ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿ ಫೈನಲ್ ಲಗ್ಗೆ ಇಟ್ಟ ಪಾಕಿಸ್ತಾನ

ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿ ಫೈನಲ್ ಲಗ್ಗೆ ಇಟ್ಟ ಪಾಕಿಸ್ತಾನ

ಸಿಡ್ನಿ: ಟಿ-20 ವಿಶ್ವಕಪ್ ನ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್?: ಜಡ್ಡು ಪತ್ನಿಗೆ ತಂಗಿಯೇ ಎದುರಾಳಿ!

ನ್ಯೂಜಿಲೆಂಡ್ ನೀಡಿದ್ದ 153 ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿ, ಫೈನಲ್ ಗೆ ಪ್ರವೇಶಿಸಿದೆ.

ಬಾಬರ್-ರಿಜ್ವಾನ್ ಭರ್ಜರಿ ಬ್ಯಾಟಿಂಗ್

ಈ ಮೊತ್ತ ಬೆನ್ನಟ್ಟಿದ ಪಾಕ್​ಗೆ ಉತ್ತಮ ಆರಂಭ ದೊರಕಿತು. ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗದ ನಾಯಕ ಬಾಬರ್ ಅಜಮ್ ಇಂದು ಭರ್ಜರಿಯಾಗಿ ಕಂಬ್ಯಾಕ್ ಮಾಡಿದರು. ಅವರು 42 ಎಸೆತದಲ್ಲಿ 7 ಫೋರ್​ ಮೂಲಕ 53 ರನ್ ಮತ್ತು ಮೊಹಮ್ಮದ್ ರಿಜ್ವಾನ್ 43 ಎಸೆತದಲ್ಲಿ 5 ಬೌಂಡರಿ ಮೂಲಕ 57 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು. ಉಳಿದಂತೆ ಮೊಹಮ್ಮದ್ ಹ್ಯಾರಿಸ್ 30 ರನ್ ಶಾನ್ ಮಸೂಧ್ 3 ರನ್ ಗಳಿಸಿದರು.

ಫೈನಲ್ ಪ್ರವೇಶಿಸಿದ ಪಾಕ್

ಇನ್ನು, ಟಿ20 ವಿಶ್ವಕಪ್ 2022ರಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್​ ತಂಡವನ್ನು 7 ವಿಕೆಟ್​ ಗಳಿಂದ ಮಣಿಸುವ ಮೂಲಕ ಈ ಬಾರಿಯ ಫೈನಲ್​ಗೆ  ಮೊದಲ ತಂಡವಾಗಿ ಪ್ರವೇಶಿಸಿದೆ. ಈ ಮೂಲಕ ನಾಳೆ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಆ ತಂಡ ನೇರವಾಗಿ ಪಾಕಿಸ್ತಾನದ ಎದುರು ಫೈನಲ್ ​ನಲ್ಲಿ ಸೆಣಸಾಡಲಿವೆ.

suddiyaana