ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್ – ಗುಟ್ಟಾಗಿ ವಿವಾಹವಾಗಿದ್ದೇಕೆ ನಟಿ?

ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್ – ಗುಟ್ಟಾಗಿ ವಿವಾಹವಾಗಿದ್ದೇಕೆ ನಟಿ?

ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು ಇತ್ತೀಚೆಗೆ ಸೀಕ್ರೆಟ್ ಮದುವೆಯಾಗಿದ್ದಾರೆ. ಆದ್ರೆ ಇಲ್ಲಿವರೆಗೂ ಒಂದೇ ಒಂದು ಮದುವೆಯ ಫೋಟೋ ಲೀಕ್‌ ಆಗಿರಲ್ಲಿಲ್ಲ. ಅಷ್ಟರ ಮಟ್ಟಿಗೆ ತಾಪ್ಸಿ ಎಚ್ಚರವಹಿಸಿದ್ರು. ಆದ್ರೂ ಕೂಡ ನಟಿ ತಾಪ್ಸಿಯ ಮದುವೆ ವಿಡಿಯೋ ಇದೀಗ ಹೊರಬಿದ್ದಿದೆ. ಸಂತಸದಿಂದ ಮದುವೆ ದಿನ ವೇದಿಕೆ ಏರುತ್ತಿರುವ ನಟಿಯ ವಿಡಿಯೋ ಲೀಕ್‌ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆ ಏನಾಗಿದೆ? – ಆತಂಕದಲ್ಲಿ ಫ್ಯಾನ್ಸ್‌

10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಈ ಜೋಡಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆದ್ರೆ ಮದುವೆ ಬಗ್ಗೆ ಒಂಚೂರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದೀಗ ತಾಪ್ಸಿ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ತಮ್ಮ ಮದುವೆ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ನಟಿ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡುತ್ತಿದೆ.

ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ ಎನ್ನಲಾಗುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಆದಷ್ಟು ಬೇಗ ನಟಿಯ ಮದುವೆಯ ಫೋಟೋ ರಿವೀಲ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Shwetha M