GILLಗೆ ಗೇಟ್ ಪಾಸ್ ಕೊಟ್ಟ BCCI – ವಿಶ್ವಕಪ್ ಹೆಸ್ರಲ್ಲಿ ಬ್ಯುಸಿನೆಸ್ ಮಾಡಿದ್ರಾ?
ಟಿ-20 ವಿಶ್ವಕಪ್ ರೇಸ್ನಲ್ಲಿ ಭಾರತ ತಂಡ ಸೂಪರ್ 8ಗೆ ಗ್ರ್ಯಾಂಡ್ ಆಗೇ ಎಂಟ್ರಿ ಕೊಟ್ಟಿದೆ. ಗುರುವಾರ ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ದ ಸೂಪರ್ ಎಂಟರ ಸುತ್ತಿನಲ್ಲಿ ತನ್ನ ಮೊದಲನೇ ಪಂದ್ಯವನ್ನ ಆಡಲಿದೆ. ಆದ್ರೀಗ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಬಿಸಿ ಬಿಸಿ ಚರ್ಚೆಯಾಗ್ತಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನ ಸ್ಪೋಟವಾಗಿದೆ. ಟೀಂ ಇಂಡಿಯಾದ ಯಂಗ್ ಪ್ರಿನ್ಸ್ ಶುಭ್ಮನ್ ಗಿಲ್ ಗೆ ತಂಡದಿಂದ ಗೇಟ್ಪಾಸ್ ನೀಡಲಾಗಿದೆ ಎಂಬ ವಿಚಾರ ಸಂಚಲನ ಸೃಷ್ಟಿಸಿದೆ. ಸೂಪರ್ 8 ಪಂದ್ಯಗಳಿಗಾಗಿ ಟೀಂ ಇಂಡಿಯಾ ಪ್ಲೇಯರ್ಸ್ ಅಮೆರಿಕದಿಂದ ವೆಸ್ಟ್ ಇಂಡೀಸ್‌ಗೆ ಹೋಗಿದ್ರೆ, ಶುಭ್ಮನ್ ಗಿಲ್ ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಅಷ್ಟಕ್ಕೂ ಗಿಲ್ಗೆ ಗೇಟ್ ಪಾಸ್ ನೀಡಿರೋದ್ಯಾಕೆ.? ರೋಹಿತ್ ಶರ್ಮಾ ಜೊತೆ ಮನಸ್ಥಾಪ ಮಾಡಿಕೊಂಡ್ರಾ ಗಿಲ್? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತುಳಸಿ ಇಂಗ್ಲಿಷ್.. ಶಾರ್ವರಿ ಶಾಕ್ – ಮಕ್ಕಳ ಪ್ರೀತಿ ಪಡಿತಾನಾ ಮಾಧವ್
ಚುಟುಕು ವಿಶ್ವಕಪ್ ಸಮರದಲ್ಲಿ ಟೀಮ್ ಇಂಡಿಯಾದ ಅಬ್ಬರ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಜಯದೊಂದಿಗೆ ಸೂಪರ್- 8 ಹಂತಕ್ಕೆ ಎಂಟ್ರಿ ಕೊಟ್ಟಾಗಿದೆ. ಅಮೆರಿಕದಲ್ಲಿ ಅಬ್ಬರಿಸಿರೋ ಟೀಮ್ ಇಂಡಿಯಾ, ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ವಿಂಡೀಸ್ ನೆಲದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜಯದ ಆತ್ಮವಿಶ್ವಾಸದಲ್ಲಿರೋ ಆಟಗಾರರು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯೋ ಜೋಶ್ನಲ್ಲಿದ್ದಾರೆ. ಬ್ಯಾಟಿಂಗ್ ವೈಫಲ್ಯದಂತಹ ದೊಡ್ಡ ವೀಕ್ನೆಸ್ನ ಹೊರತಾಗಿ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಕ್ವಾಲಿಫೈ ಆಗಿದೆ. ಈ ನಡುವೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ. ವಿಶ್ವಕಪ್ಗೂ ಮುನ್ನ ಭಾರತ ತಂಡದಲ್ಲಿ 15 ಆಟಗಾರರನ್ನ ಸೆಲೆಕ್ಟ್ ಮಾಡಿದ್ದ ಬಿಸಿಸಿಐ ಅವ್ರ ಜೊತೆಗೆ ನಾಲ್ವರು ಆಟಗಾರರನ್ನ ಮೀಸಲು ಆಟಗಾರರಾಗಿ ಆಯ್ಕೆ ಮಾಡಿತ್ತು. ಈ ರಿಸರ್ವ್ ಪ್ಲೇಯರ್ಸ್ನ ನಾಲ್ವರ ಪೈಕಿ ಶುಭ್ಮನ್ ಗಿಲ್ ಕೂಡ ಒಬ್ರು. ಅಂದ್ರೆ 15 ಜನರ ಬಳಗದಲ್ಲಿ ಯಾರಿಗಾದ್ರೂ ಇಂಜುರಿಯಾದ್ರೆ ರಿಪ್ಲೇಸ್ ಮಾಡ್ಲಿಕ್ಕೆ ಈ ನಾಲ್ವರನ್ನ ಸೆಲೆಕ್ಟ್ ಮಾಡಲಾಗಿತ್ತು. ಸೋ ಟೂರ್ನಿಯ ಅಂತ್ಯದವರೆಗೂ ಇವ್ರು ತಂಡದ ಜೊತೆಯಲ್ಲಿ ಇರ್ತಾರೆ ಅನ್ನೋದು ಮೊದಲೇ ಇದ್ದ ಪ್ಲಾನ್ ಆಗಿತ್ತು. ಆದ್ರೀಗ ಆ ಪ್ಲಾನ್ನಲ್ಲಿ ಸಡನ್ ಚೇಂಜಸ್ ಆಗಿದೆ. ಶುಭ್ಮನ್ ಗಿಲ್, ಆವೇಶ್ ಖಾನ್ರನ್ನ ವಾಪಾಸ್ ಭಾರತಕ್ಕೆ ಕಳುಹಿಸಲಾಗಿದೆ. ಇಡೀ ತಂಡ ಅಮೆರಿಕಾದಿಂದ ವೆಸ್ಟ್ ಇಂಡಿಸ್ ಕಡೆಗೆ ಪ್ರಯಾಣ ಬೆಳೆಸಿದ್ರೆ, ಇವರಿಬ್ಬರು ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಆದರೆ ಮೀಸಲು ಆಟಗಾರರ ಲಿಸ್ಟ್ನಲ್ಲೇ ಇರೋ ಖಲೀಲ್ ಅಹಮದ್ ಹಾಗೂ ರಿಂಕು ಸಿಂಗ್ ಅವರನ್ನು ಸೂಪರ್-8ರ ನಿಮಿತ್ತ ಭಾರತ ತಂಡದಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಸೂಪರ್ 8 ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಿವೆ. ಟ್ರಾವೆಲಿಂಗ್ ಸಮಸ್ಯೆ ಎಂಬ ಕಾರಣಗಳನ್ನ ಬಿಸಿಸಿಐ ಮೂಲಗಳು ನೀಡಿವೆ. ಈ ರೀಸನ್ ಆವೇಶ್ ಖಾನ್ ವಿಚಾರದಲ್ಲಿ ನಿಜ ಇರಬಹುದು ಆದ್ರೆ, ಶುಭ್ಮನ್ ಗಿಲ್ ವಿಚಾರದಲ್ಲಿ ಅಲ್ಲ ಎನ್ನಲಾಗ್ತಿದೆ. ಯಾಕಂದ್ರೆ ಅಶಸ್ತಿನ ನಡೆಯ ಕಾರಣಕ್ಕೆ ಶುಭ್ಮನ್ ಗಿಲ್ಗೆ ಗೇಟ್ಪಾಸ್ ನೀಡಲಾಗಿದ್ಯಂತೆ. ಭಾರತ ತಂಡ ಅಮೆರಿಕಗೆ ತೆರಳಿದ ಬಳಿಕ ಶುಭ್ಮನ್ ಗಿಲ್ ನಡೆ ತುಂಬಾ ವಿಚಿತ್ರವಾಗಿತ್ತು. ತಂಡದಿಂದ ಅಂತರ ಕಾಯ್ದುಕೊಂಡಿದ್ದ ಗಿಲ್, ಆರಂಭದಲ್ಲಿ ನಡೆದ ಫೋಟೋಶೂಟ್, ಮೊದಲ ಪ್ರಾಕ್ಟಿಸ್ ಸೆಷನ್ ಹೊರತಾಗಿ ಹೆಚ್ಚು ತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ರಿಸರ್ವ್ ಪ್ಲೇಯರ್ಗಳಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್ ತಂಡಕ್ಕೆ ಚಿಯರ್ ಮಾಡ್ತಿದ್ರೆ, ಶುಭ್ಮನ್ ಗಿಲ್ ಅಡ್ರೆಸ್ಸೇ ಇರಲಿಲ್ಲ. ಅಸಲಿಗೆ 15 ಆಟಗಾರರ ಮುಖ್ಯ ತಂಡಕ್ಕೆ ತಮ್ಮನ್ನು ಸೆಲೆಕ್ಟ್ ಮಾಡಿಲ್ಲ ಅನ್ನೋ ಕಾರಣಕ್ಕೆ ಗಿಲ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ತಂಡದಿಂದ ಅಂತರ ಕಾಯ್ದುಕೊಂಡಿರೋದು. ತಂಡದಿಂದ ಅಂತರ ಕಾಯ್ದುಕೊಂಡ ಶುಭ್ಮನ್ ಗಿಲ್, ತಮ್ಮ ವೈಯಕ್ತಿಕ ಬ್ಯುಸಿನೆಸ್ ಕಡೆಗೆ ಹೆಚ್ಚಿನ ಟೈಮ್ ಸ್ಪೆಂಡ್ ಮಾಡಿದ್ರು. ವಿಶ್ವಕಪ್ಗೆಂದು ತಂಡದೊಂದಿಗೆ ತೆರಳಿ ಕೆಲ ಖಾಸಗಿ ಕಂಪನಿಗಳ ಮಾತುಕತೆಯಲ್ಲಿ ಬ್ಯುಸಿಯಾಗಿದ್ರು. ವೀಕಸ್ ವೆಂಚರ್ಸ್ ಎಂಬ ಕಂಪನಿ ಜೊತೆ ಟೈ ಅಪ್ ಆಗಿ ಹೂಡಿಕೆಯನ್ನೂ ಮಾಡಿದ್ರು. ರಿಸರ್ವ್ ಪ್ಲೇಯರ್ ಆಗಿದ್ದುಕೊಂಡು ತಂಡದೊಂದಿಗೆ ಇರದೇ, ವೈಯಕ್ತಿಕ ಕೆಲಸಗಳಲ್ಲಿ ಗಿಲ್ ಬ್ಯುಸಿಯಾಗಿದ್ರಿಂದ ಮ್ಯಾನೇಜ್ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ರಂತೆ. ಹೀಗಾಗಿ ಅಶಿಸ್ತಿನ ವರ್ತನೆಯ ಕಾರಣ ನೀಡಿ ಗಿಲ್ರನ್ನ ಭಾರತಕ್ಕೆ ವಾಪಸ್ ಕಳಿಸಲಾಗಿದೆ ಎಂಬ ಚರ್ಚೆ ನಡೀತಿದೆ.
ಶುಭ್ಮನ್ ಗಿಲ್ ವಿಚಾರದಲ್ಲಿ ಇನ್ನೊಂದು ಸುದ್ದಿ ತುಂಬಾನೇ ಚರ್ಚೆಯಾಗ್ತಿದೆ. ನಾಯಕ ರೋಹಿತ್ ಶರ್ಮಾ ಮೇಲೆ ಶುಭ್ಮನ್ ಗಿಲ್ ಅಸಮಾಧಾನಗೊಂಡಿದ್ದಾರಾ ಅನ್ನೋದು. ಗಿಲ್ರನ್ನ ಭಾರತಕ್ಕೆ ವಾಪಾಸ್ ಕಳಿಸೋ ಸುದ್ದಿ ಹೊರಬಿದ್ದ ಬೆನ್ನಲ್ಲೆ, ಇನ್ಸ್ಸ್ಟಾಗ್ರಾಂನಲ್ಲಿ ರೋಹಿತ್ ಶರ್ಮಾರನ್ನ ಗಿಲ್ ಅನ್ಫಾಲೋ ಮಾಡಿದ್ದಾರೆ. ಇದು, ಶುಭ್ಮನ್ ಗಿಲ್ ತಲೆದಂಡ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿವಾದ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಗಿಲ್ ಅವ್ರನ್ನ ಭಾರತಕ್ಕೆ ವಾಪಸ್ ಕಳಿಸಿರೋ ಬಗ್ಗೆ ಸ್ಪಷ್ಟನೆ ನೀಡಿರೋ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಬೇರೆಯದ್ದೇ ಕಾರಣ ಕೊಟ್ಟಿದ್ದಾರೆ. ಮೀಸಲು ಆಟಗಾರರ ಪೈಕಿ ಇಬ್ಬರು ಆಟಗಾರರನ್ನು ಯುಎಸ್‌ಎ ಲೀಗ್ ಮುಗಿದ ಬಳಿಕ ಭಾರತಕ್ಕೆ ವಾಪಸ್ ಕಳುಹಿಸಬೇಕೆಂದು ಟೂರ್ನಿ ಆರಂಭಕ್ಕೂ ಮೊದಲೇ ನಿರ್ಧಾರವಾಗಿತ್ತು. ಅದರಂತೆ ಇದೀಗ ನಾವು ಗಿಲ್ ಹಾಗೂ ಆವೇಶ್ ಖಾನ್ ಅವರನ್ನು ಭಾರತಕ್ಕೆ ಕಳುಹಿಸಲಾಗಿದೆ. ನಾವು ಯುಎಸ್‌ಗೆ ಬಂದಾಗ ನಮ್ಮ ಜತೆ ನಾಲ್ವರು ಆಟಗಾರರು ಇರಬೇಕಿತ್ತು. ಇದಾದ ಬಳಿಕ ಇಬ್ಬರು ನಮ್ಮ ಜತೆ ವೆಸ್ಟ್ ಇಂಡೀಸ್‌ಗೆ ಬರಲಿದ್ದಾರೆ ಹಾಗೂ ಇನ್ನಿಬ್ಬರು ಭಾರತಕ್ಕೆ ಮರಳಲಿದ್ದಾರೆಂದು ನಿರ್ಧರಿಸಲಾಗಿತ್ತು. ಭಾರತ ತಂಡವನ್ನು ಆಯ್ಕೆ ಮಾಡಿದ್ದಾಗಲೇ ಈ ಅಂಶವನ್ನು ನಿರ್ಧರಿಸಲಾಗಿತ್ತು. ನಮ್ಮ ಯೋಜನೆಯನ್ನು ನಾವು ಅನುಸರಿಸುತ್ತಿದ್ದೇವೆ ಅಷ್ಟೆ ಎಂದು ವಿಕ್ರಮ್ ರಾಥೋಡ್ ಸ್ಪಷ್ಟನೆ ನೀಡಿದ್ದಾರೆ.
ಅಸಲಿಗೆ ಶುಭ್ಮನ್ ಗಿಲ್ ವಿಶ್ವಕಪ್ ಗಾಗಿ ಸಜ್ಜುಗೊಂಡಿದ್ದ ಟೀಂ ಇಂಡಿಯಾದ 15ರ ಬಳಗದಲ್ಲಿ ಸೆಲೆಕ್ಟ್ ಆಗದೇ ಇದ್ದಾಗಲೇ ಕ್ರಿಕೆಟ್ ಫ್ಯಾನ್ಸ್ಗೆ ಶಾಕ್ ಆಗಿತ್ತು. ಯಾಕಂದ್ರೆ ಫಸ್ಟ್ ಚಾಯ್ಸ್ ಓಪನರ್ ಶುಭ್ಮನ್ ಗಿಲ್, ರಿಸರ್ವ್ಡ್ ಪ್ಲೇಯರ್ ಆಗಿದ್ದೇಗೆ ಅನ್ನೋ ಪ್ರಶ್ನೆ ಶುರುವಾಗಿದೆ. ಹಾಗಂತ ಗಿಲ್ರನ್ನ ಓವರ್ ಟೇಕ್ ಮಾಡಿದ ಜೈಸ್ವಾಲ್ಗೆ 15ರ ಬಳಗದಲ್ಲಿ ಚಾನ್ಸ್ ಸಿಕ್ರೂ ಆಡೋಕೆ ಅವಕಾಶ ಸಿಕ್ಕಿಲ್ಲ. ಇನ್ನು ಗಿಲ್ ಟೀಂ ಇಂಡಿಯಾ ಪರ ಡೆಬ್ಯು ಮಾಡಿದ ವರ್ಷವೇ ವಿಶ್ವ ಕ್ರಿಕೆಟ್ನಲ್ಲಿ ಛಾಪು ಮೂಡಿಸಿದ ಕ್ರಿಕೆಟರ್. ಟೆಸ್ಟ್, ಏಕದಿನ ಕ್ರಿಕೆಟ್ನಲ್ಲಿ ಅಲ್ಪಾವಧಿಯಲ್ಲೇ ಯುವರಾಜನಾಗಿ, ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ವು. ಆದ್ರೀಗ ಇದೇ ಗಿಲ್ಗೆ ಬೆಂಚ್ ಖಾಯಂ ಆಗಿದೆ. ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್ಮನ್, ಟಿ20 ವಿಶ್ವಕಪ್ನಲ್ಲಿ ರಿಸರ್ವ್ಡ್ ಪ್ಲೇಯರ್ ಆಗಿದ್ದಾರೆ. ಆದ್ರೆ ಮುಂದೆ ರಿಸರ್ವ್ಡ್ ಪ್ಲೇಯರ್ ಸ್ಥಾನದಿಂದಲೂ ಕಾಣೆಯಾಗ್ತಾರಾ ಎಂಬ ಅನುಮಾನ ಹುಟ್ಟಿದೆ.