ವಿಶ್ವಕಪ್ ಸೋತ್ರೆ ಗಂಭೀರ್ ಕಿಕ್ ಔಟ್ – BCCIಗೆ ಮಾಜಿ ಕ್ರಿಕೆಟಿಗರಿಂದ್ಲೇ ಒತ್ತಡ?
ಡೇಂಜರ್ ಝೋನ್ ನಲ್ಲಿ ಮತ್ತೆ ಗೌತಿ?

ಟೀಂ ಇಂಡಿಯಾ ಪರ ಬಹುಶಃ ಗ್ರೆಗ್ ಚಾಪೆಲ್ ಬಿಟ್ರೆ ಮೋಸ್ಟ್ ಕಾಂಟ್ರವರ್ಶಿಯಲ್ ಹೆಡ್ ಕೋಚ್ ಅಂದ್ರೆ ಅದು ಗೌತಮ್ ಗಂಭೀರ್. ಗಂಭೀರ್ ತೆಗೆದುಕೊಂಡ ಕೆಲ ಏಕಪಕ್ಷೀಯ ನಿರ್ಧಾರಗಳು ತಂಡಕ್ಕೂ ಬ್ಯಾಕ್ ಫೈರ್ ಆಗಿದೆ. ಈಗ ಟಿ-20 ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಹೀನಾಯವಾಗಿ ಸೋತ ಮೇಲೆ ಮಾಜಿ ಕ್ರಿಕೆಟಿಗರು ಕೆಂಡಾಮಂಡಲರಾಗಿದ್ದಾರೆ. ಅದೆಲ್ಲಕ್ಕಿಂತ ಟ್ವಿಸ್ಟ್ ಏನಂದ್ರೆ ಒಂದು ವೇಳೆ ಭಾರತ ವಿಶ್ವಕಪ್ನಲ್ಲಿ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಫೇಲ್ಯೂರ್ ಆದ್ರೆ ಅಥವಾ ಕಪ್ ಗೆಲ್ಲಲಿಲ್ಲ ಅಂದ್ರೆ ಗಂಭೀರ್ ಕುರ್ಚಿಯನ್ನೇ ಕಳ್ಕೊಳ್ಳೋ ಸ್ಟೇಜ್ನಲ್ಲಿದೆ.
ಇದನ್ನೂ ಓದಿ : ರಿಂಕು ಸಿಂಗ್ ತಂದೆ ಆರೋಗ್ಯ ಸ್ಥಿತಿ ಗಂಭೀರ! – ಟೀಂ ಇಂಡಿಯಾ ಕ್ಯಾಂಪ್ ತೊರೆದ ಪ್ಲೇಯರ್!
2024ರ ಜುಲೈನಲ್ಲಿ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ಕೋಚ್ ಆಗಿ ನೇಮಕ ಆಗಿದ್ರು. ಆ ನಂತ್ರ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಿದ್ರು. ಡಿಕ್ಟೇಟರ್ ಥರ ಡಿಸಿಷನ್ಸ್ ತಗೊಂಡ್ರು. ಇದು ಸಾಕಷ್ಟು ಮಾಜಿ ಕ್ರಿಕೆಟಿಗರ, ಸೀನಿಯರ್ ಪ್ಲೇಯರ್ಗಳ ಸಿಟ್ಟಿಗೆ ಕಾರಣ ಆಗಿತ್ತು. ಹೀಗಿದ್ರೂ ಅಂದುಕೊಂಡಂತ ರಿಸಲ್ಟ್ ಸಿಗ್ಲಿಲ್ಲ. ಅದ್ರಲ್ಲೂ ಟೆಸ್ಟ್ ಫಾರ್ಮೆಟ್ ಅಂತೂ ಹಳ್ಳ ಹಿಡಿದಿದೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೇರೋದೇ ಕಷ್ಟ ಇದೆ. ಏಕದಿನ ಮಾದರಿಯಲ್ಲೂ ಸಾಕಷ್ಟು ಏರಿಳಿತ ಕಂಡಿದೆ. ಆದ್ರೆ ಟಿ-20ಐ ಫಾರ್ಮೆಟ್ನಲ್ಲಿ ನೋ ಲಾಸ್ ಜರ್ನಿ ಮಾತ್ರವೇ ಅವ್ರ ಕುರ್ಚಿಯನ್ನ ಸೇಫ್ ಮಾಡಿತ್ತು. ಆದ್ರೆ ಟಿ-20 ವಿಶ್ವಕಪ್ನಲ್ಲಿ ಈಗ ಆ ಹೋಪ್ಸ್ ಕೂಡ ಹೋಗಿದೆ. ಕೋಚ್ ಹುದ್ದೆ ಕಳ್ಕೊಳ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
ಟ್ರೋಫಿ ಗೆಲ್ಲದಿದ್ರೆ ಗಂಭೀರ್ ವಜಾಗೆ ಮಾಜಿ ಕ್ರಿಕೆಟಿಗರ ಒತ್ತಡ?
ಪ್ರಸ್ತುತ ಭಾರತದ ನೆಟ್ ರನ್ ರೇಟ್ ತೀರಾ ಕಳಪೆಯಾಗಿದೆ. ಹೀಗಾಗಿ ಸೆಮೀಸ್ ಟಿಕೆಟ್ ಪಡೆಯೋದೇ ಕಷ್ಟ ಇದೆ. ಇದಕ್ಕೆಲ್ಲಾ ಕಾರಣ ಸೌತ್ ಆಫ್ರಿಕಾ ವಿರುದ್ಧದ ಪ್ಲೇಯಿಂಗ್ 11 ಅಂತಾ ಮಾಜಿ ಕ್ರಿಕೆಟಿಗರು ಸಿಟ್ಟಾಗಿದ್ದಾರೆ. ಕೆ.ಶ್ರೀಕಾಂತ್, ಸುನಿಲ್ ಗವಾಸ್ಕರ್, ಆಕಾಶ್ ಚೋಪ್ರಾ ಸೇರಿದಂತೆ ಸಾಕಷ್ಟು ಮಾಜಿ ಕ್ರಿಕೆಟಿಗರು ಇದನ್ನ ಬಹಿರಂಗವಾಗೇ ಪ್ರಶ್ನೆ ಮಾಡಿದೆ. ಅದ್ರಲ್ಲೂ ಅಕ್ಷರ್ ಪಟೇಲ್ ಕೈಬಿಟ್ಟಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಒಂದು ವೇಳೆ ಭಾರತ ಟ್ರೋಫಿ ಉಳಿಸಿಕೊಳ್ಳುವಲ್ಲಿ ವಿಫಲ ಆದ್ರೆ ಗೌತಮ್ ಗಂಭೀರ್ರನ್ನ ಹೆಡ್ ಕೋಚ್ ಹುದ್ದೆಯಿಂದ ವಜಾ ಮಾಡುವಂತೆ ಬಿಸಿಸಿಐಗೆ ಮಾಜಿ ಕ್ರಿಕೆಟಿಗರು ಕರೆ ಮಾಡ್ತಿರೋ ಮಾಹಿತಿ ಇದೆ. ಭಾರತದ ಮಾಜಿ ಬ್ಯಾಟ್ಸ್ಮನ್ ಮನೋಜ್ ತಿವಾರಿ ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಭಾರತ ಟಿ20 ವಿಶ್ವಕಪ್ ಗೆಲ್ಲದಿದ್ದರೆ, ಗೌತಮ್ ಗಂಭೀರ್ ಬಗ್ಗೆ ಬಿಸಿಸಿಐ ದೊಡ್ಡ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇನ್ನು ಭಾರತೀಯರಷ್ಟೇ ಅಲ್ಲ ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಅಹ್ಮದ್ ಶೆಹಜಾದ್ ಕೂಡ ಗಂಭೀರ್ ಅವರ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳೋದನ್ನ ಪ್ರಶ್ನಿಸಿದ್ದಾರೆ. ಅದಕ್ಕಿಂತ ಜಾಸ್ತಿ ಕ್ರಿಕೆಟ್ನಲ್ಲಿ ಗಂಭೀರ್ ರಾಜಕೀಯ ಮಾಡ್ತಿದ್ದಾರೆ ಅಂತಾ ದೂರಿದ್ದಾರೆ. 2019 ರಿಂದ 2024 ರವರೆಗೆ ಪೂರ್ವ ದೆಹಲಿಯಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಗಂಭೀರ್ ಅವರ ಭಾರತೀಯ ರಾಜಕೀಯದ ಅನುಭವವು ಕೋಚ್ ಆಗಿ ಅವರ ಕೆಲಸದ ಮೇಲೆ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ. ಹಾಗೇ ಕೆಲ ಮಾಜಿ ಕ್ರಿಕೆಟಿಗರು ಗಂಭೀರ್ರನ್ನು ವಜಾ ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಗಂಭೀರ್ ಕೋಚ್ ಆದಾಗಿಂಗ್ಲೂ ಅವ್ರ ಬಗ್ಗೆ ಪಾಸಿಟಿವ್ಗಿಂತ ನೆಗೆಟಿವ್ ಆಗಿಯೇ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಟಿ-20ಐ ಫಾರ್ಮೆಟ್ನಲ್ಲಿ ಭಾರತದ ಅಜೇಯವಿಜಯಯಾತ್ರೆಯಿಂದ ಗಂಭೀರ್ ಸೇಫ್ ಆಗ್ತಿದ್ರು. ಈಗ ಟಿ-20 ವಿಶ್ವಕಪ್ನಲ್ಲಿ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಳ್ಳದೆ ಹೊರಬಿದ್ರೆ ಮತ್ತೆ ಗಂಭೀರ್ ಕುತ್ತಿಗೆಗೆ ಬರುತ್ತೆ. ಯಾಕಂದ್ರೆ ಅವ್ರೇ ತೆಗೆದುಕೊಂಡ ಕೆಲ ನಿರ್ಧಾರಗಳೂ ಭಾರತದ ಸೋಲಿಗೆ ಕಾರಣ ಆಗಿದ್ದೂ ಇದೆ. ಅವ್ರ ಬ್ಯಾಟಿಂಗ್ ಆರ್ಡರ್ ಪ್ರಯೋಗ ಕೂಡ ಬ್ಯಾಕ್ ಫೈರ್ ಆಗಿದೆ. ಹೀಗಾಗಿ ಟೀಮ್ ಇಂಡಿಯಾ ಟಿ-20 ವಿಶ್ವಕಪ್ ಗೆಲ್ಲೋದು ಬಿಡೋದು ಗಂಭೀರ್ ಅವ್ರ ಕುರ್ಚಿಯನ್ನ ನಿರ್ಧಾರ ಮಾಡೋ ಚಾನ್ಸಸ್ ಇದೆ.

ನೋಡಿರಿ

