ಗೆಲ್ಲದಿದ್ರೂ ಪಾಕಿಗಳ ಗಾಂಚಾಲಿ – ಸೆಂಡ್ ಆಫ್ ಅಬ್ರಾರ್ ಟಾರ್ಗೆಟ್
ಬಿಲ್ಡಪ್ ಕೊಟ್ಟವ್ರಿಗೆ ಬೀಳುತ್ತೆ ಗುನ್ನಾ!

ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅಂದ್ರೆ ಆಟ ಅಷ್ಟೇ ಅಲ್ಲ.. ಅಲ್ಲಿ ಕಿತ್ತಾಟವೂ ಇರುತ್ತೆ. ಆನ್ಫೀಲ್ಡ್ನಲ್ಲೇ ಸ್ಲೆಡ್ಜಿಂಗ್ ಮಾಡ್ತಾರೆ. ಟ್ರಿಗರ್ ಮಾಡ್ತಾರೆ. ವಾಗ್ವಾದಗಳೂ ನಡೆಯುತ್ತೆ. ಪ್ರತೀ ಬಾರಿ ಇಂಡೋಪಾಕ್ ಪಂದ್ಯ ಆದಾಗ್ಲೂ ಒಂದಿಲ್ಲೊಂದು ಕಾಂಟ್ರವರ್ಸಿ ಆಗ್ತಾನೇ ಇರುತ್ತೆ. ಕಳೆದ ಏಷ್ಯಾಕಪ್ನಲ್ಲೂ ಸಾಕಷ್ಟು ಕಿರಿಕ್ಗಳು ಆಗಿದ್ವು.
ಇದನ್ನೂ ಓದಿ : PAKಗೆ ಅಭಿ-ಕಿಶನ್ ಭಯ – ಭಾರತಕ್ಕೆ ಸ್ಪಿನ್ ಅಸ್ತ್ರ ಸವಾಲಾಗುತ್ತಾ?
ಇಂಡೋಪಾಕ್ ಮ್ಯಾಚ್ ಅಂದಾಗ ಆಟಗಾರರಿಗೂ ಪ್ರತಿಷ್ಠೆ.. ಅಭಿಮಾನಿಗಳಿಗೂ ಪ್ರತಿಷ್ಠೆ. ಅಷ್ಟೇ ಯಾಕೆ ಎರಡು ರಾಷ್ಟ್ರಗಳ ಸರ್ಕಾರಗಳೂ ಈಗ ಅದನ್ನ ಪ್ರತಿಷ್ಠೆಯಾಗೇ ತಗೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಂತೂ ನೆಕ್ಸ್ಟ್ ಲೆವೆಲ್ ಟಾಂಟ್ ನಡೀತಿರುತ್ತೆ. ಇನ್ನು ಮೈದಾನಗಳಲ್ಲಿ ಯಾರು ಯಾರನ್ನ ಹೇಗೆ ಟ್ರಿಗರ್ ಮಾಡ್ತಾರೆ ಅನ್ನೋದನ್ನೂ ಹೇಳೋಕಾಗಲ್ಲ. ಸೋ ಈ ಬಾರಿಯ ಪಂದ್ಯದಲ್ಲೂ ಆ ಥರದ ಸಿಚುಯೇಷನ್ಸ್ ಕ್ರಿಯೇಟ್ ಆಗೇ ಆಗುತ್ತೆ. ಅದ್ರಲ್ಲೂ ಬಾಲ ಬಿಚ್ಚೋದ್ರಲ್ಲಿ ಪಾಕ್ನ ಕೆಲ ಪ್ಲೇಯರ್ಸ್ ಮುಂಚೂಣಿಯಲ್ಲಿದ್ದಾರೆ.
ಸೆಂಡ್ ಆಫ್ ಸಿಗ್ನಲ್ ನಲ್ಲೇ ಗಾಂಚಾಲಿ ತೋರಿಸೋ ಅಬ್ರಾರ್!
ಅಬ್ರಾರ್ ಅಹ್ಮದ್.. ಪಾಕಿಸ್ತಾನದ ಸ್ಪಿನ್ ಬೌಲರ್. ಈತನ ಕಪಿಚೇಷ್ಟೆಯನ್ನ ನೀವು ಸಾಕಷ್ಟು ಸಲ ನೋಡೇ ಇರ್ತಿರಾ. ಚಾಂಪಿಯನ್ಸ್ ಟ್ರೋಫಿ ಟೈಮಲ್ಲಿ ಶುಭ್ಮನ್ ಗಿಲ್ರನ್ನ ಔಟ್ ಮಾಡಿ ಕುತ್ತಿಗೆಯಲ್ಲೇ ನಡಿ ನಡಿ ಎನ್ನುವಂತೆ ಸಹ್ನೆ ಮಾಡಿದ್ದ. ಇದೇ ಅಬ್ರಾರ್ ಏಷ್ಯಾಕಪ್ನ ಫೈನಲ್ ಮ್ಯಾಚಲ್ಲೂ ಮತ್ತೊಮ್ಮೆ ಅದನ್ನೇ ಅಣಕ ಮಾಡಿದ್ದ. ಟಾಪ್ ಆರ್ಡರ್ ಬ್ಯಾಟಿಂಗ್ ಬೇಗ ಔಟ್ ಆದಾಗ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಸೆಟಲ್ ಆಗಿ ಬ್ಯಾಟ್ ಬೀಸ್ತಿತ್ತು. ಇಂಥಾ ಟೈಮಲ್ಲಿ ಅಬ್ರಾರ್ ಬೌಲಿಂಗ್ನಲ್ಲಿ ಸಂಜು ಕ್ಯಾಚ್ ನೀಡಿದ್ರು. ಈ ಟೈಮಲ್ಲಿ ಅಬ್ರಾರ್ ಮನೆಗೆ ಹೋಗು ಅನ್ನೋ ಹಾಗೇ ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಸೆಲೆಬ್ರೇಟ್ ಮಾಡಿದ್ದ. ಆದ್ರೆ ಕ್ಲೈಮ್ಯಾಕ್ಸ್ನಲ್ಲಿ ಸೋತು ಪಾಕಿಸ್ತಾನನೇ ಮನೆಗೆ ಹೋಯ್ತು. ಹೀಗಾಗಿ ಭಾರತೀಯ ಆಟಗಾರರಾದ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸಂಜು ಸ್ಯಾಮ್ಸನ್ ಎದುರುಗಡೆ ಅಬ್ರಾರ್ ರೀತಿ ಸೆಲೆಬ್ರೇಷನ್ ಮಾಡಿ ತಿರುಗೇಟು ಕೊಟ್ಟಿದ್ರು.
ಮತ್ತೊಂದೆಡೆ ಸೂಪರ್ 4 ಹಂತದ ಮ್ಯಾಚಲ್ಲಿ 6 ರಫೇಲ್ ಯುದ್ಧ ವಿಮಾನಗಳನ್ನ ಹೊಡೆದುರುಳಿಸೋದಾಗಿ ಹ್ಯಾರಿಸ್ ರೌಫ್ ಬಿಲ್ಡಪ್ ಕೊಟ್ಟಿದ್ದ. ಬಟ್ ಆವತ್ತೇ ಅರ್ಶದೀಪ್ ಸಿಂಗ್ ಬ್ಯಾಕ್ ಫೈರ್ ಆಗೋ ಥರ ರಿವೇಂಜ್ ತೀರಿಸಿಕೊಂಡಿದ್ರು. ಜಸ್ಪ್ರೀತ್ ಬುಮ್ರಾ ಕೂಡ ಫೈನಲ್ ಮ್ಯಾಚಲ್ಲಿ ಟಾಂಟ್ ಕೊಟ್ಟಿದ್ರು. ಬುಮ್ರಾ ಬೌಲಿಂಗ್ನಲ್ಲಿ ರೌಫ್ ಔಟ್ ಆಗ್ತಾ ಇದ್ದಂತೆ ಜೆಟ್ ಪತನದ ಆಕ್ಷನ್ ಮಾಡುವ ಮೂಲಕ ಪಾಕ್ ವೇಗಿಗೆ ಬಿಸಿ ಮುಟ್ಟಿಸಿದ್ರು.
ಇನ್ನು ಏಷ್ಯಾಕಪ್ನಲ್ಲೇ ಅಭಿಷೇಕ್ ಶರ್ಮಾ ಜೊತೆ ಹ್ಯಾರಿಸ್ ರೌಫ್ ಮೈದಾನದಲ್ಲೇ ಕಿರಿಕ್ ಮಾಡಿದ್ದ. ಆಗ ಇಬ್ಬರ ನಡುವೆ ವಾಗ್ವಾದ ಕೂಡ ಆಗಿತ್ತು. ಇನ್ನು ಇದೆಲ್ಲಕ್ಕಿಂತ ಜಾಸ್ತಿ ಭಾರತ ಪಾಕಿಸ್ತಾನದ ನಡುವೆ ಈಗ ನೋ ಹ್ಯಾಂಡ್ಶೇಕ್ ವಿವಾದ ಕೂಡ ಜಾಸ್ತಿಯಾಗ್ತಿದೆ ಕ್ರಿಕೆಟ್ನ ಕ್ರಿಕೆಟ್ ಆಗಿ ನೋಡಿ, ಕ್ರೀಡಾಸ್ಫೂರ್ತಿ ಇರ್ಬೇಕು ಹ್ಯಾಂಡ್ಶೇಕ್ ಕೊಡೋದ್ರಲ್ಲಿ ತಪ್ಪಿಲ್ಲ ಅಂತಾ ಕೆಲ ರಾಷ್ಟ್ರಗಳು ಸಜೇಷನ್ಸ್ ಕೊಡ್ತಿವೆ. ಕಳೆದ ಏಷ್ಯಾಕಪ್ನಿಂದ ನೋ ಶೇಕ್ಹ್ಯಾಂಡ್ ಪಾಲಿಸಿ ಬಂದಿದ್ದು ಈ ಸಲವೂ ಏನ್ ಆಗುತ್ತೆ ಅನ್ನೋ ಕ್ಯೂರಿಯಾಸಿಟಿ ಇದೆ.
ಹೀಗೆ ಏಷ್ಯಾಕಪ್ ಟೂರ್ನಿಯುದ್ದಕ್ಕೂ ಪಾಕಿಸ್ತಾನದ ಆಟಗಾರರು ಆನ್ಫೀಲ್ಡ್ನಲ್ಲೇ ಬೇಜಾನ್ ಗಾಂಚಾಲಿ ತೋರಿಸಿದ್ರು. ಈ ಸಲ ಕೂಡ ಪಂದ್ಯ ಸ್ಟಾರ್ಟ್ ಆಗೋ ಮುನ್ನವೇ ಕೆಲ ಪ್ಲೇಯರ್ಸ್ ಬಾಲ ಬಿಚ್ಚಿದ್ದಾರೆ. ಸಲ್ಮಾನ್ ಅಲಿ ಅಘಾ, ಸಾಹಿಬ್ದಾದಾ ಫರ್ಹಾನ್, ಉಸ್ಮಾನ್ ತಾರಿಕ್ ಕೂಡ ಭಾರತ ನಮ್ಮ ವಿರುದ್ಧ ಮ್ಯಾಚ್ ಆಡೋಕೆ ಭಯ ಬೀಳ್ತಿದೆ ಅನ್ನೋ ಥರ ಬಿಲ್ಡಪ್ ಕೊಟ್ಟಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನಿಯರು ಎಷ್ಟೇ ಹಾರಾಡಿದ್ರೂ ಕೊನೆಗೆ ಸೋತು ಹ್ಯಾಪ್ಮೋರೆ ಹಾಕ್ಕೊಂಡು ಮನೆಗೆ ಹೋಗೋದಂತೂ ತಪ್ಪಲ್ಲ.

ನೋಡಿರಿ

