ಕ್ರಿಕೆಟ್‌ ಫೀಲ್ಡ್‌ ನ ಹೀರೋಯಿನ್ಸ್‌!! – ಯಾವ Anchor ಹೆಚ್ಚು ಜನಪ್ರಿಯ?
ಬೂಮ್ರಾ ದಂಪತಿ ವೈರಲ್‌ ಆಗಿದ್ದೇಕೆ?

ಕ್ರಿಕೆಟ್‌ ಫೀಲ್ಡ್‌ ನ ಹೀರೋಯಿನ್ಸ್‌!! – ಯಾವ Anchor ಹೆಚ್ಚು ಜನಪ್ರಿಯ?ಬೂಮ್ರಾ ದಂಪತಿ ವೈರಲ್‌ ಆಗಿದ್ದೇಕೆ?

ಯುಎಸ್ ಎ ಹಾಗೂ ವೆಸ್ಟ್ ಇಂಡೀಸ್ನಲ್ಲಿ ಟಿ20 ವಿಶ್ವಕಪ್ ನಡೀತಾ ಇದೆ.  ಕ್ರಿಕೆಟ್ ಹಬ್ಬದಲ್ಲಿ ಕ್ರಿಕೆಟರ್ಸ್ ಜೊತೆಗೆ ಮಹಿಳಾ ಆ್ಯಂಕರ್ಸ್ ಕೂಡ ಮಿಂಚುತ್ತಿದ್ದಾರೆ.. ಮ್ಯಾಚ್ ಶುರುವಾಗೋಕು ಮೊದ್ಲು.. ಮತ್ತು ಮ್ಯಾಚ್ ಮುಗಿದ ಕೂಡ್ಲೇ ಲೇಡಿ ಆಂಕರ್ಸ್ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ..  ಈ ಬಾರಿ ಟಿ 20 ವಿಶ್ವಕಪ್‌ನಲ್ಲಿ ನಿರೂಪಣೆ ಮಾಡ್ತಾ ಇರೋ ಮಹಿಳಾ ಆ್ಯಂಕರ್ಸ್ ಗಳ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

T20  ವಲ್ಡ್ ಕಪ್ ನಲ್ಲಿ ಬಹುತೇಕರು ತಮ್ಮ ನೆಚ್ಚಿನ ಕ್ರಿಕೆಟರ್ಸ್ ಅನ್ನ ನೋಡಲು ಮೈದಾನಕ್ಕೆ ಹೋದ್ರೆ, ಇನ್ನು ಕೆಲವರು   ಅಪ್ಸರೆಯಂತಹ ಆ್ಯಂಕರ್ಸ್ ನೊಡಲು ಟಿವಿ ಮುಂದೆ ಕೂರುತ್ತಾರೆ.. ಮ್ಯಾಚ್‌ ಮುಗಿಯುತ್ತಿದ್ದಂತೆ ಈ ಸುಂದರಿಯರನ್ನು ನೋಡಲು ಕಾತರದಿಂದ ಕಾಯ್ತಾ ಇರ್ತಾರೆ   ಅದರಲ್ಲೂ ಕೆಲವು ಆ್ಯಂಕರ್‌ಗಳಿಗೆ ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲದಂತಹ ಫ್ಯಾನ್ಸ್‌ ಇದ್ದಾರೆ.. ಈ ಸಾಲಿನಲ್ಲಿ ಬರುವ ಪ್ರಸಿದ್ಧ ಸ್ಪೋರ್ಟ್ಸ್‌ ಆ್ಯಂಕರ್‌ ನಶ್ ಪ್ರೀತ್ ಕೌರ್.. ಆಕೆಯ ಸೌಂದರ್ಯಕ್ಕೆ, ನಿರೂಪಣೆಗೆ ಕ್ರಿಕೆಟ್ ಫ್ಯಾನ್ಸ್ ಮನಸೋತಿದ್ದಾರೆ.  ಆಕೆಯನ್ನ ನೋಡಲೆಂದೇ ಅನೇಕರು  ಮೈದಾನಕ್ಕೆ ತೆರಳುವವರು ಇದ್ದಾರೆ. ಅಂದ್ಹಾಗೆ ನಶ್ ಪ್ರೀತ್ ಕೌರ್ ಭಾರತದವರಲ್ಲ. ದೂರದ ಫಿಜಿ ದೇಶದವರು. ಸದ್ಯ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನೆಲೆಸಿದ್ದಾರೆ. ನಶ್ ಪ್ರೀತ್ ಕೌರ್   ಬಯೋ ಮೆಡಿಸಿನ್ ಪದವಿಯೊಂದಿಗೆ ಶಿಕ್ಷಣ ಮುಗಿಸಿದ್ರು. ಬಳಿಕ 2012ರಲ್ಲಿ ತಾನ್ಯಾ ಪೊವೆಲ್ ಮತ್ತು ಟೋಬ್ ಟ್ಯಾಲೆಂಟ್ಸ್ ನಂತಹ ಏಜೆನ್ಸಿ ಜೊತೆಗೆ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡ್ರು. 2015ರಲ್ಲಿ ನಶ್ ಪ್ರೀತ್ ಕೌರ್  ಸ್ಟ್ರಿಂಗ್ಸ್ ಕಿರುಚಿತ್ರದ ಮೂಲಕ ನಟನೆಯತ್ತ ಹೆಜ್ಜೆ ಹಾಕಿದ್ದರು. ಬಳಿಕ ನಿರೂಪಣೆಯಲ್ಲಿ ಒಲವು ಮೂಡಿದ್ದು, ಕ್ರಿಕೆಟ್‌ ನಿರೂಪಣೆ ಆರಂಭಿಸಿದ ಮೇಲೆ ಬಹು ಬೇಡಿಕೆಯ ಆಂಕರ್ ಆಗಿದ್ದಾರೆ. ಸದ್ಯ  ನಶ್ ಪ್ರೀತ್ ಕೌರ್  ನಿರೂಪಣೆಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ನಿರೂಪಣೆ, ನಟನೆ ಮಾತ್ರವಲ್ಲದೆ, ಕುಕ್ಕಿಂಗ್, ಡ್ಯಾನ್ಸ್, ಫಿಟ್ನೆಸ್‌ನಲ್ಲೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್‌ ಪ್ರಿಯರು ತುಂಬ ಇಷ್ಟಪಡುವ ಮತ್ತೊಬ್ಬ ಆಂಕರ್ ಅಂದ್ರೆ ಸಂಜನಾ ಗಣೇಶನ್.. ಗಂಡ ಕ್ರೀಸ್ನಲ್ಲಿ ಆಡ್ತಾ ಇದ್ರೆ, ಹೆಂಡ್ತಿ ಮೈದಾನಕ್ಕೆ  ಬಂದು ಆಂಕರಿಂಗ್ ಮಾಡ್ತಾರೆ. ಸಂಜನಾ ಗಣೇಶನ್  ಸ್ಟಾರ್ ಕ್ರಿಕೆಟರ್ ಜಸ್ಪ್ರೀತ್ ಬುಮ್ರಾ ಪತ್ನಿ. ಇತ್ತೀಚಿಗಷ್ಟೇ ಈ ಕ್ಯೂಟ್ ಕಪಲ್ಸ್ ಮೈದಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು.. ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 6 ರನ್ ಗಳ ಗೆಲುವು ಪಡೆದುಕೊಂಡಿತ್ತು. ಪಂದ್ಯದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತು, ಕೇವಲ 14 ರನ್ ಬಿಟ್ಟುಕೊಟ್ಟಿದ್ದರು. ಪಂದ್ಯ ಮುಗಿಯುತ್ತಿದ್ದಂತೆ ಸಂಜನಾ ಬೂಮ್ರಾರನ್ನು ಕ್ರಿಕೆಟ್‌ನ ಡಿಜಿಟಲ್‌ ಚಾನೆಲ್‌ಗೆ ಸಂದರ್ಶನ ಮಾಡಿದ್ದಾರೆ. ಸಂದರ್ಶನದ ಕೊನೆಯಲ್ಲಿ ಸಂಜನಾ ಮತ್ತು ಬುಮ್ರಾ ನಡುವೆ ಕೆಲವೇ ಸೆಕೆಂಡ್‌ಗಳ ಮಾತುಕತೆ ಈಗ ಕ್ರಿಕೆಟ್‌ ಪ್ರಿಯರ ನಡುವೆ ವೈರಲ್‌ ಆಗಿದೆ.. ಸಂದರ್ಶನ ಮುಗಿಸಿದಾಗ ಸಂಜನಾ,  ಮುಂದಿನ ಮ್ಯಾಚ್‌ಗೆ ಗುಡ್‌ಲಕ್‌.. ಅಲ್ಲಿ ಮತ್ತೆ ಭೇಟಿಯಾಗೋಣ ಅಂತ ಮಾತು ಮುಗಿಸಲು ಮುಂದಾಗಿದ್ದರು.. ಆದ್ರೆ ತಕ್ಷಣ ಅಲರ್ಟ್‌ ಆದ ಪತಿರಾಯ ಬುಮ್ರಾ, ‘ಅರ್ಧ ಗಂಟೆಯಲ್ಲಿ ಮತ್ತೆ ಭೇಟಿಯಾಗೋಣ’ ಎಂದು ಕಾಲೆಳೆದ್ರು. ಅದಕ್ಕೆ ಸಂಜನಾ ಕೂಡ, ‘ಇವತ್ತಿನ ಊಟಕ್ಕೆ ಏನಿದೆ?’ ಎಂದು ಗಂಡನನ್ನು ಕೇಳಿ ನಗೆಗಡಲಲ್ಲಿ ತೇಲುತ್ತಾರೆ.. ಹೀಗೆ ಈ ಮುದ್ದಾದ ಜೋಡಿಯ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ… ಅಂದಹಾಗೆ ಸಂಜನಾ ಸಂಜನಾ ಗಣೇಶನ್ ಸ್ಪೋರ್ಟ್ಸ್ ಆಂಕರ್ ಆಗುವ ಮೊದಲು ಮಾಡೆಲಿಂಗ್ ಲೋಕದಲ್ಲೂ ಸಾಕಷ್ಟು ಹೆಸರು ಗಳಿಸಿದ್ದರು. ಪ್ರಸಿದ್ಧ ಶೋ ಮಿಸ್ ಇಂಡಿಯಾದಲ್ಲಿ ಸಂಜನಾ ಫೈನಲ್ ತಲುಪಿದ್ದರು. ಅವರ ಕ್ರಿಕೆಟ್ ಜ್ಞಾನ ಅದ್ಭುತವಾಗಿದೆ ಎಂದು ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಬೂಮ್ರಾ ದಂಪತಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎಂಬ ಮಗ ಕೂಡ ಇದ್ದಾನೆ.. ಮಗು ಹುಟ್ಟಿದ ಮೇಲೆ ಆ್ಯಂಕರ್‌ನಿಂದ ಸ್ವಲ್ಪ ಬ್ರೇಕ್‌ ತಗೊಂಡಿದ್ದ ಸಂಜನಾ, ಈಗ ಟಿ20 ವರ್ಲ್ಡ್‌ಕಪ್‌ನ ಮೂಲಕ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ..

ಇನ್ನು ಕ್ರಿಕೆಟ್‌ ಆ್ಯಂಕರ್‌ಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಬಹುಬೇಡಿಕೆಯ  ಆಂಕರ್ ಅಂದ್ರೆ ಮಯಾಂತಿ ಲ್ಯಾಂಗರ್. ಭಾರತದ ಕ್ರೀಡಾ ನಿರೂಪಕಿಯರಲ್ಲಿ ಹಾಟ್ ಆ್ಯಂಕರ್ ಎಂದೇ ಗುರುತಿಸಿಕೊಂಡಿರುವ ಮಯಾಂತಿಗೆ ವಿಶ್ವದ ಅನೇಕ ಕಡೆ ಅಭಿಮಾನಿಗಳಿದ್ದಾರೆ. ಈಕೆಯನ್ನು ನೋಡಲೆಂದೇ ಫ್ಯಾನ್ಸ್ ಟಿವಿ ಮುಂದೆ ಮ್ಯಾಚ್‌ ಆರಂಭಕ್ಕೂ ಮೊದ್ಲೇ ಕುಳಿತಿರುತ್ತಾರೆ.. ಮ್ಯಾಚ್‌ ಮುಗಿದ್ಮೇಲೂ ಕ್ರಿಕೆಟ್‌ ಹೈಲೈಟ್‌ ಹೇಳೋವಾಗ್ಲೂ ಈಕೆಯೇ ಹೈಲೆಟ್‌ ಆಗ್ತಿರುತ್ತಾರೆ… ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್ ಟೂರ್ನಿಗಳಲ್ಲೆಲ್ಲಾ ಮಯಾಂತಿ ನಿರೂಪಣೆ ಇದ್ದೇ ಇರುತ್ತೆ. ಅಭಿಮಾನಿಗಳು ಕೂಡ ಈಕೆಯ ನಿರೂಪಣೆಗೆ ಫಿಧಾ ಆಗಿದ್ದಾರೆ.

ಮಯಾಂತಿ ಲ್ಯಾಂಗರ್ 2006ರಲ್ಲಿ ಜೆದ್ ಸ್ಪೋರ್ಟ್ಸ್ ವಾಹಿನಿಯ ಮೂಲಕ ಕ್ರೀಡಾ ವರದಿಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಾದ ಬಳಿಕ ಮಯಾಂತಿ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಮಾದಕ ಧ್ವನಿಯ ಮಯಾಂತಿ ಲ್ಯಾಂಗರ್, ತಮ್ಮ ಚೊಚ್ಚಲ ಪ್ರಯತ್ನದ ಕ್ರೀಡಾ ಆ್ಯಂಕರಿಂಗ್ನಲ್ಲೇ ಕ್ರೀಡಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಐಪಿಎಲ್‌ಗೂ ಮೊದಲು ಕಪಿಲ್‌ ದೇವ್‌ ಸಾರಥ್ಯದಲ್ಲಿ ಆರಂಭವಾಗಿದ್ದ ಐಸಿಎಲ್‌ನಲ್ಲಿ ಕ್ರೀಡಾ ನಿರೂಪಕಿಯಾಗಿ, ವರದಿಗಾರ್ತಿಯಾಗಿ ಕೆಲಸ ಮಾಡಿದ ಮಯಾಂತಿ, ಅಲ್ಲಿಂದ ನಂತರ ಎಲ್ಲರ ಮನೆಮಾತಾದರು.. ಜೊತೆಗೆ ಕ್ರಿಕೆಟ್‌ ನಿರೂಪಣೆ ಅಂದ್ರೆ ಅಲ್ಲಿ ಮಯಾಂತಿ ಲ್ಯಾಂಗರ್ ಇರಲೇಬೇಕು ಎನ್ನುವಷ್ಟರ ಮಟ್ಟಿಗೂ ಬೆಳೆದಿದ್ದಾರೆ..

ಕ್ರಿಕೆಟ್‌ ಜಗತ್ತಿನ ಬಹುತೇಕ ಎಲ್ಲಾ ದಿಗ್ಗಜರ ಸಂದರ್ಶನ ಮಾಡುವ ಮೂಲಕ ಮಯಾಂತಿ ಲ್ಯಾಂಗರ್, ಕ್ರೀಡಾ ಚಾನೆಲ್ಗಳ ಪಾಲಿನ ಹಾಟ್ ಫೇವರೇಟ್ ಮಹಿಳಾ ಆ್ಯಂಕರ್ ಆಗಿದ್ದಾರೆ.. ಅದ್ಭುತ ಆ್ಯಂಕರಿಂಗ್ ಮೂಲಕ ಗಮನ ಸೆಳೆದಿರುವ ಮಯಾಂತಿ ಲ್ಯಾಂಗರ್ಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಈ ಪೈಕಿ ಇಂಡಿಕ್ ಟೆಲಿವಿಷನ್ ಆನರ್ಸ್, ಆ್ಯಂಕರ್ ಫಾರ್ ದಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂತಾದ ಪ್ರಮುಖ ಪ್ರಶಸ್ತಿಗಳು ಸೇರಿವೆ.. ಐಸಿಎಲ್‌ ವೇಳೆಯೇ ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಅವರ ಜೊತೆಗೆ ಲವ್ವಲ್ಲಿ ಬಿದ್ದ ಮಯಾಂತಿ ಲ್ಯಾಂಗರ್, 2012ರಲ್ಲಿ  ಬಿನ್ನಿ ಜೊತೆ ಮದುವೆಯಾದ್ರು. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಯಾಂತಿ ಲ್ಯಾಂಗರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಮಯಾಂತಿ ಲ್ಯಾಂಗರ್ ಕೆಲಕಾಲ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೆ ಮದರ್ ಡ್ಯೂಟಿ ಪೂರೈಸಿದ ಬಳಿಕ ಮಯಾಂತಿ ಈಗ ಮತ್ತೆ ತೆರೆಯ ಮೇಲೆ ಮಿಂಚಲಾರಂಭಿಸಿದ್ದಾರೆ.  ಮಾಯಾಂತಿ ಲ್ಯಾಂಗರ್ 2023ರ ವೇಳೆಯಲ್ಲಿ ಒಂದು ಮಿಲಿಯನ್ ಡಾಲರ್. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8.2 ಕೋಟಿ ರುಪಾಯಿಗಳ  ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ..

ಇನ್ನು ಕ್ರಿಕೆಟ್‌ ನಿರೂಪಣೆಯಲ್ಲಿರುವ ಮತ್ತೊಬ್ರು ಸುಂದರಿ ಸ್ವೇಧಾ ಸಿಂಗ್‌ ಬಹೇಲ್.. ಈ ಸುಂದರಿ ಐಪಿಎಲ್ 17 ನೇ ಆವೃತ್ತಿಯಲ್ಲೂ ನಿರೂಪಣೆಯ ಮೂಲಕ ಮಿಂಚಿದ್ರು.. ಇದೀಗ ವಿಶ್ವಕಪ್ನಲ್ಲೂ ಶೈನ್ ಆಗುತ್ತಿದ್ದಾರೆ.

ಮತ್ತೊಬ್ಬ  ಫೇಮಸ್‌ ಕ್ರಿಕೆಟ್‌ ಆಂಕರ್‌ ಅಂದ್ರೆ ಭಾವನಾ ಬಾಲಕೃಷ್ಣನ್.. ಕ್ರಿಕೆಟ್ ನಿರೂಪಣೆಯಲ್ಲೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ ಈ ಸುಂದರಿ.. ಭಾವನ ಚೆನ್ನೈ ಮೂಲದವರು. 2022ರ ಟಿ20 ವಿಶ್ವಕಪ್ ಕೂಡ ಭಾವನಾ ಕವರ್ ಮಾಡಿದ್ರು.. 2019 ರ ಏಕದಿನ ವಿಶ್ವಕಪ್ನಲ್ಲೂ ಆಂಕರ್ ಆಗಿ ಕೆಲಸ ಮಾಡಿದ್ರು. ಇದೀಗ ಈ ಬಾರಿಯ ವಿಶ್ವಕಪ್ನಲ್ಲೂ ಮಿಂಚುತ್ತಿದ್ದಾರೆ.  ಹೀಗೆ ಕ್ರಿಕೆಟ್‌ ನಿರೂಪಣೆಯನ್ನೇ ವೃತ್ತಿಯಾಗಿ ಸ್ವೀಕರಿಸುವ ಈ ಆ್ಯಂಕರ್‌ಗಳು ಈಗ ದೇಶ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ..

Shwetha M

Leave a Reply

Your email address will not be published. Required fields are marked *