ಟಿ-20 ವಿಶ್ವಕಪ್ ಗೆ ರೋಹಿತ್ ಟೀಂ ರೆಡಿ – IPLನಲ್ಲಿ ಅಬ್ಬರಿಸಿದ್ರೂ ಇವರಿಗೆ ಚಾನ್ಸ್ ಇಲ್ವಾ?

ಟಿ-20 ವಿಶ್ವಕಪ್ ಗೆ ರೋಹಿತ್ ಟೀಂ ರೆಡಿ – IPLನಲ್ಲಿ ಅಬ್ಬರಿಸಿದ್ರೂ ಇವರಿಗೆ ಚಾನ್ಸ್ ಇಲ್ವಾ?

ಐಪಿಎಲ್ ಅಬ್ಬರದ ಬಳಿಕ ಟಿ-20 ವಿಶ್ವಕಪ್ ಹಬ್ಬ ಶುರುವಾಗಲಿದೆ. ಆದ್ರೀಗ ಟಿ-20 ವರ್ಲ್ಡ್​ಕಪ್​ಗೆ ಯಾರ್ಯಾರನ್ನ ಸೆಲೆಕ್ಟ್ ಮಾಡ್ಬೇಕು ಅನ್ನೋದೇ ಬಿಸಿಸಿಐಗೆ ದೊಡ್ಡ ತಲೆ ನೋವಾಗಿದೆ. ಈಗಾಗ್ಲೇ ಐಪಿಎಲ್ ಫ್ರಾಂಚೈಸಿಗಳಲ್ಲಿ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಲೆವೆಲ್​ಗೆ ಪರ್ಫಾಮೆನ್ಸ್ ತೋರುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಆಯ್ಕೆಗಾರರು 15 ಮಂದಿಯ ತಂಡವನ್ನು ಆಯ್ಕೆ ಮಾಡಲು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಜೂನ್ 1 ರಿಂದ 29ರ ವರೆಗೂ ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿಗಾಗಿ ಆಟಗಾರರು ಐಪಿಎಲ್​ ಮುಗಿದ ಒಂದು ವಾರದೊಳಗಾಗಿ ಸಜ್ಜಾಗಬೇಕಿದೆ. ಬಿಸಿಸಿಐ ಮೂಲಗಳ ಪ್ರಕಾರ ವಿಶ್ವಕಪ್‌ಗೆ ತಂಡವನ್ನು ಐಸಿಸಿಯ ಕೊನೆಯ ದಿನ ಅಂದರೆ ಮೇ 1 ರಂದು ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗುವುದು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ಅಜಿತ್ ಅಗರ್ಕರ್ ಜೊತೆಗೆ ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದೆ. ಟಿ-20 ವಿಶ್ವಕಪ್​ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಅನ್ನೋದನ್ನ ನೋಡೋದಾದ್ರೆ..

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ವಿಡಿಯೋ ಪ್ರಕರಣ – ನಿರೀಕ್ಷಣ ಜಾಮೀನು ಮೊರೆ ಹೋದ ತಂದೆ ಮಗ!

ಸಂಭವನೀಯ ಆಟಗಾರರು! 

ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಶುಭ್​​ಮನ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗ್ತಿದೆ. ಬ್ಯಾಕ್​ಅಪ್​​ ಓಪನರ್​​​ ಆಗಿ ಯಶಸ್ವಿ ಜೈಸ್ವಾಲ್​​​ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್​​​​​​​ ಹಾಗೂ ಕೆ.ಎಲ್.ರಾಹುಲ್​​​​​​ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ವಿಕೆಟ್ ಕೀಪರ್​​ ಆಗಿ ರಿಷಬ್​​​​ ಪಂತ್​​​, ಫಿನಿಶರ್​ಗಳಾಗಿ ರಿಂಕು ಸಿಂಗ್ ಸ್ಥಾನ ಪಡೆಯಬಹುದು. ಆಲ್​ರೌಂಡರ್ ಸ್ಥಾನದ ಮೇಲೆ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಕಣ್ಣಿಟ್ಟಿದ್ದಾರೆ. ಯುಜುವೇಂದ್ರ ಚಹಲ್​, ಕುಲ್​ದೀಪ್​​ ಯಾದವ್ ಸ್ಪಿನ್ ಕೋಟಾದಲ್ಲಿ ಸ್ಥಾನ ಪಡೆದ್ರೆ, ವೇಗಿಗಳಾಗಿ ಜಸ್​ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್​​​ ಹಾಗೂ ಅರ್ಷ್​ದೀಪ್​​​​ ಸಿಂಗ್​​ ಆಯ್ಕೆ ದಟ್ಟವಾಗಿದೆ. 15 ಆಟಗಾರರ ಪ್ರಮುಖ ತಂಡದ ಜೊತೆ 5 ಸ್ಟ್ಯಾಂಡ್​​ಬೈ ಆಟಗಾರರಿಗೂ ಫ್ಲೈಟ್ ಏರಲಿದ್ದಾರೆ. ವಿಕೆಟ್ ಕೀಪರ್​​​​​​​​ ಸಂಜು ಸ್ಯಾಮ್ಸನ್​​​, ಆಲ್​​​ರೌಂಡರ್​​ ಶಿವಂ ದುಬೆ ಹಾಗೂ ಸ್ಪಿನ್ನರ್​​​ ರವಿ ಬಿಷ್ನೋಯಿ ಸ್ಟ್ಯಾಂಡ್​​​​ ಬೈ ಆಟಗಾರರಾಗಿ ಆಯ್ಕೆಯಾಗೋ ಸಾಧ್ಯತೆಯಿದೆ. ಜೊತೆಗೆ ಯುವ ವೇಗಿ ಮಯಾಂಕ್​ ಯಾದವ್ ಹಾಗೂ ಮುಖೇಶ್​ ಕುಮಾರ್​ ಕೂಡ ರೋಹಿತ್​​​​ ಶರ್ಮಾ ಅಂಡ್ ಟೀಮ್​​​​ ಜೊತೆ ಪ್ರಯಾಣ ಬೆಳೆಸುವ ನಿರೀಕ್ಷೆ ಹೊಂದಲಾಗಿದೆ.

2008ರ ಬಳಿಕ ಭಾರತ ಟಿ20 ವಿಶ್ವಕಪ್​ ಗೆದ್ದಿಲ್ಲ. 16 ವರ್ಷದಿಂದ ಟೀಮ್ ಇಂಡಿಯಾಗೆ ಕಪ್​​ ಮರೀಚಿಕೆ ಆಗಿದೆ. ಹಾಗಾಗಿ 2024ರ ಟಿ20 ವಿಶ್ವಕಪ್​​ವನ್ನ ಗೆಲ್ಲಲೇಬೇಕೆಂದು ಶಪಥಗೈದಿದ್ದು, ಅಳೆದು ತೂಗಿ ಬಲಿಷ್ಠ ತಂಡವನ್ನ ಕೆರಿಬಿಯನ್ನರ ನಾಡಿಗೆ ಕಳುಹಿಸಲು ಪ್ಲಾನ್ ಮಾಡ್ತಿದೆ. ಹೀಗಾಗಿ ಬಲಿಷ್ಠ ತಂಡವನ್ನೇ ರೆಡಿ ಮಾಡ್ತಿದ್ದಾರೆ. ಇನ್ನು ಐಪಿಎಲ್​ನಲ್ಲಿ ಅಷ್ಟೇನು ಪ್ರದರ್ಶನ ನೀಡದ ಕೆಲವರಿಗೆ ಟಿಕೆಟ್ ಮಿಸ್ ಆಗೋ ಸಾಧ್ಯತೆ ಇದೆ.

ಯಾರಿಗಿಲ್ಲ ಚಾನ್ಸ್? 

ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ, ಜಸ್ಪ್ರೀತ್ ಬುಮ್ರಾ ನಂತರ ಮೊಹಮ್ಮದ್ ಸಿರಾಜ್ ಭಾರತದ ಅತ್ಯಂತ ಅನುಭವಿ ಬೌಲರ್ ಆಗಿದ್ದಾರೆ. ಆದ್ರೆ ಐಪಿಎಲ್ ಋತುವಿನಲ್ಲಿ ಸಿರಾಜ್ ಕಳಪೆ ಫಾರ್ಮ್​ ಗೆ ಸಿಲುಕಿದ್ದಾರೆ. ಇನ್ನು ಭಾರತದ ಓಪನರ್ ಆಗಲು ಇಶಾನ್​ ಕಿಶನ್ ಸಹ ಮೊದಲು ಉತ್ತಮ ಸ್ಪರ್ಧಿಯಾಗಿದ್ದರು. ಆದರೆ ಈ ಬಾರಿ ವಿಶ್ವಕಪ್​ಗೆ ವಿಕೆಟ್ ಕೀಪರ್​ ಬ್ಯಾಟರ್ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇರುವುದರಿಂದಾಗಿ ಇಶಾನ್​ ಕಿಶನ್​ ಈ ವರ್ಷ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ಯುಜ್ವೇಂದ್ರ ಚಾಹಲ್ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ರವಿ ಬಿಷ್ಣೋಯ್ ಆಯ್ಕೆ ಅನುಮಾನವಾಗಿದೆ. ಫಿನಿಶರ್ ಆಗಿ ದಿನೇಶ್ ಕಾರ್ತಿಕ್​ ಹೆಸ್ರು ಕೇಳಿ ಬರ್ತಿದೆಯಾದ್ರೂ ಮುಂಚೂಣಿಯಲ್ಲಿ ಟೀಂ ಇಂಡಿಯಾದ ಫಿನಿಶರ್​ ಜಾಗದಲ್ಲಿ ಶಿವಂ ದುಬೆ ಹೆಸರು ಕೇಳಿಬರುತ್ತಿದೆ. ಹೀಗಾಗಿ ಕಾರ್ತಿಕ್​ ಅವರಿಗೆ ಅವಕಾಶ ಮಿಸ್ ಆಗುವ ಸಾಧ್ಯತೆ ಹೆಚ್ಚಳವಾಗಿದೆ. ಇನ್ನು, ಕಳೆದ ಬಾರಿ ಐಪಿಎಲ್​ ನಲ್ಲಿ ಮಿಂಚು ಹರಿಸಿದ್ದ ರಿಂಕು ಸಿಂಗ್​ ಈ ಬಾರಿ ಅಷ್ಟಾಗಿ ಅಬ್ಬರಿಸುತ್ತಿಲ್ಲ. ಅಲ್ಲದೇ ಈಗಾಗಲೇ ಭಾರತ ತಂಡದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ಶುವಂ ದುಬೆ ಇಬ್ಬರೂ ಫಿನಿಶರ್​ ಮತ್ತು ಬೌಲಿಂಗ್​ ಆಲ್​ರೌಂಡರ್ ಆಗಿರುವುದಿರಂದ ಇವರಿಬ್ಬರ ನಡುವೆ ರಿಂಕು ಸಿಂಗ್​​ ಟಿ20 ವಿಶ್ವಕಪ್​​ಗೆ ಆಯ್ಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಸದ್ಯ ತಂಡದ ಆಯ್ಕೆಯೇ ಅಜಿತ್ ಅಗರ್ಕರ್​​ & ಟೀಮ್​ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್​ ಮಧ್ಯೆ ಫೈಟ್ ಏರ್ಪಟ್ಟಿದ್ದು, ಯಾರನ್ನ ಆಯ್ಕೆ ಮಾಡಬೇಕು, ಯಾರನ್ನ ಡ್ರಾಪ್ ಮಾಡ್ಬೇಕು ಅಂತಾ ಆಯ್ಕೆಗಾರರಿಗೆ ದಿಕ್ಕೇ ತೋಚದಂತಾಗಿದೆ. ಅಳೆದು ತೂಗಿ ಬಲಿಷ್ಠ ತಂಡವನ್ನ ಕಟ್ಟಬೇಕಾದ ದೊಡ್ಡ ಜವಾಬ್ದಾರಿ ಆಯ್ಕೆಗಾರರ ಮೇಲಿದೆ. ಯಾರಿಗೆಲ್ಲಾ ಅದೃಷ್ಟ ಖುಲಾಯಿಸುತ್ತೆ ಅನ್ನೋದು ಬಯಲಾಗಲು ಕೌಂಟ್​ಡೌನ್ ಶುರುವಾಗಿದೆ.

Shwetha M

Leave a Reply

Your email address will not be published. Required fields are marked *