ಸೂಪರ್ 8 ತಂಡಗಳ ಜಿದ್ದಾಜಿದ್ದಿನ ಫೈಟ್ ಗೆ ಕೌಂಟ್‌ ಡೌನ್‌ – ಸೂಪರ್ 8 ಗೆ ಯಾರೆಲ್ಲಾ ಸೆಲೆಕ್ಟ್?

ಸೂಪರ್ 8 ತಂಡಗಳ ಜಿದ್ದಾಜಿದ್ದಿನ ಫೈಟ್ ಗೆ ಕೌಂಟ್‌ ಡೌನ್‌ – ಸೂಪರ್ 8 ಗೆ ಯಾರೆಲ್ಲಾ ಸೆಲೆಕ್ಟ್?

ಟಿ-20 ವಿಶ್ವಕಪ್​ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಬಳಿಕ ಸೂಪರ್ 8 ಸುತ್ತು ಶುರುವಾಗಲಿದೆ. ಇಲ್ಲಿ ಎಂಟು ತಂಡಗಳ ನಡುವೆ ರಣರೋಚಕ ಕಾದಾಟ ನಡೆಯಲಿದೆ. ಹಿಂದಿನ ಟೂರ್ನಿಯಲ್ಲಿ ಸ್ಟ್ರಾಂಗ್ ಎನ್ನಿಸಿಕೊಂಡಿದ್ದ ತಂಡಗಳೇ ಈ ಸಲ ಕಳಪೆ ಪ್ರದರ್ಶನದ ಮೂಲಕ ಟೂರ್ನಿಯಿಂದ ಹೊರಬಿದ್ದಿವೆ.  ಒಂದೊಂದು ಪಂದ್ಯವೂ ರೋಚಕತೆಯಿಂದ ಕೂಡಿದ್ದು ಕ್ರಿಕೆಟ್ ಫ್ಯಾನ್ಸ್ ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಸೂಪರ್ 8 ತಂಡಗಳ ಜಿದ್ದಾಜಿದ್ದಿನ ಫೈಟ್ ನೋಡಲು ಕಾಯ್ತಿದ್ದಾರೆ. ಅಷ್ಟಕ್ಕೂ ಏನಿದು ಸೂಪರ್-8 ಸುತ್ತು? ಯಾವೆಲ್ಲಾ ತಂಡಗಳು ಕ್ವಾಲಿಫೈ ಆಗಿವೆ? ಯಾರೆಲ್ಲಾ ಮುಖಾಮುಖಿಯಾಗಲಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೇವಂತಿ ಸೇವಂತಿ ಸಿನಿಮಾ ಕಥೆ ಸೀರಿಯಲ್‌ನಲ್ಲಿ‌! – ನಿದ್ದೆಯಲ್ಲಿದ್ದ ಭಾವನಾ ಕೊರಳಲ್ಲಿ ತಾಳಿ

ಜೂನ್ ಮೊದಲ ವಾರದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದ ಟಿ-20 ವಿಶ್ವಕಪ್ ಟೂರ್ನಿ ಹತ್ತು ಹಲವು ಅಚ್ಚರಿಗಳಿಗೆ ಸಾಕ್ಷಿಯಾಗ್ತಿದೆ. ಬಲಿಷ್ಠ ಪಡೆಯನ್ನೇ ಹೊಂದಿದ್ದ ತಂಡಗಳು ರೇಸ್​ನಿಂದ ಹೊರಬಿದ್ದಿವೆ. ಈಗಾಗ್ಲೇ  10 ತಂಡಗಳು ಅಧಿಕೃತವಾಗಿ ಟಿ20 ವಿಶ್ವಕಪ್​ನಿಂದ ಗೇಟ್​ಪಾಸ್ ಪಡೆದಿವೆ. ಇದೇ ವೇಳೆ 6 ತಂಡಗಳು ಸೂಪರ್-8 ಹಂತಕ್ಕೆ ಸ್ಥಾನ ಪಡೆದಿವೆ. ಈ ಲಿಸ್ಟ್​ನಲ್ಲಿ ಎರಡು ತಂಡಗಳಿಗೆ ಮುಂದಿನ ಸುತ್ತಿನ ಅರ್ಹತೆ ಪಡೆಯಲು ಅವಕಾಶವಿದ್ದು, ಬಾಂಗ್ಲಾದೇಶ್, ನೆದರ್​ಲೆಂಡ್ಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ಸೂಪರ್-8 ಸುತ್ತಿನ ಮ್ಯಾಚ್​ಗಳು ಶುರುವಾಗಲಿದೆ.  ಟಿ20 ವಿಶ್ವಕಪ್​ನ ದ್ವಿತೀಯ ಸುತ್ತಿನ ಪಂದ್ಯಗಳು ಜೂನ್ 19 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ಧ ಆಡಲಿದೆ. ಈ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದೆ.

ಸೂಪರ್ 8 ಗೆ ಯಾರೆಲ್ಲಾ ಸೆಲೆಕ್ಟ್?

ಸೂಪರ್ 8 ಅಂದ್ರೆ ಹೆಸ್ರೇ ಹೇಳುವಂತೆ 8 ತಂಡಗಳ ಮುಖಾಮುಖಿ. ಅಂದ್ರೆ ಮೊದಲ ಸುತ್ತಿನಲ್ಲಿ 20 ತಂಡಗಳು ಸೆಣಸಾಡಿದ್ದು ಅಂತಿಮವಾಗಿ 8 ತಂಡಗಳು ದ್ವಿತೀಯ ಸುತ್ತಿಗೆ ಅರ್ಹತೆ ಪಡೆಯಲಿವೆ. ಇದೇ ಕಾರಣಕ್ಕಾಗಿ ಟಿ20 ವಿಶ್ವಕಪ್​ನ ದ್ವಿತೀಯ ಹಂತವನ್ನ ಸೂಪರ್-8 ಎಂದು ಕರೆಯಲಾಗುತ್ತದೆ. ಇಲ್ಲಿ ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗುತ್ತದೆ. ಪ್ರತೀ ಗುಂಪಿನಲ್ಲಿ 4 ತಂಡಗಳಿರಲಿವೆ. ಮೊದಲ ಸುತ್ತಿನಲ್ಲಿ ಒಂದೇ ಗುಂಪಿನಲ್ಲಿದ್ದ ತಂಡಗಳು ಸೂಪರ್-8 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವುದಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಗ್ರೂಪ್-ಎ ನಲ್ಲ್ಲಿ ಆಡಿದ್ವು. ಸೂಪರ್ 8 ಹಂತಕ್ಕೆ ಸೆಲೆಕ್ಟ್ ಆಗಿದ್ವು. ಬಟ್ ದ್ವಿತೀಯ ಸುತ್ತಿನಲ್ಲಿ ಈ ತಂಡಗಳು ಪರಸ್ಪರ ಬೇರೆ ಬೇರೆ ಗ್ರೂಪ್​ನಲ್ಲಿ ಕಾಣಿಸಿಕೊಳ್ಳಲಿವೆ. ಸದ್ಯ ಗ್ರೂಪ್ 1ರಲ್ಲಿ ಈಗಾಗ್ಲೇ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ತಂಡಗಳು ಸೆಲೆಕ್ಟ್ ಆಗಿವೆ. ಆದ್ರೆ ನಾಲ್ಕನೇ ತಂಡವಾಗಿ ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್ ತಂಡ ಎಂಟ್ರಿ ಕೊಡಲಿದೆ. ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ್ ಮತ್ತು ನೆದರ್​ಲೆಂಡ್ಸ್​ ತಂಡಗಳು ಕೊನೆಯ ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡ ಸೋತರೆ ಬಾಂಗ್ಲಾದೇಶ್ ಸೂಪರ್​-8 ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನೆದರ್​ಲೆಂಡ್ ತಂಡ ಗೆದ್ದರೆ, ಬಾಂಗ್ಲಾದೇಶ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ನೆಟ್ ರನ್​ ರೇಟ್ ಮೂಲಕ ನೆದರ್​ಲೆಂಡ್ಸ್ ತಂಡಕ್ಕೆ ಸೂಪರ್-8 ಗೆ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ಗ್ರೂಪ್-1 ರಲ್ಲಿ ಕಾಣಿಸಿಕೊಳ್ಳಲಿರುವ 4ನೇ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ. ಗ್ರೂಪ್ 2ನಲ್ಲಿ ಯಾವ್ಯಾವ ತಂಡಗಳಿವೆ ಅನ್ನೋದನ್ನ ನೋಡೋದಾದ್ರೆ ಯುಎಸ್​ಎ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ತಂಡಗಳಿವೆ. ಆದ್ರೆ ನಾಲ್ಕನೇ ಸ್ಥಾನಕ್ಕಾಗಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ ಪೈಪೋಟಿ ಇದೆ. ಒಂದು ವೇಳೆ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋತರೆ ಮಾತ್ರ ಟಿ20 ವಿಶ್ವಕಪ್​ನಿಂದ ಇಂಗ್ಲೆಂಡ್ ಹೊರಬೀಳಲಿದೆ. ಇನ್ನು ಸ್ಕಾಟ್ಲೆಂಡ್ ಸೋತರೆ, ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ಇಂಗ್ಲೆಂಡ್ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ. ಹೀಗಾಗಿ ಉಭಯ ತಂಡಗಳ ಕೊನೆಯ ಪಂದ್ಯದ ಫಲಿತಾಂಶದ ಬಳಿಕ ಗ್ರೂಪ್-2 ನಲ್ಲಿ ಕಾಣಿಸಿಕೊಳ್ಳುವ 4ನೇ ತಂಡ ಯಾವುದೆಂದು ಗೊತ್ತಾಗಲಿದೆ.

ಸೂಪರ್ 8ಗೆ ಸೆಲೆಕ್ಟ್ ಆದ ತಂಡಗಳು ಬಳಿಕ ತಲಾ 4 ಟೀಮ್​ಗಳೊಂದಿಗೆ 2 ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತೆ. ಇಲ್ಲಿ ಒಂದೇ ಗ್ರೂಪ್​ನಲ್ಲಿರುವ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿರುವ ಭಾರತ ತಂಡವು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್ ವಿರುದ್ಧ ಪಂದ್ಯಗಳನ್ನಾಡಲಿದೆ. ಗ್ರೂಪ್-2 ನಲ್ಲೂ ಇದೇ ಮಾದರಿಯಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ. ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್​ಗಳಲ್ಲೂ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಪಾಯಿಂಟ್ಸ್​ ಟೇಬಲ್​ಗಳ​ಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೆಮಿಫೈನಲ್​ ಸುತ್ತಿಗೆ ಪ್ರವೇಶಿಸಲಿದೆ. ಬಳಿಕ ಗೆಲ್ಲುವ ತಂಡ ಫಿನಾಲೆಯಲ್ಲಿ ಎದುರುಬದುರಾಗಲಿವೆ.

Shwetha M

Leave a Reply

Your email address will not be published. Required fields are marked *