ಗೆದ್ದಿದ್ದು ವಿಂಡೀಸ್.. ಬಿದ್ದಿದ್ದು ಭಾರತ – ನೆಟ್ ರನ್ ರೇಟ್ ಬೀಟ್ ಮಾಡ್ತಾರಾ?
1 ಸೋಲು.. ಸೆಮೀಸ್ ಟಿಕೆಟ್ ಮಿಸ್?

ಗೆದ್ದಿದ್ದು ವಿಂಡೀಸ್.. ಬಿದ್ದಿದ್ದು ಭಾರತ – ನೆಟ್ ರನ್ ರೇಟ್ ಬೀಟ್ ಮಾಡ್ತಾರಾ?1 ಸೋಲು.. ಸೆಮೀಸ್ ಟಿಕೆಟ್ ಮಿಸ್?

ಸರಣಿಗಳಲ್ಲಿ ಹೇಗ್ ಆಡಿದ್ವಿ, ಗೆದ್ವಿ ಅನ್ನೋದಕ್ಕಿಂತ ಬಿಗ್ ಸ್ಟೇಜ್, ಐಸಿಸಿ ಈವೆಂಟ್ಸ್ ಅಂತಾ ಬಂದಾಗ ಹೇಗೆ ಪರ್ಫಾಮ್ ಮಾಡ್ಬೇಕು ಅನ್ನೋದನ್ನ ಈಗ ವೆಸ್ಟ್ ಇಂಡೀಸ್ ದೈತ್ಯರು ತೋರಿಸಿಕೊಟ್ಟಿದ್ದಾರೆ. ಟಿ-20 ವಿಶ್ವಕಪ್​ನ ಗ್ರೂಪ್​ ಸ್ಟೇಜ್​ನಲ್ಲಿ ನಾಲ್ಕಕ್ಕೆ ನಾಲ್ಕೂ ಮ್ಯಾಚ್​ಗಳನ್ನೂ ಒನ್ ಸೈಡೆಡ್ ಆಗಿ ಗೆದ್ದಿದ್ರು. ಈಗ ಸೂಪರ್ 8ನ ಫಸ್ಟ್ ಮ್ಯಾಚಲ್ಲೇ ವಿಶ್ವರೂಪ ತೋರಿಸಿದ್ದಾರೆ. ಜಿಂಬಾಬ್ವೆಯನ್ನ ಜಿಂಕೆಯಂತೆ ಬೇಟೆಯಾಡಿ ಪಾಯಿಂಟ್ಸ್ ಟೇಬಲ್​ನೇ ಶೇಕ್ ಮಾಡಿದ್ದಾರೆ. ಇಲ್ಲಿ ಕೆರೆಬಿಯನ್ ದೈತ್ಯರು ಪಂದ್ಯ ಮಾತ್ರ ಗೆದ್ದಿಲ್ಲ. ಭಾರತದ ಜರ್ನಿಗೂ ಅಡ್ಡಗಾಲು ಹಾಕಿದ್ದಾರೆ.

ಇದನ್ನೂ ಓದಿ : 7 ಸಿಕ್ಸ್ .. 7 ಫೋರ್.. ಶಿಮ್ರೋನ್ ಹೆಟ್ಮೆಯರ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಉಡೀಸ್ ​

ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಸಿಕ್ಕಾಪಟ್ಟೆ ಡೇಂಜರಸ್ ಆಗಿದ್ದಾರೆ. ಅದ್ರಲ್ಲೂ ಜಿಂಬಾಬ್ವೆ ವಿರುದ್ಧ ಅವ್ರ ಪರ್ಫಾಮೆನ್ಸ್ ನೋಡಿದ್ಮೇಲೆ ಫೈನಲಿಸ್ಟ್ ಪಕ್ಕಾ ಎನ್ನುವಂತಾಗಿದೆ. ಯಾಕಂದ್ರೆ ಇದು ಅಂತಿಂಥಾ ಗೆಲುವಲ್ಲ. ವಿಶ್ವಕಪ್ ಇತಿಹಾಸದಲ್ಲೇ ದಾಖಲೆಯ ಪುಟ ಸೇರಿರೋ ಗೆಲುವು. ಕೆರೆಬಿಯನ್ ದೈತ್ಯರ ಈ ವಿಕ್ಟರಿ ಭಾರತದ ಸೆಮಿಫೈನಲ್‌ ಜರ್ನಿಯನ್ನ ಕ್ರಿಟಿಕಲ್ ಮಾಡಿದೆ. ಮುಂದಿನ ಪಂದ್ಯಗಳಲ್ಲಿ ಗೆದ್ರೂ ನೆಟ್ ರನ್ ರೇಟ್ ಪಾಸ್ ಆಗ್ತಾರಾ ಅನ್ನೋದೇ ಡೌಟ್ ಇದೆ.

ಜಿಂಬಾಬ್ವೆಯನ್ನು ಹೀನಾಯವಾಗಿ ಸೋಲಿಸಿದ ವೆಸ್ಟ್ ಇಂಡೀಸ್!

ಸೂಪರ್ 8 ಗುಂಪಿನ ಗ್ರೂಪ್ 1ನಲ್ಲಿರೋ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಸೋಮವಾರ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಇತಿಹಾಸವನ್ನೇ ಸೃಷ್ಟಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ಜಿಂಬಾಬ್ವೆ ಬೌಲರ್​ಗಳನ್ನ ಅಕ್ಷರಶಃ ಅಟ್ಟಾಡಿಸಿ ಹೊಡೆದಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಅಂತೂ 34 ಎಸೆತಗಳಲ್ಲೇ 7 ಸಿಕ್ಸ್, 7 ಫೋರ್ ಸಮೇತ 85 ರನ್ ಚಚ್ಚಿದ್ರು. ಪೋವೆಲ್ 59 ರನ್ಸ್ ಹೊಡೆದ್ರೆ ರುದಫೋರ್ಡ್, ಶೆಫರ್ಡ್, ಹೋಲ್ಡರ್​ ಕೂಡ ಅಬ್ಬರಿಸಿದ್ರು. ಪರಿಣಾಮ 20 ಓವರ್​ಗಳಲ್ಲಿ 6 ವಿಕೆಟ್ ಕಳ್ಕೊಂಡು 254 ರನ್ಸ್ ಕಲೆ ಹಾಕಿದ್ರು. ಟಿ-20 ವಿಶ್ವಕಪ್ ಇತಿಹಾಸದಲ್ಲೇ ಟಾಪ್ 2 ಹೈಯೆಸ್ಟ್ ಸ್ಕೋರ್ ಇದು. 2007ರಲ್ಲಿ 260 ರನ್ಸ್ ಹೊಡೆದಿರೋ ಶ್ರೀಲಂಕಾ ಈ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿಗೆ 255 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ  17.4 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯ್ತು. ಈ ಮೂಲಕ ವೆಸ್ಟ್‌ ಇಂಡೀಸ್‌ 107 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದೇ ಮಾರ್ಜಿನ್​ನ ಗೆಲುವು ಪಾಯಿಂಟ್ಸ್ ಟೇಬಲ್ ಮತ್ತು ರನ್ ರೇಟ್ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ.

ಪಾಯಿಂಟ್ಸ್ ಟೇಬಲ್ ನಲ್ಲಿ ನಂ.1 ಸ್ಥಾನಕ್ಕೆ ಜಿಗಿದ ವಿಂಡೀಸ್!

ಗ್ರೂಪ್ 1ರಲ್ಲಿ ಸೂಪರ್‌ 8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತವನ್ನ ಬರೋಬ್ಬರಿ 76 ರನ್​ಗಳಿಂದ ಸೋಲಿಸಿತ್ತು. ಇದೇ ಅಂತರದಿಂದಾಗಿ +3.800ರಷ್ಟು ರನ್​ ರೇಟ್​ನೊಂದಿಗೆ ಪಸ್ಟ್ ಪ್ಲೇಸ್​ನಲ್ಲಿತ್ತು. ಆದ್ರೀಗ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆಯನ್ನ 107 ರನ್​ಗಳಿಂದ ಸೋಲಿಸಿ +5.350 ರನ್​ರೇಟ್​ನೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದಿದೆ. ಸೌತ್ ಆಫ್ರಿಕಾ ತಂಡ ಎರಡನೇ ಸ್ಥಾನಕ್ಕೆ ಜಾರಿದೆ. ಹರಿಣಗಳ ವಿರುದ್ಧ ಹೀನಾಯವಾಗಿ ಸೋತಿರೋ ಭಾರತ -3.800ಯೊಂದಿಗೆ 3ನೇ ಸ್ಥಾನದಲ್ಲಿದೆ. ಜಿಂಬಾಬ್ವೆ ತಂಡ -5.350 ರನ್​ರೇಟ್​ನೊಂದಿಗೆ ಕೊನೇ ಸ್ಥಾನದಲ್ಲಿದೆ. ಸೋ ಈ ಪಾಯಿಂಟ್ಸ್ ಟೇಬಲ್ ಪಟ್ಟಿ ನೋಡಿದಾಗ್ಲೇ ಗೊತ್ತಾಗುತ್ತೆ ಭಾರತ ಎಂಥಾ ಕ್ರೂಶಿಯಲ್ ಸ್ಟೇಜ್​ನಲ್ಲಿದೆ ಅಂತಾ.

ಸದ್ಯ ಸೂಪರ್ 8 ಹಂತದಲ್ಲಿ ಆಗಿರೋದೇ ಎರಡೆರಡು ಪಂದ್ಯ. ಗ್ರೂಪ್ 1 ಹಾಗೇ ಗ್ರೂಪ್ 2ನಲ್ಲಿ.. 1ನಲ್ಲಿ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಡಾಮಿನೇಷನ್ ಮಾಡಿ ಗೆದ್ದಿರೋದ್ರಿಂದ ಸೆಮೀಸ್ ಟಿಕೆಟ್​ಗೆ ಹತ್ತಿರ ಇದ್ದಾರೆ. ಇತ್ತ ಭಾರತ ಮತ್ತು ಜಿಂಬಾಬ್ವೆ ಕೆಟ್ಟದಾಗಿ ಸೋತಿರೋದ್ರಿಂದ ಚಾನ್ಸ್ ಇದ್ರೂ ಕ್ರಿಟಿಕಲ್ ಇದೆ. ಅತ್ತ ಗ್ರೂಪ್ 2ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಪಂದ್ಯ ಮಳೆ ಕಾರಣಕ್ಕೆ ರದ್ದಾಗಿ ಒಂದೊಂದು ಅಂಕ ಪಡೆದಿದ್ದಾರೆ. ಇನ್ನೊಂದು ಮ್ಯಾಚಲ್ಲಿ ಲಂಕಾ ವಿರುದ್ಧ ಭರ್ಜರಿಯಾಗಿ ಗೆದ್ದಿರೋ ಇಂಗ್ಲೆಂಡ್ ಟಾಪ್ 1ನಲ್ಲಿದೆ. ಗ್ರೂಪ್ 2ನಲ್ಲಿ ಸದ್ಯಕ್ಕೆ ಅಂಥಾ ದೊಡ್ಡ ವೇರಿಯೇಷನ್ಸ್ ಇಲ್ದಿದ್ರೂ ಗ್ರೂಪ್ 1ನಲ್ಲಿ ಆಲ್ರೆಡಿ ಲೆಕ್ಕಾಚಾರ ಸ್ಟಾರ್ಟ್ ಆಗಿದೆ.

ಭಾರತದ ಜರ್ನಿ ಕಷ್ಟ ಕಷ್ಟ!

ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು

ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಸಮಬಲ ಭೀತಿ

ತಲಾ 4 ಅಂಕ ಪಡೆದ್ರೆ ನೆಟ್ ರನ್ ರೇಟ್ ಆಧಾರದಲ್ಲಿ ಆಯ್ಕೆ

ಸೌತ್ ಆಫ್ರಿಕಾ ಎರಡೂ ಪಂದ್ಯಗಳನ್ನ ಗೆದ್ರೆ ಭಾರತಕ್ಕೆ ಲಾಭ

ಹರಿಣಪಡೆ ಜಿಂಬಾಬ್ವೆ ವಿರುದ್ಧ ಗೆದ್ದು ವಿಂಡೀಸ್ ವಿರುದ್ಧ ಸೋತ್ರೂ ಕಷ್ಟ

Shantha Kumari

Leave a Reply

Your email address will not be published. Required fields are marked *