ರಿಯಲ್ ALL ROUNDER ಹಾರ್ದಿಕ್ – ಡೇವಿಡ್ ಮಿಲ್ಲರ್ ಗೆ ಪಾಂಡ್ಯನೇ ಕಿಲ್ಲರ್
ಕುಂಗ್ ಫೂ ಪಾಂಡ್ಯಗೆ ವಿಲನ್ ಯಾರು?

ರಿಯಲ್ ALL ROUNDER ಹಾರ್ದಿಕ್ – ಡೇವಿಡ್ ಮಿಲ್ಲರ್ ಗೆ ಪಾಂಡ್ಯನೇ ಕಿಲ್ಲರ್ಕುಂಗ್ ಫೂ ಪಾಂಡ್ಯಗೆ ವಿಲನ್ ಯಾರು?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟಿ-20ಐ ಮ್ಯಾಚ್ ಆದ್ಮೇಲೆ ಹಾರ್ದಿಕ್ ಪಾಂಡ್ಯ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಅವ್ರ ಒನ್ ಮ್ಯಾನ್ ಶೋ. ಭಾರತದ ಟಾಪ್ ಆರ್ಡರ್ ಬ್ಯಾಟರ್​ಗಳೆಲ್ಲಾ ಪೆವಿಲಿಯನ್ ಪರೇಡ್ ನಡೆಸಿದಾಗ ಸಿಂಗಲ್ಲಾಗಿ ನಿಂತು ಹರಿಣಪಡೆಯ ಬೌಲರ್​ಗಳನ್ನ ಬೆಂಡೆತ್ತಿದಂತ ಹೀರೋ. ರಿಯಾಲಿಟಿ ಏನಂದ್ರೆ ಒಬ್ಬ ಆಲ್​ರೌಂಡರ್ ಕೋಟಾಗೆ ಹಾರ್ದಿಕ್ ಕರೆಕ್ಟ್ ಆಗಿ ಸೂಟ್ ಆಗ್ತಾರೆ.

ಇದನ್ನೂ ಓದಿ : ಐಪಿಎಲ್ ಹರಾಜಿಗೂ ಮುನ್ನ ಮೂವರನ್ನ ನಿಷೇಧಿಸಿದ ಬಿಸಿಸಿಐ – 10 ಫ್ರಾಂಚೈಸಿಗಳಿಗೆ ಬೇಕಿದೆ 77 ಆಟಗಾರರು!

ಏಷ್ಯಾಕಪ್​ನಲ್ಲಿ ಇಂಜುರಿಯಿಂದಾಗಿ ಕೊನೆಯ ಪಂದ್ಯಗಳನ್ನ ಮಿಸ್ ಮಾಡ್ಕೊಂಡಿದ್ದ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಟಿ-20ಐ ತಂಡದಿಂದ ಹೊರಗುಳಿದಿದ್ರು. ಈಗ ಕಂಪ್ಲೀಟ್ ಫಿಟ್ ಌಂಡ್ ಫೈನ್ ಆಗಿ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಸದ್ದು ಮಾಡಿ ಸೌತ್ ಆಫ್ರಿಕಾ ವಿರುದ್ಧ ಮತ್ತೆ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಕಣಕ್ಕಿಳಿದಿದ್ರು. ಮೊದಲ ಮ್ಯಾಚಲ್ಲೂ ಸೂಪರ್ ಹೀರೋ ಆಗಿದ್ದಾರೆ. 200ಪ್ಲಸ್ ಸ್ಟ್ರೈಕ್​ರೇಟ್​ನಲ್ಲಿ 59 ರನ್ ಕಲೆ ಹಾಕಿದ್ದೂ ಅಲ್ದೇ ಒಂದು ವಿಕೆಟ್ ಎಗರಿಸಿದ್ರು. ಹಾಗೇ ಬ್ಯಾಟಿಂಗ್​ನಲ್ಲಿ 4 ಸಿಕ್ಸ್ ಸಿಡಿಸಿ ಟಿ-20ಐನಲ್ಲಿ 100 ಸಿಕ್ಸರ್​ಗಳ ದಾಖಲೆಯನ್ನೂ ಬರೆದ್ರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ನೂರು ಸಿಕ್ಸರ್ ಬಾರಿಸಿದ ಭಾರತದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡ್ರು. ಇನ್ನು ಬೌಲಿಂಗ್​ನಲ್ಲಿ ಕಿಲ್ಲರ್ ಮಿಲ್ಲರ್ ಅಂತಾನೇ ಕರೆಸಿಕೊಳ್ಳೋ ಡೇವಿಡ್ ಮಿಲ್ಲರ್​ನ ಆರಂಭದಲ್ಲೇ ಕಟ್ಟಿ ಹಾಕಿದ್ರು. ಮಿಲ್ಲರ್ ಪಾಲಿಗೆ ಪಾಂಡ್ಯ ಯಾವಾಗ್ಲೂ ಕಿಲ್ಲರ್ ಆಗಿದ್ದಾರೆ.

8ನೇ ಬಾರಿ ಡೇವಿಡ್ ಮಿಲ್ಲರ್ ಔಟ್ ಮಾಡಿದ ಪಾಂಡ್ಯ!

ಭಾರತದ ಪರ ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಪಾಂಡ್ಯ ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಡೋ ಕೆಪಾಸಿಟಿ ಇದೆ. 2024 ರ ಟಿ-20 ವಿಶ್ವಕಪ್ ನಲ್ಲೂ 3 ವಿಕೆಟ್ ಎಗರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ರು. ಌಂಡ್ ಸೌತ್ ಆಫ್ರಿಕಾ ಪ್ಲೇಯರ್ ಡೇವಿಡ್ ಮಿಲ್ಲರ್ ಪಾಲಿಗೆ ಸದಾ ವಿಲನ್ ಆಗಿದ್ದಾರೆ. ಸೌತ್ ಆಫ್ರಿಕಾದ ಆಟಗಾರ ಡೇವಿಡ್ ಮಿಲ್ಲರ್​ರನ್ನ ಹಾರ್ದಿಕ್ ಪಾಂಡ್ಯ 8 ಸಲ ಔಟ್ ಮಾಡಿದ್ದಾರೆ. 15 ಟಿ20 ಇನ್ನಿಂಗ್ಸ್‌ಗಳಲ್ಲಿ ಎಂಟು ಬಾರಿ ಮಿಲ್ಲರ್‌ರನ್ನು ಔಟ್ ಮಾಡಿದ್ದಾರೆ. ಪಾಂಡ್ಯ ಬೌಲಿಂಗ್​ನಲ್ಲಿ 55 ಎಸೆತಗನ್ನ ಫೇಸ್ ಮಾಡಿದ್ದು 8.75 ರ ಸರಾಸರಿಯಲ್ಲಿ 70 ರನ್ ಗಳಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಪಾಂಡ್ಯ ವಿರುದ್ಧ ಮಿಲ್ಲರ್ 127.27 ಸ್ಟ್ರೈಕ್-ರೇಟ್ ಹೊಂದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬೇರೆ ಯಾವುದೇ ಬೌಲರ್ ಅವರನ್ನು ನಾಲ್ಕು ಬಾರಿಗಿಂತ ಹೆಚ್ಚು ಸಲ ಪೆವಿಲಿಯನ್ ಕಳ್ಸೇ ಇಲ್ಲ. ಬಟ್ ಪಾಂಡ್ಯ 8 ಸಲ ವಿಕೆಟ್ ಎತ್ತಿದ್ದಾರೆ. ಇನ್ನು ಟಿ-20ಐನಲ್ಲಿ ಭಾರತಕ್ಕೆ ಪಾಂಡ್ಯ ಒನ್ ಆಫ್ ದಿ ಬೆಸ್ಟ್ ಆಲ್​ರೌಂಡರ್ ಆಗಿದ್ದಾರೆ.

ಬ್ಯಾಟಿಂಗ್ & ಬೌಲಿಂಗ್ ನಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್!

ಭಾರತದ ಟಿ-20ಐ ತಂಡದಲ್ಲಿ ಖಾಯಂ ಪ್ಲೇಯರ್ ಆಗಿರೋ ಕುಂಗ್ ಫೂ ಪಾಂಡ್ಯ ಯಾವತ್ತೂ ನಿರಾಸೆ ಮೂಡಿಸಿಲ್ಲ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಭಾರತದ ಪರ ಇದುವರೆಗೆ 121 ಟಿ-20ಐ ಪಂದ್ಯಗಳನ್ನ ಆಡಿದ್ದು 95 ಇನ್ನಿಂಗ್ಸ್​ಗಳಿಂದ 1919 ರನ್​ಗಳನ್ನ ಕಲೆ ಹಾಕಿದ್ದಾರೆ.  6 ಅರ್ಧಶತಕಗಳೂ ಸೇರಿವೆ. 100 ಸಿಕ್ಸ್, 144 ಫೋರ್​ಗಳಿವೆ. ಌಂಡ್ ಬೌಲಿಂಗ್​ನಲ್ಲಿ 99 ವಿಕೆಟ್ ಬೇಟೆಯಾಡಿದ್ದು 100 ವಿಕೆಟ್​ಗಳ ಸಾಧನೆ ಮಾಡೋಕೆ ಇನ್ನೊಂದೇ ವಿಕೆಟ್ ಬಾಕಿ ಇದೆ. ಭಾರತದ ಪರ ಟಿ-20ಐನಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ನಂತರದ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ. 32 ವರ್ಷದ ಹಾರ್ದಿಕ್ ಪಾಂಡ್ಯ 2016 ರಿಂದ ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್‌ ಆಡುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಮಿಂಚಿದ್ದಾರೆ. ಒಟ್ನಲ್ಲಿ ಕುಂಗ್ ಫೂ ಪಾಂಡ್ಯ ಇದ್ರೆ ಭಾರತಕ್ಕೆ ಆನೆ ಬಲ ಅನ್ನೋದಂತೂ ಗ್ಯಾರಂಟಿ. ಬಟ್ ಇಂಜುರಿಯೇ ಅವ್ರಿಗೆ ದೊಡ್ಡ ವಿಲನ್ ಆಗಿದ್ದು ಏಕದಿನ ಹಾಗೇ ಟೆಸ್ಟ್ ಪಂದ್ಯಗಳನ್ನ ಜೊತೆಗೆ ಕ್ಯಾಪ್ಟನ್ಸಿ, ವೈಸ್ ಕ್ಯಾಪ್ಟನ್ಸಿ ಮಿಸ್ ಮಾಡಿಕೊಳ್ತಿದ್ದಾರೆ.

Shantha Kumari