ಆನ್ ಫೀಲ್ಡ್ ನಲ್ಲೇ IPL ಆಫರ್ – ಜೈಸ್ವಾಲ್ ಮಾಡಿದ್ದು ಸರಿನಾ?
ಮೆಚ್ಚಿಸಲು ಹೋಗಿ ಲಂಕಾ ಬ್ಯಾಟರ್ ಔಟ್

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ವಿನ್ ಆಯ್ತು. ಈಗ ಸೆಕೆಂಡ್ ಮ್ಯಾಚ್ಗೆ ರೆಡಿಯಾಗ್ತಿದ್ದಾರೆ. ಆದ್ರೆ ಮೊದಲ ಪಂದ್ಯದ ಕೊನೇ ದಿನ ನಡೆದ ಅದೊಂದು ಕಾನ್ವರ್ಸೇಷನ್ ಫುಲ್ ಟ್ರೆಂಡಿಂಗ್ನಲ್ಲಿದೆ. ಅದೂ ಕೂಡ ಆನ್ ಫೀಲ್ಡ್ ನಲ್ಲೇ ಐಪಿಎಲ್ ಆಫರ್ ಕೊಟ್ಟಿರುವಂಥದ್ದು. ಜೈಸ್ವಾಲ್ ಮತ್ತು ಡಿಕ್ವೆಲ್ಲಾ ನಡುವೆ ನಡೆದ ಐಪಿಎಲ್ ಆಫರ್ ಮತ್ತು ಮೈಂಡ್ ಗೇಮ್ ಬಗ್ಗೆ ಪರವಿರೋಧ ವ್ಯಕ್ತವಾಗ್ತಿದೆ.
ಇದನ್ನೂ ಓದಿ : ಮೊದಲ ಟೆಸ್ಟ್‌ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್
ಮ್ಯಾಚ್ ಟೈಮಲ್ಲಿ ಆನ್ ಫೀಲ್ಡ್ನಲ್ಲಿ ಆಟಗಾರರ ನಡುವೆ ತಮಾಷೆ, ತರಲೆ ರೀತಿಯ ಕಾನ್ವರ್ಸೇಷನ್ ಇದ್ದದ್ದೇ. ಉಭಯ ತಂಡಗಳ ಆಟಗಾರರ ನಡುವೆ ಕೆಲವೊಮ್ಮೆ ಲಿಮಿಟ್ ಮೀರಿ ಸ್ಲೆಡ್ಜಿಂಗ್ ಕೂಡ ನಡೀತಾ ಇರುತ್ತೆ. ಈಗ ಭಾರತ ಲಂಕಾ ನಡುವಿನ ಮೊದಲ ಪಂದ್ಯದ ಕೊನೇ ದಿನ ಭಾರತದ ಓಪನರ್ ಯಶಸ್ವಿ ಜೈಸ್ವಾಲ್ ಹಾಗೂ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟರ್ ನಿರೋಷನ್ ಡಿಕ್ವೆಲ್ಲಾ ನಡುವೆ ತುಂಬಾನೇ ಸ್ವಾರಸ್ಯಕರ ಮಾತುಕತೆ ನಡೆದಿದೆ. ಐಪಿಎಲ್ ವಿಚಾರ ಆನ್ಫೀಲ್ಡ್ನಲ್ಲಿ ಸದ್ದು ಮಾಡಿದೆ.
ಐಪಿಎಲ್ ಆಫರ್.. ಸಿಕ್ಸರ್ ಸವಾಲ್!
ಯಶಸ್ವಿ ಜೈಸ್ವಾಲ್ : ಕಮಾನ್ ಯಾರ್, ಫಸ್ಟ್ ಇನ್ನಿಂಗ್ಸ್ ನಲ್ಲಿ ತುಂಬಾ ಚೆನ್ನಾಗಿ ಒಳ್ಳೊಳ್ಳೆಯ ಶಾಟ್ ಹೊಡೆದಿದ್ದೀರ. ನಾವು ಈ ಇನ್ನಿಂಗ್ಸ್ ನಲ್ಲೂ ಅಂತ ಇನ್ನಿಂಗ್ಸ್‌ಗಾಗಿ ಕಾಯುತ್ತಿದ್ದೇವೆ.
ಡಿಕ್ವೆಲ್ಲಾ : ಹೌದಾ? ನಿಜವಾ?
ಯಶಸ್ವಿ ಜೈಸ್ವಾಲ್ : ಖಂಡಿತವಾಗಿ, ನಾನು ಅದನ್ನೇ ನಿರೀಕ್ಷೆ ಮಾಡ್ತಾ ಇದ್ದೇನೆ. ಡೀಪ್ ಸ್ಕ್ವೇರ್ ಲೆಗ್ ಕಡೆ ಬೌಂಡರಿ ಬಾರಿಸಿ ತೋರಿಸು. ನಿನಗ್ಯಾಕೆ ಸಾಧ್ಯವಾಗಲ್ಲ ನೋಡೋಣ.
ಡಿಕ್ವೆಲ್ಲಾ : ನನಗೆ ಸದ್ಯಕ್ಕೆ ಬಿಗ್ ಹಿಟ್ ಅಗತ್ಯವಿಲ್ಲ. ನನ್ನನ್ನು ಐಪಿಎಲ್ ಗೆ ಕರೆದುಕೊಳ್ಳಿ, ಆಗ ನಾನು ಸಿಕ್ಸರ್ ಬಾರಿಸುತ್ತೇನೆ.
ಯಶಸ್ವಿ ಜೈಸ್ವಾಲ್ : ಹೌದಾ, ಪಕ್ಕಾ.. 100% ನಿಮ್ಮನ್ನು ಐಪಿಎಲ್ ಗೆ ತೆಗೆದುಕೊಳ್ಳುತ್ತೇವೆ. ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾ ಜೊತೆ ಈ ಬಗ್ಗೆ ನಾನು ಮಾತನಾಡುತ್ತೇನೆ. ನೀನು ಆತನಿಗೆ ಸಿಕ್ಸರ್ ಬಾರಿಸಿ ತೋರಿಸು.
ಹೀಗೆ ಹೇಳುತ್ತಾ ಜೈಸ್ವಾಲ್ ಡಿಕ್ವೆಲ್ಲಾಗೆ ಟ್ರಿಗರ್ ಮಾಡಿದ್ರು. ಇದ್ರಿಂದ ಫುಲ್ ಜೋಶ್ನಲ್ಲಿದ್ದ ಡಿಕ್ವೆಲ್ಲಾ ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ನೆಕ್ಸ್ಟ್ ಬಾಲ್ನಲ್ಲೇ ಬಿಗ್ ಹಿಟ್ಗೆ ಟ್ರೈ ಮಾಡಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರ್ಕೊಂಡ್ರು. ಸೋ ಅಲ್ಲಿಗೆ ಜೈಸ್ವಾಲ್ ಮೈಂಡ್ಗೇಮ್ ವರ್ಕ್ ಆಯ್ತು. ಯಾಕಂದ್ರೆ ಭಾರತ ಶತಾಯ ಗತಾಯ ಈ ಪಂದ್ಯ ಗೆಲ್ಬೇಕಿತ್ತು. ಮತ್ತೊಂದ್ಕಡೆ ಲಂಕಾಗೆ ಅಟ್ಲೀಸ್ಟ್ ಡ್ರಾ ಮಾಡಿಕೊಳ್ಳೋಕೆ ಚಾನ್ಸ್ ಇತ್ತು. ಅದೂ ಅಲ್ದೇ ಮಳೆ ಬಂದು ಪಂದ್ಯ ಸಸ್ಪೆಂಡ್ ಆಗಿ ಕೊನೆಗೆ ಡ್ರಾ ಆದ್ರೂ ಆಗ್ಬೋದಿತ್ತು. ಸೋ ಇಂಥಾ ಟೈಮಲ್ಲಿ ಬೇಗ ಬೇಗೆ ವಿಕೆಟ್ ತೆಗೆಯೋದೇ ಭಾರತಕ್ಕಿದ್ದ ದಾರಿ. ಹೀಗಾಗಿ ಡಿಕ್ವೆಲ್ಲಾನ ಟಾರ್ಗೆಟ್ ಮಾಡಿ ಅವ್ರ ಮೈಂಡ್ ಡೈವರ್ಟ್ ಮಾಡೋಕೆ ಏನ್ ಬೇಕೋ ಅದನ್ನ ಜೈಸ್ವಾಲ್ ಮಾಡಿದ್ರು. ಬ್ಯಾಟರ್‌ನ ಕಾನ್ಸಂಟ್ರೇಟ್ ತಪ್ಪಿಸಿ ವಿಕೆಟ್ ಒಪ್ಪಿಸುವಂತೆ ಪ್ರಚೋದನೆ ನೀಡಿದ್ರು. ಈ ಇನ್ಸಿಡೆಂಟ್ ಬಳಿಕ ಕೆಲವ್ರು ಯಶಸ್ವಿ ಜೈಸ್ವಾಲ್ ಮಾಡಿದ್ದು ತಪ್ಪು.. ಆನ್ಫೀಲ್ಡ್ನಲ್ಲಿ ಯಾರಾದ್ರೂ ಐಪಿಎಲ್ ಆಫರ್ ಕೊಡ್ತಾರಾ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ. ಬಟ್ ರಿಯಾಲಿಟಿ ಏನಂದ್ರೆ ಜೈಸ್ವಾಲ್ ಮಾಡಿದ್ರಲ್ಲಿ ಯಾವ ತಪ್ಪೂ ಇಲ್ಲ.
ಬ್ಯಾಟರ್ ಏಕಾಗ್ರತೆ ತಪ್ಪಿಸಲು ಜೈಸ್ವಾಲ್ ಮಾಡಿದ್ದು ತಂತ್ರ ಅಷ್ಟೇ!
ನಿಮ್ಗೆಲ್ಲಾ ಗೊತ್ತಿರೋ ಹಾಗೇ ಕ್ರಿಕೆಟ್ ಆಡುವಾಗ ಸ್ಲೆಡ್ಜಿಂಗ್ ಇದ್ದದ್ದೇ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಂತೂ ಪ್ರತೀ ಸೆಕೆಂಡ್ ಕೂಡ ಆಟಗಾರರ ತಾಳ್ಮೆಯನ್ನ ಟೆಸ್ಟ್ ಮಾಡುತ್ತೆ. ಇಂಥಾ ಟೈಮಲ್ಲಿ ಎರಡೂ ತಂಡಗಳ ಆಟಗಾರರ ನಡುವೆ ಕಮೆಂಟ್ಸ್ ಪಾಸ್ ಆಗ್ತಾನೇ ಇರುತ್ತೆ. ಕೆಲವು ಫ್ರೆಂಡ್ಲಿಯಾಗಿದ್ರೆ ಇನ್ನೂ ಕೆಲವು ಮಿತಿ ಮೀತಿದ ಮಾತುಗಳಾಗಿ ದಂಡವೂ ಬೀಳುತ್ತೆ. ಬಟ್ ಜೈಸ್ವಾಲ್ ವಿಚಾರದಲ್ಲಿ ಯಾವುದೇ ಎಲ್ಲೆ ಮೀರಿಲ್ಲ. ಬ್ಯಾಟರ್‌ನ ಏಕಾಗ್ರತೆ ಹಾಳು ಮಾಡಿದ್ದು ನಿಜವೇ ಆದ್ರೂ ಯಾವುದೇ ನಿಂದನಾತ್ಮಕ ಅಥವಾ ಪರ್ಸನಲ್ ಅಟ್ಯಾಕ್ ರೀತಿಯ ಪದಗಳನ್ನ ಬಳಸಿಲ್ಲ. ತುಂಬಾನೇ ಕ್ಯಾಶುಯಲ್ ಆಗಿ ಮಾತನಾಡಿ ಟ್ರಿಗರ್ ಮಾಡಿದ್ದಾರೆ ಅಷ್ಟೇ. ಅದೂ ಅಲ್ದೇ ಜೈಸ್ವಾಲ್ ಆಫರ್ ಕೊಟ್ಟಾಕ್ಷಣ ಡಿಕ್ವೆಲ್ಲಾ ಐಪಿಎಲ್ ಆಡೋಕೆ ಆಗಲ್ಲ. ಐಪಿಎಲ್‌ನಲ್ಲಿ ಆಟಗಾರರನ್ನು ಅಧಿಕೃತ ಹರಾಜು, ಅಥವಾ ಟ್ರೇಡಿಂಗ್ ಮೂಲಕ ಮಾತ್ರನೇ ಖರೀದಿ ಮಾಡೋದು. ಒಬ್ಬ ಆಟಗಾರ ನೇರವಾಗಿ ಮತ್ತೊಬ್ಬ ಆಟಗಾರನಿಗೆ ಆಫರ್ ನೀಡಲು ಚಾನ್ಸೇ ಇಲ್ಲ. ಹೀಗಾಗಿ ಜೈಸ್ವಾಲ್ ಮಾತುಗಳನ್ನ ಸ್ಮಾರ್ಟ್ ಸ್ಲೆಡ್ಜಿಂಗ್ ಅಂತಾನೇ ಹೇಳಲಾಗಿದೆ.

ನೋಡಿರಿ

