T-20Iನಲ್ಲಿ ಚಾನ್ಸ್ ಗಾಗಿ ಸ್ಟಾರ್ಸ್ ಕ್ಯೂ – KL, ಶ್ರೇಯಸ್, ಜೈಸ್ವಾಲ್ ಕಾಣಲ್ವಾ?
ಟ್ಯಾಲೆಂಟ್ ಇದ್ರೂ BCCIಗೆ ಕಣ್ಣಿಲ್ವಾ?

T-20Iನಲ್ಲಿ ಚಾನ್ಸ್ ಗಾಗಿ ಸ್ಟಾರ್ಸ್ ಕ್ಯೂ – KL, ಶ್ರೇಯಸ್, ಜೈಸ್ವಾಲ್ ಕಾಣಲ್ವಾ?ಟ್ಯಾಲೆಂಟ್ ಇದ್ರೂ BCCIಗೆ ಕಣ್ಣಿಲ್ವಾ?

ಸೌತ್ ಆಫ್ರಿಕಾ ವಿರುದ್ಧ ಟಿ-20ಐ ಸರಣಿಯಲ್ಲಿರೋ ಭಾರತ ನಾಳೆ ನಾಲ್ಕನೇ ಪಂದ್ಯಕ್ಕೆ ಸಿದ್ಧವಾಗ್ತಿದೆ. ಆಲ್ರೆಡಿ 2 ಮ್ಯಾಚ್ ಗೆದ್ದಿರೋದ್ರಿಂದ ಈ ಮ್ಯಾಚ್​ನೂ ಗೆದ್ರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಭಾರತದ ಕೈವಶವಾಗುತ್ತೆ. ಆದ್ರೆ ಭಾರತಕ್ಕೆ ಚಾಲೆಂಜಿಂಗ್ ಅನ್ನಿಸ್ತಿರೋದೇ ಬ್ಯಾಟಿಂಗ್ ಲೈನಪ್. ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಇಬ್ರೂ ತಲೆಬಿಸಿ ತಂದಿಟ್ಟಿದ್ದಾರೆ. ಅವ್ರಿಬ್ಬರ ಔಟ್ ಆಫ್ ಫಾರ್ಮ್ ಸರಿಯಾಗೇ ಹೊಡೆತ ಕೊಡ್ತಿದೆ. ಬೇಸರದ ವಿಚಾರ ಅಂದ್ರೆ ಭಾರತದ ಪರ ಟಿ-20 ಪಂದ್ಯಗಳನ್ನ ಆಡೋಕೆ ಸಮರ್ಥರ ದಂಡೇ ಕ್ಯೂನಲ್ಲಿದೆ. ಟ್ಯಾಲೆಂಟ್ ಇದ್ದೂ ಯಾರೆಲ್ಲಾ ಅವಕಾಶ ವಂಚಿತರಾಗ್ತಾ ಇದ್ದಾರೆ.

ಇದನ್ನೂ ಓದಿ : U-19 ಏಷ್ಯಾಕಪ್‌ನಲ್ಲಿ ವೈಭವ್ ಅಬ್ಬರ – ಮಲೇಷ್ಯಾ ವಿರುದ್ಧ ಸಿಡಿಲಬ್ಬರದ ಅರ್ಧಶತಕ

ಟಿ-20ಐ ಫಾರ್ಮೆಟ್​ನಲ್ಲಿ ಭಾರತ ಕಂಟಿನ್ಯೂಯಸ್ ಆಗಿ ಸರಣಿ ಗೆಲ್ತಾ ಇದ್ರೂ ಸೂರ್ಯಕುಮಾರ್ ಯಾದವ್ ಮತ್ತು ಶುಭ್​ಮನ್ ಗಿಲ್ ಕಡೆಯಿಂದ ರನ್ಸ್ ಬರ್ತಿಲ್ಲ. ಹೆಂಗೋ ಬೌಲರ್​ಗಳು ಪಂದ್ಯಗಳನ್ನ ಗೆಲ್ಲಿಸಿಕೊಂಡು ಹೋಗ್ತಾ ಇದ್ದಾರೆ. ಗಿಲ್ ಮತ್ತು ಸೂರ್ಯನ ಫೇಲ್ಯೂರ್​ಗೆ ಫ್ಯಾನ್ಸ್ ಕೂಡ ಸಿಟ್ಟಾಗಿದ್ದಾರೆ. ಅದ್ರಲ್ಲೂ ಗಿಲ್​ರನ್ನ ಹೊರಗಿಟ್ಟು ಬೇರೆಯವ್ರಿಗೆ ಚಾನ್ಸ್ ಕೊಡಿ ಅಂತಿದ್ದಾರೆ. ಅದಕ್ಕೆ ಕಾರಣ ಅವಕಾಶಕ್ಕಾಗಿ ಕಾಯ್ತಿರೋ ಪ್ರತಿಭಾವಂತ ಆಟಗಾರರು. ಬಿಸಿಸಿಐನ ಮೊಂಡಾಟಕ್ಕೆ ಹಲವು ಸ್ಟಾರ್ ಕ್ರಿಕೆಟಿಗರೇ ಸ್ಯಾಕ್ರಿಫೈಸ್ ಮಾಡಿದ್ದಾರೆ.

ರಾಹುಲ್ ಟಿ-20ಐ ಕರಿಯರ್ ಮುಗಿದೇ ಹೋಯ್ತಾ?

ಭಾರತದ ಪರ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಆಡ್ತಿರೋ ಕೆಎಲ್ ರಾಹುಲ್ ಟಿ-20ಐ ಕ್ರಿಕೆಟ್​ನಿಂದ ಹೊರಗೇ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಭಾರತದ ಪರ ಟಿ-20ಐ ಪಂದ್ಯಗಳನ್ನ ಆಡಿಲ್ಲ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್​ಗಳಿಂದ ಸೋಲಿಸಿತ್ತು. ಈ ಮ್ಯಾಚ್ ಬಳಿಕ ರಾಹುಲ್​ ಟಿ-20ಐನಲ್ಲಿ ಆಡೇ ಇಲ್ಲ. ಇಂದಲ್ಲ ನಾಳೆ ಮತ್ತೆ ಚಾನ್ಸ್ ಸಿಗ್ಬೋದು ಅಂತಾ ಕಾಯ್ತಾನೇ ಇದ್ದಾರೆ. ಬಟ್ ಬಿಸಿಸಿಐ ಬಾಗಿಲು ಮಾತ್ರ ತೆರೀತಿಲ್ಲ. ಕಳೆದ ಸೀಸನ್​ ಐಪಿಎಲ್​ನಲ್ಲಿ ಡೆಲ್ಲಿ ಪರ 13 ಇನ್ನಿಂಗ್ಸ್​ಗಳಲ್ಲಿ 163ರ ಇಂಪ್ರೆಸ್ಸಿವ್ ಸ್ಟ್ರೈಕ್​ರೇಟ್​ನಲ್ಲಿ 539 ರನ್ಸ್ ಗಳಿಸಿ ಆ ತಂಡದ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಇದ್ರಲ್ಲಿ ಒಂದು ಶತಕವೂ ಇತ್ತು. ಹೀಗಿದ್ರೂ ನೋ ಚಾನ್ಸ್..

ಯಶಸ್ವಿ ಜೈಸ್ವಾಲ್ ಕೂಡ ಸೈಡ್ ಲೈನ್!

ಇನ್ನು ಟಿ-20ಐ ತಂಡದಿಂದ ಯಶಸ್ವಿ ಜೈಸ್ವಾಲ್ ಕೂಡ ಹೊರಗೇ ಇದ್ದಾರೆ. ಟೆಸ್ಟ್ ಮಾದರಿಯಲ್ಲಿ ಓಪನರ್ ಆಗಿರೋ ಜೈಸ್ವಾಲ್ ಏಕದಿನದಲ್ಲೂ ಚಾನ್ಸ್ ಅಷ್ಟಕ್ಕಷ್ಟೇ ಇದೆ. ಸೌತ್ ಆಫ್ರಿಕಾ ವಿರುದ್ಧ ಗಿಲ್ ಇಲ್ಲದ್ದಕ್ಕೆ ಏಕದಿನ ಫಾರ್ಮೆಟ್​ನಲ್ಲಿ ಅವಕಾಶ ಸಿಕ್ಕಿತ್ತು. ಬಟ್ ಟಿ-20ಐನಲ್ಲಿ ದೂರನೇ ಇಟ್ಟಿದ್ದಾರೆ. ಕಳೆದ ಸೀಸನ್​ ಐಪಿಎಲ್​ನಲ್ಲಿ ನಲ್ಲಿ ರಾಜಸ್ಥಾನ ಪರ 559 ರನ್ಸ್ ಸ್ಕೋರ್ ಮಾಡಿದ್ರು. ಌಂಡ್ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದಾರೆ. ಮುಂಬೈ ಪರ ಅಜಿಂಕ್ಯ ರಹಾನೆ ಅವರೊಂದಿಗೆ ಕಣಕ್ಕಿಳಿದ ಜೈಸ್ವಾಲ್ 48 ಎಸೆತಗಳಲ್ಲಿ ಶತಕ ಗಳಿಸಿದರು. ಹಾಗೇ ನಾನು ಈ ಮಾದರಿಯಲ್ಲಿ ಬೆಸ್ಟ್ ಅನ್ನೋದನ್ನ ತೋರಿಸಿದ್ದಾರೆ.

ಚುಟುಕು ಸಮರದಲ್ಲಿ ಶ್ರೇಯಸ್ ಅಯ್ಯರ್ ಸದ್ದು!

ಇನ್ನು 20 ಓವರ್​ಗಳ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಕೂಡ ಸಿಕ್ಕಾಪಟ್ಟೆ ಇಂಪ್ಯಾಕ್ಟ್ ಮಾಡಿದ್ದಾರೆ. ಐಪಿಎಲ್​ನಲ್ಲೂ ಸಖತ್ ಸೌಂಡ್ ಮಾಡಿದ್ದಾರೆ. ಲಾಸ್ಟ್ ಸೀಸನ್​ ಐಪಿಎಲ್​ನಲ್ಲಿ ಪಂಜಾಬ್ ನಾಯಕನಾಗಿ 604 ರನ್ ಸ್ಕೋರ್ ಮಾಡಿದ್ರು. ಌಂಡ್ ಕಳೆದ ಸೀಸನ್​ನ ಹೈಯೆಸ್ಟ್ ರನ್ ಸ್ಕೋರರ್​ ಗಳ ಪಟ್ಟಿಯಲ್ಲಿ ಟಾಪ್ 6ನಲ್ಲಿದ್ರು. ಹೀಗಿದ್ರೂ ಭಾರತದ ಟಿ-20ಐ ಬಾಗಿಲು ತೆರೀತಾನೇ ಇಲ್ಲ. ಸೋ ಇವ್ರೂ ಕೂಡ ಆಪರ್ಚುನಿಟಿಗಾಗಿ ಕಾಯ್ತಿದ್ದಾರೆ.

ಬೆಸ್ಟ್ ಫಿನಿಶರ್ ಆಗಿದ್ರೂ ರಿಂಕುಗಿಲ್ಲ ಚಾನ್ಸ್

ಕಳೆದ ವರ್ಷ ಭಾರತ ತಂಡದಲ್ಲಿ ಬೆಸ್ಟ್ ಫಿನಿಶರ್ ರೋಲ್ ಪ್ಲೇ ಮಾಡ್ತಿದ್ದ ರಿಂಕು ಸಿಂಗ್ ಕೂಡ ಈಗ ಟಿ-20ಐನಲ್ಲಿ ಚಾನ್ಸ್ ಇಲ್ಲ. ಭಾರತದ ಪರ 25 ಇನ್ನಿಂಗ್ಸ್​ಗಳಲ್ಲಿ 550 ರನ್ಸ್ ಸ್ಕೋರ್ ಮಾಡಿದ್ದಾರೆ. 42ಪ್ಲಸ್ ಆವರೇಜ್​ನಲ್ಲಿ ರನ್ಸ್ ಬಂದಿದೆ. 161ಪ್ಲಸ್ ಸ್ಟ್ರೈಕ್ ರೇಟ್ ಇದೆ. ಹೀಗಿದ್ರೂ ಚಾನ್ಸ್ ಕೊಡದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

ಗಿಲ್ ಗಾಗಿ ಬೆಂಚ್ ನಲ್ಲೇ ಕಾದು ಕುಳಿತ ಸಂಜು ಸ್ಯಾಮ್ಸನ್!

ಟಿ-20ಐನಲ್ಲಿ ಎಸ್​ಪೆಶಲಿ ಸಂಜು ಸ್ಯಾಮ್ಸನ್ ಬಗ್ಗೆ ಹೇಳಲೇಬೇಕು. ಗಿಲ್ ತಂಡಕ್ಕೆ ಕಂ ಬ್ಯಾಕ್ ಮಾಡ್ದಾಗಿಂದ ಸಂಜು ಕೆರಿಯರ್​ಗೆ ಹೊಡೆತ ಬಿದ್ದಿದೆ.  ಕಳೆದ ವರ್ಷ 3 ಶತಕ ಬಾರಿಸಿದ್ರೂ ಗಿಲ್ ಬಂದ್ಮೇಲೆ ಬೆಂಚ್ ಕಾಯುವಂತಾಗಿದೆ. ಮಿಡಲ್ ಆರ್ಡರ್ ನಲ್ಲಿ ರನ್ಸ್ ಬರದ ಕಾರಣ ಸಂಜು ಡ್ರಾಪ್ ಮಾಡಿ ಜಿತೇಶ್ ಶರ್ಮಾಗೆ ಚಾನ್ಸ್ ಕೊಡಲಾಗ್ತಿದೆ. ಓಪನಿಂಗ್ ಕಳ್ಕೊಂಡಿರೋ ಸಂಜು ಮತ್ತೆ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ.

ಸೂರ್ಯ ಮತ್ತು ಗಿಲ್ ಏನು ಡಮ್ಮಿ ಪ್ಲೇಯರ್ಸ್ ಅಲ್ಲ. ಸೂರ್ಯ ಲಾಸ್ಟ್ ಐಪಿಎಲ್ ನಲ್ಲಿ 717 ರನ್ಸ್ ಗಳಿಸಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಆಗಿದ್ರು. ಌಂಡ್ ಗಿಲ್ 650 ರನ್ಸ್ ಗಳಿಸಿ ನಾಲ್ಕನೇ ಹೈಯೆಸ್ಟ್ ಸ್ಕೋರರ್ ಆಗಿದ್ರು. ಆದ್ರೆ ಭಾರತದ ಪರ ಮಾತ್ರ ಸದ್ದು ಮಾಡ್ತಿಲ್ಲ. ಇನ್ಮುಂದೆಯೇ ಇದೇ ಫಾರ್ಮ್ ಕಂಟಿನ್ಯೂ ಆದ್ರೆ ಬಹುಶಃ ಬೇರೆ ಪ್ಲೇಯರ್ಸ್ ಗೆ ಚಾನ್ಸ್ ಕೊಡೋದು ಬೆಸ್ಟ್ ಅನ್ಸುತ್ತೆ. ಯಾಕಂದ್ರೆ ಚಾನ್ಸ್ ಲಿಸ್ಟ್​ನಲ್ಲಿ ಇಶಾನ್ ಕಿಶನ್ ಕೂಡ ರೇಸ್​ನಲ್ಲಿದ್ದಾರೆ.

Shantha Kumari