SA ಸರಣಿ ಗೆಲ್ಲಲೇಬೇಕು ಭಾರತ – T-20 ವಿಶ್ವಕಪ್.. 9 ಮ್ಯಾಚ್ ಸವಾಲ್
ಗಂಭೀರ್ & ಸೂರ್ಯನಿಗೆ ಅಗ್ನಿಪರೀಕ್ಷೆ!

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟಿ-20ಐ ಪಂದ್ಯ ಮುಗಿದಿದೆ. ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು ಭಾರತ ಈ ಸರಣಿಯನ್ನ ಕೈವಶ ಮಾಡಿಕೊಳ್ಳಲೇಬೇಕು. ಯಾಕಂದ್ರೆ 2026ರ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿ ಗೆಲುವು ಭಾರತಕ್ಕೆ ತುಂಬಾನೇ ಮುಖ್ಯ ಆಗುತ್ತೆ. ಗೌತಮ್ ಗಂಭೀರ್ ಅವ್ರ ಕೋಚ್ ಭವಿಷ್ಯವೂ ನಿರ್ಧಾರ ಆಗಲಿದೆ. 2026ರ ಫೆಬ್ರವರಿಯಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಟೂರ್ನಿ ಶೆಡ್ಯೂಲ್ ಆಗಿದೆ. ಈ ಟೂರ್ನಮೆಂಟ್ಗೂ ಮುನ್ನ ಭಾರತ ಇನ್ನು 9 ಟಿ-20ಐ ಪಂದ್ಯಗಳನ್ನ ಆಡಲಿದೆ. ಸೌತ್ ಆಫ್ರಿಕಾ ವಿರುದ್ಧ ಇನ್ನು ನಾಲ್ಕು ಪಂದ್ಯಗಳು ಬಾಕಿ ಇವೆ. ಹಾಗೇ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಫೆಬ್ರವರಿ 7 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗೆ ಮುಂಚಿತವಾಗಿ ಎರಡೂ ತಂಡಗಳಿಗೆ ಇದು ನಿರ್ಣಾಯಕ ಸರಣಿಯಾಗಲಿದೆ. 2026 ಟಿ-20 ವಿಶ್ವಕಪ್‌ಗೆ ಅಜೇಯವಾಗಿ ಕಾಲಿಡೋಕೆ ಈ ಸರಣಿಯ ಗೆಲುವೂ ಮುಖ್ಯವಾಗುತ್ತೆ. ಹಾಗೇ ಚುಟುಕು ಮಾದರಿಯಲ್ಲಿ ಗಂಭೀರ್ ತಂಡದ ರೆಕಾರ್ಡ್ಸ್ನ ಹಾಗೇ ಕಂಟಿನ್ಯೂ ಮಾಡ್ಬೇಕಿದೆ.
ಗಂಭೀರ್ ಕೋಚ್, ಸೂರ್ಯ ಕ್ಯಾಪ್ಟನ್.. ಸೋಲದ ಭಾರತ!
2024ರ ಟಿ-20ವಿಶ್ವಕಪ್ ಬಳಿಕ ಭಾರತ ಇದುವರೆಗೂ ಒಂದೇ ಒಂದು ಟಿ-20ಐ ಸರಣಿ ಸೋತಿಲ್ಲ. ಹಾಗೇ ಗಂಭೀರ್ ಕೋಚ್ ಆದ್ಮೇಲೆ ಈವರೆಗಿನ 22 ಟಿ20 ಪಂದ್ಯಗಳಲ್ಲಿ ಭಾರತ 20 ಪಂದ್ಯಗಳನ್ನು ಗೆದ್ದಿದೆ, ಗೆಲುವಿನ ಶೇಕಡಾವಾರು 90.90. ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದೆ. 2025ರಲ್ಲಿ 17 ಪಂದ್ಯಗಳಲ್ಲಿ 13 ಗೆಲುವುಗಳು, ಅಜೇಯ ಏಷ್ಯಾ ಕಪ್ ಅಭಿಯಾನ, ಇಂಗ್ಲೆಂಡ್ ವಿರುದ್ಧ 4-1 ಅಂತರದ ರಿಸಲ್ಟ್ ಮತ್ತು ಆಸ್ಟ್ರೇಲಿಯಾದಲ್ಲಿ 2-1 ಅಂತರದ ಸರಣಿ ಗೆಲುವು. ಸತತ ಎಂಟು ಗೆಲುವುಗಳನ್ನು ದಾಖಲಿಸಿದೆ. ಅಂದ್ರೆ ಟಿ20 ವಿಶ್ವಕಪ್ ವಿಜಯದ ನಂತರ, ಭಾರತವು ಒಂದೇ ಒಂದು ಸರಣಿಯನ್ನು ಬಿಟ್ಟುಕೊಡದೆ ಕೇವಲ ನಾಲ್ಕು ಸೋಲುಗಳೊಂದಿಗೆ 26 ಗೆಲುವುಗಳನ್ನು ಗಳಿಸಿದೆ.ಈ ಜರ್ನಿ ಹೀಗೆ ಕಂಟಿನ್ಯೂ ಆಗ್ಬೇಕು ಅಂದ್ರೆ ಭಾರತ ಗೆಲ್ಲೋದು ತುಂಬಾನೇ ಮುಖ್ಯ ಇದೆ. ಯಾಕಂದ್ರೆ
ಭಾರತ ಗೆಲ್ಲೋದು ಮುಖ್ಯ!
ಅಜೇಯವಾಗಿ 2026ರ ಟಿ-20 ವಿಶ್ವಕಪ್ ಎಂಟ್ರಿ
18 ತಿಂಗಳಿಂದ ಬ್ಯಾಕ್ ಟು ಬ್ಯಾಕ್ ಸೋತಿಲ್ಲ
2026ರ ವಿಶ್ವಕಪ್ ಗೆ ಆಟಗಾರರ ಪ್ರದರ್ಶನ ಮುಖ್ಯ
ತವರಿನಲ್ಲೇ ಟೂರ್ನಿ ನಡೆಯೋದ್ರಿಂದ ಅಡ್ವಾಂಟೇಜ್
ಸೂರ್ಯ ಮತ್ತು ಗಂಭೀರ್ ಪಾಲಿಗೂ ಗೆಲುವು ಮುಖ್ಯ
ಈ ಎಲ್ಲಾ ಕಾರಣಗಳಿಂದ ಭಾರತ ಸೌತ್ ಆಫ್ರಿಕಾ ವಿರುದ್ಧ ಟಿ-20ಐ ಸರಣಿ ಗೆಲ್ಲಲೇಬೇಕು. ವರ್ಷದ ಕೊನೇಯ ಸರಣಿಯಾಗಲಿದ್ದು ಗೆಲುವಿನೊಂದಿಗೆ ಮುಗಿಸಲು ಭಾರತ ಎದುರು ನೋಡ್ತಿದೆ.

ನೋಡಿರಿ

