ತೈವಾನ್ ಪ್ರಜೆಗಳಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯ

ತೈವಾನ್ ಪ್ರಜೆಗಳಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯ

ತೈಪೆ: ತೈವಾನ್‌ ತನ್ನ ಪ್ರಜೆಗಳಿಗೆ ಮಿಲಿಟರಿ ಸೇವೆಯನ್ನು ಒಂದು ವರ್ಷ ಕಡ್ಡಾಯ ಮಾಡಿದೆ. ಚೀನಾದಿಂದ ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸುವುದಾಗಿ ತಿಳಿಸಿದೆ.

ಯಾರೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಶಾಂತಿ ಆಕಾಶದಿಂದ ಬೀಳುವುದಿಲ್ಲ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಪ್ರಸ್ತುತ ಇರುವ ನಾಲ್ಕು ತಿಂಗಳ ತರಬೇತಿ ಸಾಲುವುದಿಲ್ಲ ತೈವಾನ್‌ ಅಧ್ಯಕ್ಷೆ ತ್ಸೈ ಇಂಗ್-ವೆನ್ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ – ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

2024 ರಿಂದ ಇದು ಜಾರಿಗೆ ಬರಲಿದೆ. 2005 ಜನವರಿ 1 ರಿಂದ ಜನಿಸಿದ ಪುರುಷರಿಗೆ ಮಾತ್ರ ಕಡ್ಡಾಯ ಮಿಲಿಟರಿ ಸೇವೆ  ಅನ್ವಯವಾಗಲಿದೆ. ಚೀನಾ ತೈವಾನ್‌ ತನ್ನ ಪ್ರದೇಶದ ಭಾಗ ಎಂದು ಪರಿಗಣಿಸುತ್ತಿದೆ. ಅಗತ್ಯವಿದ್ದರೆ ಬಲವಂತವಾಗಿ ತೈವಾನ್‌ ವಶ ಪಡಿಸಲಾಗುವುದು ಎಂದು ಹೇಳಿತ್ತು.

ಸೋಮವಾರ ಮುಂಜಾನೆ 6 ಗಂಟೆ ವೇಳೆ ಚೀನಾದ 71 ಯುದ್ಧ ವಿಮಾನಗಳು ಹಾಗೂ 7 ನೌಕಾ ಹಡಗುಗಳು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಲೀಮು ನಡೆಸಿತ್ತು. ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಅತೀ ದೊಡ್ಡದಾದ ಮಿಲಿಟರಿ ಶಕ್ತಿ ಪ್ರದರ್ಶನ ನಡೆಸಿದೆ ಎಂದು ವರದಿಯಾಗಿತ್ತು.

suddiyaana