ಒಂದೇ ಪಂದ್ಯ ಎರಡು ಸೂಪರ್ ಓವರ್ – ಅಫ್ಘಾನ್ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ

2026 ರ ಟಿ20 ವಿಶ್ವಕಪ್ನ 13ನೇ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವೆ ನಡೆದಿದ್ದು, ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯ ಟಿ20 ವಿಶ್ವಕಪ್ ಇತಿಹಾಸದಲ್ಲೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಎರಡೆರಡು ಸೂಪರ್ ಓವರ್ಗಳು ನಡೆದಿದ್ದು ಇದೇ ಮೊದಲ ಬಾರಿಗೆ. ಈ ದಾಖಲೆಗೆ ಕಾರಣವಾಗಿದ್ದು, ಆಫ್ರಿಕಾ ಹಾಗೂ ಅಫ್ಘನ್ ತಂಡದ ರಣರೋಚಕ ಹೋರಾಟ.
ನಿಗದಿತ 20 ಓವರ್ಗಳ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೊತ್ತ 187 ರನ್ಗಳ ಮೂಲಕ ಟೈ ಆಗಿತ್ತು. ಆ ಮೂಲಕ ಅಂಪೈರ್ಗಳು ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋದರು. ಮೊದಲನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ, ಆರು ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ಗಳನ್ನು ಕಲೆ ಹಾಕಿತು. ಬಳಿಕ 18 ರನ್ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡರೂ 17 ರನ್ಗಳನ್ನು ಗಳಿಸಿತು. ಕೊನೆಯ ಎಸೆತದಲ್ಲಿ ಹರಿಣ ಪಡೆಗೆ 7 ರನ್ ಗೆಲ್ಲಲು ಬೇಕಿದ್ದಾಗ, ಟ್ರಿಸ್ಟನ್ ಸ್ಟಬ್ಸ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಎರಡನೇ ಸೂಪರ್ ಓವರ್ಗೆ ಕರೆದೊಯ್ದರು.
ಇದನ್ನೂ ಓದಿ: ಟಿ20I ನಲ್ಲಿ ಅತಿ ವೇಗವಾಗಿ 5 ಸಾವಿರ ರನ್ – ಅಭಿಷೇಕ್ ಶರ್ಮಾ ವಿಶ್ವ ದಾಖಲೆ ಮುರಿದ ಫಿನ್ ಅಲೆನ್
ಎರಡನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರ ಟ್ರಿಸ್ಟನ್ ಸ್ಟಬ್ಸ್ ಒಂದು ಸಿಕ್ಸರ್ ಬಾರಿಸಿದರೆ, ಡೇವಿಡ್ ಮಿಲ್ಲರ್ ಎರಡು ಸಿಕ್ಸರ್ ಬಾರಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಆರು ಎಸೆತಗಳಲ್ಲಿ 23 ರನ್ ಗಳಿಸಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಆಫ್ಘನ್ ತಂಡ, ಆರಂಭಿಕ ಎರಡು ಎಸೆತಗಳಲ್ಲಿ ಒಂದು ವಿಕೆಟ್ ಕಳೆದುಕೊಂಡಿತು ಬಳಿಕ ಕೊನೆಯ ನಾಲ್ಕು ಎಸೆತಗಳಲ್ಲಿ 24 ರನ್ ಅಗತ್ಯವಿದ್ದಾಗ ರೆಹಮಾನುಲ್ಲಾ ಗುರ್ಬಾಝ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಆರು ರನ್ ಬೇಕಿದ್ದಾಗ, ಕೇಶವ್ ಮಹಾರಾಜ ವೈಡ್ ಹಾಕಿದರು. ನಂತರ 5 ರನ್ ಬೇಕಿದ್ದಾಗ ಸಿಕ್ಸರ್ ಹೊಡೆಯಲು ಪ್ರಯತ್ನಿ ಗುರ್ಬಾಝ್ ಕ್ಯಾಚ್ ಕೊಟ್ಟರು.

ನೋಡಿರಿ

