ಗುಟ್ಟಾಗಿ ಮದುವೆಯಾದ ಬಾಲಿವುಡ್​ ನಟಿ ತಾಪ್ಸಿ ಪನ್ನು!

ಗುಟ್ಟಾಗಿ ಮದುವೆಯಾದ ಬಾಲಿವುಡ್​ ನಟಿ ತಾಪ್ಸಿ ಪನ್ನು!

ಬಾಲಿವುಡ್​ನ ಯುವ ನಟಿ ತಾಪ್ಸಿ ಪನ್ನು ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೊದಲ ಪಂದ್ಯ ದೇವ್ರಿಗೆ ಬಿಟ್ಟಿದಾಯ್ತು, ಈಗ ಎರಡನೇ ಪಂದ್ಯ ಹೇಗಿರುತ್ತೆ? – ಪಂಜಾಬ್ ಕಿಂಗ್ಸ್ ವಿರುದ್ಧ RCB ಸೆಕೆಂಡ್ ಮ್ಯಾಚ್

ತಾಪ್ಸಿ ಪನ್ನು ಮಾರ್ಚ್ 23ರಂದು ಉದಯಪುರದಲ್ಲಿ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುಕಾಲದ ಗೆಳೆಯ ಮತ್ತು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಅವರನ್ನು ತಾಪ್ಸಿ ಪನ್ನು ಮದುವೆಯಾಗಿದ್ದಾರೆ.  ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯಲ್ಲಿ ಭಾಗಿಯಾದ ಸ್ನೇಹಿತರು ಸೋಶಿಯಲ್‌ ಮೀಡಿಯಾದಲ್ಲಿ ಕೆಲ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆದರೆ ನಟಿಯ ಮದುವೆಯ ಫೋಟೋ ಎಲ್ಲಿಯೂ ರಿವೀಲ್ ಆಗಿಲ್ಲ. ಮದುವೆ ಬಗ್ಗೆ ನಟಿ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

ಕೆಲದಿನಗಳಿಂದ ನಟಿಯ ಮದುವೆಯ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ ತಾಪ್ಸಿ   ಈ ಬಗ್ಗೆ ಯಾವುದೇ ಸುಳಿವು ಕೊಟ್ಟಿರಲಿಲ್ಲ. ತನ್ನ ಮದುವೆಯ ಸುದ್ದಿ ಬಗ್ಗೆ ಯಾರೂ ರೂಮರ್‌ ಎಲ್ಲಾ ಮಾಡೋದು ಬೇಡ.. ನನ್ನ ಜೀವನ ಅತ್ಯಂತ ಖುಷಿಯ ಸಂಗತಿಯನ್ನು ನಾನೇ ಖಚಿತವಾಗಿ ಹೇಳುತ್ತೇನೆ.. ಯಾವಾಗ ಮದುವೆಯಾಗಬೇಕು, ಹೇಗೆ ಮದುವೆಯಾಗಬೇಕು ಅನ್ನೋದರ ಬಗ್ಗೆಯೆಲ್ಲಾ ನಾನು ನಿರ್ಧರಿಸುತ್ತೇನೆ ಎಂದು ಹೇಳಿದ್ದರು.  ಇದೀಗ ನಟಿ ಉದಯ್‌ಪುರದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದು ತಾಪ್ಸಿ ಫ್ಯಾನ್ಸ್‌ಗೆ ಬೇಸರ ತರಿಸಿದೆ.

Shwetha M