ಮೊಣಕೈ ಗಾಯ.. ರೋಹಿತ್ OUT – ಪಾಕ್ ವಿರುದ್ಧ ಆಡಲ್ವಾ HITಮ್ಯಾನ್?
ಟೀಂ ಇಂಡಿಯಾ ಫ್ಯಾನ್ಸ್ ಗೆ ಭಯವೇನು?

ಮೊಣಕೈ ಗಾಯ.. ರೋಹಿತ್ OUT – ಪಾಕ್ ವಿರುದ್ಧ ಆಡಲ್ವಾ HITಮ್ಯಾನ್?ಟೀಂ ಇಂಡಿಯಾ ಫ್ಯಾನ್ಸ್ ಗೆ ಭಯವೇನು?

ಗ್ಯಾಲರಿ ತುಂಬೆಲ್ಲಾ ಬ್ಲೂ ಜೆರ್ಸಿಗಳು. ಇಂಡಿಯಾ ಇಂಡಿಯಾ ಅನ್ನೋ ಘೋಷಣೆಗಳು. ಟಿ0-20 ವರ್ಲ್ಡ್​​ಕಪ್ ನಡೆಯುತ್ತಿರೋದು ಅಮೆರಿಕದಲ್ಲೇ ಆದ್ರೂ ಅಲ್ಲಿ ಭಾರತದ ಅಭಿಮಾನಿಗಳ ಅಬ್ಬರ ಮುಗಿಲು ಮುಟ್ಟಿತ್ತು. ರೋಹಿತ್ ಶರ್ಮಾ ಪಡೆ ಹೋಂ ಗ್ರೌಂಡ್​ನಲ್ಲೇ ಮ್ಯಾಚ್ ಆಡಿದಂಥ ಫೀಲ್ ಇತ್ತು. ಬ್ಲೂಜೆರ್ಸಿ ತೊಟ್ಟ ಸಾವಿರಾರು ಅಭಿಮಾನಿಗಳ ನಡುವೆ ಮೈದಾನಕ್ಕೆ ಇಳಿದ ಟೀಂ ಇಂಡಿಯಾ ಬಾಯ್ಸ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಐರ್ಲೆಂಡ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಟೀಂ ಇಂಡಿಯಾ ಟಿ-20 ವರ್ಲ್ಡ್​ಕಪ್​ನಲ್ಲಿ ಶುಭಾರಂಭ ಮಾಡಿದ್ದಾರೆ. ಭಾರತ ತಂಡದ ಪ್ರದರ್ಶನಕ್ಕೆ ಅಮೆರಿಕದಲ್ಲಿನ ಅಭಿಮಾನಿಗಳೂ ಕೂಡ ಫುಲ್ ಖುಷ್ ಆಗಿದ್ದಾರೆ. ಆದ್ರೆ ಈ ಸಂಭ್ರಮ, ಸೆಲೆಬ್ರೇಷನ್ ನಡುವೆಯೇ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಮುಂದಿನ ಪಂದ್ಯಗಳ ನಡುವೆ ಆತಂಕ ಉಂಟು ಮಾಡಿದೆ. ಅಷ್ಟಕ್ಕೂ ಏನದು ಸುದ್ದಿ..? ಮುಂದಿನ ಪಂದ್ಯಗಳಿಗೆ ಹೇಗೆ ಎಫೆಕ್ಟ್ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸುಧಾಕರ್ ಗೆಲ್ಲಿಸಿದ್ದೇ ಟ್ರೋಲ್ ಮೇಷ್ಟ್ರು – ಇರಲಾರದೆ ಇರುವೆ ಬಿಟ್ಕೊಂಡ್ರಾ?

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಿದೆ. ಈ ಮ್ಯಾಚ್​ನಲ್ಲಿ ಐರ್ಲೆಂಡ್ ತಂಡವನ್ನು ಭರ್ಜರಿ 8 ವಿಕೆಟ್​ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 16 ಓವರ್​ಗಳಲ್ಲಿ 96 ರನ್​ಗಳಿಗೆ ಆಲೌಟ್ ಆಯ್ತು. ಬಳಿಕ ಚೇಸಿಂಗ್​ಗೆ ಇಳಿದ ಟೀಂ ಇಂಡಿಯಾ ಆಟಗಾರರು ನೀರು ಕುಡಿದಷ್ಟೇ ಸಲೀಸಾಗಿ ಟಾರ್ಗೆಟ್ ರೀಚ್ ಮಾಡಿದ್ರು. ಜಸ್ಟ್ 12.2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿದ್ರು.  ರಿಷಭ್ ಪಂತ್ ರಿವರ್ಸ್ ಸ್ಕೂಪ್‌ನೊಂದಿಗೆ ಸಿಕ್ಸರ್ ಬಾರಿಸುವ ಮೂಲಕ ಮ್ಯಾಚ್ ಫಿನಿಶ್ ಮಾಡಿದ್ರು. ಅದ್ರಲ್ಲೂ ಟೀಂ ಇಂಡಿಯಾ ಪರ ಅಬ್ಬರಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟ ಆಡಿದ್ರು. ಬಟ್ ಇಲ್ಲಿ ಇಂಡಿಯಾ ಗೆದ್ದ ಖುಷಿಗಿಂತ ರೋಹಿತ್ ಶರ್ಮಾ ಅವ್ರು ಅರ್ಧ ಪಂದ್ಯದಲ್ಲೇ ಹೊರ ನಡೆದಿದ್ದು ಆತಂಕ ಮೂಡಿಸಿದೆ. ಮುಂದಿನ ಮ್ಯಾಚ್​ಗಳಿಗೆ ಹೆಂಗಪ್ಪ ಕಥೆ ಅನ್ನೋ ಪ್ರಶ್ನೆ ಮೂಡಿಸಿದೆ.

ಟೀಂ ಇಂಡಿಯಾಗೆ ರೋಹಿತ್ ಚಿಂತೆ!  

ಐಪಿಎಲ್​ನಲ್ಲಿ ಡಲ್ ಆಗಿದ್ದ ರೋಹಿತ್ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. 37 ಎಸೆತಗಳಲ್ಲಿ 3 ಸಿಕ್ಸ್, 4 ಫೋರ್​ಗಳ ಸಮೇತ 52 ರನ್ ಬಾರಿಸಿದ್ರು. ಹಾಗೇ ಈ ಪಂದ್ಯದ ಮೂಲಕ ಸಾಲು ಸಾಲು ದಾಖಲೆಗಳನ್ನೂ ಬರೆದ್ರು. ಬಟ್ ಇಲ್ಲಿ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ರು. ಓಪನರ್ ಆಗಿ ಕಣಕ್ಕಿಳಿದ ವಿರಾಟ್ 5 ಬಾಲ್​ಗಳಲ್ಲಿ 1 ರನ್ ಗಳಿಸಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಬಳಿಕ ಜೊತೆಯಾದ ರಿಷಬ್ ಪಂತ್ ಉತ್ತಮ ಸಾಥ್ ಕೊಟ್ಟಿದ್ದರಿಂದ ಟೀಂ ಇಂಡಿಯಾ ಬೇಗನೆ ಟಾರ್ಗೆಟ್ ರೀಚ್ ಆಯ್ತು. ಚೆನ್ನಾಗೇ ಬ್ಯಾಟ್ ಬೀಸ್ತಿದ್ದ ರೋಹಿತ್ ಪಂದ್ಯವನ್ನ ತಾವೇ ಫಿನಿಶ್ ಮಾಡೋ ಜೋಶ್​ನಲ್ಲಿದ್ರು. ಬಟ್ ಆಟದ ಮಧ್ಯೆಯೇ ಹರ್ಟ್ ಆಗಿ ನಿವೃತ್ತಿಯಾದರು. 9ನೇ ಓವರ್ ನಲ್ಲಿ ಜೋಶ್ ಲಿಟಲ್ ಅವರ ಬೌನ್ಸರ್ ರೋಹಿತ್ ಶರ್ಮಾ ಅವರ ಮೊಣಕೈಗೆ ಬಲವಾಗಿ ಬಡಿದಿತ್ತು. ಮುಂದಿನ ಓವರ್‌ನಲ್ಲಿ ಶಾಟ್ ಆಡುವಾಗ ರೋಹಿತ್ ಮೊಣಕೈ ನೋವಿನಿಂದ ಬಳಲುತ್ತಿದ್ದರು. 10ನೇ ಓವರ್​ನ ಕೊನೆಯ ಎಸೆತವನ್ನು ಆಡಿದ ರೋಹಿತ್ ಶರ್ಮಾ ಮೊಣಕೈ ನೋವಿನಿಂದ ಮೈದಾನದಿಂದ ಹೊರ ನಡೆದ್ರು. ಹೀಗೆ ರೋಹಿತ್ ಶರ್ಮಾ ಹೊರ ನಡೆದಿದ್ದು ಟೀಂ ಇಂಡಿಯಾ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.  ಜೂನ್ 9 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಆತಂಕ ಮೂಡಿದೆ. ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ಕೂಡ ತಮ್ಮ ಮೊಣಕೈ ನೋವನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ಬೇಗ ಚೇತರಿಸಿಕೊಳ್ಳೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿರು. ಇದಕ್ಕೂ ಮುನ್ನ ಭಾರತದ ಆಟಗಾರ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನಿ ಆಟಗಾರ ಬಾಬರ್ ಆಝಂ ಈ ಸಾಧನೆ ಮಾಡಿದ್ದರು. ಹಾಗೆಯೇ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ 1,000 ರನ್ ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ. ಹಾಗೇ ಇದೇ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದ ಹಿಟ್​ಮ್ಯಾನ್  600 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.  ಹಾಗೇ ಬುಧವಾರದ ಪಂದ್ಯದಲ್ಲಿ ರೋಹಿತ್ ಜೊತೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಫುಲ್ ಶೈನ್ ಆಗಿದ್ರು. ಐಪಿಎಲ್​​ನಲ್ಲಿ ಟೀಕೆಗೆ ಗುರಿಯಾಗಿದ್ದ ಪಾಂಡ್ಯ ಬಗ್ಗೆ ಈಗ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಿವೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಲ್ ರೌಂಡ್ ಶೋ ಮೂಲಕ ಪಾಂಡ್ಯ ತಾವೇನು ಅನ್ನೋದನ್ನ ಪ್ರೂವ್ ಮಾಡಿದ್ದರು. ಇದೀಗ ಐರ್ಲೆಂಡ್ ವಿರುದ್ಧ ಬೌಲಿಂಗ್​ನಲ್ಲೂ ಮಾರಕ ದಾಳಿ ನಡೆಸಿ ಸೈ ಅನಿಸಿಕೊಂಡಿದ್ದಾರೆ. 4 ಓವರ್ ಬೌಲ್ ಮಾಡಿದ ಪಾಂಡ್ಯ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ರು. ಇದೇ ಕಾರಣಕ್ಕೆ ಐಪಿಎಲ್​ನಲ್ಲಿ ವಿಲನ್ ಆಗಿದ್ದ ಪಾಂಡ್ಯ ವಿಶ್ವಕಪ್​ನಲ್ಲಿ ಹೀರೋ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಅಮೂಲ್ಯ ಆಸ್ತಿ ಎಂದು ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಹಾಗೇ ಫ್ಯಾನ್ಸ್ ಕೂಡ ಪಾಂಡ್ಯ ಪರ್ಫಾಮೆನ್ಸ್​ಗೆ ಬಹುಪರಾಕ್ ಹಾಕಿದ್ದಾರೆ. ಸದ್ಯ ಐರ್ಲೆಂಡ್ ವಿರುದ್ಧದ ಗೆಲುವಿನ ಮೂಲಕ ಭಾರತ ತಂಡ ಎ ಗುಂಪಿನಲ್ಲಿ ಎರಡು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ರೋಹಿತ್ ಪಡೆ ತನ್ನ ಮುಂದಿನ ಪಂದ್ಯವನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಬದ್ಧ ವೈರಿಗಳ ಕಾದಾಟಕ್ಕೆ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ.

Shwetha M

Leave a Reply

Your email address will not be published. Required fields are marked *