IND Vs PAK.. ನೋ ಶೇಕ್ ಹ್ಯಾಂಡ್ – T-20 ವಿಶ್ವಕಪ್ ನಲ್ಲೂ ಕ್ಯಾಪ್ಟನ್ಸ್ ಫೈಟ್
ಮೈದಾನದ ಕಿಚ್ಚು ಹೊರಗೂ ಹರಡುತ್ತಾ?

IND Vs PAK.. ನೋ ಶೇಕ್ ಹ್ಯಾಂಡ್ – T-20 ವಿಶ್ವಕಪ್ ನಲ್ಲೂ ಕ್ಯಾಪ್ಟನ್ಸ್ ಫೈಟ್ಮೈದಾನದ ಕಿಚ್ಚು ಹೊರಗೂ ಹರಡುತ್ತಾ?

ಭಾರತ ಮತ್ತು ಪಾಕಿಸ್ತಾನ ಮ್ಯಾಚಸ್ ಅಂದ್ರೆ ಮೊದ್ಲೆಲ್ಲಾ ಬರೀ ಸೋಲು ಗೆಲುವು ಮಾತ್ರ ಮ್ಯಾಟ್ರ್ ಆಗ್ತಿತ್ತು. ಆದ್ರೆ ಈಗ ಪಂದ್ಯದ ಹೊರತಾಗಿ ಬೇರೆ ಬೇರೆ ವಿಚಾರಗಳೂ ಟ್ರೆಂಡಿಂಗ್​ಗೆ ಬರುತ್ತೆ. ಈಗ ಟಿ-20 ವಿಶ್ವಕಪ್​ನಲ್ಲಿ ಮಹಿಳಾ ತಂಡಗಳ ನಡುವಿನ ಮ್ಯಾಚ್ ಕೂಡ ಕಾಂಟ್ರವರ್ಸಿಯಾಗಿದೆ. 10ನೇ ಆವೃತ್ತಿಯ ಮಹಿಳಾ ಟಿ-20 ವಿಶ್ವಕಪ್​ನಲ್ಲಿ ಜೂನ್ 14ಅಂದ್ರೆ ಭಾನುವಾರ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿ ಆಗಿದ್ವು. ನಿರೀಕ್ಷೆಯಂತೆಯೇ ಮ್ಯಾಚಲ್ಲಿ ಭಾರತವೇ ಗೆದ್ದು ಬೀಗಿದೆ. ಅದೂ ಕೂಡ 64 ರನ್​ಗಳ ಬಿಗ್ ಮಾರ್ಜಿನ್​ನಿಂದ. ಇದ್ರಲ್ಲೇನು ಸ್ಪೆಷಾಲಿಟಿ ಇಲ್ಲ. ಯಾಕಂದ್ರೆ ಭಾರತ-ಪಾಕ್ ಅಂತಾ ಬಂದಾಗ ಅಲ್ಲಿ ಭಾರತವೇ ಬಾಸ್ ಅನ್ನೋದು ಎಲ್ರಿಗೂ ಗೊತ್ತಿರೋದೇ. ಮೆನ್ಸ್ ಇರ್ಲಿ ವುಮೆನ್ಸ್ ಇರ್ಲಿ ಭಾರತ ಗೆದ್ದೇ ಗೆಲ್ಲುತ್ತೆ. ಆದ್ರೆ ಮ್ಯಾಚ್ ಟೈಮಲ್ಲಿನ ಕೆಲ ಬೆಳವಣಿಗೆಗಳು ಹಲವು ಚರ್ಚೆಗಳನ್ನ ಹುಟ್ಟು ಹಾಕಿವೆ.

ಇದನ್ನೂ ಓದಿ : PAK ಸೊಕ್ಕು ಮುರಿದ ಸಿಂಹಿಣಿಯರು – ದೀಪ್ತಿ 5-FERಗೆ ಬ್ಯಾಟರ್ಸ್ ಧೂಳೀಪಟ

ಟಿ-20 ವಿಶ್ವಕಪ್ ನಲ್ಲೂ ಕೈಲುಕದ ಆಟಗಾರ್ತಿಯರು!

ಭಾರತ-ಪಾಕಿಸ್ತಾನ ನಡುವಿನ ಮ್ಯಾಚ್ ಅಂದ್ರೆ ಈಗ ನೋ ಶೇಕ್ ಹ್ಯಾಂಡ್ ಪಾಲಿಸಿ ಅನ್ನೋ ವಿಚಾರ ಧುತ್ತನೆ ಎದ್ದು ಕೂರುತ್ತೆ. ಕಳೆದ ವರ್ಷ ಏಷ್ಯಾಕಪ್​ನಿಂದ ಸ್ಟಾರ್ಟ್ ಆದ ಈ ಪಾಲಿಸಿ ಈಗ ಹೆಮ್ಮರವಾಗ್ತಿದೆ. ಒಬ್ರಿಂದ ಒಬ್ರಿಗೆ ಹರಡ್ತಾನೇ ಹೋಗ್ತಿದೆ. ಬರ್ಮಿಂಗ್ ಹ್ಯಾಮ್​ನಲ್ಲಿ ನಿನ್ನೆ ನಡೆದ ಮ್ಯಾಚಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಳ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಟಾಸ್ ಟೈಮಲ್ಲಿ ಉಭಯ ತಂಡಗಳ ನಾಯಕರು ಕೈಕುಲುಕೋದು ವಾಡಿಕೆ. ಆದ್ರೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಾಕಿಸ್ತಾನಿ ನಾಯಕಿಯೊಂದಿಗೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಇನ್ನು ಪಂದ್ಯದ ಬಳಿಕವೂ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲಿಲ್ಲ.

ಏಷ್ಯಾಕಪ್ ನಿಂದ ಆರಂಭವಾದ ವಿವಾದ ಎಲ್ಲಾ ಮಾದರಿಗೂ ಸ್ಪ್ರೆಡ್!

ಅಷ್ಟಕ್ಕೂ ಭಾರತ ಮತ್ತು ಪಾಕ್ ನಡುವೆ ನೋ ಶೇಕ್ ಹ್ಯಾಂಡ್ ಕಾನ್ಸೆಪ್ಟ್ ಶುರುವಾಗಿದ್ದೇ ಕಳೆದ ವರ್ಷ ಏಷ್ಯಾಕಪ್​ನಲ್ಲಿ. ಅಲ್ಲಿಂದ ಈಚೆಗೆ ಎಲ್ಲಾ ಮಾದರಿಗೂ ಅದು ಸ್ಪ್ರೆಡ್ ಆಗಿದೆ. 2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಕಾಂಟ್ರವರ್ಸಿಯಾಗಿತ್ತು. ಇದ್ರಿಂದ ತೀವ್ರ ಅವಮಾನಕ್ಕೊಳಗಾಗಿದ್ದ ಪಾಕಿಸ್ತಾನ ಐಸಿಸಿಗೂ ದೂರು ಕೊಟ್ಟಿತ್ತು. ಆಮೇಲೆ ಭಾರತ ಚಾಂಪಿಯನ್ ಪಟ್ಟಕ್ಕೇರಿದ್ರೂ ಎಸಿಸಿ ಅಧ್ಯಕ್ಷರಾಗಿದ್ದ ಮೊಹ್ಸಿನ್ ನಖ್ವಿ, ಟೀಂ ಇಂಡಿಯಾಕ್ಕೆ ನೀಡಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸಿಲ್ಲ. ಈ ಟೂರ್ನಿಯ ಬಳಿಕ ನಡೆದಿದ್ದ ಮಹಿಳಾ ವಿಶ್ವಕಪ್, U19 ವಿಶ್ವಕಪ್, ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಮತ್ತು ಪುರುಷರ ಟಿ20 ವಿಶ್ವಕಪ್‌ನಲ್ಲಿಯೂ ಉಭಯ ತಂಡಗಳ ಆಟಗಾರರು ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಈಗ ಟಿ-20 ವಿಶ್ವಕಪ್​ನಲ್ಲೂ ಹರ್ಮನ್ ಪ್ರೀತ್ ಕೌರ್ ಪಾಕ್ ನಾಯಕಿ ಫಾತಿಮಾ ಜೊತೆ ಕೈಕುಲುಕಲಿಲ್ಲ. ಇದೇ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ.

ನೋ ಶೇಕ್ ಹ್ಯಾಂಡ್ ಎಫೆಕ್ಟ್!

ಇನ್ಮುಂದೆ ಇಂಡೋ-ಪಾಕ್ ಪ್ರತೀ ಪಂದ್ಯಗಳಿಗೂ ನೋ ಶೇಕ್ ಹ್ಯಾಂಡ್

ಪಂದ್ಯದ ಆರಂಭಕ್ಕೂ ಮುನ್ನವೇ ಎರಡೂ ದೇಶಗಳ ನಡುವೆ ಪ್ರತಿಷ್ಠೆ

ಟಾಸ್ ಟೈಮಲ್ಲೇ ಪರಸ್ಪರ ವೈರತ್ವ.. ಗೆದ್ದ ಮೇಲೆಯೂ ಕೈಕುಲುಕಲ್ಲ

ಮೈದಾನದ ಹೊರಗೂ ಅಭಿಮಾನಿಗಳ ನಡುವೆ ಹೆಚ್ಚುತ್ತಿರೋ ಕಿಚ್ಚು

ಕ್ರೀಡಾಸ್ಪೂರ್ತಿ ಇಲ್ಲವೆಂದು ಜಾಗತಿಕ ಮಟ್ಟದಲ್ಲಿ ಬಾರೀ ಚರ್ಚೆ

ಭಾರತ ಮತ್ತು ಪಾಕ್ ನಡುವಿನ ಮ್ಯಾಚಸ್ ಅಂದ್ರೆ ಆಲ್ರೆಡಿ ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಸೋಲು ಗೆಲುವಿನ ವಿಚಾರದಲ್ಲಿ ರಾಜಕೀಯವೂ ಸೇರ್ಪಡೆಗೊಳ್ತಿದೆ. ಈಗ ಆಟದ ವೇಳೆ ಪರಸ್ಪರ ಕೈಕುಲುಕದೇ ಇರೋದು ಌಡ್ ಆಗ್ತಿದೆ ಅಷ್ಟೇ. ಒಟ್ನಲ್ಲಿ ಭಾರತ ಪಾಕಿಸ್ತಾನದ ಜೊತೆ ಕೈಕುಲುಕದೆ ಇರೋದಕ್ಕೆ ಕೆಲವರು ಪರವಾಗಿದ್ರೆ ಇನ್ನೂ ಕೆಲವರು ವಿರೋಧ ಮಾಡ್ತಿದ್ದಾರೆ. ಬಟ್ ಎಂಡ್ ಆಫ್ ದಿ ಡೇ ಭಾರತ ಗೆಲ್ಲೋದಷ್ಟೇ ಮುಖ್ಯ.

Shantha Kumari

Leave a Reply

Your email address will not be published. Required fields are marked *