ಅಬ್ಬಬ್ಬಾ.. ತಾಪ್ಸಿಗೆ ಇಷ್ಟೊಂದು ಧಿಮಾಕು? – ಸೆಲ್ಫಿ ಕೇಳಲು ಬಂದವರ ಮೇಲೆ ಒರಟಾಗಿ ನಡೆದುಕೊಂಡ ನಟಿ

ಬಾಲಿವುಡ್ ನಟಿ ತಾಪ್ಸಿ ಪನ್ನು ಸದಾ ಸುದ್ದಿಯಲ್ಲಿ ಇರ್ತಾರೆ. ಏನಾದರೂ ಕಿರಿಕ್ ಮಾಡಿಕೊಂಡು ಕೆಲವೊಮ್ಮೆ ಅವರು ಟ್ರೋಲ್ ಆಗುತ್ತಾರೆ. ಆದ್ರೀಗ ತಾಪ್ಸಿ ಇನ್ನೊಂದು ಕಾರಣದಿಂದ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಆಗಿದ್ದಾರೆ. ಅಭಿಮಾನದಿಂದ ಸೆಲ್ಫಿ ಕೇಳಲು ಬಂದವರ ಮೇಲೆ ತಾಪ್ಸಿ ಒರಟಾಗಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: DK, ಧವನ್, ಶಮಿ ಬಾಳಲ್ಲಿ ಬಿರುಗಾಳಿ! – ಡಿವೋರ್ಸ್‌ಗೆ ಇಂಥ ಕಾರಣನೇ ಬೇಕಾ?
ತಾಪ್ಸಿ ಪನ್ನು ನಟಿಸಿರುವ ಖೇಲ್ ಖೇಲ್ ಮೇ ಸಿನಿಮಾದ ಹೊಸ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನೇಕರನ್ನು ಆಹ್ವಾನಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಅನನ್ಯಾ ದ್ವಿವೇದಿ ಕೂಡ ಬಂದಿದ್ದರು. ಅನನ್ಯಾ ಜೊತೆ ತಾಪ್ಸಿ ಪನ್ನು ಅವರು ಧಿಮಾಕು ಪ್ರದರ್ಶಿಸಿದ್ದಾರೆ.
ಅನನ್ಯಾ ದ್ವಿವೇದಿ ಅಭಿಮಾನದಿಂದ ಬಂದು ಸೆಲ್ಫಿ ಕೇಳಿದ್ದರು. ಈ ವೇಳೆ ತಾಪ್ಸಿ ಒರಟಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ನಟಿಯ ವರ್ತನೆ ಸರಿಯಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಾರೆ.