ನೀಡಲು ತೀರ್ಮಾನಿಸಲಾಗಿದೆ. ಶಕ್ತಿ ಯೋಜ ನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಮಹಿಳಾ ಭಕ್ತರು ದೇವಾಲಯಕ್ಕೆ ಆಗಮಿಸುವ ಸಾಧ್ಯತೆಯಿದೆ.

ತಲಕಾವೇರಿ ಮತ್ತು ಭಾಗಮಂಡಲ ಭಗಂಡೇ ಶ್ವರ ದೇವಾಲಯದಲ್ಲಿ ಒಟ್ಟು 50 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ. ಜಿಲ್ಲಾ ಪೊಲೀಸ್‌ ಸಲಹೆ ಪಡೆದು ಸೂಕ್ತ ಸ್ಥಳದಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ.

ಈ ಬಾರಿ ಕಾವೇರಿ ಜಾತ್ರೆಯನ್ನು ಸಂಪೂರ್ಣ ಪ್ಲ್ಯಾಸ್ಟಿಕ್‌ ಮುಕ್ತವನ್ನಾಗಿಸಲು ತೀರ್ಮಾನಿಸಲಾಗಿದ್ದು, ಭಾಗ ಮಂಡಲ ಮತ್ತು ತಲ ಕಾವೇರಿ ವ್ಯಾಪ್ತಿಯಲ್ಲಿ ಪ್ಲ್ಯಾಸ್ಟಿಕ್‌ ವಸ್ತುಗಳ ಬಳಕೆ ನಿಷೇಸಲಾಗಿದೆ. ಪ್ಲ್ಯಾಸ್ಟಿಕ್‌ ನೀ ರಿನ ಬಾ ಟಲ್‌, ಒಮ್ಮೆ ಬಳಕೆಯ ಗ್ಲಾಸ್‌, ಪ್ಲ್ಯಾಸ್ಟಿಕ್‌ ಹ್ಯಾಂಡ್‌ ಬ್ಯಾಗ್‌ ಮುಂತಾದ ವಸ್ತುಗ ಳನ್ನು ಬಳಸದಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವುದು ಮತ್ತು ಬಳಸದಂತೆ ತಡೆಯಲು ನಿರ್ಧರಿಸಲಾಗಿದೆ.

ಕೆಎಸ್‌ಆರ್‌ಟಿಸಿ ಅಂತರ್‌ ಜಿಲ್ಲಾ ಮತ್ತು ಅಂತಾರಾಜ್ಯ ಬಸ್‌ಗಳಲ್ಲಿ ಕಾವೇರಿ ಜಾತ್ರೆಯ ಕುರಿತು ಪ್ರಚಾರ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಇದರ ಪೋಸ್ಟರ್‌ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಬಸ್‌ಗಳಲ್ಲಿರುವ ಪೋಸ್ಟರ್‌ಗಳಲ್ಲಿ ಕ್ಯೂ ಆರ್‌ ಕೋಡ್‌ ಇರಲಿದ್ದು, ಅದನ್ನು ಸ್ಕ್ಯಾ‌ನ್‌ ಮಾಡಿದರೆ ತಲಕಾವೇರಿ ದೇವಾಲಯಕ್ಕೆ ರೂಟ್‌ ಮ್ಯಾಪ್‌ ಕೂಡಾ ಲಭ್ಯವಾಗಲಿದೆ.

Shwetha M