ಸಿಕ್ಸ್ ಹೊಡೆದರೆ 9 ರನ್..! – ಟಿ10 ಕ್ರಿಕೆಟ್ ರೂಲ್ಸ್ ಫುಲ್ ಡಿಫರೆಂಟ್

ಸಿಕ್ಸ್ ಹೊಡೆದರೆ 9 ರನ್..! –  ಟಿ10 ಕ್ರಿಕೆಟ್ ರೂಲ್ಸ್ ಫುಲ್ ಡಿಫರೆಂಟ್

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರೋ ಮತ್ತು ಸಾಕಷ್ಟು ಬದಲಾವಣೆಗಳನ್ನ ಕಂಡಿರೋ ಒಂದು ಆಟ ಅಂದ್ರೆ ಅದು ಕ್ರಿಕೆಟ್. ಒಂದು ಕಾಲದಲ್ಲಿ ಬರೀ ಟೆಸ್ಟ್​ ಕ್ರಿಕೆಟ್​​ನ ಫಾರ್ಮೆಟ್ ಮಾತ್ರ ಇತ್ತು. ನಂತರ ವಂಡೇ ಫಾರ್ಮೆಟ್ ಇಂಟ್ರಿಡ್ಯೂಸ್ ಆಯ್ತು. 60+60 ಓವರ್​​ಗಳ ಮ್ಯಾಚ್​​ ನಡೀತಾ ಇತ್ತು. ಇದಾದ್ಮೇಲೆ 50 ಓವರ್​​​ಗಳ ಮ್ಯಾಚ್​ ಶುರುವಾಯ್ತು. ನಂತರ ಬಂದಿದ್ದು ಟಿ-20 ಕ್ರಿಕೆಟ್. ಟಿ20 ಮ್ಯಾಚ್​ಗಳಿಗೆ, ಐಪಿಎಲ್​​ ಟೂರ್ನಿ ಬಗ್ಗೆ ಅಭಿಮಾನಿಗಳ ಕ್ರೇಜ್ ಇರೋದೇ ಬೇರೆ ಲೆವೆಲ್. ಇದ್ರ ಬೆನ್ನಲ್ಲೇ ಈಗ ಟಿ10 ಕ್ರಿಕೆಟ್ ಕೂಡ ಸೌಂಡ್ ಮಾಡ್ತಾ ಇದೆ. ಅಲ್ಲಲ್ಲಿ ಟಿ10 ಕ್ರಿಕೆಟ್ ಟೂರ್ನಿಗಳು ಕೂಡ ಇಡೀತಾ ಇದೆ. ಲೇಟೆಸ್ಟ್ ಆಗಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದು, ಭವಿಷ್ಯದಲ್ಲಿ ಟಿ10 ಅಂತಾರಾಷ್ಟ್ರೀಯ ಮ್ಯಾಚ್​ಗಳು ನಡೆದ್ರೂ ಆಶ್ಚರ್ಯ ಇಲ್ಲ. ಆದ್ರೆ ಈ ಟಿ10 ಕ್ರಿಕೆಟ್​ನ ರೂಲ್ಸ್​ಗಳು​ ಮಾತ್ರ ಕಂಪ್ಲೀಟ್ ಡಿಫರೆಂಟ್ ಆಗಿದೆ. ಕ್ರಿಕೆಟ್ ಲೆಜೆಂಡ್ ಸಚಿನ್​ ತೆಂಡೂಲ್ಕರ್​ ಕೂಡ ಈ ರೂಲ್ಸ್ ಬಗ್ಗೆ ವಿವರಿಸಿದ್ದು ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಗಿಲ್ ಶತಕವನ್ನು ಕಣ್ತುಂಬಿಕೊಂಡರೂ ತಂದೆಗೆ ಅಸಮಾಧಾನ – ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಬೇಜಾರು

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ ಹೆಸರಲ್ಲಿ ಭಾರತದಲ್ಲಿ ಟಿ10 ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಇದ್ರಲ್ಲಿ ಒಟ್ಟು ಆರು ತಂಡಗಳಿವೆ. ಈ ಪೈಕಿ ಬೆಂಗಳೂರು ಸ್ಟ್ರೈಕರ್ಸ್ ಕೂಡ ಒಂದು. ಮುಂಬೈನಲ್ಲಿ ನಡೆದ ಓಪನಿಂಗ್​ ಮ್ಯಾಚ್​​ನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಆಡಿದ್ರು. ​​​ಹತ್ತು ಓವರ್​​ಗಳ ಮ್ಯಾಚ್​​ ಅನ್ನೋದಕ್ಕಿಂತ ಹೆಚ್ಚಾಗಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ ಟಿ10 ಕ್ರಿಕೆಟ್​ನ ರೂಲ್ಸ್​ ಇನ್ನಷ್ಟು ಇಂಟ್ರೆಸ್ಟಿಂಗ್ ಆಗಿದೆ. ಟಾಸ್​​ ಹಾಕೋದ್ರಿಂದಲೇ ಈ ಲೀಗ್​​ನ ಸ್ಪೆಷಾಲಿಟಿ ಶುರುವಾಗಿಬಿಡುತ್ತೆ. ಇಲ್ಲಿ ಟಿಪ್​ ಟಾಪ್ ಟಾಸ್ ಹಾಕಲಾಗುತ್ತೆ. ಅಂದ್ರೆ ಎರಡೂ ಟೀಮ್​ಗಳ ಕ್ಯಾಪ್ಟನ್ ಡಿಸ್ಟೆನ್ಸ್​ನಲ್ಲಿ ನಿಂತಿರ್ತಾರೆ. ತಮ್ಮ ಒಂದು ಕಾಲಿನ ತುದಿಗೆ ಇನ್ನೊಂದು ಕಾಲಿನ ಹಿಮ್ಮಡಿಯನ್ನ ಟಚ್ ಮಾಡ್ಕೊಂಡು, ಒಂದೊಂದೇ ಸ್ಟೆಪ್ ಇಟ್ಕೊಂಡು ಮುಂದಕ್ಕೆ ಬರಬೇಕು. ಆಗ ಇಬ್ಬರೂ ಕ್ಯಾಪ್ಟನ್​ಗಳ ಕಾಲುಗಳ ಪರಸ್ಪರ ಟಚ್ ಆಗುತ್ತೆ. ಈ ವೇಳೆ ಯಾರ ಕಾಲು ಮೇಲಗಡೆ ಇರುತ್ತೋ ಅಂದ್ರೆ ಎದುರಾಳಿ ಕ್ಯಾಪ್ಟನ್​ನ ಕಾಲನ್ನ ಟಚ್ ಮಾಡಿ ಕಾಲಿನ ತುದಿಯ ಪೊಸೀಶನ್ ಮೇಲೆ ಇಟ್ಟಿರ್ತಾರೋ ಅವರು ಟಾಸ್ ಗೆದ್ದಂತೆ.

ಪವರ್​ ಪ್ಲೇ ಡಿಫರೆಂಟ್ ರೂಲ್ಸ್!

ಏಕದಿನ ಮತ್ತು ಟಿ20ಯಲ್ಲಿ ಮೊದಲ ಕೆಲ ಓವರ್​​​ಗಳು ಪವರ್​ ಪ್ಲೇ ಆಗಿರುತ್ತೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ ಟಿ10 ಕ್ರಿಕೆಟ್​​ನಲ್ಲಿ ಮೂರು ಓವರ್ ಮಾತ್ರ ಪವರ್​​ ಪ್ಲೇ ಇರುತ್ತೆ. ಈ ಪೈಕಿ ಎರಡು ಮ್ಯಾಂಡೆಟರಿ ಅಂದ್ರೆ ಕಡ್ಡಾಯ ಪವರ್​​ ಪ್ಲೇ. ಆಗ ಇಬ್ಬರು ಫೀಲ್ಡರ್ಸ್ ಮಾತ್ರ 30 ಯಾರ್ಡ್ ಸರ್ಕಲ್​​​ನಿಂದ ಹೊರಗಡೆ ಇರಬಹುದು. ಮತ್ತೊಂದು ಓವರ್ ಬ್ಯಾಟಿಂಗ್ ಪವರ್​ಪ್ಲೇ. ಆಗ ಮೂವರು ಫೀಲ್ಡರ್ಸ್ 30 ಯಾರ್ಡ್ ಸರ್ಕಲ್​​ನಿಂದ ಹೊರಗೆ ಫೀಲ್ಡಿಂಗ್ ಮಾಡಬಹುದು. ಇನ್ನು ಈ ಬ್ಯಾಟಿಂಗ್ ಪವರ್​ಪ್ಲೇಯನ್ನ 3-9ನೇ ಓವರ್ ಮಧ್ಯದಲ್ಲೇ ತೆಗೆದುಕೊಳ್ಳಬೇಕು.

ISPL 9 ಸ್ಟ್ರೀಟ್ ರನ್ಸ್!

9 ಸ್ಟ್ರೀಟ್ ರನ್ಸ್ ಅನ್ನೋದು ಒಂದು ಯುನೀಕ್ ಕಾನ್ಸೆಪ್ಟ್. ಇದು ಇನ್ನೂ ಇಂಟ್ರೆಸ್ಟಿಂಗ್ ಆಗಿದೆ. ಬ್ಯಾಟ್ಸ್​​ಮನ್ ಹೊಡೆದ ಶಾಟ್​ಗೆ ಬಾಲ್​ ಬೌಂಡರಿ ಲೈನ್​​ನ್ನ ಕ್ರಾಸ್ ಆಗಿ ನೇರವಾಗಿ ಸ್ಟೇಡಿಯಂನಲ್ಲಿ ಕುಳಿತ ಜನರ ಮೇಲೆ ಅಥವಾ ಸ್ಟ್ಯಾಂಡ್ ಮೇಲೆ ಬಿದ್ರೆ ಆಗ ಬ್ಯಾಟಿಂಗ್ ಸೈಡ್​ಗೆ 9 ರನ್​​ಗಳನ್ನ ನೀಡಲಾಗುತ್ತೆ. 6 ರನ್ ಅಲ್ಲ.. 9 ರನ್. ಒಂದು ವೇಳೆ ಬಾಲ್ ಜಸ್ಟ್ ಬೌಂಡರಿ ಲೈನ್ ಕ್ರಾಸ್ ಆಗಿ ಸಿಕ್ಸರ್ ಹೋಯ್ತು ಅಂದ್ರೆ ಆಗ ಆರು ರನ್​ಗಳನ್ನ ಮಾತ್ರ ನೀಡಲಾಗುತ್ತೆ. ಸ್ಟ್ಯಾಂಡ್ ಮೇಲೆ ಬಿದ್ರಷ್ಟೇ 9 ರನ್​​ಗಳು ಸಿಗುತ್ತೆ.

50-50 ಓವರ್.. ಐದು ಬೌಲರ್ಸ್!

50-50 ಓವರ್​​ ಅನ್ನೋದು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ನಲ್ಲಿ ಇಂಟ್ರೊಡ್ಯೂಸ್ ಮಾಡಿರೋ ಇನ್ನೊಂದು ರೂಲ್ಸ್. ಟೀಮ್​ ಕ್ಯಾಪ್ಟನ್ ತನ್ನ ಪ್ಲೇಯಿಂಗ್-11 ಪೈಕಿ ಐದು ಮಂದಿ ಬೌಲರ್ಸ್​ಗಳನ್ನ ಪಿಕ್ ಮಾಡಬೇಕು. ಈ ಪೈಕಿ ಯಾರು ಬೇಕಾದ್ರೂ ಇನ್ನಿಂಗ್ಸ್​ ಮಧ್ಯೆ ಅದ್ರಲ್ಲೂ ಏಳನೇ ಓವರ್​ನ ಒಳಗಾಗಿ 50-50 ಓವರ್​ನ್ನ ಎಸೆಯಬಹುದು. ಏಳು ಓವರ್ ಆದ್ಮೇಲೆ ಈ 50-50 ಓವರ್ ಎಸೆಯುವಂತೆ ಇಲ್ಲ. ಓಕೆ ಈಗ ಈ 50-50 ಓವರ್​​ ಅಂದ್ರೆ ಏನು ಅನ್ನೋದನ್ನ ಹೇಳ್ತೀನಿ. 50-50 ಓವರ್​​ ಅನ್ನೋದು ಒಂದು ಓವರ್​ಗಿರೋ ಹೆಸರು. ಸ್ಪೆಷಾಲಿಟಿ ಏನಂದ್ರೆ ಏಳನೇ ಓವರ್​ನ ಒಳಗಾಗಿ 50-50 ಓವರ್​​ನ್ನ ಎಷ್ಟನೇ ಓವರ್ ಸಂದರ್ಭದಲ್ಲಿ ಬೌಲಿಂಗ್​ ಟೀಮ್ ಎಸೀಬೇಕು ಅನ್ನೋದು ಡಿಸೈಡ್ ಮಾಡೋದು ಬಾಟ್ಸ್​ಮನ್. ಅಷ್ಟೇ ಅಲ್ಲ, ಯಾರು ಬೌಲಿಂಗ್ ಮಾಡಬೇಕು ಅನ್ನೋದನ್ನ ಕೂಡ ಕ್ರೀಸ್​​ನಲ್ಲಿರೋ ಬ್ಯಾಟ್ಸ್​​ಮನ್​ ಚೂಸ್ ಮಾಡ್ತಾರೆ. ಗ್ರೌಂಡ್​​ನಲ್ಲಿ ನಿಂತ ಬೌಲರ್ಸ್​​ನ್ನ ನೋಡಿ ಬ್ಯಾಟ್ಸ್​ಮನ್​​ ಇಂಥವರೇ ಬೌಲಿಂಗ್ ಮಾಡಬೇಕು ಅಂತಾ ಹೇಳಿದ್ರೆ ಅದೇ ಬೌಲರ್ 50-50 ಓವರ್​ನ್ನ ಎಸೀಬೇಕು. ಆದ್ರೆ ಬ್ಯಾಟ್ಸ್​​ಮನ್​ಗಳಿಗೂ ಇಲ್ಲಿ ಚಾಲೆಂಜ್ ಇದೆ. ತಮಗೆ ಬೇಕಾದ ಬೌಲರ್​ನ್ನ ಚೂಸ್ ಮಾಡಿದ್ರೆ ಸಾಕಾಗಲ್ಲ. ಆ 50-50 ಓವರ್​ನಲ್ಲಿ ತಾನು ಪಿಕ್​​ ಮಾಡಿದ ಬೌಲರ್​​ನ ಓವರ್​ಗೆ ಕನಿಷ್ಠ 16 ರನ್​​ಗಳನ್ನಾದ್ರೂ ಗಳಿಸಲೇಬೇಕು. ಒಂದು ವೇಳೆ ಆ ಓವರ್​ನಲ್ಲಿ 16 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ರೆ ಅದಕ್ಕಿಂದ 50 ಪರ್ಸೆಂಟ್ ಹೆಚ್ಚು ಸ್ಕೋರ್ ಗಳಿಸ್ತಾರೆ. ಅಂದ್ರೆ 16 ರನ್​ ಮಾಡಿದ್ರೆ 24 ರನ್ ಸಿಗುತ್ತೆ. ಒಂದು ವೇಳೆ ಆ ಓವರ್​ನಲ್ಲಿ 16 ರನ್ ಮಾಡೋಕೆ ಆಗದೆ 14 ರನ್​ ಗಳಿಸೋಕಷ್ಟೇ ಸಾಧ್ಯವಾದ್ರೆ ಆಗ 7 ರನ್​ಗಳು ಮಾತ್ರ ಸಿಗುತ್ತೆ. ಅಂದ್ರೆ ಸ್ಕೋರ್​ನ 50 ಪರ್ಸೆಂಟ್ ಆಗುತ್ತೆ.​ ಆ 50-50 ಓವರ್​ನಲ್ಲಿ ಬ್ಯಾಟಿಂಗ್​ ಟೀಮ್ ಎಷ್ಟು ಸ್ಕೋರ್ ಮಾಡುತ್ತೋ ಅದನ್ನ ಇನ್ನೊಂದು ಟೀಮ್ ಚೇಸ್ ಮಾಡಬೇಕು. ಅಂದ್ರೆ ಆ 50-50 ಓವರ್​​ನಲ್ಲಿ ಬಂದ ರನ್​​​ನ್ನ ಚೇಸ್ ಮಾಡಬೇಕು. ಒಂದು ವೇಳೆ ಚೇಸ್ ಮಾಡುವಲ್ಲಿ ಫೇಲ್ ಆದ್ರೆ ಆ ಟೀಮ್​ನ ಫೈನಲ್​ ಸ್ಕೋರ್​​ನಿಂದ ರನ್​​ ಕಟ್ ಮಾಡಲಾಗುತ್ತೆ. ISPL ಎಕ್ಸಿಬಿಷನ್ ಮ್ಯಾಚ್​ನಲ್ಲೇ ಇದೇ ಆಗಿತ್ತು. ಮಾಸ್ಟರ್-11 ಮತ್ತು ಕಿಲಾಡಿ-11 ನಡುವಿನ ಪಂದ್ಯದಲ್ಲಿ 50-50 ಓವರ್​​​ನಲ್ಲಿ 16 ರನ್​ಗಳ ಟಾರ್ಗೆಟ್​ನ್ನ ಚೇಸ್ ಮಾಡುವಲ್ಲಿ ಮಾಸ್ಟರ್ಸ್ ಟೀಮ್ ಫೇಲ್ ಆಗಿತ್ತು. ಹೀಗಾಗಿ ಮಾಸ್ಟರ್ಸ್​ ಟೀಮ್​​​ನ ಟೋಟಲ್​​ ಸ್ಕೋರ್​​ನಿಂದ 7 ರನ್​ಗಳನ್ನ ಕಟ್ ಮಾಡಲಾಗಿತ್ತು.

ಟೇಪ್ ಬಾಲ್ ಓವರ್ ರೂಲ್ಸ್!

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ ಟಿ10 ಟೂರ್ನಿಯನ್ನ ಟೆನ್ನಿಸ್​ ಬಾಲ್​ನಲ್ಲಿ ಆಡಲಾಗ್ತಿದೆ. 10 ಓವರ್​​ಗಳ ಪೈಕಿ ಎರಡು ಓವರ್​​ನ್ನ ಟೇಪ್ ಬಾಲ್​ ಮೂಲಕ ಬೌಲಿಂಗ್ ಮಾಡಬಹುದು. ಇಲ್ಲಿ ಟೇಪ್ ಬಾಲ್​ ಅಂದ್ರೆ ಅದೇನು ಭಾರಿ ಸ್ಪೆಷಾಲಿಟಿ ಇರೋ ಬಾಲ್ ಅಂತೂ ಅಲ್ಲ. ಟೇಪ್​ ಬಾಲ್ ಅನ್ನೋದು ಕೂಡ ಒಂದು ಟೆನ್ನಿಸ್ ಬಾಲೇ. ಆದ್ರೆ ಆ ಬಾಲ್​​ನ ಸುತ್ತಲೂ ಟೇಪ್​​ನ್ನ ಕವರ್ ಮಾಡಿರ್ತಾರೆ. ಟೇಪ್​​ನಿಂದ ಆ ಟೆನ್ನಿಸ್ ಬಾಲ್​ನ್ನ ಸುತ್ತಲಾಗುತ್ತೆ. ಇದ್ರ ಅಡ್ವಾಂಟೇಜ್​ ಏನಂದ್ರೆ ಬಾಲ್​ನ್ನ ಸ್ವಿಂಗ್ ಮಾಡಬಹುದು. ಹೇಗೆ ಹಾರ್ಡ್​ ಬಾಲ್​ನಲ್ಲಿ ಬೌಲಿಂಗ್​​​​ ಮಾಡೋವಾಗ ಸ್ವಿಂಗ್ ಆಗುತ್ತೋ ಅದೇ ರೀತಿ ಈ ಟೇಪ್​​ಬಾಲ್​ನಿಂದಲೂ ಸ್ವಿಂಗ್ ಮಾಡಬಹುದು. ಇದು ಬ್ಯಾಟ್ಸ್​​ಮನ್​ಗಳಿಗೆ ಭಾರಿ ಚಾಲೆಂಜಿಂಗ್​ ಆಗಿರಲಿದೆ. ಆದ್ರೆ ಆಗಲೇ ವಿವರಿಸಿದಂತಾ 50-50 ಓವರ್​ ವೇಳೆ ಈ ಟೇಪ್​​ಬಾಲ್ ಮೂಲಕ ಬೌಲಿಂಗ್ ಮಾಡುವಂತಿಲ್ಲ. ಇನ್ನುಳಿದ ಒಂಭತ್ತು ಓವರ್​ಗಳ ಪೈಕಿ ಯಾವಾಗ ಬೇಕಿದ್ರೂ ಟೇಪ್​​ ಬಾಲ್ ಮೂಲಕ ಎರಡು ಓವರ್​ ಎಸೀಬಹುದು. ಆದ್ರೆ ಯಾವಾಗ ಎಸೀಬೇಕು. ಟೇಪ್​ಬಾಲ್ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಓವರ್ ಎಸೀಬೇಕಾ? ಬೇಡ್ವಾ ಅನ್ನೋದನ್ನ ಬೌಲಿಂಗ್ ಟೀಮ್​ನ ಕ್ಯಾಪ್ಟನ್ ಡಿಸೈಡ್ ಮಾಡಬೇಕಾಗುತ್ತೆ. ಹೀಗಾಗಿ ಕ್ಯಾಪ್ಟನ್ ತುಂಬಾ ಸ್ಮಾರ್ಟ್ ಆಗಿಯೇ ಈ ಟೇಪ್​​ಬಾಲ್​ ಓವರ್​​ನ್ನ ಯೂಸ್ ಮಾಡಬೇಕಾಗುತ್ತೆ. ಹಾಗೆಯೇ ತಮ್ಮ ಟೀಮ್​​ನಲ್ಲಿ ಟೇಪ್​ ಬಾಲ್​ ಸ್ಪೆಷಲಿಸ್ಟ್ ಅಂತಾ ಒಬ್ಬ ಬೌಲರ್​​ನ್ನ ಕೂಡ ಇಟ್ಟುಕೊಳ್ಳಬಹುದು. ಬೌಲರ್ಸ್​​ಗಳಿಗೂ ಇದೊಂದು ಅಪಾರ್ಚ್ಯುನಿಟಿ ಟೇಪ್​ಬಾಲ್ ಎಕ್ಸ್​ಪರ್ಟ್ ಆಗೋದಿಕ್ಕೆ.

ಇನ್ನು ನಾನ್ ಪವರ್​ಪ್ಲೇ ಟೈಮ್​​ನಲ್ಲಿ ಮ್ಯಾಕ್ಸಿಮಮ್ ಐದು ಮಂದಿ ಫೀಲ್ಡರ್ಸ್ ಮಾತ್ರ 30 ಯಾರ್ಡ್ ಸರ್ಕಲ್​​ನಿಂದ ಹೊರಗೆ ಇರಬಹುದು. ಹಾಗೆಯೇ ಮ್ಯಾಚ್​​ ಸಂದರ್ಭದಲ್ಲಿ ಎರಡೂ ಟೀಮ್​ಗಳು ತಲಾ ಇಬ್ಬರು ಸಬ್​​ಸ್ಟಿಟ್ಯೂಟ್ ಪ್ಲೇಯರ್ಸ್​ಗಳನ್ನ ಆಡಿಸಬಹುದು. ಈ ಎಲ್ಲಾ ರೂಲ್ಸ್​ಗಳ ಬಗ್ಗೆ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ ಓಪನಿಂಗ್ ಮ್ಯಾಚ್​ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಇದನ್ನ ಎಕ್ಸ್​​ಪ್ಲೈನ್ ಮಾಡಿದ್ರು. ಅಂತೂ ಟಿ20 ಬಳಿಕ ಈಗ ಟಿ10 ಕ್ರಿಕೆಟ್ ಟೂರ್ನಿಗಳು ದೇಶದ ವಿವಿಧೆಡೆ ನಡೀತಾ ಇದೆ. ಒಂದು ಇಂಟರ್​​​ನ್ಯಾಷನಲ್​​ ಕ್ರಿಕೆಟ್​ನಲ್ಲಿ ಟಿ10 ಫಾರ್ಮೆಟ್ ಶುರುವಾದ್ರೆ ಈಗ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್​ ಲೀಗ್​ನಲ್ಲಿರೋ ಎಲ್ಲಾ​  ರೂಲ್ಸ್​ಗಳನ್ನೂ ಅಲ್ಲಿ ಅಪ್ಲೈ ಮಾಡೋಕೆ ಸಾಧ್ಯವಿಲ್ಲ.

Sulekha