ಮದುವೆ ಫೋಟೋ, ವಿಡಿಯೋ ಖಂಡಿತಾ ಶೇರ್ ಮಾಡಲ್ಲ! – ತಾಪ್ಸಿ ಹೀಗ್ಯಾಕೆ ಹೇಳಿದ್ದು?
ಸಿನಿಮಾ ಸೆಲೆಬ್ರಿಟಿಗಳು ಅಂದ ಮೇಲೆ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಜನಸ ಸಾಮಾನ್ಯರಿಗೆ, ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತೆ. ಅವರು ಏನು ತಿಂತಾರೆ? ಎಲ್ಲಿ ಹೋಗ್ತಾರೆ? ಯಾರ ಜೊತೆ ಸುತ್ತಾಡುತ್ತಾ ಇರುತ್ತಾರೆ? ತಮ್ಮ ನೆಚ್ಚಿನ ನಟ ಅಥವಾ ನಟಿ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ? ಮುಂದೆ ಯಾವ ಚಿತ್ರ ಮಾಡುತ್ತಿದ್ದಾರೆ? ಹೀಗೆ ಅನೇಕ ರೀತಿಯ ವಿಚಾರಗಳನ್ನು ಅಭಿಮಾನಿಗಳು ತಿಳಿದುಕೊಳ್ಳುವುದಕ್ಕೆ ತುಂಬಾನೇ ಕಾತುರರಾಗಿರುತ್ತಾರೆ. ಎಷ್ಟೋ ಜನ ಸಿನಿಮಾ ಸೆಲೆಬ್ರಿಟಿಗಳು ತಮ್ಮ ನಿಶ್ಚಿತಾರ್ಥ ಮತ್ತು ಮದುವೆ ವಿಷಯವನ್ನು ಎಲ್ಲರಿಗೂ ಗೊತ್ತಾಗುವಂತೆ ಮದುವೆ ಆಗುತ್ತಾರೆ. ಸಿಂಪಲ್ ಆಗಿ ಮದುವೆ ಆದ್ರೂ ಅಭಿಮಾನಿಗಳಿಗೆ ವಿಚಾರ ತಿಳಿಸ್ತಾರೆ. ಆದ್ರೆ ಬಾಲಿವುಡ್ ನಟಿ ತಾಪ್ಸಿ ಪನ್ನು ಮಾತ್ರ ಗೌಪ್ಯವಾಗಿ ಮದುವೆ ಆಗಿದ್ದಾರೆ. ಇದೀಗ ತನ್ನ ಮದುವೆ ವಿಚಾರವಾಗಿ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಪ್ರವಾಸಕ್ಕೆಂದು ಹಿಂದೆಂದೂ ನೋಡದ ಸ್ಥಳಕ್ಕೆ ಹೋದ ಕುಟುಂಬ – ಬಂಗಲೆಯ ಗೋಡೆಯ ಮೇಲಿದ್ದ ಫೋಟೋ ಕಂಡು ವಾಪಸಾಗಿದ್ದೇಕೆ?
ನಟಿ ತಾಪ್ಸಿ ಪನ್ನು ಅವರ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತಾಪ್ಸಿ ಪನ್ನು ಅವರು ರಹಸ್ಯವಾಗಿ ಮದುವೆ ಮಾಡಿಕೊಂಡ ವಿಚಾರ ಈಗ ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದೆಲ್ಲಾ ನಡೆದ ಮೇಲೆ ಅಂತಿಮವಾಗಿ ಮಥಿಯಾಸ್ ಬೋ ಅವರ ಜೊತೆ ಖಾಸಗಿ ಮದುವೆ ಸಮಾರಂಭದಲ್ಲಿ ಮದುವೆಯಾಗಿರುವುದರ ಬಗ್ಗೆ ನಟಿ ತಾಪ್ಸಿ ಪನ್ನು ಅವರು ತಮ್ಮ ಮೌನವನ್ನು ಮುರಿದಿದ್ದಾರೆ.
ನಟಿ ತಾಪ್ಸಿ ಪನ್ನು ಅವರು ಮಾರ್ಚ್ 22 ರಂದು ಉದಯಪುರದಲ್ಲಿ ದೀರ್ಘಕಾಲದ ಗೆಳೆಯ ಮಥಿಯಾಸ್ ಬೋ ಅವರೊಂದಿಗೆ ಅದ್ಧೂರಿ ಮತ್ತು ನಿಕಟ ಮದುವೆ ಸಮಾರಂಭದಲ್ಲಿ ವಿವಾಹವಾದರು ಮತ್ತು ಅವರು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಅಧಿಕೃತ ಫೋಟೋಗಳು ಮತ್ತು ವೀಡಿಯೋಗಳನ್ನು ಹಂಚಿಕೊಂಡಿಲ್ಲ.
ಮದುವೆಯಾದ ಸುಮಾರು ಮೂರು ವಾರಗಳ ನಂತರ, ನಟಿ ತಾಪ್ಸಿ ಅಂತಿಮವಾಗಿ ತಮ್ಮ ಖಾಸಗಿ ವಿವಾಹದ ಬಗ್ಗೆ ಮೌನ ಮುರಿದಿದ್ದಾರೆ. ಮದುವೆಯನ್ನು ರಹಸ್ಯವಾಗಿರಿಸಿಕೊಳ್ಳುವ ಉದ್ದೇಶ ಎಂದಿಗೂ ಇರಲಿಲ್ಲಎಂದು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದು ತಮಗೆ ಇಷ್ಟವಿಲ್ಲದ ಕಾರಣ ಮತ್ತು ತಾವು ಸಾರ್ವಜನಿಕ ವ್ಯಕ್ತಿ ಎಂಬ ಕಾರಣಕ್ಕೆ ಇದನ್ನು ಸ್ವಲ್ಪ ಕಾಲ ಗೌಪ್ಯವಾಗಿರಿಸಲಾಗಿತ್ತು. ಅದನ್ನು ಎಂದಿಗೂ ರಹಸ್ಯವಾಗಿಡುವ ಉದ್ದೇಶ ನನಗಿರಲಿಲ್ಲ. ನಾನು ಅದನ್ನು ಸಾರ್ವಜನಿಕ ವ್ಯವಹಾರವನ್ನಾಗಿ ಮಾಡಲು ಸಹ ಬಯಸಲಿಲ್ಲ, ಏಕೆಂದರೆ ಅದನ್ನು ಜನರು ಹೇಗೆ ಗ್ರಹಿಸುತ್ತಾರೆ ಎಂಬುದರ ಕುರಿತು ನಾನು ಚಿಂತೆ ಮಾಡಲು ಪ್ರಾರಂಭಿಸುತ್ತೇನೆ. ತಮ್ಮ ಮದುವೆಯ ಫೋಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲ್ಲ ಅಂತಾ ಹೇಳಿದ್ದಾರೆ.